ಶುಭಾರಂಭ ಮಾಡಿದ ಗುಜರಾತ್ ಟೈಟಾನ್ಸ್‌ಗೆ ಶಾಕ್, ಐಪಿಎಲ್ ಟೂರ್ನಿಯಿಂದ ವಿಲಿಯಮ್ಸನ್ ಔಟ್!

By Suvarna NewsFirst Published Apr 1, 2023, 4:54 PM IST
Highlights

ಐಪಿಎಲ್ ಟೂರ್ನಿಯಲ್ಲಿ ಭರ್ಜರಿ ಶುಭಾರಂಭ ಮಾಡಿದ ಗುಜರಾತ್ ಟೈಟಾನ್ಸ್‌ಗೆ ಆರಂಭದಲ್ಲೇ ಶಾಕ್ ಎದುರಾಗಿದೆ. ಮೊದಲ ಪಂದ್ಯದಲ್ಲಿ ಇಂಜುರಿಗೆ ತುತ್ತಾಗಿದ್ದ ಕೇನ್ ವಿಲಿಯಮ್ಸನ್ ಟೂರ್ನಿಯಿಂದ ಹೊರಬಿದ್ದಿದ್ದಾರೆ.

ಅಹಮ್ಮದಾಬಾದ್(ಏ.01): ಹಾಲಿ ಚಾಂಪಿಯನ್ ಗುಜರಾತ್ ಟೈಟಾನ್ಸ್ ಈ ಬಾರಿಯ ಐಪಿಎಲ್ ಟೂರ್ನಿಯಲ್ಲಿ ಭರ್ಜರಿ ಆರಂಭ ಪಡೆದಿದೆ. ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ ದಿಟ್ಟ ಹೋರಾಟ ನೀಡಿದ ಗುಜರಾತ್ ಗೆಲುವಿನೊಂದಿಗೆ ಟೂರ್ನಿ ಆರಂಭಿಸಿದೆ. ಆದರೆ ಪಂದ್ಯ ಗೆದ್ದ ಬೆನ್ನಲ್ಲೇ ಗುಜರಾತ್ ಟೈಟಾನ್ಸ್ ತಂಡಕ್ಕೆ ತಲೆನೋವು ಹೆಚ್ಚಾಗಿದೆ. ಫೀಲ್ಡಿಂಗ್ ವೇಳೆ ಗಾಯಗೊಂಡ ಕೇನ್ ವಿಲಿಯಮ್ಸನ್ ಐಪಿಎಲ್ ಟೂರ್ನಿಯಿಂದ ಹೊರಬಿದ್ದಿದ್ದಾರೆ. 2023ರ ಸಂಪೂರ್ಣ ಐಪಿಎಲ್ ಟೂರ್ನಿಯಿಂದ ಕೇನ್ ವಿಲಿಯಮ್ಸನ್ ಹೊರಬಿದ್ದಿದ್ದಾರೆ.

2022ರ ಡಿಸೆಂಬರ್‌ನಲ್ಲಿ ನಡೆದ ಐಪಿಎಲ್ ಹರಾಜಿನಲ್ಲಿ ಗುಜರಾತ್ ಟೈಟಾನ್ಸ್ 2 ಕೋಟಿ ರೂಪಾಯಿ ನೀಡಿ ಕೇನ್ ವಿಲಿಯಮ್ಸನ್ ಖರೀದಿಸಿತ್ತು. ಆದರೆ ಮೊಣಕಾಲಿನ ಗಾಯದಿಂದ ವಿಲಿಯಮ್ಸನ್ ಟೂರ್ನಿಗೆ ಅಲಭ್ಯರಾಗಿದ್ದಾರೆ. ಚೆನ್ನೈ ಸೂಪರ್ ಕಿಂಗ್ಸ್ ಬ್ಯಾಟರ್ ರುತುರಾಜ್ ಗಾಯಕ್ವಾಡ್ ಸಿಡಿಸಿದ ಸಿಕ್ಸರ್ ತಡೆಯಲು ಹೋದ ಕೇನ್ ವಿಲಿಯಮ್ಸನ್ ಮೊಣಕಾಲಿಗೆ ಗಾಯಮಾಡಿಕೊಂಡಿದ್ದರು. ತಕ್ಷಣವೇ ಕೇನ್ ವಿಲಿಯಮ್ಸನ್ ಪಂದ್ಯದಿಂದ ಹೊರಗುಳಿದಿದ್ದರು. ಇಂಪಾಕ್ಟ್ ಪ್ಲೇಯರ್ ಮೂಲಕ ಸಾಯಿ ಸುದರ್ಶನ್ ತಂಡ ಸೇರಿಕೊಂಡಿದ್ದರು.

IPL 2023 ಎಂ ಎಸ್ ಧೋನಿ ಪಾದ ಮುಟ್ಟಿ ನಮಸ್ಕರಿಸಿದ ಗಾಯಕ ಅರಿಜಿತ್ ಸಿಂಗ್; ಧೋನಿ ಗಳಿಸಿದ್ದು ಇದೇ ಅಲ್ವಾ?

ಕೇನ್ ವಿಲಿಯಮ್ಸನ್ ಟೂರ್ನಿಯಿಂದ ಹೊರಬಿದ್ದಿರುವುದು ಗುಜರಾತ್ ಟೈಟಾನ್ಸ್ ತಂಡದ ಸಮತೋಲನಕ್ಕೆ ಹೊಡೆತ ನೀಡಿದೆ. ಉತ್ತಮ ಫಾರ್ಮ್‌ನಲ್ಲಿದ್ದ ಕೇನ್ ವಿಲಿಯಮ್ಸನ್ ಇದೀಗ ವಿಶ್ರಾಂತಿಗೆ ಜಾರಿದ್ದಾರೆ. 

4 ಬಾರಿ ಚಾಂಪಿಯನ್‌ ಚೆನ್ನೈ ಸೂಪರ್‌ ಕಿಂಗ್‌್ಸ ವಿರುದ್ಧ ಶುಕ್ರವಾರ ನಡೆದ ಉದ್ಘಾಟನಾ ಪಂದ್ಯದಲ್ಲಿ ಗುಜರಾತ್ ಟೈಟಾನ್ಸ್ 5 ವಿಕೆಟ್‌ ಗೆಲುವು ಸಾಧಿಸಿ ಶುಭಾರಂಭ ಮಾಡಿದೆ. ದುರ್ಬಲ ಮಧ್ಯಮ ಕ್ರಮಾಂಕ ಹಾಗೂ ಬೌಲಿಂಗ್‌ ವಿಭಾಗದಲ್ಲಿ ಅನುಭವಿಗಳ ಕೊರತೆ ಚೆನ್ನೈಗೆ ಮೊದಲ ಪಂದ್ಯದಲ್ಲೇ ಮುಳುವಾಗಿದ್ದು, ನಾಯಕ ಎಂ.ಎಸ್‌.ಧೋನಿಗೆ ಟೂರ್ನಿಯ ಆರಂಭದಲ್ಲೇ ಕಠಿಣ ಸವಾಲು ಎದುರಾದಂತೆ ಕಾಣುತ್ತಿದೆ. ಟಾಸ್‌ ಗೆದ್ದು ಮೊದಲು ಫೀಲ್ಡಿಂಗ್‌ ಆಯ್ಕೆ ಮಾಡಿಕೊಂಡ ಗುಜರಾತ್‌, ಚೆನ್ನೈಯನ್ನು 7 ವಿಕೆಟ್‌ಗೆ 178 ರನ್‌ಗಳಿಗೆ ನಿಯಂತ್ರಿಸಿತು. ಋುತುರಾಜ್‌ ಗಾಯಕ್ವಾಡ್‌ ಸ್ಫೋಟಕ ಬ್ಯಾಟಿಂಗ್‌ ಮೂಲಕ ತಂಡದ ಮೊತ್ತವನ್ನು 200 ರನ್‌ ದಾಟಿಸುವ ನಿರೀಕ್ಷೆ ಮೂಡಿಸಿದ್ದರು. ಆದರೆ ಅವರ ವಿಕೆಟ್‌ ಪತನದ ಬಳಿಕ ಚೆನ್ನೈ ಮಂಕಾಯಿತು.

ಶುಭ್‌ಮನ್‌ ಗಿಲ್‌ 36 ಎಸೆತದಲ್ಲಿ 6 ಬೌಂಡರಿ, 3 ಸಿಕ್ಸರ್‌ನೊಂದಿಗೆ 63 ರನ್‌ ಸಿಡಿಸಿ ತಂಡಕ್ಕೆ ಭದ್ರ ಬುನಾದಿ ಹಾಕಿಕೊಟ್ಟರೆ, ರಶೀದ್‌ ಖಾನ್‌ 3 ಎಸೆತದಲ್ಲಿ 10, ರಾಹುಲ್‌ ತೆವಾಟಿಯಾ 15 ರನ್‌ ಸಿಡಿಸಿ ತಂಡವನ್ನು 4 ಎಸೆತ ಬಾಕಿ ಇರುವಂತೆ ದಡ ಸೇರಿಸಿದರು.

ಐಪಿಎಲ್ 2023 ಅದ್ಧೂರಿ ಚಾಲನೆ, ಅರ್ಜಿತ್, ರಶ್ಮಿಕಾ, ತಮನ್ನ ಮೋಡಿಗೆ ಫ್ಯಾನ್ಸ್ ಫಿದಾ!

ಋುತುರಾಜ್‌ ಗಾಯಕ್ವಾಡ್‌ ತಮ್ಮ ಆಕರ್ಷಕ ಬ್ಯಾಟಿಂಗ್‌ ಮೂಲಕ ಪ್ರೇಕ್ಷಕರನ್ನು ರಂಜಿಸಿದರು. 50 ಎಸೆತದಲ್ಲಿ 4 ಬೌಂಡರಿ, 9 ಸಿಕ್ಸರ್‌ನೊಂದಿಗೆ 92 ರನ್‌ಗೆ ಔಟಾಗುವ ಮೂಲಕ ಶತಕದಿಂದ ವಂಚಿತರಾದರು. ಗಾಯಕ್ವಾಡ್‌ ಹೊರತುಪಡಿಸಿದರೆ ತಂಡದ ಪರ 2ನೇ ಗರಿಷ್ಠ ಮೊತ್ತ ದಾಖಲಿಸಿದ್ದು ಮೋಯಿನ್‌ ಅಲಿ(23 ರನ್‌). 17ನೇ ಓವರ್‌ನ ಮೊದಲ ಎಸೆತದಲ್ಲಿ ಗಾಯಕ್ವಾಡ್‌ ಔಟಾಗಿ ಹೊರನಡೆದ ಬಳಿಕ, ಧೋನಿ 7 ಎಸೆತದಲ್ಲಿ ಸಿಡಿಸಿದ 14 ರನ್‌ ಸಹ ಸೇರಿ ಇನ್ನಿಂಗ್‌್ಸನ ಕೊನೆ 17 ಎಸೆತದಲ್ಲಿ ಕೇವಲ 26 ರನ್‌ ಗಳಿಸಿದ್ದು ಚೆನ್ನೈ ಪಾಲಿಗೆ ದುಬಾರಿ ಎನಿಸಿತು.

click me!