ಕಲಿತಿದ್ದು ನಿಮ್ಮಿಂದಲೇ; ಸೌರವ್ ಗಂಗೂಲಿಗೆ ಪುತ್ರಿ ಟಕ್ಕರ್!

Published : Nov 25, 2019, 07:39 PM ISTUpdated : Jan 18, 2022, 06:01 PM IST
ಕಲಿತಿದ್ದು ನಿಮ್ಮಿಂದಲೇ; ಸೌರವ್ ಗಂಗೂಲಿಗೆ ಪುತ್ರಿ ಟಕ್ಕರ್!

ಸಾರಾಂಶ

ಬಿಸಿಸಿಐ ನೂತನ ಅಧ್ಯಕ್ಷ ಸೌರವ್ ಗಂಗೂಲಿಗೆ ಪುತ್ರಿ ಸನಾ ಗಂಗೂಲಿ ಟ್ರೋಲ್ ಮಾಡಿದ್ದಾರೆ. ನಿಮ್ಮಿಂದಲೇ ನಾನು ಕಲಿತಿದ್ದು ಎಂದು ಪ್ರತಿಕ್ರಿಯೆ ನೀಡೋ ಮೂಲಕ ಗಂಗೂಲಿಗೆ ಟಕ್ಕರ್ ನೀಡಿದ್ದಾಳೆ.

ಕೋಲ್ಕತಾ(ನ.25): ಬಿಸಿಸಿಐ ನೂತನ ಅಧ್ಯಕ್ಷ ಸೌರವ್ ಗಂಗೂಲಿ ಭಾರತೀಯ ಕ್ರಿಕೆಟ್‌ನಲ್ಲಿ ಹೊಸ ಅಧ್ಯಾಯ ಬರೆದಿದ್ದಾರೆ. ನಾಯಕನಾಗಿ ಟೀಂ ಇಂಡಿಯಾಗೆ ಹೊಸ ದಿಕ್ಕು ನೀಡಿದ ಗಂಗೂಲಿ, ಇದೀಗ ಬಿಸಿಸಿಐ ಅಧ್ಯಕ್ಷನಾಗಿ ಪಿಂಕ್ ಬಾಲ್ ಟೆಸ್ಟ್ ಆಯೋಜಿಸುವ ಮೂಲಕ ಹೊಸ ಇತಿಹಾಸ ರಚಿಸಿದ್ದಾರೆ. ಭಾರತೀಯ ಕ್ರಿಕೆಟ್ ಅಭಿಮಾನಿಗಳಲ್ಲಿ ಹೊಸ ಭರವಸೆ ಮೂಡಿಸಿರುವ ಸೌರವ್ ಗಂಗೂಲಿಯನ್ನು ಪುತ್ರಿ ಸನಾ ಗಂಗೂಲಿ ಟ್ರೋಲ್ ಮಾಡಿದ್ದಾರೆ.

 

ಇದನ್ನೂ ಓದಿ: ದೇಶದ ಜತೆ ಸೌರವ್ ಗಂಗೂಲಿ ಹಂಚಿಕೊಂಡ ಸ್ವೀಟ್ ‘ಸಂದೇಶ’

ಭಾರತ ಹಾಗೂ ಬಾಂಗ್ಲಾದೇಶ ನಡುವಿನ ಪಿಂಕ್ ಬಾಲ್ ಟೆಸ್ಟ್ ಪಂದ್ಯದ ಪ್ರಶಸ್ತಿ ವಿತರಣಾ ಸಮಾರಂಭದಲ್ಲಿ ಗಂಗೂಲಿ ಕೂಡ ಹಾಜರಿದ್ದರು. ಈ ವೇಳೆ ತೆಗೆದ ಫೋಟೋವನ್ನು ಗಂಗೂಲಿ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದರು. ಗಂಭೀರವಾಗಿ ಕಾಣಿಸಿಕೊಂಡಿರುವ ಈ ಫೋಟೋಗೆ ಗಂಗೂಲಿ ಪುತ್ರಿ ಸನಾ ಗಂಗೂಲಿ ಪ್ರತಿಕ್ರಿಯಿಸಿದ್ದಾರೆ. ನಿಮ್ಮ ನೋಟ ಹೇಳುತ್ತಿದೆ, ನಿಮಗಿಷ್ಟವಾಗದಿರುವುದೇನು? ಎಂದು ಪ್ರತಿಕ್ರಿಯೆ ನೀಡಿದ್ದಾರೆ.

ಇದನ್ನೂ ಓದಿ: ಇದು ದಾದಾ ಪಡೆ ಎಂದು ಗುಡುಗಿದ ವಿರಾಟ್..!

ಬರು ಬರುತ್ತಾ ನೀನು ಯಾರ ಮಾತನ್ನೂ ಕೇಳುತ್ತಿಲ್ಲ ಎಂದು ಪುತ್ರಿಯ ಪ್ರತಿಕ್ರಿಯೆಗೆ ಗಂಗೂಲಿ ಪ್ರತ್ಯುತ್ತರ ನೀಡಿದ್ದಾರೆ. ಇಷ್ಟಕ್ಕೇ ಸುಮ್ಮನಾಗದ ಗಂಗೂಲಿ ಪುತ್ರಿ ಸನಾ ಗಂಗೂಲಿ, ಎಲ್ಲವೂ ನಿಮ್ಮಿಂದಲೇ ಕಲಿತದ್ದು ಎಂದು ಪ್ರತಿಕ್ರಿಯಿಸಿದ್ದಾರೆ. ಈ ಮೂಲಕ ಗಂಗೂಲಿಯ ಆಕ್ರಮಣಕಾರಿ, ಹಾಗೂ ತನಗೆ ಸರಿ ಅನಿಸಿದ್ದನ್ನು ಮಾಡುವ ಜಾಯಮಾನವನ್ನು ಟ್ರೋಲ್ ಮಾಡಿದ್ದಾರೆ.

PREV

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಸಂಜು ಸ್ಯಾಮ್ಸನ್ ನನ್ನ ಅಣ್ಣನಿದ್ದಂತೆ; ಇಬ್ಬರ ಪೈಪೋಟಿ ಬಗ್ಗೆ ಮನಬಿಚ್ಚಿ ಮಾತಾಡಿದ ಜಿತೇಶ್ ಶರ್ಮಾ
ದಕ್ಷಿಣ ಆಫ್ರಿಕಾ ಎದುರು ಗೆದ್ದರೂ ನಿಂತಿಲ್ಲ ಚಿಂತೆ: 2ನೇ ಟಿ20ಗೆ ಭಾರತ ತಂಡದಲ್ಲಿ ಬದಲಾವಣೆ?