ಮನೀಶ್ ಪಾಂಡೆ ನೇತೃತ್ವದ ಕರ್ನಾಟಕ ತಂಡ ಸಯ್ಯದ್ ಮುಷ್ತಾಕ್ ಅಲಿ ಟ್ರೋಫಿಯಲ್ಲಿ ಭರ್ಜರಿ ಪ್ರದರ್ಶನ ತೋರುತ್ತಿದೆ. ಇದೀಗ ಲೀಗ್ ಹಂತದ ಕೊನೆಯ ಎರಡು ಪಂದ್ಯಗಳಿಗೆ ತಂಡವನ್ನು ಪ್ರಕಟಿಸಲಾಗಿದ್ದು, ಕೆ.ಎಲ್. ರಾಹುಲ್ ತಂಡ ಕೂಡಿಕೊಂಡಿದ್ದಾರೆ. ಈ ಕುರಿತಾದ ವರದಿ ಇಲ್ಲಿದೆ ನೋಡಿ...
ಬೆಂಗಳೂರು[ನ.14]: ಸಯ್ಯದ್ ಮುಷ್ತಾಕ್ ಅಲಿ ಟ್ರೋಫಿ ಟಿ20 ಕ್ರಿಕೆಟ್ ಟೂರ್ನಿಯ ಗುಂಪು ಹಂತದ ಕೊನೆಯ 2 ಪಂದ್ಯಗಳಿಗೆ ಕರ್ನಾಟಕ ರಾಜ್ಯ ತಂಡದಲ್ಲಿ 4 ಬದಲಾವಣೆ ಮಾಡಲಾಗಿದೆ. ಕೆ.ಎಲ್ ರಾಹುಲ್, ರೋನಿತ್ ಮೋರೆ, ಮನೋಜ್ ಬಂಡಗೆ ತಂಡ ಸೇರ್ಪಡೆಗೊಂಡಿದ್ದಾರೆ.
IPL 2020: ಕನ್ನಡಿಗರ ತಂಡವಾಗಿ ಬದಲಾದ ಕಿಂಗ್ಸ್ ಇಲೆವನ್ ಪಂಜಾಬ್..!
Karnataka squad for last 2 league games: Manish (C), Karun (VC), KL Rahul (WK), Rohan Kadam, Devdutt Padikkal, Luvnith Sisodia (WK), Pavan Deshpande, Shreyas G., Pravin Dubey, K. Gowtham, J. Suchith, A. Mithun, Vasuki Koushik, Manoj Bhandage, Ronit More.
— Karnataka Ranji Team/ ಕರ್ನಾಟಕ ರಣಜಿ ತಂಡ (@RanjiKarnataka)undefined
ಮನೀಶ್ ಪಾಂಡೆ, ಸರ್ವಿಸಸ್ ವಿರುದ್ಧದ ಪಂದ್ಯದಲ್ಲಿ ತಂಡ ಕೂಡಿಕೊಂಡಿದ್ದರು. ಮೊದಲ 4 ಪಂದ್ಯಗಳಲ್ಲಿ 15 ಆಟಗಾರರ ತಂಡದಲ್ಲಿ ಸ್ಥಾನ ಪಡೆದಿದ್ದ ಅನಿರುದ್ಧ ಜೋಶಿ, ಪ್ರತೀಕ್ ಜೈನ್, ರವಿಕುಮಾರ ಸಮರ್ಥ್, ನಿಹಾಲ್ ಉಲ್ಲಾಳ್‌ರನ್ನು ಕೈಬಿಡಲಾಗಿದೆ.
ಮನೀಶ್ ಪಾಂಡೆ ಭರ್ಜರಿ ಶತಕ, ಕರ್ನಾಟಕಕ್ಕೆ ಬೃಹತ್ ಗೆಲುವು!
ಕರ್ನಾಟಕ ತಂಡವು ’ಎ’ ಗುಂಪಿನಲ್ಲಿ ಸ್ಥಾನ ಪಡೆದಿದ್ದು, ಇದುವರೆಗೂ ಲೀಗ್ ಹಂತದಲ್ಲಿ ಆಡಿದ 4 ಪಂದ್ಯಗಳಲ್ಲಿ 3 ಗೆಲುವು ಹಾಗೂ ಒಂದು ಸೋಲು ಸಹಿತ 12 ಅಂಕ ಗಳಿಸಿದ್ದು, ಅಂಕಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದೆ. ಬರೋಡ ವಿರುದ್ಧ ಹೊರತುಪಡಿಸಿ ಉಳಿದ ಮೂರು ತಂಡಗಳ ವಿರುದ್ಧವೂ ಕರ್ನಾಟಕ ತಂಡ ಗೆಲುವಿನ ಸಿಹಿಯುಂಡಿದೆ. ಅದರಲ್ಲೂ ಕಳೆದೆರಡು ಪಂದ್ಯಗಳಲ್ಲಿ ದೇವದತ್ ಪಡಿಕ್ಕಲ್ ಹಾಗೂ ಮನೀಶ್ ಪಾಂಡೆ ಅಜೇಯ ಶತಕ ಸಿಡಿಸಿ ಮಿಂಚಿದ್ದರು. ಈಗಾಗಲೇ ವಿಜಯ್ ಹಜಾರೆ ಟ್ರೋಫಿ ಗೆದ್ದು ಬೀಗಿರುವ ಹಾಲಿ ಚಾಂಪಿಯನ್ ಕರ್ನಾಟಕ, ಇದೀಗ ಮತ್ತೊಮ್ಮೆ ಸಯ್ಯದ್ ಮುಷ್ತಾಕ್ ಅಲಿ ಟ್ರೋಫಿ ಎತ್ತಿಹಿಡಿಯುವ ಕನವರಿಕೆಯಲ್ಲಿದೆ.
ತಂಡ: ಮನೀಶ್ ಪಾಂಡೆ (ನಾಯಕ), ಕರುಣ್ ನಾಯರ್, ರೋಹನ್, ದೇವದತ್, ರಾಹುಲ್, ಗೌತಮ್, ಪ್ರವೀಣ್ ದುಬೆ, ಪವನ್ ದೇಶಪಾಂಡೆ, ಲವ್ನಿತ್, ಸುಚಿತ್, ಮಿಥುನ್, ಕೌಶಿಕ್, ಶ್ರೇಯಸ್, ರೋನಿತ್, ಮನೋಜ್.