ತಂಡ ಕಿಂಗ್ಸ್ XI ಪಂಜಾಬ್ ತಂಡದಲ್ಲಿ ಕನ್ನಡಿಗರ ಕಲರವ!

By Suvarna NewsFirst Published 28, Jun 2020, 7:36 PM
Highlights

ಕೊರೋನಾ ವೈರಸ್ ಕಾರಣ ಈ ಬಾರಿ ಐಪಿಎಲ್ ಆಯೋಜನೆ ಕಷ್ಟವಾಗಿದೆ. ಆದರೆ ಅಭಿಮಾನಿಗಳು ಐಪಿಎಲ್ ಟೂರ್ನಿಗಾಗಿ ಕಾಯುತ್ತಿದ್ದಾರೆ. ಕಾರಣ ಈ ಬಾರಿಯ ಐಪಿಎಲ್ ಕನ್ನಡಿಗರ ಪಾಲಿಗೆ ಹಲವು ವಿಶೇಷತೆ ಇತ್ತು. ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಜೊತೆಗೆ ಕಿಂಗ್ಸ್ ಇಲೆವೆನ್ ಪಂಜಾಬ್ ತಂಡಕ್ಕೂ ಕನ್ನಡಿಗರ ಬೆಂಬಲ ಇದೆ. ಇದಕ್ಕೆ ಕಾರಣ ಪಂಜಾಬ್ ತಂಡದಲ್ಲಿ ಕನ್ನಡಿಗರೇ ತುಂಬಿಕೊಂಡಿದ್ದಾರೆ.

ಬೆಂಗಳೂರು(ಜೂ.28): IPL 2020 ಆಯೋಜನೆ ಬಿಸಿಸಿಐಗೆ ಕಗ್ಗಂಟಾಗಿದೆ. ಟೂರ್ನಿ ಆಯೋಜನೆಗೆ ಕೊರೋನಾ ವೈರಸ್ ಅಡ್ಡಿಯಾಗಿದೆ. ಐಪಿಎಲ್ ಹರಾಜಿನಲ್ಲಿ ಬಲಿಷ್ಠ ಆಟಗಾರರನ್ನು ಖರೀದಿಸುವ ಮೂಲಕ 8 ಫ್ರಾಂಚೈಸಿಗಳು ಪ್ರಶಸ್ತಿಗಾಗಿ ಹೋರಾಡಲು ಸಜ್ಜಾಗಿತ್ತು. ಈ ಕಾರಣಕ್ಕಾಗಿ ಐಪಿಎಲ್ 2020 ವಿಶೇಷವಾಗಿದೆ. ಅದರಲ್ಲೂ ಕಿಂಗ್ಸ್ ಇಲೆವೆನ್ ಪಂಜಾಬ್ ತಂಡ ಕನ್ನಡಿಗರಿಗೆ ಮತ್ತಷ್ಟು ಹತ್ತಿರವಾಗಿದೆ. 

ಜೆಂಡರ್‌ ಸ್ವ್ಯಾಪ್‌ನಲ್ಲಿ ಹೆಣ್ಣಾದ ಧೋನಿ, ರೈನಾ..!

ಕಿಂಗ್ಸ್ ಇಲೆವೆನ್ ಪಂಜಾಬ್ ತಂಡದಲ್ಲಿ ನಾಯಕ, ಕೋಚ್, ಸೇರಿದಂತೆ ಬಹುತೇಕರು ಕನ್ನಡಿಗರೇ ಆಗಿದ್ದಾರೆ. ಐವರು ಕ್ರಿಕೆಟಿಗರು ಸೇರಿದಂತೆ ಕೋಚ್ ಅನಿಲ್ ಕುಂಬ್ಳೆ ಕೂಡ ಕನ್ನಡದವರೇ ಆಗಿರುವುದು ಕನ್ನಡಿಗರ ಸಂತಸ ಇಮ್ಮಡಿಗೊಳಿಸಿತ್ತು.  

ಆಗಸ್ಟ್‌ಗೆ ಮುಗಿಯಲಿದೆ ನಿಷೇಧ; ಕ್ರಿಕೆಟ್‌ಗೆ ಮರಳಲು ಶ್ರೀಶಾಂತ್ ಅಭ್ಯಾಸ ಶುರು!

ಕಿಂಗ್ಸ್ ಇಲೆವೆನ್ ಪಂಜಾಬ್ ನಾಯಕ ಕೆಎಲ್ ರಾಹುಲ್, ಮಯಾಂಕ್ ಅಗರ್ವಾಲ್, ಕರುಣ್ ನಾಯರ್, ಜೆ ಸುಚಿತ್ ಹಾಗೂ ಕೆ ಗೌತಮ್ ಕನ್ನಡಿಗರಾಗಿ ತಂಡದಲ್ಲಿದ್ದಾರೆ. ಜೊತೆಗೆ ಕೋಚ್ ಅನಿಲ್ ಕುಂಬ್ಳೆ ಮಾರ್ಗದರ್ಶನ ಕೂಡ ಇದೆ. ಈ ಕುರಿತು ಕೆ ಗೌತಮ್ ಸಂತಸ ಹಂಚಿಕೊಂಡಿದ್ದಾರೆ. ಇತ್ತೀಚೆಗೆ ಸಾಮಾಜಿಕ ಜಾಲತಾಣದಲ್ಲಿನ ಸಂದರ್ಶನದಲ್ಲಿ ಗೌತಮ್, ಪಂಜಾಬ್ ತಂಡದಲ್ಲಿನ ಕನ್ನಡಿಗರ ಕುರಿತು ಮಾತನಾಡಿದ್ದಾರೆ.

ಕಿಂಗ್ಸ್‌ ಇಲೆವೆನ್‌ ಪಂಜಾಬ್‌ ಪರ ಆಡಲು ನನಗೆ ತುಂಬಾ ಸಂತೋಷ. ಏಕೆಂದರೆ, ನೀವು ಗಮನಿಸಬಹುದು, ಒಟ್ಟು ಐದು ಕರ್ನಾಟಕದ ಆಟಗಾರರು ಈ ತಂಡಲ್ಲಿದ್ದಾರೆ. ಇದು ಒಂದು ರೀತಿ ಮಿನಿ ಕರ್ನಾಟಕ ತಂಡದ ತರಹ ಅನಿಸುತ್ತಿದೆ. ವರ್ಷದಲ್ಲಿ ಆರು ತಿಂಗಳ ಕಾಲ ಆಡಿದ್ದ ಐದು ಮಂದಿ ಸಹ ಆಟಗಾರರೊಂದಿಗೆ ಐಪಿಎಲ್‌ನಲ್ಲೂ ಒಂದೇ ಫ್ರಾಂಚೈಸಿಯಲ್ಲಿ ಕಾಣಿಸಿಕೊಳ್ಳುವುದು ಹೆಚ್ಚು ಸಂತೋಷ ನೀಡುತ್ತದೆ. ಈ ವೇಳೆ ನಾವು ಕನ್ನಡ ಮಾತನಾಡಲು ಯತ್ನಿಸುತ್ತೇವೆ ಎಂದು ಕನ್ನಡಿಗ ಕೃಷ್ಣಪ್ಪ ಗೌತಮ್ ಹೇಳಿದ್ದಾರೆ.

Read Exclusive COVID-19 Coronavirus News updates, from Karnataka, India and World at Asianet News Kannada.

Last Updated 28, Jun 2020, 7:36 PM