ಹೊಸ ಇನಿಂಗ್ಸ್ ಶುರು ಮಾಡಿದ ಧೋನಿ; ರಾಂಚಿಯಲ್ಲಿ ಯುವಕರಿಗೆ ಕೋಚಿಂಗ್!

By Web Desk  |  First Published Nov 25, 2019, 6:58 PM IST

ಟೀಂ ಇಂಡಿಯಾ ಆಯ್ಕೆ ಸಮಿತಿ ಧೋನಿ ಬದಲು ರಿಷಭ್ ಪಂತ್‌ಗೆ ಹೆಚ್ಚಿನ ಆದ್ಯತೆ ನೀಡುತ್ತಿದೆ. ಟೀಂ ಇಂಡಿಯಾದಿಂದ ದೂರವಾಗಿರುವ ಧೋನಿ ಇದೀಗ ಕೋಚಿಂಗ್ ಮೂಲಕ ಹೊಸ ಇನಿಂಗ್ಸ್ ಆರಂಭಿಸಿದ್ದಾರೆ. 


ರಾಂಚಿ(ನ.25): ವಿಶ್ವಕಪ್ ಟೂರ್ನಿ ಬಳಿಕ ಟೀಂ ಇಂಡಿಯಾ ಹಿರಿಯ ಕ್ರಿಕೆಟಿಗ, ಮಾಜಿ ನಾಯಕ ಎಂ.ಎಸ್.ಧೋನಿ ಅಂತಾರಾಷ್ಟ್ರೀಯ ಪಂದ್ಯದಲ್ಲಿ ಕಾಣಿಸಿಕೊಂಡಿಲ್ಲ, ವೆಸ್ಟ್ ಇಂಡೀಸ್ ಪ್ರವಾಸ, ಸೌತ್ ಆಫ್ರಿಕಾ ಹಾಗೂ ಬಾಂಗ್ಲಾದೇಶ ವಿರುದ್ಧದ ಸರಣಿಯಲ್ಲೂ ಧೋನಿ ಇರಲಿಲ್ಲ. ಇತ್ತೀಚೆಗಷ್ಟೇ ಆಯ್ಕೆ ಮಾಡಿದ ವೆಸ್ಟ್ ಇಂಡೀಸ್ ವಿರುದ್ಧದ ಸರಣಿಗೂ ಧೋನಿಯನ್ನು ಕಡೆಗಣಿಸಲಾಗಿದೆ. ಟೀಂ ಇಂಡಿಯಾದಿಂದ ದೂರ ಉಳಿದಿರುವ ಧೋನಿ ಇದೀಗ ಕೋಚಿಂಗ್  ಕೆಲಸ ಶುರು ಮಾಡಿದ್ದಾರೆ.

ಇದನ್ನೂ ಓದಿ: ಟ್ವೀಟ್ ಮಾಡಿ ಧೋನಿ ಅಭಿಮಾನಿಗಳ ತಲೆಗೆ ಹುಳ ಬಿಟ್ಟ ವಿರಾಟ್ ಕೊಹ್ಲಿ!

Latest Videos

undefined

38ರ ಹರೆಯದ ಧೋನಿ, 2020ರ ಟಿ20 ವಿಶ್ವಕಪ್ ತಂಡದಲ್ಲಿರಬೇಕು ಅನ್ನೋ ಒತ್ತಾಯ ಹೆಚ್ಚಾಗುತ್ತಿದೆ. ಕಾರಣ ಧೋನಿ ಸ್ಥಾನ ತುಂಬಬಲ್ಲ ವಿಕೆಟ್ ಕೀಪರ್ ಬ್ಯಾಟ್ಸ್‌ಮನ್ ಸದ್ಯ ತಂಡದಲ್ಲಿಲ್ಲ ಅನ್ನೋದು ಮಾತ್ರವಲ್ಲ, ಧೋನಿ ಅನುಭವ ತಂಡಕ್ಕೆ ಅವಶ್ಯಕತೆ ಇದೆ. ಆದರೆ ಆಯ್ಕೆ ಸಮಿತಿ ಧೋನಿ ಬದಲು ರಿಷಭ್ ಪಂತ್‌ಗೆ ಹೆಚ್ಚಿನ ಆದ್ಯತೆ ನೀಡಿದೆ.  ಸದ್ಯ ಧೋನಿ ಇದೀಗ ರಾಂಚಿ ಕ್ರಿಕೆಟ್ ಮೈದಾನಲ್ಲಿ ಅಭ್ಯಾಸ ನಡೆಸುತ್ತಿದ್ದಾರೆ. ಈ ವೇಳೆ ಧೋನಿ ಬ್ಯಾಟಿಂಗ್ ಕುರಿತು ಟಿಪ್ಸ್ ನೀಡೋ ಮೂಲಕ ಎಲ್ಲರ ಗಮನಸೆಳೆದಿದ್ದಾರೆ.

 

. sharing batting tips with his friend at JSCA earlier today! 💙😇 pic.twitter.com/NjfI0u0fAR

— MS Dhoni Fans Official (@msdfansofficial)

ಇದನ್ನೂ ಓದಿ: ಧೋನಿಯಿಂದಲೇ ವಿಶ್ವಕಪ್ ಶತಕ ಕೈತಪ್ಪಿತು; ಗಂಭೀರ್ ಹೇಳಿಕೆಗೆ ಫ್ಯಾನ್ಸ್ ಗರಂ

ಫ್ರಂಟ್ ಫೂಟ್ ಸಿಕ್ಸರ್ ಕುರಿತು ಧೋನಿ ಟಿಪ್ಸ್ ನೀಡುತ್ತಿರುವ ವಿಡಿಯೋ ವೈರಲ್ ಆಗಿದೆ. ರಾಂಚಿ ಮೈದಾನದಲ್ಲಿ ಟಿಪ್ಸ್ ನೀಡೋ ಮೂಲಕ ಧೋನಿ ಹೊಸ ಇನಿಂಗ್ಸ್ ಶುರು ಮಾಡಿದ್ದಾರೆ. ಚಾಣಾಕ್ಷ ನಾಯಕ, ಹಿರಿಯ ಕ್ರಿಕೆಟಿಗ ತಮ್ಮ ಅನುಭವವನ್ನು ಯುವಕರಿಗೆ ಧಾರೆ ಎರೆಯುತ್ತಿದ್ದಾರೆ. ಧೋನಿ ಮತ್ತೆ ತಂಡಕ್ಕೆ ಕಮ್‌ಬ್ಯಾಕ್ ಮಾಡುತ್ತಾರಾ? ಇಲ್ಲಾ ಕೋಚಿಂಗ್ ಅಥವಾ ಅಕಾಡಮಿಯಲ್ಲಿ ತೊಡಗಿಸಿಕೊಳ್ಳುತ್ತಾರಾ ಅನ್ನೋ ಕುತೂಹಲ ಅಭಿಮಾನಿಗಳಲ್ಲಿ ಮನೆ ಮಾಡಿದೆ.

click me!