
ನವದೆಹಲಿ[ಡಿ.22]: ‘ಅತಿಸಾರದಿಂದಾಗಿ ಆಡುತ್ತೇನೋ ಇಲ್ಲವೋ ಎಂಬ ಭಯವಿತ್ತು. ಬ್ಯಾಟ್ ಹಿಡಿದು ನಿಲ್ಲುವುದೂ ಕಷ್ಟವಾಗಿ ಬಿಡುತ್ತೇನೋ ಎಂಬ ಸ್ಥಿತಿಯಲ್ಲಿ ಪಂದ್ಯ ಆಡುವುದೆಂದರೆ ಅದ್ಯಾಕೋ ಅತಿಯಾದ ಆತ್ಮವಿಶ್ವಾಸ ತೋರಿಸಿದಂತಾಗುತ್ತದೆ ಅಂದುಕೊಳ್ಳುತ್ತಲೇ ಅಂಗಣಕ್ಕಿಳಿದಿದ್ದೆ. ಅದೃಷ್ಟವಶಾತ್ ಏನೂ ಆಗಲಿಲ್ಲ. ಉತ್ತಮ ಪ್ರದರ್ಶನವನ್ನೇ ನೀಡಲು ಸಾಧ್ಯವಾಯಿತು’!. ಹೀಗೆಂದು 2003ರ ವಿಶ್ವಕಪ್‌ನ ಪಂದ್ಯಗಳ ಹಾಗೂ ತಮ್ಮ ಕ್ರಿಕೆಟ್ ವೃತ್ತಿ ಜೀವನದ ಮರೆಯಲಾಗದ ಕ್ಷಣಗಳನ್ನು ಹಂಚಿಕೊಂಡಿದ್ದು ಭಾರತೀಯ ಕ್ರಿಕೆಟ್‌ನ ದಿಗ್ಗಜ, ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡುಲ್ಕರ್.
ಮೊದಲೆರಡು ಟೆಸ್ಟ್‌ನಲ್ಲಿ ಶತಕ: ಪಾಕ್‌ನ ಅಲಿ ದಾಖಲೆ
ಶನಿವಾರ ಖಾಸಗಿ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಸಚಿನ್, ‘ಪಾಕಿಸ್ತಾನ ವಿರುದ್ಧದ ಪಂದ್ಯದಲ್ಲಿ ಮಾಂಸಖಂಡದ ಸೆಳೆತಕ್ಕೆ ಗುರಿಯಾಗಿದ್ದೆ. ವೃತ್ತಿಬದುಕಿನಲ್ಲಿ ಅದೊಂದೇ ಪಂದ್ಯದಲ್ಲಿ ನಾನು ಓಟಗಾರನ ಸಹಾಯ ಪಡೆದಿದ್ದು. 500 ಕೆ.ಜಿ ತೂಕ ಹೊತ್ತು ಆಡುತ್ತೇನೆ ಎಂದು ಅನಿಸುತ್ತಿತ್ತು. ಆ ಪಂದ್ಯದ ಬಳಿಕ ಶ್ರೀಲಂಕಾ ವಿರುದ್ಧ ಸೆಣಸಿದೆವು. ಆ ಪಂದ್ಯದ ವೇಳೆ ಅತಿಸಾರದಿಂದ ಬಳಲುತ್ತಿದ್ದೆ. ನಿಲ್ಲಲು ಸಹ ಕಷ್ಟವಾಗುತ್ತಿತ್ತು. ಆದರೂ ತಂಡಕ್ಕಾಗಿ ಎಂತದ್ದೇ ಸವಾಲುಗಳನ್ನು ಸ್ವೀಕರಿಸಲು ನಾನು ಸಿದ್ಧನಿದ್ದೆ’ ಎಂದಿದ್ದಾರೆ. ಲಂಕಾ ವಿರುದ್ಧದ ಪಂದ್ಯದಲ್ಲಿ ಸಚಿನ್ 97 ರನ್ ಗಳಿಸಿದ್ದರು. ಆ ಪಂದ್ಯವನ್ನು ಭಾರತ 183 ರನ್‌ಗಳಿಂದ ಗೆದ್ದಿತ್ತು.
ಸಚಿನ್‌ಗೆ ಬ್ಯಾಟಿಂಗ್ ಟಿಪ್ಸ್ ಕೊಟ್ಟಿದ್ದ ಹೋಟೆಲ್ ಮಾಣಿ ಸಿಕ್ಕರೆ ಹೇಳಿ, ಪ್ಲೀಜ್!
ದಕ್ಷಿಣ ಆಫ್ರಿಕಾದಲ್ಲಿ 2003ರಲ್ಲಿ ನಡೆದ ಐಸಿಸಿ ಏಕದಿನ ವಿಶ್ವಕಪ್ ಟೂರ್ನಿಯಲ್ಲಿ ಸಚಿನ್ ತೆಂಡುಲ್ಕರ್ ಬರೋಬ್ಬರಿ 673 ರನ್ ಬಾರಿಸಿದ್ದರು. ಸಚಿನ್ ಅಮೋಘ ಪ್ರದರ್ಶನದ ಹೊರತಾಗಿಯೂ ಭಾರತ ತಂಡವು ಫೈನಲ್’ನಲ್ಲಿ ಆಸ್ಟ್ರೇಲಿಯಾಗೆ ಶರಣಾಗಿತ್ತು.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.