ಕ್ರಿಕೆಟಿಗ ಪಾರ್ಥೀವ್‌ ಪಟೇಲ್‌ಗೆ ಒಂಬತ್ತೇ ಬೆರಳು!

By Suvarna News  |  First Published Apr 28, 2020, 11:17 AM IST

ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ವಿಕೆಟ್ ಕೀಪರ್‌ ಬ್ಯಾಟ್ಸ್‌ಮನ್ ಪಾರ್ಥೀವ್ ಪಟೇಲ್‌ಗೆ ಇರುವುದು 9 ಬೆರಳುಗಳು ಮಾತ್ರ. ಈ ಬಗ್ಗೆ ಸ್ವತಃ ಪಟೇಲ್ ತುಟಿಬಿಚ್ಚಿದ್ದಾರೆ. ಈ ಕುರಿತಾದ ರಿಪೋರ್ಟ್ ಇಲ್ಲಿದೆ ನೋಡಿ.


ನವದೆಹಲಿ(ಏ.28): ಭಾರತ ತಂಡದ ಅನುಭವಿ ವಿಕೆಟ್ ಕೀಪರ್ ಬ್ಯಾಟ್ಸ್‌ಮನ್ ಪಾರ್ಥೀವ್ ಪಟೇಲ್ ತಮ್ಮ ಸಂಪೂರ್ಣ ಕ್ರಿಕೆಟ್ ವೃತ್ತಿ ಜೀವನವನ್ನು ಕೇವಲ 9 ಬೆರಳುಗಳಲ್ಲಿ ಆಡಿರುವುದಾಗಿ ತಿಳಿಸಿದ್ದಾರೆ. ಕೈ ಬೆರಳು ಊನ ಇದ್ದರೂ ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಅದ್ಭುತ ಆಟದ ಮೂಲಕ ಪಾರ್ಥೀವ್‌ ಪಟೇಲ್‌ ಗಮನಸೆಳೆದಿದ್ದಾರೆ. 

ಪಾರ್ಥೀವ್‌ ತಮ್ಮಲ್ಲಿರುವ ನ್ಯೂನತೆ ಬಗ್ಗೆ ಕೌ ಕಾರ್ನರ್ ಕ್ರಾನಿಕಲ್ ಎನ್ನುವ ಕಾರ್ಯಕ್ರಮದಲ್ಲಿ ಮುಕ್ತವಾಗಿ ಮಾತನಾಡಿದ್ದಾರೆ. ನಾನು ಆರು ವರ್ಷದವನಾಗಿದ್ದಾಗ ನನ್ನ ಕಿರು ಬೆರಳು ಬಾಗಿಲಿಗೆ ಸಿಕ್ಕಿಹಾಕಿಕೊಂಡಿತ್ತು. ಆ ಬಳಿಕ ಬೆರಳನ್ನು ಕಟ್ ಮಾಡಿ ಕೈ ಹೊರಗೆಳೆಯಲಾಯಿತು ಎಂದು ಬಾಲ್ಯದ ದಿನಗಳಲ್ಲಿ ಪಟೇಲ್ ಮೆಲುಕು ಹಾಕಿದ್ದಾರೆ.

Tap to resize

Latest Videos

ಕೆವಿನ್ ಪೀಟರ್‌ಸನ್‌ಗೆ ಐಪಿಎಲ್‌ ಮುಳುವಾಯಿತು: ಸ್ಪೋಟಕ ಮಾಹಿತಿ ಬಿಚ್ಚಿಟ್ಟ ವಾನ್

35 ವರ್ಷದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಪಾರ್ಥೀವ್‌ ಪಟೇಲ್‌, ಕೇವಲ 9 ಬೆರಳಿನಲ್ಲಿ ಯಶಸ್ವಿ ವಿಕೆಟ್‌ ಕೀಪರ್‌ ಎನಿಸಿಕೊಂಡಿದ್ದಾರೆ. ವಿಕೆಟ್ ಕೀಪಿಂಗ್ ಮಾಡುವ ವೇಳೆ ಕಟ್ ಆಗಿರುವ ಬೆರಳಿಗೆ ಟೇಪ್ ಸುತ್ತಿಕೊಂಡು ಗ್ಲೌಸ್ ಹಾಕಿಕೊಳ್ಳುವುದಾಗಿಯೂ ಪಟೇಲ್ ತಿಳಿಸಿದ್ದಾರೆ.  

ಟೀಂ ಇಂಡಿಯಾದ ಈ 5 ಕ್ರಿಕೆಟಿಗರ ವೃತ್ತಿಬದುಕು ಬಹುತೇಕ ಅಂತ್ಯ..!

ಪಾರ್ಥೀವ್‌ ಭಾರತ ತಂಡದ ಪರ 25 ಟೆಸ್ಟ್‌ ಮತ್ತು 38 ಏಕದಿನ ಪಂದ್ಯಗಳನ್ನಾಡಿದ್ದಾರೆ. 2017-18ರಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧದ ಸರಣಿಯಲ್ಲಿ ಕೊನೆಯ ಬಾರಿಗೆ ಪಾರ್ಥಿವ್ ಟೀಂ ಇಂಡಿಯಾ ಪರ ಕಣಕ್ಕಿಳಿದಿದ್ದರು. ಇನ್ನು 2018-19ನೇ ಸಾಲಿನಲ್ಲಿ ನಡೆದ ಆಸ್ಟ್ರೇಲಿಯಾ ವಿರುದ್ಧ ಐತಿಹಾಸಿಕ ಟೆಸ್ಟ್ ಸರಣಿಯ ಗೆಲುವಿನ ತಂಡದಲ್ಲಿ ಪಾರ್ಥಿವ್ ಇದ್ದರಾದರೂ, ಆಡುವ ಹನ್ನೊಂದರ ಬಳಗದಲ್ಲಿ ಸ್ಥಾನ ಸಿಕ್ಕಿರಲಿಲ್ಲ. 
 

click me!