ತಮ್ಮ ಪತ್ನಿಯ ಮುಖ ತೋರಿಸಿದ ಇರ್ಫಾನ್ ಪಠಾನ್
ಇರ್ಫಾನ್ ಪಠಾಣ್ ಟೀಂ ಇಂಡಿಯಾ ಮಾಜಿ ಕ್ರಿಕೆಟಿಗ
ಲೆಜೆಂಡ್ಸ್ ಲೀಗ್ ಟೂರ್ನಿಯಲ್ಲಿ ಪಾಲ್ಗೊಂಡಿರುವ ಪಠಾಣ್
ನವದೆಹಲಿ(ಮಾ.16): ಟೀಂ ಇಂಡಿಯಾ ಮಾಜಿ ಆಲ್ರೌಂಡರ್ ಇರ್ಫಾನ್ ಪಠಾನ್, ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ವಿದಾಯ ಹೇಳಿದ ಬಳಿಕ ಸಾಮಾಜಿಕ ಜಾಲತಾಣಗಳಲ್ಲಿ ಅತ್ಯಂತ ಸಕ್ರಿಯವಾಗಿದ್ದು, ಆಗಾಗ ತಮ್ಮ ವೈಯುಕ್ತಿಕ ಜೀವನದ ಕೆಲವು ಫೋಟೋಗಳು, ವಿಡಿಯೋಗಳನ್ನು ಅಭಿಮಾನಿಗಳಿಗಾಗಿ ಹಂಚಿಕೊಳ್ಳುತ್ತಲೇ ಬಂದಿದ್ದಾರೆ. ಇದೀಗ ಮೊದಲ ಬಾರಿಗೆ ಇರ್ಫಾನ್ ಪಠಾಣ್, ತಮ್ಮ ಪತ್ನಿ ಸಫಾ ಬೇಗ್ ಅವರ ಫೋಟೋವನ್ನು ಸಾಮಾಜಿಕ ಜಾಲತಾಣವಾದ ಇನ್‌ಸ್ಟಾಗ್ರಾಮ್‌ನಲ್ಲಿ ಹಂಚಿಕೊಂಡಿದ್ದಾರೆ. ಇದೀಗ ಆ ಫೋಟೋ ಸಾಕಷ್ಟು ವೈರಲ್ ಆಗಿದೆ.
ಇರ್ಫಾನ್ ಪಠಾಣ್ ಈ ಹಿಂದೆಯೂ ತಮ್ಮ ಪತ್ನಿ ಸಫಾ ಬೇಗ್ ಅವರ ಜತೆಗಿನ ಫೋಟೋವನ್ನು ಹಂಚಿಕೊಂಡಿದ್ದರು. ಆಗ ಆ ಫೋಟೋಗಳು ವೈರಲ್ ಆಗಿರಲಿಲ್ಲ. ಯಾಕೆಂದರೆ ಆ ಫೋಟೋಗಳಲ್ಲಿ ಸಫಾ ಬೇಗ್ ಮುಖಕ್ಕೆ ಫರ್ದಾ ಹಾಕಿಕೊಂಡಿರುತ್ತಿದ್ದರು. ಹೀಗಾಗಿ ಸಫಾ ಅವರ ಮುಖ ಕಾಣಿಸುತ್ತಿರಲಿಲ್ಲ. ಆದರೆ ಇದೀಗ ಇರ್ಫಾನ್ ಪಠಾಣ್ ಹಂಚಿಕೊಂಡ ಫೋಟೋದಲ್ಲಿ ಮೊದಲ ಬಾರಿಗೆ ಸಫಾ ಬೇಗ್ ಅವರ ಮುಖ ಕಂಡಿದೆ. ಹೀಗಾಗಿಯೇ ಪಠಾಣ್ ಹಂಚಿಕೊಂಡ ಫೋಟೋ ಸಾಕಷ್ಟು ವೈರಲ್ ಆಗಿದೆ.
ಕೆಲವು ದಿನಗಳ ಹಿಂದಷ್ಟೇ ಸಫಾ ಬೇಗ್ ಪಠಾಣ್ ಅವರ ಫೋಟೋಗಳು ವೈರಲ್ ಆಗಿದ್ದವು. ಆ ಫೋಟೋಗಳಲ್ಲಿ ಸಫಾ ಬೇಗ್, ಇರ್ಫಾನ್ ಪಠಾಣ್ ಜತೆ ಹ್ಯಾಂಡ್‌ಬ್ಯಾಗ್ ಹಿಡಿದುಕೊಂಡು ಸಾರ್ವಜನಿಕವಾಗಿ ಕಾಣಿಸಿಕೊಂಡಿದ್ದರು. ಆಗ ಸಫಾ ಬೇಗ್ ಮುಖಕ್ಕೆ ಸ್ಕಾರ್ಫ್ ಕಟ್ಟಿಕೊಂಡಿದ್ದರು. ಜಗತ್ತಿನಾದ್ಯಂತ ಬಹುಸಂಖ್ಯಾತ ಮುಸ್ಲಿಂ ಮಹಿಳೆಯರು ಮುಖ ಮುಚ್ಚಿಕೊಳ್ಳಲು ಸ್ಕಾರ್ಫ್ ಬಳಸುವುದು ಸರ್ವೇ ಸಾಮಾನ್ಯ ಎನಿಸಿಕೊಂಡಿದೆ.
IPL 2023: ಡೆಲ್ಲಿ ಕ್ಯಾಪಿಟಲ್ಸ್‌ಗೆ ನೂತನ ನಾಯಕ ನೇಮಕ..! ಅಕ್ಷರ್ ಪಟೇಲ್ ವೈಸ್ ಕ್ಯಾಪ್ಟನ್
ಇರ್ಫಾನ್ ಪಠಾಣ್ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಗುಡ್ ಹೇಳಿದ ಬಳಿಕವೂ ಕ್ರಿಕೆಟ್ ಜತೆಗಿನ ನಂಟನ್ನು ಇನ್ನು ಬಿಟ್ಟಿಲ್ಲ. ಕ್ರಿಕೆಟ್‌ಗೆ ವಿದಾಯ ಹೇಳಿದ ಬಳಿಕ ಪಠಾಣ್ ವೀಕ್ಷಕ ವಿವರಣೆಗಾರಿಕೆ ಮೂಲಕ ಗಮನ ಸೆಳೆದಿದ್ದಾರೆ. ಇರ್ಫಾನ್ ಪಠಾಣ್, ಸದ್ಯ ಸ್ಟಾರ್ ಸ್ಪೋರ್ಟ್ಸ್ ವಾಹಿನಿಯಲ್ಲಿ ವೀಕ್ಷಕ ವಿವರಣೆಗಾರಿಕೆಯಲ್ಲಿ ಮಿಂಚುತ್ತಿದ್ದಾರೆ.
ಇದಷ್ಟೇ ಅಲ್ಲದೇ ಇರ್ಫಾನ್ ಪಠಾಣ್, ಸದ್ಯ ಲೆಜೆಂಡ್ಸ್ ಲೀಗ್ ಟಿ20 ಟೂರ್ನಿಯಲ್ಲಿ ಗೌತಮ್ ಗಂಭೀರ್ ನಾಯಕತ್ವದ ಇಂಡಿಯಾ ಮಹರಾಜಾಸ್ ತಂಡವನ್ನು ಪ್ರತಿನಿಧಿಸುತ್ತಿದ್ದಾರೆ. ಇರ್ಫಾನ್ ಪಠಾಣ್ ಭಾರತ ಪರ 21 ಟೆಸ್ಟ್, 120 ಏಕದಿನ ಹಾಗೂ 24 ಟಿ20 ಪಂದ್ಯಗಳನ್ನಾಡಿದ್ದು, ಕ್ರಮವಾಗಿ 1105, 1544 ಹಾಗೂ 172 ರನ್ ಬಾರಿಸಿದ್ದಾರೆ. ಇದಷ್ಟೇ ಅಲ್ಲದೇ ಬೌಲಿಂಗ್‌ನಲ್ಲಿ ಒಟ್ಟಾರೆ 301 ವಿಕೆಟ್ ಕಬಳಿಸಿ ಮಿಂಚಿದ್ದರು.