ಬೂಮ್ರಾಗೆ ಚೀಯರ್ಸ್‌ ಮಾಡ್ತಿರುವ ಪುಟ್ಟ ಬಾಲಕ: ಹಳೆ ವಿಡಿಯೋ ಮತ್ತೆ ವೈರಲ್

Published : Jul 02, 2022, 01:23 PM ISTUpdated : Jul 02, 2022, 01:29 PM IST
ಬೂಮ್ರಾಗೆ ಚೀಯರ್ಸ್‌ ಮಾಡ್ತಿರುವ ಪುಟ್ಟ ಬಾಲಕ: ಹಳೆ ವಿಡಿಯೋ ಮತ್ತೆ ವೈರಲ್

ಸಾರಾಂಶ

ಕ್ರಿಕೆಟ್ ಪಂದ್ಯದ ವೇಳೆ ಪುಟ್ಟ ಅಭಿಮಾನಿಯೋರ್ವ ಜಸ್ಪ್ರೀತ್ ಬೂಮ್ರಾ ಅವರನ್ನು ಅವರನ್ನು ಬೂಮ್ರಾ ಬೂಮ್ರಾ ಎಂದು ಕರೆದು ಪ್ರೋತ್ಸಾಹಿಸುತ್ತಿರುವ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ಕ್ರಿಕೆಟ್ ಪಂದ್ಯದ ವೇಳೆ ಪುಟ್ಟ ಅಭಿಮಾನಿಯೋರ್ವ ಜಸ್ಪ್ರೀತ್ ಬೂಮ್ರಾ ಅವರನ್ನು ಅವರನ್ನು ಬೂಮ್ರಾ ಬೂಮ್ರಾ ಎಂದು ಕರೆದು ಪ್ರೋತ್ಸಾಹಿಸುತ್ತಿರುವ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಇದು 2020 ರ ವಿಡಿಯೋ ಆಗಿದ್ದು, ಈಗ ಮತ್ತೆ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ. ದ ಭಾರತ್‌ ಆರ್ಮಿ ಎಂಬ ಟ್ವಿಟ್ಟರ್ ಖಾತೆಯಿಂದ ಈ ವಿಡಿಯೋ ಪೋಸ್ಟ್ ಆಗಿದೆ. ಇಂಗ್ಲೆಂಡ್‌ನ ಆಡಿಲ್ಯಾಡ್‌ನ ಅಂತಾರಾಷ್ಟ್ರೀಯ ಕ್ರೀಡಾಂಗಣದಲ್ಲಿ 2020ರ ಡಿಸೆಂಬರ್‌ನಲ್ಲಿ ನಡೆದ ಆಸ್ಟ್ರೇಲಿಯಾ ಹಾಗೂ ಭಾರತ ನಡುವಿನ ಟೆಸ್ಟ್‌ ಪಂದ್ಯದ ಎರಡನೇ ದಿನದಂದು ಸೆರೆಯಾದ ವಿಡಿಯೋ ಇದಾಗಿತ್ತು. 

ಜಸ್ಪ್ರೀತ್ ಬೂಮ್ರಾ ಅವರ ಚಿಕ್ಕ ವಯಸ್ಸಿನ ದೊಡ್ಡ ಅಭಿಮಾನಿ ಜೀಯಾನ್‌ ಎಂದು ಈ ವಿಡಿಯೋ ಪೋಸ್ಟ್‌ನಲ್ಲಿ ಬರೆಯಲಾಗಿದೆ. ಈ ವಿಡಿಯೋಗೆ ನೆಟ್ಟಿಗರು ಮೆಚ್ಚುಗೆ ವ್ಯಕ್ತಪಡಿಸಿದ್ದು, ಪುಟ್ಟ ಅಭಿಮಾನಿಗೆ ಶುಭ ಹಾರೈಸಿದ್ದಾರೆ. ಬಾಲಕ ಬೂಮ್ರಾ ಬೂಮ್ರಾ ಅಂತ ಜೋರಾಗಿ ಬೊಬ್ಬೆ ಹೊಡೆಯುತ್ತಿರುವುದು ವಿಡಿಯೋದಲ್ಲಿ ಸೆರೆ ಆಗಿದೆ. 

ಅಗ್ರಸ್ಥಾನ ಕಳೆದುಕೊಂಡ ಬೂಮ್ರಾ; ಸರಣಿ ಆಡದ ಬೋಲ್ಟ್ ನಂ.1  

ಭಾರತ ಹಾಗೂ ಇಂಗ್ಲೆಂಡ್ ನಡುವಿನ 5ನೇ ಹಾಗೂ ಅಂತಿಮ ಟೆಸ್ಟ್ ಪಂದ್ಯಕ್ಕೆ  ಟೀಂ ಇಂಡಿಯಾದಲ್ಲಿ ಕೆಲ ಬದಲಾವಣೆಗಳಾಗಿದೆ. ರೋಹಿತ್ ಶರ್ಮಾ ಅಲಭ್ಯತೆಯಿಂದ ಟೆಸ್ಟ್ ತಂಡಕ್ಕೆ ಜಸ್ಪ್ರೀತ್ ಬುಮ್ರಾ ನಾಯಕರಾಗಿದ್ದಾರೆ. ಬಿಸಿಸಿಐ ಬುಮ್ರಾಗೆ ನಾಯಕತ್ವ ನೀಡಿ ಅಧಿಕೃತ ಪ್ರಕಟಣೆ ಹೊರಡಿಸಿತ್ತು ಬುಮ್ರಾ ನಾಯಕ ಅನ್ನೋ ಮಾತುಗಳು ಕೆಲ ದಿನಗಳಿಂದ ಕೇಳಿಬರುತ್ತಿತ್ತು. ಆದರೆ ಇದೀಗ ಅಧಿಕೃತಗೊಂಡಿದೆ. ರಿಷಬ್ ಪಂತ್ ಉಪನಾಯಕನಾಗಿ ಆಯ್ಕೆಯಾಗಿದ್ದಾರೆ. ಬುಮ್ರಾ ಆಯ್ಕೆಯಿಂದ 35 ವರ್ಷಗಳ ಬಳಿಕ ಟೀಂ ಇಂಡಿಯಾ ಟೆಸ್ಟ್ ತಂಡಕ್ಕೆ ವೇಗಿಯೊಬ್ಬರು ನಾಯಕರಾಗಿದ್ದಾರೆ.

1987ರಲ್ಲಿ ಕಪಿಲ್ ದೇವ್ ಟೀಂ ಇಂಡಿಯಾ ಟೆಸ್ಟ್ ನಾಯಕತ್ವಕ್ಕೆ ವಿದಾಯ ಹೇಳಿದ್ದರು. ಈ ಬಳಿಕ ಟೆಸ್ಟ್ ತಂಡಕ್ಕೆ ವೇಗಿ ನಾಯಕರಾಗಿಲ್ಲ. ಸ್ಪಿನ್ ದಿಗ್ಗಜ ಅನಿಲ್ ಕುಂಬ್ಳೆ ನಾಯಕಾಗಿ ಮಿಂಚಿದ್ದರು. ಆದರೆ ವೇಗಿಗೆ ನಾಯಕತ್ವ ಸಿಕ್ಕಿರಲಿಲ್ಲ. ಇದೀಗ 35 ವರ್ಷಗಳ ಬಳಿಕ ವೇಗಿ ಜಸ್ಪ್ರೀತ್ ಬುಮ್ರಾ ನಾಯಕರಾಗಿದ್ದಾರೆ.

ಟೀಂ ಇಂಡಿಯಾ ಟೆಸ್ಟ್ ತಂಡ:
ಜಸ್ಪ್ರೀತ್ ಬುಮ್ರಾ (ನಾಯಕ), ಶುಭಮನ್ ಗಿಲ್, ವಿರಾಟ್ ಕೊಹ್ಲಿ, ಶ್ರೇಯಸ್ ಅಯ್ಯರ್, ಹನುಮ ವಿಹಾರಿ, ಚೇತೇಶ್ವರ ಪೂಜಾರ, ರಿಷಭ್ ಪಂತ್ (ಉಪನಾಯಕ) (WK), ಕೆಎಸ್ ಭರತ್ (WK), ರವೀಂದ್ರ ಜಡೇಜಾ, ರವಿಚಂದ್ರನ್ ಅಶ್ವಿನ್, ಶಾರ್ದೂಲ್ ಠಾಕೂರ್, ಮೊಹಮ್ಮದ್ ಶಮಿ ಮೊಹಮ್ಮದ್ ಸಿರಾಜ್, ಉಮೇಶ್ ಯಾದವ್, ಪ್ರಸಿದ್ಧ್ ಕೃಷ್ಣ, ಮಯಾಂಕ್ ಅಗರ್ವಾಲ್

ದಿಢೀರ್‌ ರದ್ದುಗೊಂಡಿದ್ದ 5ನೇ ಪಂದ್ಯ!
ಓವಲ್‌ನಲ್ಲಿ ನಡೆದಿದ್ದ 4ನೇ ಟೆಸ್ಟ್‌ ಪಂದ್ಯದ ವೇಳೆ ತಂಡದ ಕೋಚ್‌ ರವಿ ಶಾಸ್ತ್ರಿ, ಬೌಲಿಂಗ್‌ ಕೋಚ್‌ ಭರತ್‌ ಅರುಣ್‌, ಬ್ಯಾಟಿಂಗ್‌ ಕೋಚ್‌ ಶ್ರೀಧರ್‌, ಫಿಸಿಯೋ ಸೇರಿದಂತೆ ಹಲವರಿಗೆ ಕೋವಿಡ್‌ ತಗುಲಿತ್ತು. ಮತ್ತಷ್ಟುಆಟಗಾರರಿಗೆ ಕೋವಿಡ್‌ ತಗುಲಬಹುದು ಎಂಬ ಆತಂಕದಿಂದ ಟೀಂ ಇಂಡಿಯಾ ಆಟಗಾರರು ಮ್ಯಾಂಚೆಸ್ಟರ್‌ನಲ್ಲಿ ನಡೆಯಬೇಕಿದ್ದ ಕೊನೆ ಪಂದ್ಯವನ್ನು ಆಡಲು ಹಿಂದೇಟು ಹಾಕಿದ್ದರು. ಮೊದಲು ಭಾರತ ತಂಡ ಪಂದ್ಯವನ್ನು ಬಿಟ್ಟುಕೊಡಲು ಒಪ್ಪಿದೆ ಎಂದು ಇಂಗ್ಲೆಂಡ್‌ ಕ್ರಿಕೆಟ್‌ ಮಂಡಳಿ ಘೋಷಿಸಿದ್ದರೂ, ಕೆಲ ಹೊತ್ತಿನ ಬಳಿಕ ಪಂದ್ಯ ರದ್ದುಗೊಳಿಸಲಾಗಿದೆ, ಮುಂದಿನ ದಿನಗಳಲ್ಲಿ ಪಂದ್ಯ ನಡೆಸಲಾಗುವುದು ಎಂದು ತಿಳಿಸಿತ್ತು.

PREV

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ಚಿನ್ನಸ್ವಾಮಿಯಲ್ಲಿ ಮತ್ತೆ ಐಪಿಎಲ್ : ಇಂದು ನಿರ್ಧಾರ
ಸಂಜು ಸ್ಯಾಮ್ಸನ್ ನನ್ನ ಅಣ್ಣನಿದ್ದಂತೆ; ಇಬ್ಬರ ಪೈಪೋಟಿ ಬಗ್ಗೆ ಮನಬಿಚ್ಚಿ ಮಾತಾಡಿದ ಜಿತೇಶ್ ಶರ್ಮಾ