
ವಿಶಾಖಪ್ಪಟ್ಟಣಂ(ಡಿ.18): ವೆಸ್ಟ್ ಇಂಡೀಸ್ ವಿರುದ್ಧದ 2ನೇ ಟಿ20 ಪಂದ್ಯದಲ್ಲಿ ಕನ್ನಡಿಗ ಕೆಎಲ್ ರಾಹುಲ್ ಭರ್ಜರಿ ಶತಕ ಸಿಡಿಸಿ ಮಿಂಚಿದ್ದಾರೆ. 5ನೇ ಏಕದಿನ ಸೆಂಚುರಿ ದಾಖಲಿಸಿದ ಕೆಎಲ್ ರಾಹುಲ್ ವಿಶೇಷ ಸಂಭ್ರಮಾಚರಣೆ ಮೂಲಕ ಗಮನ ಸೆಳೆದಿದ್ದಾರೆ. ಶತಕ ಸಿಡಿಸಿದ ಬಳಿಕ ರಾಹುಲ್, ಗ್ಲೌಸ್ ಮೂಲಕ ಎರಡೂ ಕಿವಿ ಮುಚ್ಚಿ ಸಂಕೇತ ನೀಡಿದರು. ಈ ಮೂಲಕ ಹೊಸ ಸೆಲೆಬ್ರೇಷನ್ ಇದೀಗ ವೈರಲ್ ಆಗಿದೆ.
ಪಂದ್ಯದ ಬಳಿಕ ರಾಹುಲ್ ತಮ್ಮ ಸೆಲೆಬ್ರೇಷನ್ ಕುರಿತು ಮಾತನಾಡಿದರು. ಸದ್ಯ ಈ ಸೆಲೆಬ್ರೇಷನ್ ರಹಸ್ಯವಾಗಿರಲಿ ಎಂದು ರಾಹುಲ್ ಹೇಳಿದ್ದಾರೆ. ಆದರೆ ರಾಹುಲ್ ಸಂಭ್ರಮಾಚರಣೆ ಹಾಗೂ ಸ್ಪಾನೀಶ್ ಫುಟ್ಬಾಲ್ ಅಯೋಝ್ ಪರೇಝ್ ಸಂಭ್ರಮಾಚರಣೆಗೆ ಹೋಲಿಕೆ ಇದೆ.
ಇಂಗ್ಲೀಷ್ ಪ್ರೀಮಿಯರ್ ಲೀಗ್ ಟೂರ್ನಿಯಲ್ಲಿ ಲೈಸೆಸ್ಟರ್ ಸಿಟಿ ತಂಡದ ಪರ ಫಾರ್ವರ್ಡ್ ಹಾಗೂ ಅಟ್ಯಾಕಿಂಗ್ ಮಿಡ್ ಫೀಲ್ಡರ್ ಜವಾಬ್ದಾರಿ ನಿರ್ವಹಿಸುವ ಅಯೋಝ್ ಪರೇಜ್ ಪ್ರತಿ ಗೋಲು ಸಿಡಿಸಿದ ಬಳಿಕ ಇದೇ ರೀತಿ ಸೆಲೆಬ್ರೇಷನ್ ಮಾಡುತ್ತಾರೆ. ಪರೇಜ್ ಗೋಲು ಸಿಡಿಸಿದ ಬೆನ್ನಲ್ಲೇ ಅಭಿಮಾನಿಗಳು ಕೂಡ ಪರೇಜ್ ಶೈಲಿಯನ್ನು ಅನುಕರಣೆ ಮಾಡುತ್ತಾರೆ. ಇದೀಗ ಇದೇ ಸಂಭ್ರಮಾಚರಣೆಯನ್ನು ರಾಹುಲ್ ಕಾಪಿ ಮಾಡಿದ್ದಾರಾ? ಅಥವಾ ಹೊಸ ರಾಹುಲ್ ಸಂಭ್ರಮಾಚರಣೆ ಹಿಂದೆ ರಹಸ್ಯ ಅಡಗಿದೆಯಾ ಅನ್ನೋ ವಿಚಾರ ಇನ್ನಷ್ಟೇ ಬಹಿರಂಗವಾಗಬೇಕಿದೆ.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.