ಈ ಬಾರಿಯ ಗ್ರಹಣ ಭಾರತೀಯ ಕ್ರಿಕೆಟ್‌ಗೂ ತಟ್ಟಿದೆ. ಗ್ರಹಣದಿಂದ ಕರ್ನಾಟಕ-ಹಿಮಾಚಲ ಪ್ರದೇಶ ನಡುವಿನ 2ನೇ ದಿನದಾಟ ತಡವಾಗಿ ಆರಂಭವಾಗಲಿದೆ.
ಮೈಸೂರು(ಡಿ.25): ಸೂರ್ಯಗ್ರಹಣ ಇದೀಗ ಕ್ರಿಕೆಟ್‌ಗೂ ತಟ್ಟಿದೆ. ಕರ್ನಾಟಕ-ಹಿಮಾಚಲ ಪ್ರದೇಶ ನಡುವಿನ ರಣಜಿ ಪಂದ್ಯದ 2ನೇ ದಿನದಾಟ ಗ್ರಹಣದ ಕಾರಣಿಂದ ವಿಳಂಬವಾಗಿ ಆರಂಭವಾಗಲಿದೆ. ಮೈಸೂರಿನಲ್ಲಿ ನಡೆಯುತ್ತಿರುವ ಈ ಪಂದ್ಯ 9.30ಕ್ಕೆ ಆರಂಭವಾಗಬೇಕಿತ್ತು. ಆದರೆ ಬೆಳಗ್ಗೆ 8.04 ರಿಂದ 11.03ರ ವರೆಗೆ ಸೂರ್ಯಗ್ರಹಣ ನಡೆಯಲಿದ್ದು, ಪಂದ್ಯ ವಿಳಂಬವಾಗಿ ಆರಂಭವಾಗಲಿದೆ.
ಇದನ್ನೂ ಓದಿ: ರಣಜಿ ಟ್ರೋಫಿ: ಕರ್ನಾಟಕ ತಂಡಕ್ಕೆ ಮಯಾಂಕ್ ಬಲ.
ಗ್ರಹಣ ಮುಗಿದ ಬಳಿಕ 11.15ಕ್ಕೆ 2ನೇ ದಿನದಾಟ ಆರಂಭವಾಗಲಿದೆ. ಈ ಕುರಿತು ಕರ್ನಾಟಕ ಕ್ರಿಕೆಟ್ ಕಾರ್ಯದರ್ಶಿ ಸಂತೋಶ್ ಮೆನನ್ ಸುವರ್ಣನ್ಯೂಸ್.ಕಾಂಗೆ ಸ್ಪಷ್ಟಪಡಿಸಿದ್ದಾರೆ. ಗ್ರಹಣ ಸಂಭವಿಸುವ ವೇಳೆ ಆಟಾಗಾರರು ಮೈದಾನದಲ್ಲಿರುತ್ತಾರೆ. ಕ್ರಿಕೆಟಿಗರ ದೃಷ್ಟಿಯಿಂದ ಈ ನಿರ್ಧಾರ ಕೈಗೊಳ್ಳಲಾಗಿದೆ ಎಂದಿದ್ದಾರೆ.
ಹಿಮಾಚಲ ವಿರುದ್ಧದ ಮೊದಲ ದಿನದಾಟದಲ್ಲಿ ಕರ್ನಾಟಕ ಕಳಪೆ ಬ್ಯಾಟಿಂಗ್ ಪ್ರದರ್ಶನ ನೀಡಿ ನಿರಾಸೆ ಅನುಭವಿಸಿದೆ. ನಾಯಕ ಕರುಣ್ ನಾಯರ್ 81 ರನ್ ಸಿಡಿಸಿ ತಂಡಕ್ಕೆ ಚೇತರಿಕೆ ನೀಡಿದ್ದರು. ಕರುಣ್ ಹೊರತು ಪಡಿಸಿದರೆ ಇನ್ಯಾವ ಕ್ರಿಕೆಟಿಗರು ದಿಟ್ಟ ಹೋರಾಟ ನೀಡಿಲ್ಲ. ಹೀಗಾಗಿ ಕೇವಲ 166 ರನ್‌ಗೆ ಆಲೌಟ್ ಆಗಿದೆ.
ಇದನ್ನೂ ಓದಿ: ಕೇವಲ 40 ನಿಮಿಷದಲ್ಲಿ ಹೃದಯ ಗೆದ್ದ ನಾಯಕ; ಗಂಗೂಲಿ ಹೊಗಳಿದ ಪಾಕ್ ದಿಗ್ಗಜ!.
ಇದಕ್ಕುತ್ತರವಾಗಿ ಮೊದಲ ಇನಿಂಗ್ಸ್ ಆರಂಭಿಸಿರುವ ಹಿಮಾಚಲ ಪ್ರದೇಶ ದಿನದಾಟದ ಅಂತ್ಯಕ್ಕೆ 3 ವಿಕೆಟ್ ಕಳೆದುಕೊಂಡು 29 ರನ್ ಸಿಡಿಸಿದೆ.