
ನವದೆಹಲಿ[ನ.14]: 2020ರ ಐಪಿಎಲ್ನಲ್ಲಿ ಕಿಂಗ್ಸ್ ಇಲೆವೆನ್ ಪಂಜಾಬ್ ತಂಡ, ಕಿಂಗ್ಸ್ ಇಲೆವನ್ ಕರ್ನಾಟಕ ಎಂದು ಬದಲಾದರೂ ಅಚ್ಚರಿಯಿಲ್ಲ. ಕಿಂಗ್ಸ್ ತಂಡದಲ್ಲಿ ಕನ್ನಡದ ಕಲರವ ಕೇಳಿಬರಲಿದೆ. ಯಾಕೆಂದರೆ ಪಂಜಾಬ್ ತಂಡದಲ್ಲಿ ಕರ್ನಾಟಕದ ಆಟಗಾರರೇ ಹೆಚ್ಚಿರಲಿದ್ದಾರೆ.
ಕನ್ನಡಿಗ ಗೌತಮ್‌ಗೆ ಆಗ್ತಿದೆ ಭಾರೀ ಅನ್ಯಾಯ..!
ಅಪ್ಪಟ ಕನ್ನಡಿಗ ಅನಿಲ್ ಕುಂಬ್ಳೆ ಕಿಂಗ್ಸ್ ಇಲೆವನ್ ಪಂಜಾಬ್ ತಂಡದ ಕೋಚ್ ಆಗುತ್ತಿದ್ದಂತೆ, ಕನ್ನಡಿಗರಿಗೆ ಮಣೆಹಾಕಿದ್ದಾರೆ. ಇದರ ಭಾಗವಾಗಿ ವೇಗಿ ಪಂಜಾಬ್ ವೇಗಿ ಅಂಕಿತ್ ರಜಪೂತ್ರನ್ನು ರಾಜಸ್ಥಾನಕ್ಕೆ ಬಿಟ್ಟುಕೊಟ್ಟು, ಕನ್ನಡಿಗ ಆಲ್ರೌಂಡರ್ ಕೆ. ಗೌತಮ್ರನ್ನು ಕಿಂಗ್ಸ್ ಇಲೆವೆನ್ ತನ್ನ ತೆಕ್ಕೆಗೆ ಸೆಳೆದುಕೊಳ್ಳುವಲ್ಲಿ ಯಶಸ್ವಿಯಾಗಿದೆ. ಕೆ. ಗೌತಮ್ ಇತ್ತೀಚೆಗಷ್ಟೇ ಮುಕ್ತಾಯವಾದ ಕರ್ನಾಟಕ ಪ್ರೀಮಿಯರ್ ಲೀಗ್ ಟೂರ್ನಿಯಲ್ಲಿ ಶಿವಮೊಗ್ಗ ಲಯನ್ಸ್ ವಿರುದ್ಧ ಸ್ಫೋಟಕ ಶತಕ ಹಾಗೆಯೇ 15 ರನ್ ನೀಡಿ 8 ವಿಕೆಟ್ ಕಬಳಿಸಿ ಮಿಂಚಿದ್ದರು.
ತಂಡದಲ್ಲಿ ಮಹತ್ತರ ಬದಲಾವಣೆ ಇದೆ ಎಂದ CSK !
ಅನಿಲ್ ಕುಂಬ್ಳೆ ಕಿಂಗ್ಸ್ ಇಲೆವೆನ್ನ ಕೋಚ್ ಆಗಿದ್ದು, ತಂಡದಲ್ಲಿ ಕೆ.ಎಲ್.ರಾಹುಲ್, ಮಯಾಂಕ್ ಅಗರ್‌ವಾಲ್, ಕರುಣ್ ನಾಯರ್, ಜೆ.ಸುಚಿತ್ ಇದ್ದಾರೆ. ಇದೀಗ ಗೌತಮ್ ಸಹ ತಂಡ ಸೇರಿಕೊಂಡಿದ್ದು, ಕನ್ನಡಿಗರ ಸಂಖ್ಯೆ 5ಕ್ಕೆ ಏರಿಕೆಯಾಗಿದೆ. ಇದೇ ವೇಳೆ ಡೆಲ್ಲಿ ಡೇರ್ ಡೆವಿಲ್ಸ್ ತಂಡ ನ್ಯೂಜಿಲೆಂಡ್ ವೇಗಿ ಟ್ರೆಂಟ್ ಬೌಲ್ಟ್‌ರನ್ನು ಮುಂಬೈ ಇಂಡಿಯನ್ಸ್ಗೆ ಬಿಟ್ಟುಕೊಟ್ಟಿದೆ.
ಬೇರೆ-ಬೇರೆ ಫ್ರಾಂಚೈಸಿಗಳು ಕರ್ನಾಟಕದ ಆಟಗಾರರನ್ನು ಖರೀದಿಸಲು ತುದಿಗಾಲಿನಲ್ಲಿ ನಿಂತಿದ್ದರೆ, ಬೆಂಗಳೂರು ಮೂಲದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಕನ್ನಡಿಗರ ಬಗ್ಗೆ ಅಸಡ್ಡೆ ತೋರುತ್ತಲೇ ಬಂದಿದೆ. 11ನೇ ಆವೃತ್ತಿಯಲ್ಲಿ ಪವನ್ ದೇಶ್‌ಪಾಂಡೆ ಹಾಗೂ ಅನಿರುದ್ಧ್ ಜೋಶಿಯನ್ನು ಖರೀದಿಸಿದ್ದರು, ಒಂದು ಪಂದ್ಯವನ್ನಾಡಲು ಅವಕಾಶ ನೀಡಿರಲಿಲ್ಲ. ಇನ್ನು 12ನೇ ಆವೃತ್ತಿಯಲ್ಲಿ ದೇವದತ್ ಪಡಿಕ್ಕಲ್ ಅವರನ್ನು ತಂಡಕ್ಕೆ ಸೇರಿಸಿಕೊಂಡಿತ್ತಾದರೂ, ಲೆಕ್ಕಕ್ಕುಂಟು ಆಟಕ್ಕಿಲ್ಲ ಎಂಬಂತೆ ಮಾಡಿತ್ತು. ಇದೀಗ ಮುಂಬರುವ ಆಟಗಾರರ ಹರಾಜಿನಲ್ಲಾದರೂ ಕನ್ನಡಿಗರಿಗೆ ಆರ್‌ಸಿಬಿ ಮಣೆ ಹಾಕುತ್ತಾ ಎನ್ನುವುದನ್ನು ಕಾದುನೋಡಬೇಕಿದೆ.
2020ರ ಐಪಿಎಲ್ ಟೂರ್ನಿಗೂ ಮುನ್ನ, ಇದೇ ಡಿಸೆಂಬರ್ 19ರಂದು ಐಪಿಎಲ್ ಆಟಗಾರರ ಹರಾಜು ನಡೆಯಲಿದೆ. ಮುಂದಿನ ಆವೃತ್ತಿಗೆ ತಂಡಗಳು ಉಳಿಸಿಕೊಳ್ಳಲು ಇಚ್ಛಿಸುವ ಆಟಗಾರರ ಪಟ್ಟಿಯನ್ನು ಪ್ರಕಟಿಸಲು ಗುರುವಾರ ಕೊನೆ ದಿನವಾಗಿದೆ.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.