#IREvIND ಐರ್ಲೆಂಡ್-ಭಾರತ ನಡುವಿನ ಪಂದ್ಯಕ್ಕೆ ಮಳೆ ಅಡ್ಡಿ!

By Suvarna NewsFirst Published Jun 26, 2022, 10:05 PM IST
Highlights
  • ಟಾಸ್ ಬೆನ್ನಲ್ಲೇ ಮತ್ತೆ ಮಳೆ, ಭಾರತಕ್ಕೆ ನಿರಾಸೆ
  • ಐರ್ಲೆಂಡ್ ವಿರುದ್ಧ ಟಾಸ್ ಗೆದ್ದ ಭಾರತ
  • ಮಳೆಯಿಂದಾಗಿ ಪಂದ್ಯ ಆರಂಭ ವಿಳಂಭ

ಡಬ್ಲಿನ್(ಜೂ.26): ಭಾರತ ಹಾಗೂ ಸೌತ್ ಆಫ್ರಿಕಾ ನಡುವಿನ ಅಂತಿಮ ಟಿ20 ಪಂದ್ಯ ಮಳೆಯಿಂದ ರದ್ದಾಗಿದ್ದರೆ, ಇದೀಗ ಭಾರತ ಹಾಗೂ ಐರ್ಲೆಂಡ್ ನಡುವಿನ ಮೊದಲ ಟಿ20 ಪಂದ್ಯಕ್ಕೂ ಮಳೆ ಅಡ್ಡಿಯಾಗಿದೆ. ಟಾಸ್ ಬೆನ್ನಲ್ಲೇ ಮಳೆ ವಕ್ಕರಿಸಿದ ಕಾರಣ ಇದೀಗ ಪಂದ್ಯ ಆರಂಭ ವಿಳಂಭವಾಗಿದೆ.

ಐರ್ಲೆಂಡ್ ವಿರುದ್ಧದ ಮೊದಲ ಟಿ20 ಪಂದ್ಯದಲ್ಲಿ ಹಾರ್ದಿಕ್ ಪಾಂಡ್ಯ ನೇತೃತ್ವದ  ಟೀಂ ಇಂಡಿಯಾ ಟಾಸ್ ಗೆದ್ದು ಫೀಲ್ಡಿಂಗ್ ಆಯ್ಕೆ ಮಾಡಿಕೊಂಡಿತು. ಐಪಿಎಲ್ ಟೂರ್ನಿಯಲ್ಲಿ ಮಿಂಚಿನ ದಾಳಿ ಮೂಲಕ ಆಯ್ಕೆ ಸಮಿತಿ ಗಮನಸೆಳೆದಿದ್ದ ಉಮ್ರಾನ್ ಮಲಿಕ್ ಟೀಂ ಇಂಡಿಯಾಗೆ ಪದಾರ್ಪಣೆ ಮಾಡಿದರು. ಆದರೆ ಪಂದ್ಯ ಆರಂಭಕ್ಕೂ ಮುನ್ನ ಸುರಿದ ಮಳೆಯಿಂದ ನಿರಾಸೆಯಾಗಿದೆ.

ಇಂಗ್ಲೆಂಡ್​​​ ಟೂರ್​​​ ರೋಹಿತ್​​​-ದ್ರಾವಿಡ್​​​ ಜೋಡಿಗೆ ಅಗ್ನಿಪರೀಕ್ಷೆ..!

ಕೆಲ ಹೊತ್ತಿನ ಬಳಿಕ ಮಳೆ ನಿಂತಿತ್ತು. ತಕ್ಷಣವೇ ಸಿಬ್ಬಂದಿಗಳು ಮೈದಾನ ಸಜ್ಜುಗೊಳಿಸುವ ಕಾರ್ಯಕ್ಕೆ ಮುಂದಾದರು. ಆದರೆ ಮತ್ತೆ ಸುರಿದ ಮಳೆಯಿಂದ ಇದೀಗ ಪಂದ್ಯ ಮತ್ತಷ್ಟು ವಿಳಂಬವಾಗುವ ಸಾಧ್ಯತೆ ಇದೆ.

ಟೀಂ ಇಂಡಿಯಾ ಪ್ಲೇಯಿಂಗ್ 11
ರುತುರಾಜ್ ಗಾಯಕ್ವಾಡ್, ಇಶಾನ್ ಕಿಶನ್, ದೀಪಕ್ ಹೂಡ, ಸೂರ್ಯಕುಮಾರ್ ಯಾದವ್, ಹಾರ್ದಿಕ್ ಪಾಂಡ್(ನಾಯಕ), ದಿನೇಶಅ ಕಾರ್ತಿಕ್, ಅಕ್ಸರ್ ಪಟೇಲ್, ಭುವನೇಶ್ವರ್ ಕುಮಾರ್, ಅವೇಶ್ ಖಾನ್, ಯಜುವೇಂದ್ರ ಚಹಾಲ್, ಉಮ್ರಾನ್ ಮಲಿಕ್

ಐರ್ಲೆಂಡ್ ಪ್ಲೇಯಿಂಗ್ 1
ಪೌಲ್ ಸ್ಟಿರ್ಲಿಂಗ್, ಆ್ಯಂಡ್ರ್ಯೂ ಬಾಲ್‌ಬಿರ್ನೈ(ನಾಯಕ), ಗರೆತ್ ಡೆಲಾನಿ, ಹ್ಯಾರಿ ಟೆಕ್ಟರ್, ಲಾರ್ಕಾನ್ ಟಕರ್, ಜಾರ್ಜ್ ಡಾಕ್ರೆಲ್, ಮಾರ್ಕ್ ಅಡೈರ್, ಆ್ಯಂಡಿ ಮೆಕ್‌ಬ್ರೈನ್, ಕ್ರೈಗ್ ಯಂಗ್, ಜುಶುವಾ ಲಿಟಲ್, ಕೊನೊರ್ ಆಲ್ಫರ್ಟ್

Team India Cricketer ದಿನೇಶ್ ಕಾರ್ತಿಕ್ ಆಡಿದ್ದು ಒಬ್ಬಿಬ್ಬರು ನಾಯಕರ ಬಳಿಯಲ್ಲ..

ಮುಖಾಮುಖಿ: 03
ಭಾರತ: 03
ಐರ್ಲೆಂಡ್‌: 00

ಏಕೈಕ ಸರಣಿ ಗೆದ್ದಿರುವ ಭಾರತ
ಭಾರತ ಈವರೆಗೆ ಐರ್ಲೆಂಡ್‌ ವಿರುದ್ಧ ಏಕೈಕ ಟಿ20 ಸರಣಿ ಆಡಿದೆ. 2018ರಲ್ಲಿ ಐರ್ಲೆಂಡ್‌ನಲ್ಲಿ ನಡೆದಿದ್ದ 2 ಪಂದ್ಯಗಳ ಸರಣಿಯನ್ನು ಭಾರತ 2-0 ಅಂತರದಲ್ಲಿ ಗೆದ್ದಿತ್ತು. ಅದಕ್ಕೂ ಮೊದಲು 2009ರಲ್ಲಿ ಟಿ20 ವಿಶ್ವಕಪ್‌ನಲ್ಲಿ ಗುಂಪು ಹಂತದಲ್ಲಿ ಟೀಂ ಇಂಡಿಯಾ, ಐರ್ಲೆಂಡ್‌ ವಿರುದ್ಧ ಜಯಗಳಿಸಿತ್ತು.

6 ತಿಂಗಳಲ್ಲಿ ಭಾರತಕ್ಕೆ 5 ನಾಯಕರು!
ಐರ್ಲೆಂಡ್‌ ವಿರುದ್ಧದ 2 ಪಂದ್ಯಗಳ ಟಿ20 ಸರಣಿಗೆ ಭಾರತ ತಂಡಕ್ಕೆ ಹಾರ್ದಿಕ್‌ ಪಾಂಡ್ಯ ನಾಯಕನಾಗಿ ಆಯ್ಕೆಯಾಗುವುದರೊಂದಿಗೆ 2022ರಲ್ಲಿ ಟೀಂ ಇಂಡಿಯಾವನ್ನು ಮುನ್ನಡೆಸಲಿರುವ 5ನೇ ನಾಯಕ ಎನಿಸಿಕೊಂಡಿದ್ದಾರೆ. ಇದಕ್ಕೂ ಮೊದಲು ಈ ವರ್ಷ ವಿರಾಟ್‌ ಕೊಹ್ಲಿ, ರೋಹಿತ್‌ ಶರ್ಮಾ, ಕೆ.ಎಲ್‌.ರಾಹುಲ್‌ ಹಾಗೂ ರಿಷಬ್‌ ಪಂತ್‌ ಭಾರತ ತಂಡಕ್ಕೆ ನಾಯಕತ್ವ ವಹಿಸಿದ್ದಾರೆ. ಜನವರಿಯಲ್ಲಿ ನಡೆದಿದ್ದ ದ.ಆಫ್ರಿಕಾ ವಿರುದ್ಧದ 3ನೇ ಟೆಸ್ಟ್‌ಗೆ ಕೊಹ್ಲಿ ನಾಯಕತ್ವ ವಹಿಸಿದ್ದರೆ, ಏಕದಿನ ಸರಣಿಯಲ್ಲಿ ಕನ್ನಡಿಗ ರಾಹುಲ್‌ ತಂಡ ಮುನ್ನಡೆಸಿದ್ದರು. ಬಳಿಕ ವೆಸ್ಟ್‌ಇಂಡೀಸ್‌ ಏಕದಿನ, ಟಿ20 ಸರಣಿ, ಶ್ರೀಲಂಕಾ ವಿರುದ್ಧದ ಟೆಸ್ಟ್‌, ಏಕದಿನ ಸರಣಿಯಲ್ಲಿ ರೋಹಿತ್‌ ತಂಡಕ್ಕೆ ನಾಯಕರಾಗಿದ್ದರು. ಸದ್ಯ ನಡೆಯುತ್ತಿರುವ ದ.ಆಫ್ರಿಕಾ ಟಿ20 ಸರಣಿಯಲ್ಲಿ ತಂಡವನ್ನು ರಿಷಬ್‌ ಪಂತ್‌ ಮುನ್ನಡೆಸುತ್ತಿದ್ದಾರೆ.
 

click me!