ಇಶಾಂತ್ ದಾಳಿಗೆ ಬಾಂಗ್ಲಾ ತತ್ತರ, ಇತಿಹಾಸ ರಚಿಸಲು ಭಾರತ ಕಾತರ!

By Web Desk  |  First Published Nov 23, 2019, 8:43 PM IST

ಪಿಂಕ್ ಬಾಲ್ ಟೆಸ್ಟ್ ಪಂದ್ಯದಲ್ಲಿ ಇತಿಹಾಸ ರಚಿಸಲು ಭಾರತ ತುದಿಗಾಲಲ್ಲಿ ನಿಂತಿದೆ. ಸೋಲಿನ ಸುಳಿಗೆ ಸಿಲುಕಿರುವ ಬಾಂಗ್ಲಾದೇಶ ಪಂದ್ಯ ಉಳಿಸಿಕೊಳ್ಳಲು ಹೋರಾಟ ನಡೆಸುತ್ತಿದೆ. 2ನೇ ದಿನದಾಟದ ಹೈಲೈಟ್ಸ್ ಇಲ್ಲಿದೆ.


ಕೋಲ್ಕತಾ(ನ.23): ಭಾರತ ಹಾಗೂ ಬಾಂಗ್ಲಾದೇಶ ನಡುವಿನ ಐತಿಹಾಸಿಕ ಪಿಂಕ್ ಬಾಲ್ ಟೆಸ್ಟ್ ಪಂದ್ಯದ 2ನೇ ದಿನದಾಟ ಮುಕ್ತಾಯಗೊಂಡಿದೆ. 2ನೇ ದಿನದಲ್ಲೇ ಪಂದ್ಯ ಮುಗಿಸುವ ಸೂಚನೆ ನೀಡಿದ್ದ ಟೀಂ ಇಂಡಿಯಾಗೆ ಅಂತಿಮ ಹಂತದಲ್ಲಿ ಬಾಂಗ್ಲಾದೇಶ ನೀಡಿದ ಅಲ್ಪ ಪ್ರತಿರೋಧದಿಂದ ಪಂದ್ಯದ ಫಲಿತಾಂಶ 3ನೇ ದಿನಕ್ಕೆ ಸಾಗಿದೆ. ಇಶಾಂತ್ ಶರ್ಮಾ ಮಾರಕ ದಾಳಿಗೆ ತತ್ತರಿಸಿದ ಬಾಂಗ್ಲಾದೇಶ ದ್ವಿತೀಯ ಇನಿಂಗ್ಸ್‌ನಲ್ಲಿ 6 ವಿಕೆಟ್ ನಷ್ಟಕ್ಕೆ 152 ರನ್ ಸಿಡಿಸಿದೆ.

ಇದನ್ನೂ ಓದಿ: ಪಿಂಕ್ ಬಾಲ್ ಟೆಸ್ಟ್: ಟೀಂ ಇಂಡಿಯಾ ಮೊದಲ ಇನಿಂಗ್ಸ್ ಡಿಕ್ಲೇರ್, ಭರ್ಜರಿ ಮುನ್ನಡೆ

Latest Videos

2ನೇ ದಿನದಲ್ಲಿ 2ನೇ ಇನಿಂಗ್ಸ್ ಆರಂಭಿಸಿದ ಬಾಂಗ್ಲಾದೇಶ ಆರಂಭದಲ್ಲೇ ಸಂಕಷ್ಟಕ್ಕೆ ಸಿಲುಕಿತು. ಶದ್ಮನ್ ಇಸ್ಲಾಂ, ಇಮ್ರುಲ್ ಕೈಸ್, ನಾಯಕ ಮೊಮಿನಲ್ ಹಕ್ ಹಾಗೂ ಮೊಹಮ್ಮದ್ ಮಿಥು ಬುಹುಬೇಗನೆ ವಿಕೆಟ್ ಕೈಚೆಲ್ಲಿದರು. ಆದರೆ ಮುಶ್ಫಿಕರ್ ರಹೀಮ್ ಹಾಗೂ ಮೊಹಮ್ಮದುಲ್ಲಾ ಹೋರಾಟದಿಂದ ಬಾಂಗ್ಲಾ ಕೊಂಚ ಚೇತರಿಸಿಕೊಂಡಿತು.

ಇದನ್ನೂ ಓದಿ: ಸೆಂಚುರಿ ಸಿಡಿಸಿ ಪಾಂಟಿಂಗ್ ದಾಖಲೆ ಸರಿಗಟ್ಟಿದ ವಿರಾಟ್ ಕೊಹ್ಲಿ!.

ಮೊಹಮ್ಮದುಲ್ಲಾ 39 ರನ್ ಸಿಡಿಸಿ ಗಾಯಗೊಂಡು ಹೊರನಡೆದರು. ಈ ಮೂಲಕ ರಹೀಮ್ ಹಾಗೂ ಮೊಹಮ್ಮದುಲ್ಲಾ ಜೊತೆಯಾಟಕ್ಕೆ ಬ್ರೇಕ್ ಬಿತ್ತು. ರಹೀಮ್ ಹಾಫ್ ಸೆಂಚುರಿ ಸಿಡಿಸಿ ಮುನ್ನಗ್ಗಿದ್ದರೆ, ಮೆಹದಿ ಹಸನ್ 15 ರನ್ ಸಿಡಿಸಿ ಔಟಾದರು. ಇನ್ನು ತೈಜುಲ್ ಇಸ್ಲಾಂ 11 ರನ್ ಸಿಡಿಸಿ ಔಟಾದರು. ಈ ಮೂಲಕ ದಿನದಾಟ ಅಂತ್ಯಗೊಂಡಿತು. ಬಾಂಗ್ಲಾದೇಶ ಅಂತ್ಯದಲ್ಲಿ 6 ವಿಕೆಟ್ ನಷ್ಟಕ್ಕೆ 152 ರನ್ ಸಿಡಿಸಿ, 89 ರನ್‌ಗಳ ಹಿನ್ನಡೆಯಲ್ಲಿದೆ.

ಭಾರತದ ಪರ ಇಶಾಂತ್ ಶರ್ಮಾ 4 ಹಾಗೂ ಉಮೇಶ್ ಯಾದವ್ 2 ವಿಕೆಟ್ ಕಬಳಿಸಿದರು. 3ನೇ ದಿನ ಭಾರತದ ಗೆಲುವಿಗೆ 4 ವಿಕೆಟ್ ಅವಶ್ಯಕತೆ ಇದೆ.
 

click me!