ದುಬಾರಿ ಕಾಫಿಯಿಂದ ಬದಲಾಯ್ತು ಕ್ರಿಕೆಟ್: ಕೆಎಲ್ ರಾಹುಲ್!

By Suvarna NewsFirst Published Jun 14, 2020, 2:52 PM IST
Highlights

ಕಾಫಿ ವಿಥ್ ಕರಣ್ ಟಿವಿ ಕಾರ್ಯಕ್ರಮದಲ್ಲಿ ದುಬಾರಿ ಕಾಫಿ ಕುಡಿದಿದ್ದ ಟೀಂ ಇಂಡಿಯಾ ಬ್ಯಾಟ್ಸ್‌ಮನ್ ಕೆಎಲ್ ರಾಹುಲ್, ಕಳೆದ ವರ್ಷ ಅಮಾನತು ಶಿಕ್ಷೆ ಅನುಭವಿಸಿದ್ದಾರೆ. ನಿಷೇಧದ ಬಳಿಕ ರಾಹುಲ್ ಕ್ರಿಕೆಟ್ ಹೇಗೆ ಬದಲಾಯ್ತು ಅನ್ನೋದನ್ನು ಸ್ವತಃ ಕೆಎಲ್ ವಿವರಿಸಿದ್ದಾರೆ.

ಬೆಂಗಳೂರು(ಜೂ.14): ಬಾಲಿವುಡ್ ನಿರ್ದೇಶಕ ನಡೆಸಿಕೊಡುವ ಕಾಫಿ ವಿಥ್ ಕರಣ್ ಟಿವಿ ಕಾರ್ಯಕ್ರಮದಲ್ಲಿ ಟೀಂ ಇಂಡಿಯಾ ಕ್ರಿಕೆಟಿಗರಾದ ಹಾರ್ದಿಕ್ ಪಾಂಡ್ಯ ಹಾಗೂ ಕೆಎಲ್ ರಾಹುಲ್ ಪಾಲ್ಗೊಂಡು ಬಹುದೊಡ್ಡ ವಿವಾದ ಸೃಷ್ಟಿಸಿದ್ದರು. ಮಹಿಳೆಯರ ಕುರಿತು ಅಸಭ್ಯ ಕಾಮೆಂಟ್ ಮಾಡಿ ಎಲ್ಲರ ಕೆಂಗಣ್ಣಿಗೆ ಗುರಿಯಾಗಿದ್ದರು. ಇತ್ತ ಬಿಸಿಸಿಐ ತಕ್ಷಣವೇ ಇಬರು ಕ್ರಿಕೆಟಿಗರನ್ನು ಆಸ್ಟ್ರೇಲಿಯಾ ಪ್ರವಾಸದಿಂದ ಕರೆಸಿಕೊಂಡು ಅಮಾನತು ಮಾಡಿತ್ತು. ಇದೀಗ ರಾಹುಲ್ ಹಳೇ ಕಹಿ ಘಟನೆ ಹಾಗೂ ರಾಹುಲ್ ಕ್ರಿಕೆಟ್ ಕರಿಯರ್ ಕುರಿತು ಮಾತನಾಡಿದ್ದಾರೆ.

ಕಾಫಿ’ಗೆ ಬೆಲೆತೆತ್ತ ರಾಹುಲ್‌, ಪಾಂಡ್ಯ..!...

2019ರ ಜನವರಿಯಲ್ಲಿ ಆಸ್ಟ್ರೇಲಿಯಾ ಪ್ರವಾಸದಲ್ಲಿದ್ದ ವೇಳೆ ಈ ಕಾರ್ಯಕ್ರಮ ಪ್ರಸಾರವಾಗಿತ್ತು. ಸಾಮಾಜಿಕ ಜಾಲತಾಣದಲ್ಲಿ ಪಾಂಡ್ಯ ಹಾಗೂ ರಾಹುಲ್ ಕುರಿತು ಆಕ್ರೋಶಗಳು ವ್ಯಕ್ತವಾಗಿತ್ತು. ಹೀಗಾಗಿ ಬಿಸಿಸಿಐ ಕೂಡ ಕಟ್ಟು ನಿಟ್ಟಿನ ಕ್ರಮ ಕೈಗೊಂಡಿತ್ತು. ಅಮಾನತ್ತಾದ ಕೆಎಲ್ ರಾಹುಲ್, ಕ್ರಿಕೆಟ್ ಕುರಿತು ಹೆಚ್ಚಿನ ಗಮನ ಕೇಂದ್ರೀಕರಿಸಿದ್ದರು. ಹೀಗಾಗಿ ಸ್ಥಿರ ಪ್ರದರ್ಶನಕ್ಕೆ ಸಹಕಾರಿಯಾಯ್ತು ಎಂದು ರಾಹುಲ್ ಹೇಳಿದ್ದಾರೆ.

ಕಾಫಿ ವಿವಾದ: ಪಾಂಡ್ಯ ರಾಹುಲ್‌ ವಿರುದ್ಧ ದೂರು!..

ಅಮಾನತು ಬಳಿಕ ನನ್ನ ಕ್ರಿಕೆಟ್ ಕರಿಯರು ಕುರಿತು ನಾನು ಗಮನ ಕೇಂದ್ರೀಕರಿಸಿದೆ. ಇದರಿಂದ ನನ್ನ ಕ್ರಿಕೆಟ್ ಬದಲಾಯಿತು. ಸ್ಥಿರ ಪ್ರದರ್ಶನ ನೀಡಲು ಸಾಧ್ಯವಾಯಿತು ಎಂದು ರಾಹುಲ್ ಹೇಳಿದ್ದಾರೆ. ನನ್ನ ಕ್ರಿಕೆಟ್ ಕರಿಯರ್ ರೂಪಿಸಲು ಸ್ವಾರ್ಥಿಯಾಗಿ ಬ್ಯಾಟಿಂಗ್ ಮಾಡಿದಾಗ ನಾನು ವಿಫಲನಾಗಿದ್ದೆ. ಹೀಗಾಗಿ ತಂಡಕ್ಕಾಗಿ ಆಡುವಂತ ಮನಸು ಬದಲಾಯಿಸಿಕೊಂಡೆ. ಇದರ ಫಲಿತಾಂಶವಾಗಿ ನಾನು ತಂಡದಲ್ಲಿ ಮತ್ತೆ ಖಾಯಂ ಸ್ಥಾನ ಪಡೆಯಲು ಸಾಧ್ಯವಾಯಿತು ಎಂದಿದ್ದಾರೆ.

ಅಮಾನತು ಬಳಿಕ ಕೆಎಲ್ ರಾಹುಲ್ ಅದ್ಬುತ ಪ್ರದರ್ಶನದ ಮೂಲಕ ಟೀಂ ಇಂಡಿಯಾಗೆ ವಾಪಸ್ ಆದರು. ಇಷ್ಟೇ ಅಲ್ಲ ಸ್ಪೆಷಲಿಸ್ಟ್ ವಿಕೆಟ್ ಕೀಪರ್ ರಿಷಬ್ ಪಂತ್ ಸ್ಥಾನವನ್ನು ಆಕ್ರಮಿಸಿಕೊಂಡರು. ಸದ್ಯ ರಾಹುಲ್ ನಿಗದಿತ ಓವರ್ ಕ್ರಿಕೆಟ್‌ನಲ್ಲಿ ಬ್ಯಾಟಿಂಗ್ ಜೊತೆಗೆ ವಿಕೆಟ್ ಕೀಪಿಂಗ್ ಜವಾಬ್ದಾರಿಯನ್ನು ನಿರ್ವಹಿಸುತ್ತಿದ್ದಾರೆ. 
 

click me!