Cricket: ದಿಗ್ಗಜನ ಹೆಸರಿನಲ್ಲಿದ್ದ ಬಹುದೊಡ್ಡ ದಾಖಲೆ ಉಡೀಸ್‌ ಮಾಡಲ ಕೇವಲ 3 ಹೆಜ್ಜೆ ದೂರದಲ್ಲಿ ವೈಭವ್ ಸೂರ್ಯವಂಶಿ!

Published : Sep 12, 2026, 05:25 PM IST
vaibhav sooryavanshi

ಸಾರಾಂಶ

ಭಾರತ ಮತ್ತು ಅಫ್ಘಾನಿಸ್ತಾನ ನಡುವಿನ ಟಿ20 ಪಂದ್ಯದಲ್ಲಿ ಆರಂಭಿಕ ಆಟಗಾರನ ಆಯ್ಕೆ ಕುತೂಹಲ ಕೆರಳಿಸಿದೆ. 15 ವರ್ಷದ ಯುವ ಪ್ರತಿಭೆ ವೈಭವ್ ಸೂರ್ಯವಂಶಿ ಕಣಕ್ಕಿಳಿದರೆ, ಕೇವಲ 3 ಸಿಕ್ಸರ್ ಬಾರಿಸುವ ಮೂಲಕ ವೀರೇಂದ್ರ ಸೆಹ್ವಾಗ್ ಅವರ ದಾಖಲೆಯನ್ನು ಮುರಿಯುವ ಸುವರ್ಣಾವಕಾಶವನ್ನು ಹೊಂದಿದ್ದಾರೆ.

ಭಾರತ ಮತ್ತು ಅಫ್ಘಾನಿಸ್ತಾನ ನಡುವಿನ ಮೊದಲ ಟಿ20 ಅಂತರರಾಷ್ಟ್ರೀಯ ಪಂದ್ಯಕ್ಕೆ ದೆಹಲಿಯ ಅರುಣ್ ಜೇಟ್ಲಿ ಕ್ರೀಡಾಂಗಣ ಸಂಪೂರ್ಣವಾಗಿ ಸಜ್ಜಾಗಿದೆ. ಕ್ರಿಕೆಟ್ ಅಭಿಮಾನಿಗಳೆಲ್ಲರೂ ಅಂಗಳದಲ್ಲಿ ಯಾರ ಅಬ್ಬರ ನಡೆಯಲಿದೆ ಎಂದು ಕಾತರದಿಂದ ಕಾಯುತ್ತಿದ್ದಾರೆ. ಆದರೆ, ಈ ಪಂದ್ಯ ಆರಂಭವಾಗುವ ಮುನ್ನವೇ ಒಂದು ದೊಡ್ಡ ಸಸ್ಪೆನ್ಸ್ ಹಾಗೂ ಕುತೂಹಲ ಕ್ರಿಕೆಟ್ ಪ್ರಿಯರನ್ನು ತುದಿಕಾಲಿನಲ್ಲಿ ನಿಲ್ಲುವಂತೆ ಮಾಡಿದೆ. ಟೀಮ್ ಇಂಡಿಯಾದ ಸ್ಫೋಟಕ ಆರಂಭಿಕ ಆಟಗಾರ ಅಭಿಷೇಕ್ ಶರ್ಮಾ ಜೊತೆಗೆ ಇನಿಂಗ್ಸ್ ಆರಂಭಿಸಲು ನಾಯಕ ಮತ್ತು ಆಡಳಿತ ಮಂಡಳಿ ಯಾರನ್ನು ಕಣಕ್ಕಿಳಿಸಲಿದೆ? ಅನುಭವಿ ಸಂಜು ಸ್ಯಾಮ್ಸನ್ ಅವರೋ ಅಥವಾ 15 ವರ್ಷದ ಯುವ ಪ್ರತಿಭೆ ವೈಭವ್ ಸೂರ್ಯವಂಶಿ ಅವರೋ?

ಮೊದಲ ಅಂತಾರಾಷ್ಟ್ರೀಯ ಪಂದ್ಯ!

ಒಂದು ವೇಳೆ 15 ವರ್ಷದ ಈ ಕಿರಿಯ ಆಟಗಾರ ವೈಭವ್ ಸೂರ್ಯವಂಶಿ ಪ್ಲೇಯಿಂಗ್ XI ನಲ್ಲಿದ್ದರೆ, ಭಾರತದ ನೆಲದಲ್ಲಿ ಅವರು ಆಡುತ್ತಿರುವ ಮೊದಲ ಅಂತರರಾಷ್ಟ್ರೀಯ ಪಂದ್ಯ ಇದಾಗಲಿದೆ. ಅಷ್ಟೇ ಅಲ್ಲ, ಈ ಪಂದ್ಯದಲ್ಲಿ ವೈಭವ್ ಕ್ರಿಕೆಟ್ ಲೋಕದ ದಂತಕಥೆ, ಭಾರತದ ಮಾಜಿ ಆರಂಭಿಕ ಆಟಗಾರ ವೀರೇಂದ್ರ ಸೆಹ್ವಾಗ್ ಅವರನ್ನೇ ಒಂದು ವಿಶೇಷ ದಾಖಲೆಯಲ್ಲಿ ಮೀರಿಸುವ ಸುವರ್ಣ ಅವಕಾಶವನ್ನು ಹೊಂದಿದ್ದಾರೆ.

ಅಷ್ಟಕ್ಕೂ ವೈಭವ್ ಮಾಡಬೇಕಾಗಿರುವುದು ಇಷ್ಟೇ !

ಈ ಪಂದ್ಯದಲ್ಲಿ ಬ್ಯಾಟ್ ಬೀಸಿ ಕೇವಲ 3 ಸಿಕ್ಸರ್‌ಗಳನ್ನು ಬಾರಿಸುವುದು! ವೀರೇಂದ್ರ ಸೆಹ್ವಾಗ್ ಭಾರತಕ್ಕಾಗಿ ಆಡಿದ 19 ಟಿ20 ಅಂತರರಾಷ್ಟ್ರೀಯ ಪಂದ್ಯಗಳಲ್ಲಿ ಒಟ್ಟು 16 ಸಿಕ್ಸರ್‌ಗಳನ್ನು ಬಾರಿಸಿದ್ದಾರೆ. ಇನ್ನೊಂದೆಡೆ, ವೈಭವ್ ಸೂರ್ಯವಂಶಿ ಇದುವರೆಗೆ ಆಡಿರುವ ಕೇವಲ 6 ಅಂತರರಾಷ್ಟ್ರೀಯ ಟಿ20 ಪಂದ್ಯಗಳಲ್ಲೇ 14 ಸಿಕ್ಸರ್‌ಗಳನ್ನು ಸಿಡಿಸಿ ಅಬ್ಬರಿಸಿದ್ದಾರೆ. ದೆಹಲಿಯಲ್ಲಿ ಅವರು ಇನ್ನ ಮೂರು ಸಿಕ್ಸರ್ ಬಾರಿಸಿದರೆ, ಟಿ20 ಸ್ವರೂಪದಲ್ಲಿ ಸೆಹ್ವಾಗ್ ಅವರಿಗಿಂತ ಹೆಚ್ಚು ಸಿಕ್ಸರ್ ಬಾರಿಸಿದ ಹೆಗ್ಗಳಿಕೆಗೆ ಪಾತ್ರರಾಗಲಿದ್ದಾರೆ.

ನೆಕ್ಸ್ಟ್ ಲೆವೆಲ್‌ ಪರ್ಪಾಮೆನ್ಸ್!

2026ರ ಸಾಲಿನಲ್ಲಿ ವೈಭವ್ ಸೂರ್ಯವಂಶಿ ಅವರ ಬ್ಯಾಟಿಂಗ್ ಅಬ್ಬರ ಬೇರೆ ಹಂತದಲ್ಲಿದೆ. ಐಪಿಎಲ್‌ನಲ್ಲಿ ಧೂಳೆಬ್ಬಿಸಿದ ನಂತರ, ಅವರು ಈ ವರ್ಷ ಭಾರತಕ್ಕಾಗಿ ಟಿ20 ಕ್ರಿಕೆಟ್‌ನಲ್ಲಿ ಅತಿ ಹೆಚ್ಚು ಸಿಕ್ಸರ್ ಬಾರಿಸಿದ ಆಟಗಾರ ಎನಿಸಿಕೊಂಡಿದ್ದಾರೆ. ಅವರು ಆಡಿದ 22 ಪಂದ್ಯಗಳಲ್ಲಿ ಬರೋಬ್ಬರಿ 86 ಸಿಕ್ಸರ್‌ಗಳನ್ನು ಸಿಡಿಸಿದ್ದಾರೆ. ಪ್ರಸಕ್ತ ಸಾಲಿನಲ್ಲಿ ವಿಶ್ವದಲ್ಲೇ ಅತಿ ಹೆಚ್ಚು ಟಿ20 ಸಿಕ್ಸರ್ ಬಾರಿಸಿದ ಆಟಗಾರರ ಪಟ್ಟಿಯಲ್ಲಿ ವೈಭವ್ 5ನೇ ಸ್ಥಾನದಲ್ಲಿದ್ದಾರೆ.

ಅತ್ಯಂತ ಕಡಿಮೆ ಪಂದ್ಯದಲ್ಲಿ ದೊಡ್ಡ ಸಾಧನೆ!

ವಿಶ್ವದ ದೊಡ್ಡ ದೊಡ್ಡ ಆಟಗಾರರಾದ ಫಿನ್ ಅಲೆನ್ (100 ಸಿಕ್ಸರ್), ನಿಕೋಲಸ್ ಪೂರನ್ (99 ಸಿಕ್ಸರ್), ರಯಾನ್ ರಿಕಲ್ಟನ್ (96 ಸಿಕ್ಸರ್) ಮತ್ತು ಮಿಚೆಲ್ ಮಾರ್ಷ್ (95 ಸಿಕ್ಸರ್) ವೈಭವ್‌ಗಿಂತ ಮುಂದಿದ್ದಾರೆ. ಆದರೆ ಇಲ್ಲಿ ಗಮನಿಸಬೇಕಾದ ಮುಖ್ಯ ವಿಷಯವೆಂದರೆ, ಈ ಎಲ್ಲ ಆಟಗಾರರಿಗಿಂತ ವೈಭವ್ ಅತ್ಯಂತ ಕಡಿಮೆ ಪಂದ್ಯಗಳನ್ನು ಆಡಿ ಈ ಸಾಧನೆ ಮಾಡಿದ್ದಾರೆ.

ಸಚಿನ ದಾಖಲೆ ಉಡೀಸ್!

ವೈಭವ್ ಸೂರ್ಯವಂಶಿ ಅವರಿಗೆ ಇದು ಭಾರತದ ನೆಲದಲ್ಲಿ ಆಡುತ್ತಿರುವ ಮೊದಲ ಅಂತರರಾಷ್ಟ್ರೀಯ ಸರಣಿಯಾಗಿದೆ. ಈ ವರ್ಷದ ಆರಂಭದಲ್ಲಿ ಇಂಗ್ಲೆಂಡ್ ಪ್ರವಾಸದ ವೇಳೆ ಅಂತರರಾಷ್ಟ್ರೀಯ ಕ್ರಿಕೆಟ್‌ಗೆ ಪದಾರ್ಪಣೆ ಮಾಡಿದ್ದ ಅವರು, ಭಾರತದ ಪರ ಆಡಿದ ಅತ್ಯಂತ ಕಿರಿಯ ಕ್ರಿಕೆಟಿಗ ಎಂಬ ಇತಿಹಾಸ ನಿರ್ಮಿಸಿದ್ದರು. 15 ವರ್ಷ 99 ದಿನಗಳಿದ್ದಾಗ ಚೊಚ್ಚಲ ಪಂದ್ಯವಾಡುವ ಮೂಲಕ ಅವರು ಸಚಿನ್ ತೆಂಡೂಲ್ಕರ್ ಅವರ ಸಾರ್ವಕಾಲಿಕ ದಾಖಲೆಯನ್ನು ಮುರಿದಿದ್ದರು. ಇಂಗ್ಲೆಂಡ್ ಸರಣಿಯಲ್ಲಿ ಸರಾಸರಿ ಪ್ರದರ್ಶನ ನೀಡಿದ್ದರೂ, ತದನಂತರ ನಡೆದ ಜಿಂಬಾಬ್ವೆ ಪ್ರವಾಸದಲ್ಲಿ ಎರಡು ಅರ್ಧಶತಕ ಸಿಡಿಸಿ ಸರಣಿ ಶ್ರೇಷ್ಠ (ಪ್ಲೇಯರ್ ಆಫ್ ದಿ ಸಿರೀಸ್) ಪ್ರಶಸ್ತಿ ಪಡೆದಿದ್ದರು.

ಈಘ ಎದುರಾಗಿರಿವ ಪ್ರಶ್ನೆ ಏನು?

ಈಗ ತವರು ನೆಲದಲ್ಲಿ ಅಫ್ಘಾನಿಸ್ತಾನ ವಿರುದ್ಧ ತಮ್ಮ ಬ್ಯಾಟಿಂಗ್ ಮುಂದುವರಿಸಿ ಧೂಳೆಬ್ಬಿಸಲು ವೈಭವ್ ಕಾಯುತ್ತಿದ್ದಾರೆ. ಸೆಹ್ವಾಗ್ ದಾಖಲೆ ಪತನಗೊಳ್ಳುತ್ತದೆಯೇ ಮತ್ತು ವೈಭವ್ ಪ್ಲೇಯಿಂಗ್ 11ನಲ್ಲಿ ಜಾಗ ಪಡೆಯುತ್ತಾರೆಯೇ ಎಂಬುದನ್ನು ತಿಳಿಯಲು ಅಭಿಮಾನಿಗಳು ಪಂದ್ಯದ ಟಾಸ್ ವರೆಗೆ ಕಾಯಲೇಬೇಕಿದೆ.

PREV

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

IND vs AFG 1st T20I: ಆಫ್ಘಾನಿಸ್ತಾನ ಎದುರಿನ ಮೊದಲ ಟಿ20 ಪಂದ್ಯಕ್ಕೆ ಭಾರತ ಸಂಭಾವ್ಯ ತಂಡ ಪ್ರಕಟ...!
ಸಾರ್ವಕಾಲಿಕ ಶ್ರೇಷ್ಠ ನಾಯಕನನ್ನು ಆಯ್ಕೆ ಮಾಡಿದ ರಾಹುಲ್ ದ್ರಾವಿಡ್‌..! ಕೊಹ್ಲಿ, ಪಾಂಟಿಂಗ್‌ರನ್ನೇ ಹಿಂದಿಕ್ಕಿದ ಈ ಲೆಜೆಂಡ್..!