ಯುವಿ ಪಾ ಎಂದು ಕರೆದಾಗಲೇ ನಿವೃತ್ತಿಗೆ ಯೋಚಿಸಿದ್ದೆ; ಯುವರಾಜ್ ವಿದಾಯದ ಸೀಕ್ರೆಟ್ ಬಹಿರಂಗ

Suvarna News   | Asianet News
Published : Apr 27, 2020, 09:36 PM IST
ಯುವಿ ಪಾ ಎಂದು ಕರೆದಾಗಲೇ ನಿವೃತ್ತಿಗೆ ಯೋಚಿಸಿದ್ದೆ; ಯುವರಾಜ್ ವಿದಾಯದ ಸೀಕ್ರೆಟ್ ಬಹಿರಂಗ

ಸಾರಾಂಶ

ಭಾರತಕ್ಕೆ ವಿಶ್ವಕಪ್ ಗೆಲ್ಲಿಸಿಕೊಟ್ಟ ಹೋರಾಟಗಾರ ಯುವರಾಜ್ ಸಿಂಗ್ 2019ರಲ್ಲಿ ಎಲ್ಲಾ ಮಾದರಿ ಕ್ರಿಕೆಟ್‌ಗೆ ವಿದಾಯ ಹೇಳಿದ್ದಾರೆ.  ಯುವಿಗೆ ಸರಿಯಾದ ವಿದಾಯ ಸಿಗಲಿಲ್ಲ ಅನ್ನೋ ಕೊರಗು ಅಭಿಮಾನಿಗಳಲ್ಲಿದೆ. ಇದೀಗ ಯುವರಾಜ್ ಸಿಂಗ್ 2019ರ ವಿದಾಯಕ್ಕೆ 2018ರಲ್ಲೇ ಯೋಜನೆ ಮಾಡಿದ್ದೇ ಎಂದಿದ್ದಾರೆ. ವಿದಾಯದ ಸೀಕ್ರೆಟ್ ಬಹಿರಂಗ ಪಡಿಸಿದ್ದಾರೆ.  

ಮುಂಬೈ(ಏ.27): ಟೀಂ ಇಂಡಿಯಾ ಕ್ರಿಕೆಟಿಗರ ಪೈಕಿ ಯುವರಾಜ್ ಸಿಂಗ್‌ಗೆ ಅಭಿಮಾನಿಗಳ ಮನದಲ್ಲಿ ವಿಶೇಷ ಸ್ಥಾನವಿದೆ. 2007ರ ಟಿ20 ವಿಶ್ವಕಪ್, 2011ರ ವಿಶ್ವಕಪ್ ಗೆಲ್ಲಿಸಿಕೊಟ್ಟ ಆಲ್ರೌಂಡರ್. ಕ್ಯಾನ್ಸರ್ ಲೆಕ್ಕಿಸಿದ ಆರ್ಭಟಿಸಿದ ಹೋರಾಟಗಾರ. ಆದರೆ 2019ರಲ್ಲಿ ಯುವಿ ವಿದಾಯ ಹೇಳಿದಾಗ ಎಲ್ಲರಿಗೂ ಅಚ್ಚರಿ ಕಾದಿತ್ತು. ಕಾರಣ ಕನಿಷ್ಠ ವಿದಾಯದ ಪಂದ್ಯ ಆಡಿ ನಿವೃತ್ತಿ ಹೇಳಬೇಕಿತ್ತು ಅನ್ನೋ ಮಾತುಗಳು ಕೇಳಿ ಬಂದಿತ್ತು. ಇದೀಗ ಯುವಿ ತನ್ನ ನಿವೃತ್ತಿ ಯೋಚನೆ ಕುರಿತು ರಹಸ್ಯ ಮಾಹಿತಿ ಹಂಚಿಕೊಂಡಿದ್ದಾರೆ.

ರೈನಾ, ಕೊಹ್ಲಿ ಅಲ್ಲ, IPL ಆರೇಂಜ್ ಕ್ಯಾಪ್ ಗೆದ್ದ ಮೊದಲ ಭಾರತೀಯ ಯಾರು?

ಯುವರಾಜ್ ಸಿಂಗ್ 2018ರಲ್ಲಿ ನಿವೃತ್ತಿಗೆ ಯೋಚನೆ ಮಾಡಿದ್ದರು. 2018ರ ಐಪಿಎಲ್ ಟೂರ್ನಿಯಲ್ಲಿ ಯುವರಾಜ್ ಸಿಂಗ್ ಕಿಂಗ್ಸ್ ಇಲೆವೆನ್ ಪಂಜಾಬ್ ತಂಡವನ್ನು ಪ್ರತಿನಿಧಿಸಿದ್ದರು. ಈ ವೇಳೆ ಯುವಿಯನ್ನು ಆಸ್ಟ್ರೇಲಿಯಾ ವೇಗಿ ಆ್ಯಂಡ್ರ್ಯೂ ಟೈ ಯುಪಿ ಪಾ ಎಂದು ಕರೆಯುತ್ತಿದ್ದರು. ತಾನು ಸಚಿನ್ ತೆಂಡಲ್ಕರ್‌ಗೆ ಸಚಿನ್ ಪಾ, ಸಚಿನ್ ಪಾಜಿ ಎಂದು ಕರೆಯುತ್ತಿದ್ದೆ. ಇದೀಗ ವೇಗಿ ಆ್ಯಂಡ್ರ್ಯೂ ಟೈ ಯುವಿ ಪಾ ಎಂದಾಗ ನಿವೃತ್ತಿ ಕುರಿತು ಗಂಭೀರವಾಗಿ ಚಿಂತಿಸಿದ್ದೆ ಎಂದು ಯುವರಾಜ್ ಸಿಂಗ್ ಹೇಳಿದ್ದಾರೆ.

ಡ್ರಾಪ್ ಮಾಡಿ ಬೆಂಚ್ ಕಾಯಿಸಿದರು, ಕೊನೆಗೆ ಹೊರದಬ್ಬಿದರು; CSK ಸೀಕ್ರೆಟ್ ಬಿಚ್ಚಿಟ್ಟ ಆರ್ ಅಶ್ವಿನ್!

ಸಾಮಾಜಿಕ ಜಾಲತಾಣದಲ್ಲಿ ಜಸ್ಪ್ರೀತ್ ಬುಮ್ರಾ ಜೊತೆಗಿನ ಮಾತುಕತೆಯಲ್ಲಿ ಯುವಿ ಈ ವಿಚಾರ ಬಹಿರಂಗ ಪಡಿಸಿದ್ದಾರೆ. ಟೀಂ ಇಂಡಿಯಾ ಕಂಡ ಅತ್ಯುತ್ತಮ ಆಲ್ರೌಂಡರ್ ಪೈಕಿ ಯುವರಾಜ್ ಸಿಂಗ್ ಮುಂಚೂಣಿಯಲ್ಲಿದ್ದಾರೆ. 2007 ಟಿ20 ವಿಶ್ವಕಪ್ ಟೂರ್ನಿಯಲ್ಲಿ ಓವರ್‌ನ 6 ಎಸೆತವನ್ನೂ ಸಿಕ್ಸರ್ ಸಿಡಿಸಿ ದಾಖಲೆ ಬರೆದಿದ್ದಾರೆ. ಈ ರೀತಿ ಸ್ಫೋಟಕ ಬ್ಯಾಟಿಂಗ್ ಮೂಲಕ ಭಾರತಕ್ಕೆ ಹಲವು ಐತಿಹಾಸಿಕ ಪ್ರಶಸ್ತಿ  ಗೆಲ್ಲಿಸಿಕೊಟ್ಟಿದ್ದಾರೆ.

2011ರ ವಿಶ್ವಕಪ್ ಟೂರ್ನಿಯಲ್ಲಿ ಯುವರಾಜ್ ಸಿಂಗ್ ಬ್ಯಾಟಿಂಗ್ ಹಾಗೂ ಬೌಲಿಂಗ್‌ಲ್ಲಿ ಅದ್ಬುತ ಪ್ರದರ್ಶನ ನೀಡಿ ಟೀಂ ಇಂಡಿಯಾಗೆ 28 ವರ್ಷಗಳ ಬಳಿಕ ವಿಶ್ವಕಪ್ ಟ್ರೋಫಿ ಗೆಲ್ಲಿಸಿಕೊಟ್ಟಿದ್ದರು. ಯುವಿ ಸರಣಿ ಶ್ರೇಷ್ಠ ಪ್ರಶಸ್ತಿ ಸ್ವೀಕರಿಸಿದ್ದರು. ಕ್ಯಾನ್ಸರ್ ಮಹಾಮಾರಿ ವಿರುದ್ಧ ಹೋರಾಡಿ ಗೆದ್ದು ಬಂದ ಯುವಿ ಟೀಂ ಇಂಡಿಯಾದಲ್ಲಿ ಹಿಂದಿನ ಖದರ್ ತೋರಲಿಲ್ಲ. ಹಲವು ಬಾರಿ ತಂಡದಿಂದ ಡ್ರಾಪ್ ಆದರೂ ಛಲ ಬಿಡದ ಯುವಿ ಮತ್ತೆ ತಂಡಕ್ಕೆ ಕಮ್‌ಬ್ಯಾಕ್ ಮಾಡುವಲ್ಲಿ ಯಶಸ್ವಿಯಾಗಿದ್ದರು.


 

PREV

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಮುಂಬೈಗೆ ಬಂದಿಳಿದ ವಿರುಷ್ಕಾ ದಂಪತಿ; ಮೆಸ್ಸಿಯನ್ನು ಭೇಟಿಯಾಗ್ತಾರಾ ವಿರಾಟ್ ಕೊಹ್ಲಿ?
ಟೀಂ ಇಂಡಿಯಾ ಕ್ರಿಕೆಟಿಗರಿಗೆ ದುಶ್ಚಟವಿದೆ, ಆದರೆ ನನ್ನ ಪತಿಗಿಲ್ಲ! ಈ ಕ್ರಿಕೆಟರ್ ಪತ್ನಿಯಿಂದ ವಿವಾದಾತ್ಮಕ ಹೇಳಿಕೆ