ಫೋಟೋ ಪೋಸ್ಟ್ ಮಾಡಿ ಆತಿಯಾ ಶೆಟ್ಟಿಗೆ ಶುಭಕೋರಿದ ಕೆಎಲ್ ರಾಹುಲ್!

By Web Desk  |  First Published Nov 6, 2019, 6:32 PM IST

ಟೀಂ ಇಂಡಿಯಾ ಕ್ರಿಕೆಟಿಗ ಕೆಎಲ್ ರಾಹುಲ್ ಹಾಗೂ ಬಾಲಿವುಡ್ ನಟಿ ಆತಿಯಾ ಶೆಟ್ಟಿ ಸದ್ದಿಲ್ಲದೇ ಡೇಟಿಂಗ್ ನಡೆಸುತ್ತಿದ್ದಾರೆ ಅನ್ನೋ ಮಾತು ಹಳೇಯದಾಗಿದೆ. ಇದೀಗ ರಾಹುಲ್, ಅತಿಯಾ ಹುಟ್ಟು ಹಬ್ಬಕ್ಕೆ ವಿಶೇಷವಾಗಿ ಶುಭಕೋರಿದ್ದಾರೆ.
 


ರಾಜ್‌ಕೋಟ್(ನ.06): ಬಾಂಗ್ಲಾದೇಶ ವಿರುದ್ಧದ ಮೊದಲ ಟಿ20 ಪಂದ್ಯದಲ್ಲಿ ಕಳಪೆ ಫಾರ್ಮ್‌ಗೆ ಸಿಲುಕಿರುವ ಟೀಂ ಇಂಡಿಯಾ ಬ್ಯಾಟ್ಸ್‌ಮನ್, ಕನ್ನಡಿಗ ಕೆಎಲ್ ರಾಹುಲ್ ಇದೀಗ 2ನೇ ಪಂದ್ಯಕ್ಕೆ ಭರ್ಜರಿ ಅಭ್ಯಾಸ ನಡೆಸಿದ್ದಾರೆ. ಇದರ ನಡುವೆ ರಾಹುಲ್, ಗೆಳತಿ ಹಾಗೂ ಬಾಲಿವುಡ್ ಹಿರಿಯ ನಟ ಸುನಿಲ್ ಶೆಟ್ಟಿ ಪುತ್ರಿ ಆತಿಯಾ ಶೆಟ್ಟಿ ಹುಟ್ಟು ಹಬ್ಬಕ್ಕೆ ವಿಶೇಷವಾಗಿ ಶುಭಕೋರಿದ್ದಾರೆ.

ಇದನ್ನೂ ಓದಿ: ಅಥಿಯಾ ಶೆಟ್ಟಿ ಜೊತೆ ಕೆಎಲ್ ರಾಹುಲ್ ಡಿನ್ನರ್ ಡೇಟ್?

Tap to resize

Latest Videos

ಆತಿಯಾ ಶೆಟ್ಟಿ ಜೊತೆಗಿನ ಫೋಟೋ ಶೇರ್ ಮಾಡಿರುವ ರಾಹುಲ್, ಹ್ಯಾಪಿ ಬರ್ತ್ ಡೇ ಎಂದು ಶುಭಕೋರಿದ್ದಾರೆ. ಅಥಿಯಾ ಶೆಟ್ಟಿ ಹಾಗೂ ರಾಹುಲ್ ಹಲವು ಬಾರಿ ಜೊತೆಯಾಗಿ ಕಾಣಿಸಿಕೊಂಡಿದ್ದಾರೆ. ಮುಂಬೈನ ರೆಸ್ಟೋರೆಂಟ್‌ಗಳಲ್ಲಿ ಹಲವು ಬಾರಿ ಕಾಣಿಸಿಕೊಂಡಿದ್ದಾರೆ. ಇವರಿಬ್ಬರು ಸದ್ದಿಲ್ಲದೇ ಡೇಟಿಂಗ್ ನಡೆಸುತ್ತಿದ್ದಾರೆ ಅನ್ನೋ ಮಾತುಗಳು ಕೇಳಿ ಬಂದಿತ್ತು. ಆದರೆ ರಾಹುಲ್ ಅಥವಾ ಅತಿಯಾ ಈ ಕುರಿತು ಯಾವುದೇ ಪ್ರತಿಕ್ರಿಯೆ ನೀಡಿಲ್ಲ.

ಇದನ್ನೂ ಓದಿ: ಸುನಿಲ್‌ ಶೆಟ್ಟಿ ಪುತ್ರಿ ಜತೆ ಕೆ.ಎಲ್.ರಾಹುಲ್‌ ಡೇಟಿಂಗ್‌?...

ಸದ್ಯ ರಾಹುಲ್ ರಾಜ್‌ಕೋಟ್‌ನಲ್ಲಿ ನವೆಂಬರ್ 7 ರಂದು ನಡೆಯಲಿರುವ 2ನೇ ಪಂದ್ಯಕ್ಕೆ ಹೆಚ್ಚು ಗಮನ ನೀಡಿದ್ದಾರೆ. ವಿಜಯ್ ಹಜಾರೆ ಟೂರ್ನಿಯಲ್ಲಿ ಉತ್ತಮ ಪ್ರದರ್ಶನ ನೀಡಿದ್ದ ರಾಹುಲ್, ಬಾಂಗ್ಲಾ ವಿರುದ್ದದ ಟಿ20 ಸರಣಿಗೆ ಆಯ್ಕೆಯಾಗಿದ್ದರು. ಆದರೆ ಮೊದಲ ಪಂದ್ಯದಲ್ಲಿ ರಾಹುಲ್ ಲಯ ಕಂಡುಕೊಳ್ಳಲು ವಿಫಲರಾಗಿದ್ದಾರೆ. 
 

click me!