ಬಿಸಿಸಿಐ ಆಯ್ಕೆಗಾರ ಹುದ್ದೆಗೆ ಅರ್ಜಿ ಸಲ್ಲಿಸಿದ L ಶಿವರಾಮಕೃಷ್ಣನ್‌

By Kannadaprabha NewsFirst Published Jan 24, 2020, 10:51 AM IST
Highlights

ಟೀಂ ಇಂಡಿಯಾ ಆಯ್ಕೆ ಸಮಿತಿ ಮುಖ್ಯಸ್ಥ ಹುದ್ದೆಗೆ ಮಾಜಿ ಕ್ರಿಕೆಟಿಗ ಹಾಗೂ ಖ್ಯಾತ ವೀಕ್ಷಕ ವಿವರಣೆಗಾರ ಲಕ್ಷ್ಮಣ್ ಶಿವರಾಮಕೃಷ್ಣನ್‌ ಅರ್ಜಿ ಸಲ್ಲಿಸಿದ್ದಾರೆ. ಈ ಕುರಿತಾದ ವಿವರ ಇಲ್ಲಿದೆ ನೋಡಿ..

ನವದೆಹಲಿ(ಜ.24): ಭಾರತದ ಮಾಜಿ ಲೆಗ್‌ಸ್ಪಿನ್ನರ್‌ ಹಾಗೂ ಹೆಸರಾಂತ ವೀಕ್ಷಕ ವಿವರಣೆಗಾರ ಲಕ್ಷ್ಮಣ್‌ ಶಿವರಾಮಕೃಷ್ಣನ್‌ ರಾಷ್ಟ್ರೀಯ ಆಯ್ಕೆ ಸಮಿತಿಯಲ್ಲಿ ಸ್ಥಾನಕ್ಕಾಗಿ ಅರ್ಜಿ ಸಲ್ಲಿಸಿದ್ದಾರೆ. ಅವರೊಂದಿಗೆ ಮಾಜಿ ಆಫ್‌ ಸ್ಪಿನ್ನರ್‌ ರಾಜೇಶ್‌ ಚೌವ್ಹಾಣ್‌ ಹಾಗೂ ಮಾಜಿ ಎಡಗೈ ಬ್ಯಾಟ್ಸ್‌ಮನ್‌ ಅಮೇಯ್‌ ಖುರಾಸಿಯಾ ಸಹ ಸ್ಪರ್ಧೆಗಿಳಿದಿದ್ದಾರೆ. ಅರ್ಜಿ ಸಲ್ಲಿಸಲು ಶುಕ್ರವಾರ ಕೊನೆ ದಿನವಾಗಿದೆ.

L ಶಿವ​ರಾ​ಮ​ಕೃಷ್ಣ BCCI ನೂತನ ಆಯ್ಕೆಗಾರ?

ಕಿರಿಯರ ಆಯ್ಕೆ ಸಮಿತಿಯ ಮಾಜಿ ಸದಸ್ಯ ಪ್ರೀತಂ ಗಾಂಧೆ ಹಾಗೂ ಕಿರಿಯರ ಆಯ್ಕೆ ಸಮಿತಿಯ ಹಾಲಿ ಸದಸ್ಯ ಜ್ಞಾನೇಂದ್ರ ಪಾಂಡೆ ಸಹ ಅರ್ಜಿ ಸಲ್ಲಿಸಿದ್ದು, ಈ ಇಬ್ಬರು ಆಯ್ಕೆಗಾರರಾಗಿ 4 ವರ್ಷ ಪೂರೈಸಿರುವ ಕಾರಣ ನ್ಯಾ.ಲೋಧಾ ಸಮಿತಿ ಶಿಫಾರಸಿನ ಪ್ರಕಾರ, ಇಬ್ಬರನ್ನು ಪರಿಗಣಿಸುವುದಿಲ್ಲ ಎನ್ನಲಾಗಿದೆ.

ಅರ್ಜಿದಾರರ ಪೈಕಿ ಅತಿ ಹಿರಿಯ ಆಟಗಾರನಿಗೆ ಪ್ರಧಾನ ಆಯ್ಕೆಗಾರ ಹುದ್ದೆ ಸಿಗಲಿದ್ದು, ಶಿವರಾಮಕೃಷ್ಣನ್‌ ಆಯ್ಕೆಯಾದರೆ ಅವರು ಆಯ್ಕೆ ಸಮಿತಿ ಮುಖ್ಯಸ್ಥರಾಗಲಿದ್ದಾರೆ. ಚೆನ್ನೈ ಮೂಲದ ಶಿವರಾಮಕೃಷ್ಣನ್‌ 1983ರಲ್ಲಿ ತಮಗೆ 17 ವರ್ಷವಿದ್ದಾಗ ಟೆಸ್ಟ್‌ ಕ್ರಿಕೆಟ್‌ಗೆ ಪಾದಾರ್ಪಣೆ ಮಾಡಿದ್ದರು.

ಆಯ್ಕೆ ಸಮಿತಿ ಅಧಿಕಾರ ಅವಧಿ ವಿಸ್ತರಣೆ ಇಲ್ಲ; MSK ಟೀಂಗೆ ಗಂಗೂಲಿ ಶಾಕ್!

ಹಾಲಿ ಆಯ್ಕೆ ಸಮಿತಿ ಮುಖ್ಯಸ್ಥ ಎಂ.ಎಸ್‌.ಕೆ.ಪ್ರಸಾದ್‌ ಹಾಗೂ ಸದಸ್ಯ ಗಗನ್‌ ಖೋಡಾ ಅವರ ಕಾರ್ಯಾವಧಿ ಮುಕ್ತಾಯಗೊಂಡಿದ್ದು, ಆಯ್ಕೆಯಾಗುವ ನೂತನ ಸದಸ್ಯರು ಈ ಇಬ್ಬರ ಸ್ಥಾನಗಳನ್ನು ತುಂಬಲಿದ್ದಾರೆ.
 

click me!