ಐಪಿಎಲ್‌ ಟೈಟಲ್ ಸ್ಪಾನ್ಸರ್: 5 ವರ್ಷಕ್ಕೆ ₹1,750 ಕೋಟಿ?

By Kannadaprabha News  |  First Published Jan 3, 2024, 1:28 PM IST

ಕಳೆದೆರಡು ಆವೃತ್ತಿಗಳಲ್ಲಿ ಟಾಟಾ ಸಂಸ್ಥೆಯು ಶೀರ್ಷಿಕೆ ಪ್ರಾಯೋಜಕತ್ವ ಹೊಂದಿತ್ತು. ಪ್ರತಿ ವರ್ಷಕ್ಕೆ ತಲಾ 335 ಕೋಟಿ ರು.ಗಳಂತೆ 2 ವರ್ಷಕ್ಕೆ ಸಂಸ್ಥೆಯು ಬಿಸಿಸಿಐಗೆ ಒಟ್ಟು 670 ಕೋಟಿ ರು. ಪಾವತಿಸಿದೆ.


ನವದೆಹಲಿ(ಜ.03): ಐಪಿಎಲ್‌ನ ಶೀರ್ಷಿಕೆ ಪ್ರಾಯೋಜಕರಿಗಾಗಿ ಬಿಸಿಸಿಐ ಹುಡುಕಾಟ ನಡೆಸುತ್ತಿದ್ದು, ವಾರ್ಷಿಕ ಮೂಲ ಬೆಲೆ 350 ಕೋಟಿ ರು. ನಿಗದಿಪಡಿಸಿದೆ ಎಂದು ಮಾಧ್ಯಮಗಳಲ್ಲಿ ವರದಿಯಾಗಿದೆ. ಈ ಮೂಲಕ ಬಿಸಿಸಿಐ 5 ವರ್ಷಗಳ ಅವಧಿಗೆ ಒಟ್ಟು ಕನಿಷ್ಠ 1,750 ಕೋಟಿ ರು. ನಿರೀಕ್ಷಿಸುತ್ತಿದೆ ಎಂದು ತಿಳಿದುಬಂದಿದೆ. 

ಕಳೆದೆರಡು ಆವೃತ್ತಿಗಳಲ್ಲಿ ಟಾಟಾ ಸಂಸ್ಥೆಯು ಶೀರ್ಷಿಕೆ ಪ್ರಾಯೋಜಕತ್ವ ಹೊಂದಿತ್ತು. ಪ್ರತಿ ವರ್ಷಕ್ಕೆ ತಲಾ 335 ಕೋಟಿ ರು.ಗಳಂತೆ 2 ವರ್ಷಕ್ಕೆ ಸಂಸ್ಥೆಯು ಬಿಸಿಸಿಐಗೆ ಒಟ್ಟು 670 ಕೋಟಿ ರು. ಪಾವತಿಸಿದೆ. ಇನ್ನು, ಮಹಿಳಾ ಐಪಿಎಲ್‌ನ ಶೀರ್ಷಿಕೆ ಪ್ರಾಯೋಜಕತ್ವಕ್ಕೆ ಕೂಡಾ ಬಿಸಿಸಿಐ ಟೆಂಡರ್‌ ಆಹ್ವಾನಿಸಿದೆ. ಆದರೆ ಬಿಡ್‌ ಸಲ್ಲಿಕೆಗೆ ಬೆಟ್ಟಿಂಗ್‌, ಫ್ಯಾಂಟಸಿ ಗೇಮ್‌, ಕ್ರಿಪ್ಟೋ ಕರೆನ್ಸಿ, ತಂಪು ಪಾನೀಯಗಳ ಸೇರಿದಂತೆ ಕೆಲ ಸಂಸ್ಥೆಗಳಿಗೆ ನಿರ್ಬಂಧ ಹೇರಿದೆ.

Latest Videos

undefined

ಕೇಪ್‌ಟೌನ್ ಟೆಸ್ಟ್‌ನಲ್ಲಿ ಟಾಸ್ ಗೆದ್ದ ದಕ್ಷಿಣ ಆಫ್ರಿಕಾ ಬ್ಯಾಟಿಂಗ್ ಆಯ್ಕೆ; ಉಭಯ ಪಡೆಯಲ್ಲೂ ಮೇಜರ್ ಚೇಂಜ್

ಸಾಕ್ಷ್ಯಾಧಾರಗಳ ಕೊರತೆ: 2019ರ ಐಪಿಎಲ್ ಬೆಟ್ಟಿಂಗ್ ಕೇಸ್‌ಗಳನ್ನು ಕೈಬಿಟ್ಟ ಸಿಬಿಐ

ನವದೆಹಲಿ: 2019ರ ಐಪಿಎಲ್​ ಬೆಟ್ಟಿಂಗ್‌ಗೆ ಸಂಬಂಧಿಸಿದಂತೆ 2 ಪ್ರಕರಣಗಳ ತನಿಖೆ ನಡೆಸುತ್ತಿದ್ದ ಸಿಬಿಐ ಸಾಕ್ಷ್ಯಾಧಾರಗಳ ಕೊರತೆಯಿಂದಾಗಿ ಪ್ರಕರಣವನ್ನು ಕೈಬಿಟ್ಟಿದೆ. 2022ರ ಮೇ ತಿಂಗಳಲ್ಲಿ 7 ಮಂದಿ ವಿರುದ್ಧ ಸಿಬಿಐ ಪ್ರಕರಣ ದಾಖಲಿಸಿತ್ತು. ಪಾಕಿಸ್ತಾನದೊಂದಿಗೆ ಸಂಪರ್ಕದಲ್ಲಿದ್ದುಕೊಂಡು ಐಪಿಎಲ್‌ ಪಂದ್ಯಗಳ ಮೇಲೆ ಪ್ರಭಾವ ಬೀರುತ್ತಿದ್ದಾರೆ ಎಂಬ ಮಾಹಿತಿಯ ಆಧಾರದ ಮೇಲೆ ಸಿಬಿಐ ಕೇಸ್‌ ದಾಖಲಿಸಿತ್ತು. ಆದರೆ ಸೂಕ್ತ ಸಾಕ್ಷ್ಯಾಧಾರದ ಕೊರತೆಯಿಂದಾಗಿ 2 ವರ್ಷಗಳ ಬಳಿಕ ಪ್ರಕರಣವನ್ನು ಕೈಬಿಟ್ಟಿದ್ದು, ಈ ಬಗ್ಗೆ ನ್ಯಾಯಾಲಯಕ್ಕೆ ವರದಿ ಸಲ್ಲಿಸಿದೆ.

ಟಿ20 ವಿಶ್ವಕಪ್‌: ರೋಹಿತ್‌, ಕೊಹ್ಲಿ ಜತೆ ಬಿಸಿಸಿಐ ಚರ್ಚೆ!

ಕೇಪ್‌ಟೌನ್‌: ಮುಂಬರುವ ಟಿ20 ವಿಶ್ವಕಪ್‌ನಲ್ಲಿ ಆಡುವ ವಿಚಾರಕ್ಕೆ ಸಂಬಂಧಿಸಿದಂತೆ ವಿರಾಟ್‌ ಕೊಹ್ಲಿ, ರೋಹಿತ್‌ ಜೊತೆ ಬಿಸಿಸಿಐ ಆಯ್ಕೆ ಸಮಿತಿ ಚರ್ಚೆ ನಡೆಸಲಿದೆ ಎಂದು ವರದಿಯಾಗಿದೆ. ಈಗಾಗಲೇ ಕೊಹ್ಲಿ, ರೋಹಿತ್‌ ವಿಶ್ವಕಪ್‌ ಆಡುವ ಬಯಕೆ ವ್ಯಕ್ತಪಡಿಸಿದ್ದಾರೆ. ಆದರೆ ಇಬ್ಬರೂ 2022ರ ನವೆಂಬರ್‌ನಿಂದ ಅಂ.ರಾ. ಟಿ20 ಆಡಿಲ್ಲ. ಹೀಗಾಗಿ ಇಬ್ಬರನ್ನೂ ಜ.11ರಿಂದ ಆರಂಭಗೊಳ್ಳಲಿರುವ ಅಫ್ಘಾನಿಸ್ತಾನ ಸರಣಿಗೆ ಆಯ್ಕೆ ಮಾಡಬೇಕೋ ಅಥವಾ ಮುಂಬರುವ ಐಪಿಎಲ್‌ನ ಪ್ರದರ್ಶನ ನೋಡಿ ಟಿ20 ವಿಶ್ವಕಪ್‌ನಲ್ಲಿ ಆಡಿಸಬೇಕೋ ಎಂಬ ಗೊಂದಲದಲ್ಲಿದೆ. 

ಆಸೀಸ್ ಎದುರು ಭಾರತಕ್ಕೆ ಹ್ಯಾಟ್ರಿಕ್ ಸೋಲು, ಏಕದಿನ ಸರಣಿ ಕ್ಲೀನ್‌ಸ್ವೀಪ್ ಮಾಡಿದ ಕಾಂಗರೂ ಪಡೆ

ಹೀಗಾಗಿ ಸರಣಿಗೂ ಮುನ್ನ ಇಬ್ಬರ ಜೊತೆಗೂ ಚರ್ಚೆ ನಡೆಸಲಿದೆ. ಇನ್ನು ಟಿ20 ವಿಶ್ವಕಪ್‌ನ ತಂಡದ ಆಯ್ಕೆಗಾಗಿ ಬಿಸಿಸಿಐ ಭಾರತ ಹಾಗೂ ಐಪಿಎಲ್‌ನಲ್ಲಿ ಆಡಲಿರುವ ಪ್ರಮುಖ 30 ಆಟಗಾರರ ಪ್ರದರ್ಶನದ ಮೇಲೆ ಕಣ್ಣಿಡಲಿದೆ ಎಂದು ತಿಳಿದುಬಂದಿದೆ.

click me!