ಮೊದಲೆರಡು ಟೆಸ್ಟ್‌ನಲ್ಲಿ ಶತಕ: ಪಾಕ್‌ನ ಅಲಿ ದಾಖಲೆ

By Suvarna NewsFirst Published Dec 22, 2019, 10:28 AM IST
Highlights

ಏಕದಿನ ಹಾಗೂ ಟೆಸ್ಟ್ ಕ್ರಿಕೆಟ್‌ನ ಪದಾರ್ಪಣೆ ಪಂದ್ಯದಲ್ಲೇ ಶತಕ ಸಿಡಿಸಿ ಅಪರೂಪದ ದಾಖಲೆ ಬರೆದಿದ್ದ ಪಾಕಿಸ್ತಾನ ಆರಂಭಿಕ ಬ್ಯಾಟ್ಸ್‌ಮನ್ ಅಬಿದ್ ಅಲಿ, ಇದೀಗ ಮತ್ತೊಂದು ದಾಖಲೆ ಬರೆದಿದ್ದಾರೆ. ಈ ಕುರಿತಾದ ವರದಿ ಇಲ್ಲಿದೆ ನೋಡಿ...

ಕರಾಚಿ(ಡಿ.22): ಶ್ರೀಲಂಕಾ ವಿರುದ್ಧ ಇಲ್ಲಿ ನಡೆಯುತ್ತಿರುವ 2ನೇ ಟೆಸ್ಟ್‌ನಲ್ಲಿ ಶತಕ ಬಾರಿಸುವ ಮೂಲಕ ಪಾಕಿಸ್ತಾನದ ಆರಂಭಿಕ ಬ್ಯಾಟ್ಸ್‌ಮನ್‌ ಅಬಿದ್‌ ಅಲಿ, ವೃತ್ತಿಬದುಕಿನ ಮೊದಲೆರಡು ಟೆಸ್ಟ್‌ಗಳಲ್ಲಿ ಶತಕ ಬಾರಿಸಿದ ವಿಶ್ವದ 9ನೇ ಹಾಗೂ ಪಾಕಿಸ್ತಾನದ ಮೊದಲ ಕ್ರಿಕೆಟಿಗ ಎನ್ನುವ ದಾಖಲೆ ಬರೆದಿದ್ದಾರೆ. 

ಪದಾರ್ಪಣಾ ಪಂದ್ಯದಲ್ಲಿ ಶತಕ: ಅಪರೂಪದ ದಾಖಲೆ ಬರೆದ ಪಾಕ್ ಕ್ರಿಕೆಟಿಗ..!

ಮೊದಲ ಇನ್ನಿಂಗ್ಸ್‌ನಲ್ಲಿ 191 ರನ್‌ಗೆ ಆಲೌಟ್‌ ಆಗಿದ್ದ ಪಾಕಿಸ್ತಾನ, ದ್ವಿತೀಯ ಇನ್ನಿಂಗ್ಸ್‌ನಲ್ಲಿ ಭರ್ಜರಿ ಬ್ಯಾಟಿಂಗ್‌ ಪ್ರದರ್ಶನ ತೋರಿದೆ. ಅಲಿ 174 ರನ್‌ ಬಾರಿಸಿ ಔಟಾದರು. ಮೊದಲ ಟೆಸ್ಟ್‌ನಲ್ಲಿ ಅವರು 109 ರನ್‌ ಗಳಿಸಿದ್ದರು. 3ನೇ ದಿನದಂತ್ಯಕ್ಕೆ 2ನೇ ಇನ್ನಿಂಗ್ಸ್‌ನಲ್ಲಿ ಪಾಕಿಸ್ತಾನ 2 ವಿಕೆಟ್‌ಗೆ 395 ರನ್‌ ಗಳಿಸಿದ್ದು, 315 ರನ್‌ ಮುನ್ನಡೆ ಸಾಧಿಸಿದೆ. ಆತಿಥೇಯ ತಂಡ ಗೆಲುವಿನ ಮೇಲೆ ಕಣ್ಣಿಟ್ಟಿದೆ.

IPL 2020: RCB ಕಪ್ ಗೆಲ್ಲುವ ಸುಳಿವು ನೀಡಿದ ಡೇಲ್ ಸ್ಟೇನ್!

ಅಬಿದ್‌ ಅಲಿ ಈ ಮೊದಲು ಮಾರ್ಚ್ 2019ರಲ್ಲಿ ಆಸ್ಟ್ರೇಲಿಯಾ ವಿರುದ್ಧದ ಏಕದಿನ ಕ್ರಿಕೆಟ್ ಪದಾರ್ಪಣೆ ಪಂದ್ಯದಲ್ಲಿ ಭರ್ಜರಿ ಶತಕ ಸಿಡಿಸಿದ್ದರು. ಇನ್ನು ಲಂಕಾ ವಿರುದ್ಧ ತಾವಾಡಿದ ಚೊಚ್ಚಲ ಟೆಸ್ಟ್ ಪಂದ್ಯದಲ್ಲಿ ಶತಕ ಬಾರಿಸುವ ಮೂಲಕ ಅಪರೂಪದ ದಾಖಲೆ ಬರೆದಿದ್ದರು. 

ಸ್ಕೋರ್‌:

ಪಾಕಿಸ್ತಾನ 191 ಹಾಗೂ 395/2, ಲಂಕಾ 271
 

click me!