ಇಂದೋರ್ ಟೆಸ್ಟ್: ಬಾಂಗ್ಲಾಗೆ ಶಾಕ್ ಕೊಟ್ಟ ಟೀಂ ಇಂಡಿಯಾ ವೇಗಿಗಳು

By Web Desk  |  First Published Nov 14, 2019, 12:04 PM IST

ಬಾಂಗ್ಲಾದೇಶ ವಿರುದ್ಧದ ಮೊದಲ ಟೆಸ್ಟ್ ಪಂದ್ಯದಲ್ಲಿ ಟೀಂ ಇಂಡಿಯಾ ವೇಗಿಗಳು ಅಕ್ಷರಶಃ ಮಿಂಚುತ್ತಿದ್ದಾರೆ. ಲಂಚ್ ಬ್ರೇಕ್ ವೇಳೆಗೆ ಬಾಂಗ್ಲಾದೇಶ 3 ವಿಕೆಟ್ ಕಳೆದುಕೊಂಡು 63 ರನ್ ಬಾರಿಸಿದೆ. ಈ ಕುರಿತಾದ ವರದಿ ಇಲ್ಲಿದೆ ನೋಡಿ...


ಇಂದೋರ್[ನ.14]: ಟೀಂ ಇಂಡಿಯಾ ವೇಗಿಗಳು ನಿರೀಕ್ಷೆಯಂತೆಯೇ ಬಾಂಗ್ಲಾದೇಶ ಬ್ಯಾಟ್ಸ್’ಮನ್’ಗಳನ್ನು ಕಾಡುವಲ್ಲಿ ಯಶಸ್ವಿಯಾಗಿದ್ದಾರೆ. ಟಾಸ್ ಗೆದ್ದು ಬ್ಯಾಟಿಂಗ್ ಆಯ್ದುಕೊಂಡಿರುವ ಬಾಂಗ್ಲಾದೇಶ ಲಂಚ್ ಬ್ರೇಕ್ ವೇಳೆಗೆ 3 ವಿಕೆಟ್ ಕಳೆದುಕೊಂಡು 63 ರನ್ ಬಾರಿಸಿದೆ.

That will be Lunch on Day 1 of the 1st Test.

Bangladesh 63/3 https://t.co/0aAwHDwHed pic.twitter.com/6RSYgCyMlv

— BCCI (@BCCI)

ಮೊದಲ ಟೆಸ್ಟ್ ಟಾಸ್ ಗೆದ್ದ ಬಾಂಗ್ಲಾ ಬ್ಯಾಟಿಂಗ್ ಆಯ್ಕೆ; ಟೀಂ ಇಂಡಿಯಾದಲ್ಲಿ ಒಂದು ಬದಲಾವಣೆ

Tap to resize

Latest Videos

ಟಾಸ್ ಸೋತರೂ ಧೃತಿಗೆಡದ ಟೀಂ ಇಂಡಿಯಾ ಬೌಲರ್’ಗಳು ಮಿಂಚಿನ ದಾಳಿ ಸಂಘಟಿಸಿದರು. ಪಂದ್ಯದ ಆರನೇ ಓವರ್’ನಲ್ಲಿ ವೇಗಿ ಉಮೇಶ್ ಯಾದವ್ ಬಾಂಗ್ಲಾ ಆರಂಭಿಕ ಇಮ್ರುಲ್ ಕಯೀಸ್ ವಿಕೆಟ್ ಪಡೆಯುವ ಮೂಲಕ ಭಾರತಕ್ಕೆ ಮೊದಲ ಯಶಸ್ಸು ದಕ್ಕಿಸಿಕೊಟ್ಟರು. ಕಯೀಸ್ 6 ರನ್ ಬಾರಿಸಿ ಅಜಿಂಕ್ಯ ರಹಾನೆಗೆ ಕ್ಯಾಚಿತ್ತು ಪೆವಿಲಿಯನ್ ಸೇರಿದರು. ಇದಾಗಿ 12 ಎಸೆತಗಳಲ್ಲಿ ಬಾಂಗ್ಲಾದೇಶ ಮತ್ತೊಂದು ವಿಕೆಟ್ ಕಳೆದುಕೊಂಡಿತು. ಬಾಂಗ್ಲಾದೇಶ ಮತ್ತೋರ್ವ ಆರಂಭಿಕ ಬ್ಯಾಟ್ಸ್’ಮನ್ ಶಾದಾಬ್ ಇಸ್ಲಾಂ ಸಹಾ 6 ರನ್ ಬಾರಿಸಿ ಇಶಾಂತ್ ಶರ್ಮಾ ಬೌಲಿಂಗ್’ನಲ್ಲಿ ವೃದ್ದಿಮಾನ್ ಸಾಹಗೆ ಕ್ಯಾಚಿತ್ತು ಪೆವಿಲಿಯನ್ ಸೇರಿದರು. ಇದರೊಂದಿಗೆ ವೃದ್ದಿಮಾನ್ ಸಾಹ, ಪ್ರಥಮ ದರ್ಜೆ ಕ್ರಿಕೆಟ್’ನಲ್ಲಿ 300 ಕ್ಯಾಚ್ ಹಿಡಿದ ಸಾಧನೆ ಮಾಡಿದರು. ಇನ್ನು ಮೊಹಮ್ಮದ್ ಮಿಥುನ್ ಕೇವಲ 13 ರನ್’ಗಳಿಗೆ ಸೀಮಿತವಾಯಿತು. ಮಿಥುನ್ ಪೆವಿಲಿಯನ್ನಿಗಟ್ಟುವಲ್ಲಿ ಮೊಹಮ್ಮದ್ ಶಮಿ ಯಶಸ್ವಿಯಾದರು. ಈ ಮೂಲಕ ಮೂವರು ವೇಗಿಗಳು ತಲಾ ಒಂದೊಂದು ವಿಕೆಟ್ ಹಂಚಿಕೊಂಡಿದ್ದಾರೆ.

12ನೇ ಸರ​ಣಿ ಜಯಕ್ಕೆ ಭಾರತ ತವ​ಕ!

ಆಸರೆಯಾದ ಮುಷ್ಫೀಕುರ್-ಮೊಮಿ​ನುಲ್‌ ಹಕ್‌: ಒಂದು ಹಂತದಲ್ಲಿ 31 ರನ್’ಗಳಿಗೆ 3 ವಿಕೆಟ್ ಕಳೆದುಕೊಂಡು ಸಂಕಷ್ಟದಲ್ಲಿದ್ದ ಬಾಂಗ್ಲಾ ತಂಡಕ್ಕೆ ವಿಕೆಟ್ ಕೀಪರ್ ಬ್ಯಾಟ್ಸ್’ಮನ್ ಮುಷ್ಫೀಕುರ್ ಹಾಗೂ ನಾಯಕ ಮೊಮಿ​ನುಲ್‌ ಹಕ್‌ ಆಸರೆಯಾಗಿದ್ದಾರೆ. 4ನೇ ವಿಕೆಟ್’ಗೆ ಈ ಜೋಡಿ 32 ರನ್’ಗಳ ಜತೆಯಾಟ ನಿಭಾಯಿಸಿದೆ. ಮುಷ್ಫೀಕುರ್ 14 ರನ್ ಬಾರಿಸಿದರೆ, ಮೊಮಿ​ನುಲ್‌ ಹಕ್‌ 22 ರನ್ ಬಾರಿಸಿ ಬ್ಯಾಟಿಂಗ್ ಕಾಯ್ದುಕೊಂಡಿದ್ದಾರೆ.      
 

click me!