Syed Mushtaq Ali Trophy ಟೂರ್ನಿಗೆ ಕೋಲ್ಕತಾ ಅಹಮದಾಬಾದ್ ಆತಿಥ್ಯ; ಕರ್ನಾಟಕ್ಕೆ ಮಹಾರಾಷ್ಟ್ರ ಮೊದಲ ಎದುರಾಳಿ

Published : Sep 08, 2022, 11:00 AM IST
Syed Mushtaq Ali Trophy ಟೂರ್ನಿಗೆ ಕೋಲ್ಕತಾ ಅಹಮದಾಬಾದ್ ಆತಿಥ್ಯ; ಕರ್ನಾಟಕ್ಕೆ ಮಹಾರಾಷ್ಟ್ರ ಮೊದಲ ಎದುರಾಳಿ

ಸಾರಾಂಶ

ಸಯ್ಯದ್ ಮುಷ್ತಾಕ್ ಅಲಿ ಟಿ20 ಟೂರ್ನಿಯ ವೇಳಾಪಟ್ಟಿ ಪ್ರಕಟ ಮುಷ್ತಾಕ್ ಅಲಿ ಟೂರ್ನಿಯ ನಾಕೌಟ್ ಪಂದ್ಯಗಳಿಗೆ ಕೋಲ್ಕತಾ, ಅಹಮದಾಬಾದ್ ಆತಿಥ್ಯ 'ಸಿ' ಗುಂಪಿನಲ್ಲಿ ಸ್ಥಾನ ಪಡೆದ ಕರ್ನಾಟಕ ಕ್ರಿಕೆಟ್ ತಂಡ

ನವದೆಹಲಿ(ಸೆ.08): 2022-23ರ ದೇಸಿ ಕ್ರಿಕೆಟ್‌ ಋುತುವಿನ ವೇಳಾಪಟ್ಟಿಪ್ರಕಟಗೊಂಡಿದ್ದು, ಸಯ್ಯದ್‌ ಮುಷ್ತಾಕ್‌ ಅಲಿ ಟಿ20 ಟೂರ್ನಿಯಲ್ಲಿ ‘ಸಿ’ ಗುಂಪಿನಲ್ಲಿ ಸ್ಥಾನ ಪಡೆದಿರುವ ಕರ್ನಾಟಕ ಅ.11ರಂದು ತನ್ನ ಮೊದಲ ಪಂದ್ಯವನ್ನು ಮಹಾರಾಷ್ಟ್ರ ವಿರುದ್ಧ ಆಡಲಿದೆ. ರಾಜ್ಯ ತಂಡವು ಮೊಹಾಲಿಯಲ್ಲಿ ಗುಂಪು ಹಂತದ ಪಂದ್ಯಗಳನ್ನು ಆಡಲಿದೆ. ಇನ್ನು ನ.12ರಿಂದ ಆರಂಭಗೊಳ್ಳಲಿರುವ ವಿಜಯ್‌ ಹಜಾರೆ ಏಕದಿನ ಟೂರ್ನಿಯಲ್ಲಿ ಕರ್ನಾಟಕಕ್ಕೆ ಮೇಘಾಲಯ ಮೊದಲ ಎದುರಾಳಿ. ಡಿ.13ರಿಂದ ರಣಜಿ ಟ್ರೋಫಿ ಆರಂಭಗೊಳ್ಳಲಿದ್ದು, ಸವೀರ್‍ಸಸ್‌ ವಿರುದ್ಧ ಕರ್ನಾಟಕ ಬೆಂಗಳೂರಲ್ಲಿ ಮೊದಲ ಪಂದ್ಯ ಆಡಲಿದೆ

ಬೆಂಗಳೂರಲ್ಲಿ ವಿಜಯ್‌ ಹಜಾರೆ ಲೀಗ್‌ ಪಂದ್ಯಗಳು

ನವದೆಹಲಿ: 2022-23ರ ದೇಸಿ ಕ್ರಿಕೆಟ್‌ ಋುತುವಿನಲ್ಲಿ ನಡೆಯಲಿರುವ ಸಯ್ಯದ್‌ ಮುಷ್ತಾಕ್‌ ಅಲಿ ಟಿ20, ವಿಜಯ್‌ ಹಜಾರೆ ಏಕದಿನ ಟೂರ್ನಿಯ ನಾಕೌಟ್‌ ಪಂದ್ಯಗಳು ಕ್ರಮವಾಗಿ ಕೋಲ್ಕತಾ ಮತ್ತು ಅಹಮದಾಬಾದ್‌ನಲ್ಲಿ ನಡೆಯಲಿವೆ. ಅಕ್ಟೋಬರ್ 11ರಿಂದ ನವೆಂಬರ್ 5ರ ವರೆಗೂ ಟಿ20, ನವೆಂಬರ್ 12ರಿಂದ ಡಿಸೆಂಬರ್ 2ರ ವರೆಗೂ ಏಕದಿನ ಪಂದ್ಯಾವಳಿ ನಡೆಯಲಿದೆ. 

ವಿಜಯ್‌ ಹಜಾರೆ ಟೂರ್ನಿಯ ಲೀಗ್‌ ಹಂತದ ಪಂದ್ಯಗಳಿಗೆ ಬೆಂಗಳೂರು ಸಹ ಆತಿಥ್ಯ ವಹಿಸಲಿದೆ. ಇನ್ನು 2020ರಲ್ಲಿ ಕೋವಿಡ್‌ನಿಂದಾಗಿ ರದ್ದಾಗಿದ್ದ ಇರಾನಿ ಟ್ರೋಫಿಯನ್ನು ಈ ವರ್ಷ ನಡೆಸಲು ಬಿಸಿಸಿಐ ನಿರ್ಧರಿಸಿದೆ. ಅ.1ರಿಂದ 5ರ ವರೆಗೂ 2020ರ ರಣಜಿ ಚಾಂಪಿಯನ್ಸ್‌ ಸೌರಾಷ್ಟ್ರ ಹಾಗೂ ರೆಸ್ಟ್‌ ಆಫ್‌ ಇಂಡಿಯಾ, 2023ರ ಮಾ.1ರಿಂದ 5ರ ವರೆಗೂ 2021ರ ರಣಜಿ ಚಾಂಪಿಯನ್ಸ್‌ ಮಧ್ಯಪ್ರದೇಶ ಹಾಗೂ ರೆಸ್ಟ್‌ ಆಫ್‌ ಇಂಡಿಯಾ ನಡುವೆ ಇರಾನಿ ಟ್ರೋಫಿ ಪಂದ್ಯ ನಡೆಯಲಿದೆ.

ಏಷ್ಯಾಕಪ್‌: ಆವೇಶ್‌ ಬದಲಿಗೆ ದೀಪಕ್‌ ಚಹರ್‌

ದುಬೈ: ಅನಾರೋಗ್ಯದ ಸಮಸ್ಯೆಯಿಂದ ಬಳಲುತ್ತಿರುವ ಭಾರತೀಯ ವೇಗಿ ಆವೇಶ್‌ ಖಾನ್‌ ಏಷ್ಯಾಕಪ್‌ ಟಿ20 ಟೂರ್ನಿಯಿಂದ ಹೊರಬಿದ್ದಿದ್ದಾರೆ. ಅವರ ಬದಲು ದೀಪಕ್‌ ಚಹರ್‌ ತಂಡಕ್ಕೆ ಸೇರ್ಪಡೆಗೊಂಡಿದ್ದಾರೆ. ಗಾಯದ ಸಮಸ್ಯೆಯಿಂದಾಗಿ 6 ತಿಂಗಳು ಕ್ರಿಕೆಟ್‌ನಿಂದ ದೂರ ಉಳಿದಿದ್ದ ಚಹರ್‌ ಇತ್ತೀಚೆಗೆ ಜಿಂಬಾಬ್ವೆ ಪ್ರವಾಸದಲ್ಲಿ ತಂಡಕ್ಕೆ ವಾಪಸ್ಸಾಗಿ ಉತ್ತಮ ಪ್ರದರ್ಶನ ತೋರಿದ್ದರು. ಹೀಗಾಗಿ ಅವರನ್ನು ಏಷ್ಯಾಕಪ್‌ ಮೀಸಲು ಪಡೆಗೆ ಆಯ್ಕೆ ಮಾಡಲಾಗಿತ್ತು.

Asia Cup 2022 ಟೀಂ ಇಂಡಿಯಾ ದುಸ್ಥಿತಿಗೆ ಕಾರಣಗಳೇನು?

ಖಂಡಾಲಾದಲ್ಲಿ ರಾಹುಲ್‌, ಆಥಿಯಾ ಮದುವೆ?

ಮುಂಬೈ: ಕ್ರಿಕೆಟಿಗ ಕೆ.ಎಲ್‌.ರಾಹುಲ್‌ ಹಾಗೂ ಬಾಲಿವುಡ್‌ ನಟಿ ಆಥಿಯಾ ಶೆಟ್ಟಿಅವರ ವಿವಾಹ ಮುಂಬೈ-ಪುಣೆ ಎಕ್ಸ್‌ಪ್ರೆಸ್‌ ಹೈವೇನಲ್ಲಿರುವ ಖಂಡಾಲಾದಲ್ಲಿ ನಡೆಯಲಿದೆ ಎನ್ನಲಾಗಿದೆ. ಖಂಡಾಲಾದಲ್ಲಿ ಆಥಿಯಾರ ತಂದೆ ಬಾಲಿವುಡ್‌ ನಟ ಸುನಿಲ್‌ ಶೆಟ್ಟಿ ಅವರ ಭವ್ಯ ಬಂಗಲೆ ಇದ್ದು, ಅಲ್ಲೇ ವಿವಾಹ ಕಾರ‍್ಯಕ್ರಮ ನಡೆಸಲು ನಿರ್ಧರಿಸಲಾಗಿದೆ ಎಂದು ಮಾಧ್ಯಮವೊಂದು ವರದಿ ಮಾಡಿದೆ.

ಶಸ್ತ್ರಚಿಕಿತ್ಸೆಗೆ ಒಳಗಾದ ಆಲ್ರೌಂಡರ್‌ ಜಡೇಜಾ

ನವದೆಹಲಿ: ಗಾಯಗೊಂಡಿರುವ ಭಾರತದ ಆಲ್ರೌಂಡರ್‌ ರವೀಂದ್ರ ಜಡೇಜಾ ಮಂಗಳವಾರ ಬಲಗಾಲಿನ ಮಂಡಿ ಶಸ್ತ್ರಚಿಕಿತ್ಸೆಗೆ ಒಳಗಾಗಿರುವುದಾಗಿ ಟ್ವೀಟರ್‌ನಲ್ಲಿ ತಿಳಿಸಿದ್ದಾರೆ. ಶಸ್ತ್ರಚಿಕಿತ್ಸೆ ಯಶಸ್ವಿಯಾಗಿದ್ದು ಸದ್ಯದಲ್ಲೇ ಪುನಶ್ಚೇತನ ಶಿಬಿರದಲ್ಲಿ ಪಾಲ್ಗೊಳ್ಳುವುದಾಗಿ ತಿಳಿಸಿದ್ದಾರೆ. ಏಷ್ಯಾಕಪ್‌ನಿಂದ ಹೊರಬಿದ್ದಿದ್ದ ಜಡೇಜಾ, ಟಿ20 ವಿಶ್ವಕಪ್‌ನಿಂದಲೂ ಹೊರಗುಳಿಯುವ ಸಾಧ್ಯತೆ ಇದೆ.

PREV

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

T20I ನೂರು ಸಿಕ್ಸರ್ ಕ್ಲಬ್ ಸೇರಿದ ಹಾರ್ದಿಕ್ ಪಾಂಡ್ಯ; ರೋಹಿತ್ ರೆಕಾರ್ಡ್ ಮುರಿತಾರಾ ಈ ಆಲ್ರೌಂಡರ್?
ಅಂತಾರಾಷ್ಟ್ರೀಯ ಟಿ20ಯಲ್ಲಿ ಆಲ್ರೌಂಡರ್ ಆಗಿ ಅಪರೂಪದಲ್ಲೇ ಅಪರೂಪದ ದಾಖಲೆ ಬರೆದ ಹಾರ್ದಿಕ್ ಪಾಂಡ್ಯ!