"ಪ್ರಾಮಾಣಿಕವಾಗಿ ಹೇಳಬೇಕಂದ್ರೆ...": ಭಾರತದ ಆತಿಥ್ಯದ ಬಗ್ಗೆ ಪಾಕ್ ನಾಯಕ ಬಾಬರ್ ಅಜಂ ಹೇಳಿದ್ದೇನು?

Published : Nov 11, 2023, 04:14 PM IST
"ಪ್ರಾಮಾಣಿಕವಾಗಿ ಹೇಳಬೇಕಂದ್ರೆ...": ಭಾರತದ ಆತಿಥ್ಯದ ಬಗ್ಗೆ ಪಾಕ್ ನಾಯಕ ಬಾಬರ್ ಅಜಂ ಹೇಳಿದ್ದೇನು?

ಸಾರಾಂಶ

ಏಕದಿನ ವಿಶ್ವಕಪ್ ಗೆಲ್ಲುವ ಕನಸಿನೊಂದಿಗೆ ಬಾಬರ್ ಅಜಂ ಕಳೆದ ಸೆಪ್ಟೆಂಬರ್‌ನಲ್ಲಿ ಮೊದಲ ಬಾರಿಗೆ ಭಾರತಕ್ಕೆ ಕಾಲಿಟ್ಟಿದ್ದರು. ಆದರೆ ಪಾಕಿಸ್ತಾನ ತಂಡವು ನಿರೀಕ್ಷಿತ ಪ್ರದರ್ಶನ ತೋರಲು ವಿಫಲವಾಗಿದೆ. ಹೀಗಾಗಿ ಅಧಿಕೃತವಾಗಿ ಸೆಮೀಸ್‌ ರೇಸ್‌ನಿಂದಲೂ ಹೊರಬಿದ್ದಂತೆ ಆಗಿದೆ.

ಬೆಂಗಳೂರು(ನ.11): 2023ರ ಐಸಿಸಿ ಏಕದಿನ ವಿಶ್ವಕಪ್ ಟೂರ್ನಿಯನ್ನಾಡಲು ಭಾರತಕ್ಕೆ ಬಂದ ಪಾಕಿಸ್ತಾನ ತಂಡವು, ಇಲ್ಲಿ ಸಿಕ್ಕ ಪ್ರೀತಿ ಆತಿಥ್ಯಕ್ಕೆ ಮನಸೋತಿದೆ. ಭಾರತದಲ್ಲಿ ಅಭಿಮಾನಿಗಳು ತೋರಿದ ಪ್ರೀತಿ, ಬೆಂಬಲಕ್ಕೆ ಪಾಕ್ ನಾಯಕ ಬಾಬರ್ ಅಜಂ ಧನ್ಯವಾದಗಳನ್ನು ಅರ್ಪಿಸಿದ್ದಾರೆ. 

ಏಕದಿನ ವಿಶ್ವಕಪ್ ಗೆಲ್ಲುವ ಕನಸಿನೊಂದಿಗೆ ಬಾಬರ್ ಅಜಂ ಕಳೆದ ಸೆಪ್ಟೆಂಬರ್‌ನಲ್ಲಿ ಮೊದಲ ಬಾರಿಗೆ ಭಾರತಕ್ಕೆ ಕಾಲಿಟ್ಟಿದ್ದರು. ಆದರೆ ಪಾಕಿಸ್ತಾನ ತಂಡವು ನಿರೀಕ್ಷಿತ ಪ್ರದರ್ಶನ ತೋರಲು ವಿಫಲವಾಗಿದೆ. ಹೀಗಾಗಿ ಅಧಿಕೃತವಾಗಿ ಸೆಮೀಸ್‌ ರೇಸ್‌ನಿಂದಲೂ ಹೊರಬಿದ್ದಂತೆ ಆಗಿದೆ. ಇನ್ನು ಬಾಬರ್ ಅಜಂ ಕೂಡಾ ಈ ವಿಶ್ವಕಪ್ ಟೂರ್ನಿಯಲ್ಲಿ ಕಮಾಲ್ ಮಾಡಲು ವಿಫಲವಾಗಿದ್ದರು. ಬಾಬರ್ ಅಜಂ ಆಡಿದ ಲೀಗ್ ಹಂತದ ಮೊದಲ 8 ಪಂದ್ಯಗಳಲ್ಲಿ ಕೇವಲ 4 ಅರ್ಧಶತಕ ಸಹಿತ 282 ರನ್ ಗಳಿಸಲಷ್ಟೇ ಶಕ್ತರಾಗಿದ್ದರು. 

ಬೆಂಗಳೂರು ಮೂಲದ ಕಿವೀಸ್ ಆಲ್ರೌಂಡರ್ ರಚಿನ್‌ ರವೀಂದ್ರಗೆ ಒಲಿದ ಐಸಿಸಿ ತಿಂಗಳ ಆಟಗಾರ ಗೌರವ

ಇದೀಗ, ಇಂಗ್ಲೆಂಡ್ ಎದುರು ಕೋಲ್ಕತಾದಲ್ಲಿ ನಡೆಯುತ್ತಿರುವ ಪಂದ್ಯಕ್ಕೂ ಮುನ್ನ ಮಾಧ್ಯಮದವರ ಜತೆ ಮಾತನಾಡುವ ವೇಳೆ ಭಾರತೀಯ ಆತಿಥ್ಯವನ್ನು ಕೊಂಡಾಡಿದ್ದಾರೆ. "ಪ್ರಾಮಾಣಿಕವಾಗಿ ಹೇಳಬೇಕೆಂದರೆ, ಮೊದಲನೆಯದಾಗಿ ಭಾರತದಲ್ಲಿ ನಮಗೆ ತುಂಬಾ ಪ್ರೀತಿ ಸಿಕ್ಕಿದೆ. ನನಗೆ ಮಾತ್ರವಲ್ಲ ಇಡೀ ತಂಡಕ್ಕೆ ಅದರ ಅನುಭವವಾಗಿದೆ. ನಾವು ನಿರೀಕ್ಷಿತ ಪ್ರದರ್ಶನ ತೋರಲು ವಿಫಲವಾಗಿದ್ದೇವೆ ಎನ್ನುವುದು ಸತ್ಯ. ನಾನು ಬ್ಯಾಟಿಂಗ್‌ನಲ್ಲಿ ಒಳ್ಳೆಯ ಪ್ರದರ್ಶನ ತೋರಬೇಕು ಅಂದುಕೊಂಡಿದ್ದೆ. ಹಾಗಂತ ನಾನು 50 - 100 ರನ್ ಬಾರಿಸುವುದು ನನ್ನ ಗುರಿಯಾಗಿರಲಿಲ್ಲ. ನನ್ನ ಮುಖ್ಯ ಗುರಿ ತಂಡವನ್ನು ಗೆಲ್ಲಿಸುವುದೇ ಆಗಿತ್ತು. ವೈಯುಕ್ತಿಕ ದಾಖಲೆಗಿಂತ ನಮ್ಮ ಪ್ರದರ್ಶನ ತಂಡವನ್ನು ಗೆಲ್ಲಿಸುವುದಕ್ಕೆ ನೆರವಾಗುವಂತಿರಬೇಕು. ನಾನು ನಿಧಾನವಾಗಿ ಆಡಿದೆ, ನಾನು ವೇಗವಾಗಿ ಆಡಿದೆ ಅಂದರೆ ಅದರರ್ಥ ನಾನು ಪರಿಸ್ಥಿತಿಗೆ ಅನುಗುಣವಾಗಿ ಆಡಿದೆ. ನನ್ನ ತಂಡ ನನ್ನಿಂದ ಏನನ್ನು ನಿರೀಕ್ಷಿಸುತ್ತದೋ ಅದಕ್ಕೆ ತಕ್ಕಂತೆ ಆಡುವ ಪ್ರಯತ್ನ ಮಾಡಿದ್ದೇನೆ" ಎಂದು ಬಾಬರ್ ಅಜಂ ಹೇಳಿದ್ದಾರೆ. 

Shot of the Century ಬಗ್ಗೆ ಪ್ರತಿಕ್ರಿಯಿಸಿದ ಕಿಂಗ್ ಕೊಹ್ಲಿ, 'ಅದು ಹೇಗಾಯ್ತೋ ಗೊತ್ತಿಲ್ಲ'ವೆಂದ ಚೇಸ್ ಮಾಸ್ಟರ್

"ನಾವು ಇಲ್ಲಿಗೆ ಮೊದಲ ಬಾರಿಗೆ ಬಂದಿದ್ಧೇವೆ. ನಾನು ಇಲ್ಲಿ ಪಿಚ್ ಹೇಗೆ ವರ್ತಿಸುತ್ತದೆ ಎನ್ನುವ ಬಗ್ಗೆ ಯಾವುದೇ ಅರಿವು ಇರಲಿಲ್ಲ. ಆದರೆ ನಾವು ಆದಷ್ಟು ಬೇಗ ಇಲ್ಲಿನ ವಾತಾವರಣಕ್ಕೆ ಹೊಂದಿಕೊಂಡೆವು. ನಾನು ನಮ್ಮ ತಂಡದ ಬ್ಯಾಟರ್‌ಗಳಿಗೆ ಮಧ್ಯದ ಓವರ್‌ಗಳಲ್ಲಿ ಹಾಗೂ ಕೊನೆಯಲ್ಲಿ ರನ್‌ ಗಳಿಸಲು ಹೇಳಿದ್ದೆ. ಒಬ್ಬ ಬ್ಯಾಟರ್‌ ಆಗಿ ನನಗೆ ಮಧ್ಯದ ಓವರ್‌ನಲ್ಲಿ ರನ್ ಗಳಿಸುವುದು ಸ್ವಲ್ಪ ಕಷ್ಟ ಎನಿಸಿತು" ಎಂದು ಬಾಬರ್ ಅಜಂ ಹೇಳಿದ್ದಾರೆ.

PREV

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ಸೈಲೆಂಟ್ ಆದ ಸೌತ್ ಆಫ್ರಿಕಾ , 74 ರನ್‌ಗೆ ಆಲೌಟ್ ಮಾಡಿ 101 ರನ್ ಗೆಲುವು ದಾಖಲಿಸಿದ ಭಾರತ
100 ಸಿಕ್ಸರ್ ದಾಖಲೆ ಬರೆದ ಹಾರ್ದಿಕ್ ಪಾಂಡ್ಯ, ಸೌತ್ ಆಫ್ರಿಕಾಗೆ 176 ರನ್ ಟಾರ್ಗೆಟ್