ಟೀಂ ಇಂಡಿಯಾ ಸ್ಪಿನ್ನರ್ ಕುಲ್ದೀಪ್ ಯಾದವ್ 2ನೇ ಬಾರಿಗೆ ಹ್ಯಾಟ್ರಿಕ್ ವಿಕೆಟ್ ಕಬಳಿಸೋ ಮೂಲಕ ದಾಖಲೆ ಬರೆದಿದ್ದಾರೆ. ಇದೇ ಮೊದಲ ಬಾರಿಗೆ ಭಾರತೀಯ ಬೌಲರ್ 2ನೇ ಬಾರಿಗೆ ಹ್ಯಾಟ್ರಿಕ್ ಸಾಧನೆ ಮಾಡಿದ್ದಾರೆ. ಕುಲ್ದೀಪ್ ದಾಖಲೆ ವಿವರ ಇಲ್ಲಿದೆ.
ವಿಶಾಖಪಟ್ಟಣಂ(ಡಿ.19): ವೆಸ್ಟ್ ಇಂಡೀಸ್ ವಿರುದ್ಧದ 2ನೇ ಏಕದಿನ ಪಂದ್ಯದಲ್ಲಿ ಟೀಂ ಇಂಡಿಯಾ ಸ್ಪಿನ್ನರ್ ಕುಲ್ದೀಪ್ ಯಾದವ್ ಹ್ಯಾಟ್ರಿಕ್ ವಿಕೆಟ್ ಕಬಳಿಸಿದ್ದಾರೆ. ಈ ಮೂಲಕ ದಾಖಲೆ ಬರೆದಿದ್ದಾರೆ. 2 ಬಾರಿ ಹ್ಯಾಟ್ರಿಕ್ ವಿಕೆಟ್ ಕಬಳಿಸಿದ ಭಾರತದ ಮೊದಲ ಬೌಲರ್ ಅನ್ನೋ ಹೆಗ್ಗಳಿಕೆಗೆ ಕುಲ್ದೀಪ್ ಯಾದವ್ ಪಾತ್ರರಾಗಿದ್ದಾರೆ.
ಏಕದಿನದಲ್ಲಿ ಭಾರತದ ಚೇತನ್ ಶರ್ಮಾ, ಕಪಿಲ್ ದೇವ್, ಮೊಹಮ್ಮದ್ ಶಮಿ ಒಂದು ಬಾರಿ ಹ್ಯಾಟ್ರಿಕ್ ವಿಕೆಟ್ ಕಬಳಿಸಿದ್ದಾರೆ. ಆದರೆ ಕುಲ್ದೀಪ್ ಇದೀಗ 2ನೇ ಬಾರಿಗೆ ಹ್ಯಾಟ್ರಿಕ್ ಸಾಧನೆ ಮಾಡಿದ್ದಾರೆ.
ಇದನ್ನೂ ಓದಿ: ರಾಹುಲ್ ಸೆಂಚುರಿ ಸೆಲೆಬ್ರೇಷನ್ ಹಿಂದಿದೆ ಫುಟ್ಬಾಲಿಗನ ಸಂಭ್ರಮಾಚರಣೆ.!.
ಭಾರತದ ಪರ ಹ್ಯಾಟ್ರಿಕ್ ಕಬಳಿಸಿದ ಸಾಧಕರು(ಏಕದಿನ)
ಚೇತನ್ ಶರ್ಮಾ v ನ್ಯೂಜಿಲೆಂಡ್(ನಾಗಪುರ) 1987
ಕಪಿಲ್ ದೇವ್ v ಶ್ರೀಲಂಕಾ(ಕೋಲ್ಕತಾ) 1991
ಕುಲ್ದೀಪ್ ಯಾದವ್ v ಆಸ್ಟ್ರೇಲಿಯಾ(ಕೋಲ್ಕತಾ) 2017
ಮೊಹಮ್ಮದ್ ಶಮಿ v ಅಫ್ಘಾನಿಸ್ತಾನ(ಸೌಥಾಂಪ್ಟನ್) 2019
ಕುಲ್ದೀಪ್ ಯಾದವ್ v ವೆಸ್ಟ್ ಇಂಡೀಸ್(ವಿಶಾಖಪಟ್ಟಣಂ) 2019
ಇದನ್ನೂ ಓದಿ: 2ನೇ ಏಕದಿನ: ರೋಹಿತ್ ಶರ್ಮಾ, ಕೆಎಲ್ ರಾಹುಲ್ ಸೆಂಚುರಿ!.
ಗರಿಷ್ಠ ಬಾರಿ ಏಕದಿನದಲ್ಲಿ ಹ್ಯಾಟ್ರಿಕ್ ವಿಕೆಟ್ ಕಬಳಿಸಿದ ಪಟ್ಟಿಯಲ್ಲಿ ಶ್ರೀಲಂಕಾದ ವೇಗಿ ಲಸಿತ್ ಮಲಿಂಗ ಮೊದಲ ಸ್ಥಾನದಲ್ಲಿದ್ದಾರೆ. ಮಲಿಂಗ 3 ಬಾರಿ ಹ್ಯಾಟ್ರಿಕ್ ವಿಕೆಟ್ ಕಬಳಿಸಿದ್ದಾರೆ. ವಾಸಿಮ್ ಅಕ್ರಂ 2 ಬಾರಿ ಹ್ಯಾಟ್ರಿಕ್ ವಿಕೆಟ್ ಸಾಧನೆ ಮಾಡಿದ್ದಾರೆ.
ಗರಿಷ್ಠ ಹ್ಯಾಟ್ರಿಕ್ ವಿಕೆಟ್ ಸಾಧಕರು(ಏಕದಿನ)
3 ಲಸಿತ್ ಮಲಿಂಗಾ
2 ವಾಸಿಂ ಅಕ್ರಂ
2 ಸಕ್ಲೈನ್ ಮುಷ್ತಾಕ್
2 ಚಮಿಂಡ ವಾಸ್
2 ಟ್ರೆಂಟ್ ಬೋಲ್ಟ್
2 ಕುಲ್ದೀಪ್ ಯಾದವ್