ಸ್ಟೀವ್ ಸ್ಮಿತ್ ಕುತಂತ್ರವನ್ನು ವಿರಾಟ್ ಕೊಹ್ಲಿ ಬಯಲು ಮಾಡಿದ್ದು ಹೀಗೆ! ಚೇತೇಶ್ವರ್ ಪೂಜಾರ ಸ್ಫೋಟಕ ಮಾಹಿತಿ ಬಹಿರಂಗ

Published : Sep 12, 2026, 06:45 PM IST
Cheteswar Pujara

ಸಾರಾಂಶ

2017ರ 'ಬ್ರೇನ್ ಫೇಡ್' ವಿವಾದದ ಬಗ್ಗೆ ಚೇತೇಶ್ವರ್ ಪೂಜಾರ ಸ್ಫೋಟಕ ಮಾಹಿತಿ ಬಹಿರಂಗಪಡಿಸಿದ್ದಾರೆ. ಆಸ್ಟ್ರೇಲಿಯಾ ತಂಡವು ಡ್ರೆಸ್ಸಿಂಗ್ ರೂಮ್‌ನಲ್ಲಿದ್ದ ಲೈವ್ ಟಿವಿ ದೃಶ್ಯಗಳನ್ನು ಬಳಸಿ ಡಿಆರ್‌ಎಸ್ ನಿರ್ಧಾರಗಳನ್ನು ತೆಗೆದುಕೊಳ್ಳುತ್ತಿತ್ತು ಎಂದು ಅವರು ಆರೋಪಿಸಿದ್ದಾರೆ. ಇದು ಸ್ಟೀವ್ ಸ್ಮಿತ್ ಮಾಡಿದ ಪ್ರಮಾದವಲ್ಲ, ಬದಲಿಗೆ ಆಸೀಸ್ ತಂಡದ ಯೋಜಿತ ಮೋಸದ ತಂತ್ರವಾಗಿತ್ತು ಎಂದು ಪೂಜಾರ ಹೇಳಿದ್ದಾರೆ.

ಬೆಂಗಳೂರು: 2017ರಲ್ಲಿ ನಡೆದ ಭಾರತ-ಆಸ್ಟ್ರೇಲಿಯಾ ನಡುವಿನ ಬಾರ್ಡರ್-ಗವಾಸ್ಕರ್ ಟೆಸ್ಟ್ ಸರಣಿ, ಕ್ರಿಕೆಟ್ ಜಗತ್ತು ಕಂಡ ಅತ್ಯಂತ ರೋಚಕ ಸರಣಿಗಳಲ್ಲಿ ಒಂದಾಗಿತ್ತು. ಭಾರತ 2-1 ಅಂತರದಲ್ಲಿ ಗೆದ್ದ ಈ ಸರಣಿಯಲ್ಲಿ, ಬೆಂಗಳೂರು ಟೆಸ್ಟ್‌ನಲ್ಲಿ ಸ್ಟೀವ್ ಸ್ಮಿತ್ ಭಾಗಿಯಾಗಿದ್ದ 'ಬ್ರೇನ್ ಫೇಡ್' ಘಟನೆ ದೊಡ್ಡ ವಿವಾದ ಸೃಷ್ಟಿಸಿತ್ತು. ಇದೀಗ, ಘಟನೆ ನಡೆದು ವರ್ಷಗಳ ನಂತರ, ಟೀಂ ಇಂಡಿಯಾದ ಮಾಜಿ ಆಟಗಾರ ಚೇತೇಶ್ವರ್ ಪೂಜಾರ ಆ ವಿವಾದದ ಬಗ್ಗೆ ಸ್ಫೋಟಕ ಮಾಹಿತಿಯೊಂದನ್ನು ಬಹಿರಂಗಪಡಿಸಿದ್ದಾರೆ.

ಆಕಾಶ್ ಚೋಪ್ರಾಗೆ ನೀಡಿದ ಸಂದರ್ಶನವೊಂದರಲ್ಲಿ ಮಾತನಾಡಿದ ಪೂಜಾರ, ಆಸ್ಟ್ರೇಲಿಯಾ ತಂಡವು ಡ್ರೆಸ್ಸಿಂಗ್ ರೂಮ್‌ನಲ್ಲಿದ್ದ ಲೈವ್ ಟಿವಿ ದೃಶ್ಯಗಳನ್ನು ದುರ್ಬಳಕೆ ಮಾಡಿಕೊಂಡು ಡಿಆರ್‌ಎಸ್ ನಿರ್ಧಾರಗಳನ್ನು ತೆಗೆದುಕೊಳ್ಳುತ್ತಿತ್ತು ಎಂದು ನೇರವಾಗಿ ಆರೋಪಿಸಿದ್ದಾರೆ. ಬೆಂಗಳೂರು ಟೆಸ್ಟ್‌ನ ನಾಲ್ಕನೇ ಇನ್ನಿಂಗ್ಸ್‌ನಲ್ಲಿ ಭಾರತ ನೀಡಿದ್ದ 188 ರನ್‌ಗಳ ಗುರಿ ಬೆನ್ನಟ್ಟುತ್ತಿದ್ದಾಗ, ಉಮೇಶ್ ಯಾದವ್ ಬೌಲಿಂಗ್‌ನಲ್ಲಿ ಸ್ಟೀವ್ ಸ್ಮಿತ್ ಎಲ್‌ಬಿಡಬ್ಲ್ಯೂ ಬಲೆಗೆ ಬಿದ್ದರು. ಫೀಲ್ಡ್ ಅಂಪೈರ್ ಔಟ್ ಕೊಟ್ಟ ತಕ್ಷಣ, ಸ್ಮಿತ್ ನಾನ್-ಸ್ಟ್ರೈಕರ್‌ನಲ್ಲಿದ್ದ ಪೀಟರ್ ಹ್ಯಾಂಡ್ಸ್‌ಕಾಂಬ್ ಜೊತೆ ಮಾತನಾಡುವ ಬದಲು, ಡಿಆರ್‌ಎಸ್ ತೆಗೆದುಕೊಳ್ಳಬೇಕೇ ಬೇಡವೇ ಎಂದು ಡ್ರೆಸ್ಸಿಂಗ್ ರೂಮ್ ಕಡೆ ನೋಡಿ ಸನ್ನೆ ಮಾಡಿದರು.

ಆಸೀಸ್ ಮೋಸ ಬಯಲು ಮಾಡಿದ್ದ ಕೊಹ್ಲಿ:

ಇದನ್ನು ಗಮನಿಸಿದ ಅಂದಿನ ಕ್ಯಾಪ್ಟನ್ ವಿರಾಟ್ ಕೊಹ್ಲಿ ಮತ್ತು ತಂಡ, ತಕ್ಷಣವೇ ಅಂಪೈರ್‌ಗಳಿಗೆ ದೂರು ನೀಡಿದರು. ಅಂಪೈರ್‌ಗಳು ಮಧ್ಯಪ್ರವೇಶಿಸಿ ಸ್ಮಿತ್‌ಗೆ ರಿವ್ಯೂ ತೆಗೆದುಕೊಳ್ಳಲು ಅವಕಾಶ ನಿರಾಕರಿಸಿದರು ಮತ್ತು ಅವರನ್ನು ಪೆವಿಲಿಯನ್‌ಗೆ ಕಳುಹಿಸಿದರು. ಪಂದ್ಯದ ನಂತರ ಮಾತನಾಡಿದ್ದ ಸ್ಮಿತ್, ಡ್ರೆಸ್ಸಿಂಗ್ ರೂಮ್ ಕಡೆ ನೋಡಿದ್ದು ತನ್ನಿಂದಾದ ಪ್ರಮಾದ, ಅದೊಂದು 'ಬುದ್ಧಿಶೂನ್ಯ ನಡೆ' (brain fade) ಎಂದು ಹೇಳಿಕೊಂಡಿದ್ದರು. ಆದರೆ ಇದು ಕೇವಲ ಪ್ರಮಾದವಾಗಿರಲಿಲ್ಲ, ಬದಲಿಗೆ ಆಸ್ಟ್ರೇಲಿಯಾ ತಂಡದ ಯೋಜಿತ ತಂತ್ರವಾಗಿತ್ತು ಎಂದು ಪೂಜಾರ ಈಗ ಬಯಲು ಮಾಡಿದ್ದಾರೆ.

"ಆಸ್ಟ್ರೇಲಿಯಾದ ಡಿಆರ್‌ಎಸ್ ನಿರ್ಧಾರಗಳನ್ನು ನೋಡಿದರೆ, ಅವೆಲ್ಲವೂ ಪಕ್ಕಾ ಆಗಿರುತ್ತಿದ್ದವು. ರಿವ್ಯೂ ತೆಗೆದುಕೊಳ್ಳಬೇಕೋ, ಬೇಡವೋ ಎಂಬುದು ಅವರಿಗೆ ಖಚಿತವಾಗಿ ಗೊತ್ತಿರುತ್ತಿತ್ತು. ಆಸ್ಟ್ರೇಲಿಯಾದ ಡ್ರೆಸ್ಸಿಂಗ್ ರೂಮ್‌ನಲ್ಲಿ ಲೈವ್ ಫೀಡ್ ಇತ್ತು ಎಂಬುದು ನಮಗೆ ಆಗ ತಿಳಿದಿರಲಿಲ್ಲ. ಸಾಮಾನ್ಯವಾಗಿ ಡ್ರೆಸ್ಸಿಂಗ್ ರೂಮ್‌ನಲ್ಲಿ ಟಿವಿ ದೃಶ್ಯಗಳು ಕೆಲವು ಸೆಕೆಂಡ್‌ಗಳಷ್ಟು ತಡವಾಗಿ ಬರುತ್ತವೆ. ಆದರೆ ಬೆಂಗಳೂರು ಟೆಸ್ಟ್‌ನಲ್ಲಿ ಅವರಿಗೆ ಯಾವುದೇ ಡಿಲೇ ಇಲ್ಲದ ಲೈವ್ ದೃಶ್ಯಗಳು ಸಿಗುತ್ತಿದ್ದವು. ಯಾರಿಗೂ ಗೊತ್ತಾಗದಂತೆ ಡ್ರೆಸ್ಸಿಂಗ್ ರೂಮ್ ಕಡೆ ನೋಡಿ, ಅಲ್ಲಿಂದ ಸಿಗುವ ಸೂಚನೆ ಆಧರಿಸಿ ಅವರು ರಿವ್ಯೂ ತೆಗೆದುಕೊಳ್ಳುತ್ತಿದ್ದರು," ಎಂದು ಪೂಜಾರ ವಿವರಿಸಿದ್ದಾರೆ.

ಆಸೀಸ್ ಮಾಡಿದ್ದು ಶುದ್ದ ಮೋಸ

"ಇದು ಶುದ್ಧ ಮೋಸವಾಗಿತ್ತು. ಇದನ್ನೇ ಬೇರೆ ತಂಡ ಮಾಡಿದ್ದರೆ, ಆಸ್ಟ್ರೇಲಿಯಾ ದೊಡ್ಡ ರಂಪಾಟವನ್ನೇ ಮಾಡುತ್ತಿತ್ತು," ಎಂದು ಪೂಜಾರ ಹೇಳಿದ್ದಾರೆ. 2012ರಲ್ಲಿ ಇಂಗ್ಲೆಂಡ್ ಸರಣಿ ಗೆದ್ದ ನಂತರ, ಭಾರತವನ್ನು ಭಾರತದಲ್ಲೇ ಸೋಲಿಸುವ ಸಾಮರ್ಥ್ಯವಿದ್ದ ಮೊದಲ ತಂಡವೆಂದರೆ ಅದು ಸ್ಟೀವ್ ಸ್ಮಿತ್ ನಾಯಕತ್ವದ ಆಸ್ಟ್ರೇಲಿಯಾ ತಂಡವಾಗಿತ್ತು. ಸರಣಿ ಗೆಲ್ಲಲು ಅವರು ಯಾವುದೇ ಹಂತಕ್ಕೆ ಹೋಗಲು ಸಿದ್ಧರಿದ್ದರು. ಆಟದ ತೀವ್ರತೆಯಿಂದಾಗಿ ತಾನೂ ಕೂಡ ಆ ಸರಣಿಯಲ್ಲಿ ಸ್ಲೆಡ್ಜಿಂಗ್ ಮಾಡಿದ್ದೆ ಎಂದು ಪೂಜಾರ ಒಪ್ಪಿಕೊಂಡಿದ್ದಾರೆ. ಪುಣೆಯಲ್ಲಿ ನಡೆದ ಮೊದಲ ಟೆಸ್ಟ್‌ನಲ್ಲಿ ಸೋತಿದ್ದ ಭಾರತ, ಬೆಂಗಳೂರಿನಲ್ಲಿ 75 ರನ್‌ಗಳ ಜಯ ಸಾಧಿಸಿ ಸರಣಿಗೆ ಕಮ್‌ಬ್ಯಾಕ್ ಮಾಡಿತ್ತು. ಅಂತಿಮವಾಗಿ 2-1 ಅಂತರದಲ್ಲಿ ಸರಣಿಯನ್ನು ತನ್ನದಾಗಿಸಿಕೊಂಡಿತ್ತು.

PREV

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ವೈಭವ್‌ ಸೂರ್ಯವಂಶಿನಂತಹ ಒಬ್ಬ ಬ್ಯಾಟರ್‌ನನ್ನಾದರೂ PSL ಸೃಷ್ಟಿಸಿದೆಯೇ? ಪಾಕ್ ದಿಗ್ಗಜ ಕಿಡಿ
Cricket: ದಿಗ್ಗಜನ ಹೆಸರಿನಲ್ಲಿದ್ದ ಬಹುದೊಡ್ಡ ದಾಖಲೆ ಉಡೀಸ್‌ ಮಾಡಲ ಕೇವಲ 3 ಹೆಜ್ಜೆ ದೂರದಲ್ಲಿ ವೈಭವ್ ಸೂರ್ಯವಂಶಿ!