ದೇಶದ ಮೊದಲ ಮಹಿಳಾ ಪಿಚ್‌ ಕ್ಯುರೇಟರ್‌ ಜೆಸಿಂತಾ ಬಗ್ಗೆ ಜಯ್‌ ಶಾ ಮೆಚ್ಚುಗೆ

Published : Feb 28, 2024, 10:54 AM IST
ದೇಶದ ಮೊದಲ ಮಹಿಳಾ ಪಿಚ್‌ ಕ್ಯುರೇಟರ್‌ ಜೆಸಿಂತಾ ಬಗ್ಗೆ ಜಯ್‌ ಶಾ ಮೆಚ್ಚುಗೆ

ಸಾರಾಂಶ

ಈ ಬಗ್ಗೆ ''ಎಕ್ಸ್''ನಲ್ಲಿ ಬರೆದಿರುವ ಅವರು, ‘ಡಬ್ಲ್ಯುಪಿಎಲ್‌ಗೆ ಪಿಚ್ ತಯಾರಿಯ ನೇತೃತ್ವ ವಹಿಸಿರುವ ಜಸಿಂತಾರ ದೃಢ ನಿರ್ಧಾರ ಕ್ರೀಡೆಯ ಮೇಲಿನ ಅವರ ಬದ್ಧತೆ ಮತ್ತು ಉತ್ಸಾಹಕ್ಕೆ ನಿದರ್ಶನ. ಇದು ಭಾರತದಲ್ಲಿ ಕ್ರಿಕೆಟ್‌ ವಿಕಸನಗೊಳ್ಳುತ್ತಿರುವುದನ್ನು ಎತ್ತಿ ತೋರಿಸುತ್ತದೆ. ಅವರಂಥ ವಿಶೇಷ ವ್ಯಕ್ತಿಗಳನ್ನು ಶ್ಲಾಘಿಸುವುದು ನಮ್ಮ ಕರ್ತವ್ಯ ಎಂದು ಶಾ ತಿಳಿಸಿದ್ದಾರೆ.

ಬೆಂಗಳೂರು: ಭಾರತದ ಮೊದಲ ಮಹಿಳಾ ಕ್ರಿಕೆಟ್ ಪಿಚ್ ಕ್ಯುರೇಟರ್ ಎನಿಸಿಕೊಂಡಿರುವ, ಸದ್ಯ ಬೆಂಗಳೂರಿನಲ್ಲಿ ಮಹಿಳಾ ಐಪಿಎಲ್‌ಗೆ ಪಿಚ್‌ ಸಿದ್ಧಗೊಳಿಸಿತ್ತಿರುವ ಜಸಿಂತಾ ಕಲ್ಯಾಣ್ ಬಗ್ಗೆ ಬಿಸಿಸಿಐ ಕಾರ್ಯದರ್ಶಿ ಜಯ್‌ ಶಾ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. 

ಈ ಬಗ್ಗೆ ''ಎಕ್ಸ್''ನಲ್ಲಿ ಬರೆದಿರುವ ಅವರು, ‘ಡಬ್ಲ್ಯುಪಿಎಲ್‌ಗೆ ಪಿಚ್ ತಯಾರಿಯ ನೇತೃತ್ವ ವಹಿಸಿರುವ ಜಸಿಂತಾರ ದೃಢ ನಿರ್ಧಾರ ಕ್ರೀಡೆಯ ಮೇಲಿನ ಅವರ ಬದ್ಧತೆ ಮತ್ತು ಉತ್ಸಾಹಕ್ಕೆ ನಿದರ್ಶನ. ಇದು ಭಾರತದಲ್ಲಿ ಕ್ರಿಕೆಟ್‌ ವಿಕಸನಗೊಳ್ಳುತ್ತಿರುವುದನ್ನು ಎತ್ತಿ ತೋರಿಸುತ್ತದೆ. ಅವರಂಥ ವಿಶೇಷ ವ್ಯಕ್ತಿಗಳನ್ನು ಶ್ಲಾಘಿಸುವುದು ನಮ್ಮ ಕರ್ತವ್ಯ ಎಂದು ಶಾ ತಿಳಿಸಿದ್ದಾರೆ.

ಡಬ್ಲ್ಯುಪಿಎಲ್‌: ಆರ್‌ಸಿಬಿಗೆ ಸತತ 8 ವಿಕೆಟ್‌ ಗೆಲುವು

ಬೆಂಗಳೂರು: ಬೌಲರ್‌ಗಳ ಮಾರಕ ದಾಳಿ, ಬ್ಯಾಟರ್‌ಗಳು ತೋರಿದ ಅಭೂತಪೂರ್ವ ಪ್ರದರ್ಶನದಿಂದಾಗಿ 2ನೇ ಆವೃತ್ತಿ ವುಮೆನ್ಸ್‌ ಪ್ರೀಮಿಯರ್‌ ಲೀಗ್‌(ಡಬ್ಲ್ಯುಪಿಎಲ್‌)ನಲ್ಲಿ ಆರ್‌ಸಿಬಿ ಸತತ 2ನೇ ಗೆಲುವು ದಾಖಲಿಸಿದೆ. ಮಂಗಳವಾರ ಗುಜರಾತ್‌ ಜೈಂಟ್ಸ್‌ ವಿರುದ್ಧ ಬೆಂಗಳೂರಿಗೆ 8 ವಿಕೆಟ್‌ ಜಯ ಲಭಿಸಿತು. ಟೂರ್ನಿಯಲ್ಲಿ ಗುಜರಾತ್‌ಗೆ ಇದು ಸತತ 2ನೇ ಸೋಲು.

ಮೊದಲು ಬ್ಯಾಟ್‌ ಮಾಡಿದ ಗುಜರಾತ್‌ 7 ವಿಕೆಟ್‌ ಕಳೆದುಕೊಂಡು ಗಳಿಸಿದ್ದು ಕೇವಲ 107 ರನ್‌. ಹೇಮಲತಾ 31, ಹರ್ಲೀನ್‌ ಡಿಯೋಲ್ 22 ರನ್‌ ಗಳಿಸಿದ್ದು ಬಿಟ್ಟರೆ ಇತರರು ಮಿಂಚಲಿಲ್ಲ. ಸೋಫಿ ಮೋಲಿನ್ಯುಕ್ಸ್‌ 25ಕ್ಕೆ 3, ರೇಣುಕಾ ಸಿಂಗ್‌ 14ಕ್ಕೆ 2 ವಿಕೆಟ್‌ ಕಿತ್ತರು.

ಸುಲಭ ಗುರಿಯನ್ನು ಬೆನ್ನತ್ತಿದ ಆರ್‌ಸಿಬಿ 12.3 ಓವರ್‌ಗಳಲ್ಲೇ 2 ವಿಕೆಟ್‌ ಕಳೆದುಕೊಂಡು ಗೆಲುವನ್ನು ತನ್ನದಾಗಿಸಿಕೊಂಡಿತು. ಸೋಫಿ ಡಿವೈನ್‌ 6 ರನ್‌ಗೆ ಔಟಾದ ಬಳಿಕ ಸ್ಮೃತಿ ಮಂಧನಾ 27 ಎಸೆತಗಳಲ್ಲಿ 43 ರನ್‌ ಸಿಡಿಸಿ ತಂಡಕ್ಕೆ ಆದರೆಯಾದರು. ಸ್ಮೃತಿ ಔಟಾದ ಬಳಿಕ ಎಸ್‌.ಮೇಘನಾ(ಔಟಾಗದೆ 36), ಎಲೈಸಿ ಪೆರ್ರಿ(ಔಟಾಗದೆ 23) ತಂಡವನ್ನು ಗೆಲುವಿನ ದಡ ಸೇರಿಸಿದರು.

ಇಂದಿನ ಪಂದ್ಯ: ಮುಂಬೈ-ಯುಪಿ ವಾರಿಯರ್ಸ್‌, ರಾತ್ರಿ 7.30ಕ್ಕೆ

ಅಂ.ರಾ. ಕ್ರಿಕೆಟ್‌ಗೆ ಕಿವೀಸ್‌ ವೇಗಿ ವ್ಯಾಗ್ನರ್‌ ಗುಡ್‌ಬೈ

ವೆಲ್ಲಿಂಗ್ಟನ್‌: ನ್ಯೂಜಿಲೆಂಡ್‌ನ ಹಿರಿಯ ವೇಗಿ ನೀಲ್‌ ವ್ಯಾಗ್ನರ್‌ ಮಂಗಳವಾರ ಅಂತಾರಾಷ್ಟ್ರೀಯ ಕ್ರಿಕೆಟ್‌ನಿಂದ ನಿವೃತ್ತಿ ಪಡೆದಿದ್ದಾರೆ. ಮುಂಬರುವ ಆಸ್ಟ್ರೇಲಿಯಾ ವಿರುದ್ಧದ 2 ಪಂದ್ಯಗಳ ಟೆಸ್ಟ್‌ ಸರಣಿಗೆ ತಮ್ಮನ್ನು ಆಯ್ಕೆ ಮಾಡುವುದಿಲ್ಲ ಎಂದು ಆಯ್ಕೆ ಸಮಿತಿ ಸ್ಪಷ್ಟಪಡಿಸಿದ ಬೆನ್ನಲ್ಲೇ ವ್ಯಾಗ್ನರ್‌ ನಿವೃತ್ತಿ ನಿರ್ಧಾರ ಕೈಗೊಂಡಿದ್ದಾರೆ. 

ಇತ್ತೀಚೆಗೆ ತವರಿನಲ್ಲಿ ದ.ಆಫ್ರಿಕಾ ವಿರುದ್ಧದ 3ನೇ ಟೆಸ್ಟ್‌, ನ್ಯೂಜಿಲೆಂಡ್‌ ಪರ ವ್ಯಾಗ್ನರ್‌ ಆಡಿದ ಕೊನೆಯ ಪಂದ್ಯ. ಕೇವಲ ಟೆಸ್ಟ್‌ ಕ್ರಿಕೆಟ್‌ನಲ್ಲಿ ಮಾತ್ರ ನ್ಯೂಜಿಲೆಂಡ್‌ ತಂಡವನ್ನು ಪ್ರತಿನಿಧಿಸಿದ್ದ ವ್ಯಾಗ್ನರ್‌, 64 ಪಂದ್ಯಗಳಲ್ಲಿ 260 ವಿಕೆಟ್‌ ಕಬಳಿಸಿದ್ದಾರೆ. ಕಿವೀಸ್‌ ಪರ ಅತಿಹೆಚ್ಚು ಟೆಸ್ಟ್‌ ವಿಕೆಟ್‌ ಪಡೆದ ಬೌಲರ್‌ಗಳ ಪಟ್ಟಿಯಲ್ಲಿ ವ್ಯಾಗ್ನರ್‌ 5ನೇ ಸ್ಥಾನದಲ್ಲಿದ್ದಾರೆ.
 

PREV

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ಈ ಬಾರಿಯ ಐಪಿಎಲ್ ಹರಾಜಿನಲ್ಲಿ ಅತಿಹೆಚ್ಚು ಮೊತ್ತಕ್ಕೆ ಬಿಡ್ ಆದ ಟಾಪ್ 6 ಆಟಗಾರರಿವರು!
ಐಪಿಎಲ್ ಮಿನಿ ಹರಾಜು: ಅನ್‌ಕ್ಯಾಪ್ಡ್‌ ಆಟಗಾರರಿಗೆ ಜಾಕ್‌ಪಾಟ್; 8 ಆಟಗಾರರನ್ನು ಖರೀದಿಸಿದ ಆರ್‌ಸಿಬಿ!