ಕೇಪ್‌ಟೌನ್ ಟೆಸ್ಟ್‌ನಲ್ಲಿ ಟಾಸ್ ಗೆದ್ದ ದಕ್ಷಿಣ ಆಫ್ರಿಕಾ ಬ್ಯಾಟಿಂಗ್ ಆಯ್ಕೆ; ಉಭಯ ಪಡೆಯಲ್ಲೂ ಮೇಜರ್ ಚೇಂಜ್

Published : Jan 03, 2024, 01:08 PM ISTUpdated : Jan 03, 2024, 01:22 PM IST
ಕೇಪ್‌ಟೌನ್ ಟೆಸ್ಟ್‌ನಲ್ಲಿ ಟಾಸ್ ಗೆದ್ದ ದಕ್ಷಿಣ ಆಫ್ರಿಕಾ ಬ್ಯಾಟಿಂಗ್ ಆಯ್ಕೆ; ಉಭಯ ಪಡೆಯಲ್ಲೂ ಮೇಜರ್ ಚೇಂಜ್

ಸಾರಾಂಶ

ಈಗಾಗಲೇ ಮೊದಲ ಟೆಸ್ಟ್ ಪಂದ್ಯ ಗೆದ್ದು ಆತ್ಮವಿಶ್ವಾಸದಿಂದ ಬೀಗುತ್ತಿರುವ ಹರಿಣಗಳ ಪಡೆ, ಸರಣಿ ಕ್ಲೀನ್‌ಸ್ವೀಪ್ ಮಾಡಲು ಎದುರು ನೋಡುತ್ತಿದೆ. ಇನ್ನೊಂದೆಡೆ ಭಾರತ ತಂಡವು ಬೌನ್ಸ್‌ ಬ್ಯಾಕ್ ಮಾಡುವ ಮೂಲಕ ಸರಣಿ ಸಮಬಲ ಸಾಧಿಸಲು ಎದುರು ನೋಡುತ್ತಿದೆ

ಕೇಪ್‌ಟೌನ್‌(ಜ.03): ಭಾರತ ಹಾಗೂ ದಕ್ಷಿಣ ಆಫ್ರಿಕಾ ತಂಡಗಳ ನಡುವಿನ ಎರಡನೇ ಹಾಗೂ ಕೊನೆಯ ಟೆಸ್ಟ್‌ ಪಂದ್ಯದಲ್ಲಿ ಟಾಸ್ ಗೆದ್ದ ದಕ್ಷಿಣ ಆಫ್ರಿಕಾ ತಂಡದ ನಾಯಕ ಡೀನ್ ಎಲ್ಹರ್ ಮೊದಲು ಬ್ಯಾಟಿಂಗ್ ಮಾಡುವ ತೀರ್ಮಾನ ತೆಗೆದುಕೊಂಡಿದ್ದಾರೆ. ತೆಂಬ ಬವುಮಾ ಅನುಪಸ್ಥಿತಿಯಲ್ಲಿ ಕೊನೆಯ ಟೆಸ್ಟ್ ಪಂದ್ಯವನ್ನಾಡುತ್ತಿರುವ ಎಲ್ಗರ್, ಗೆಲುವಿನೊಂದಿಗೆ ಟೆಸ್ಟ್‌ ಕ್ರಿಕೆಟ್‌ಗೆ ಗುಡ್‌ಬೈ ಹೇಳಲು ಎದುರು ನೋಡುತ್ತಿದ್ದಾರೆ. ಈಗಾಗಲೇ ಮೊದಲ ಟೆಸ್ಟ್ ಪಂದ್ಯ ಗೆದ್ದು ಆತ್ಮವಿಶ್ವಾಸದಿಂದ ಬೀಗುತ್ತಿರುವ ಹರಿಣಗಳ ಪಡೆ, ಸರಣಿ ಕ್ಲೀನ್‌ಸ್ವೀಪ್ ಮಾಡಲು ಎದುರು ನೋಡುತ್ತಿದೆ. ಇನ್ನೊಂದೆಡೆ ಭಾರತ ತಂಡವು ಬೌನ್ಸ್‌ ಬ್ಯಾಕ್ ಮಾಡುವ ಮೂಲಕ ಸರಣಿ ಸಮಬಲ ಸಾಧಿಸಲು ಎದುರು ನೋಡುತ್ತಿದೆ

ನಿರೀಕ್ಷೆಯಂತೆಯೇ ದಕ್ಷಿಣ ಆಫ್ರಿಕಾ ತಂಡದಲ್ಲಿ ಕೆಲವು ಬದಲಾವಣೆಗಳನ್ನು ಮಾಡಲಾಗಿದ್ದು, ತೆಂಬ ಬವುಮಾ ಬದಲಿಗೆ ಟ್ರಿಸ್ಟಿನ್ ಸ್ಟಬ್ಸ್‌ ಟೆಸ್ಟ್ ತಂಡಕ್ಕೆ ಪಾದಾರ್ಪಣೆ ಮಾಡಿದ್ದಾರೆ. ಇನ್ನು ಕೇಶವ್ ಮಹರಾಜ್, ಕೇಶವ್ ಮಹರಾಜ್ ಹಾಗೂ ಲುಂಗಿ ಎಂಗಿಡಿ ತಂಡ ಕೂಡಿಕೊಂಡಿದ್ದಾರೆ. 

Cape Town Test: ಹರಿಣಗಳೆದುರು ಸರಣಿ ಸಮಬಲಕ್ಕೆ ಟೀಂ ಇಂಡಿಯಾ ಹೋರಾಟ

ಇನ್ನು ಭಾರತ ಕ್ರಿಕೆಟ್ ತಂಡದಲ್ಲಿ ಎರಡು ಬದಲಾವಣೆ ಮಾಡಲಾಗಿದ್ದು, ರವಿಚಂದ್ರನ್ ಅಶ್ವಿನ್ ಬದಲಿಗೆ ರವೀಂದ್ರ ಜಡೇಜಾ ಹಾಗೂ ಶಾರ್ದೂಲ್ ಠಾಕೂರ್ ಬದಲಿಗೆ ಮುಕೇಶ್ ಕುಮಾರ್ ತಂಡಕೂಡಿಕೊಂಡಿದ್ದಾರೆ.

ಸೆಂಚೂರಿಯನ್‌ನಲ್ಲಿ ಬ್ಯಾಟರ್‌ಗಳ ವೈಫಲ್ಯ, ಸಾಧಾರಣ ಬೌಲಿಂಗ್ ಪ್ರದರ್ಶನದಿಂದಾಗಿ ಭಾರತ ಮೊದಲ ಪಂದ್ಯದಲ್ಲಿ ಇನ್ನಿಂಗ್ಸ್‌ ಮತ್ತು 32 ರನ್‌ ಸೋಲನುಭವಿಸಿತ್ತು. ಸೆಂಚೂರಿಯನ್‌ನ ಬೌನ್ಸಿ ಪಿಚ್‌ನಲ್ಲಿ ಪೆವಿಲಿಯನ್‌ ಪರೇಡ್‌ ನಡೆಸಿದ್ದ ಭಾರತಕ್ಕೆ ಕೇಪ್‌ಟೌನ್‌ನಲ್ಲೂ ಬೌನ್ಸರ್‌ಗಳ ಸವಾಲು ಎದುರಾಗುವುದು ಬಹುತೇಕ ಖಚಿತ. ಪ್ರಮುಖವಾಗಿ ರೋಹಿತ್‌ ಶರ್ಮಾ, ಶ್ರೇಯಸ್‌ ಅಯ್ಯರ್‌, ಶುಭ್‌ಮನ್‌ ಗಿಲ್‌ ಮೇಲೆ ಹೆಚ್ಚಿನ ನಿರೀಕ್ಷೆಯಿದ್ದು, ವಿರಾಟ್‌ ಕೊಹ್ಲಿ, ಕೆ.ಎಲ್‌.ರಾಹುಲ್‌ ಮತ್ತೆ ಆಫ್ರಿಕಾ ದಾಳಿಯನ್ನು ಮೆಟ್ಟಿನಿಲ್ಲುವ ಭರವಸೆಯಲ್ಲಿದ್ದಾರೆ.

ಆಸೀಸ್ ಎದುರು ಭಾರತಕ್ಕೆ ಹ್ಯಾಟ್ರಿಕ್ ಸೋಲು, ಏಕದಿನ ಸರಣಿ ಕ್ಲೀನ್‌ಸ್ವೀಪ್ ಮಾಡಿದ ಕಾಂಗರೂ ಪಡೆ

ದಕ್ಷಿಣ ಆಫ್ರಿಕಾದಲ್ಲಿ ಕೊನೆಯ 3 ಸರಣಿಯಲ್ಲೂ ಸೋಲು

ಭಾರತ ತಂಡ ಈ ಹಿಂದಿನ 3 ಪ್ರವಾಸಗಳಲ್ಲೂ ದ.ಆಫ್ರಿಕಾದಲ್ಲಿ ಟೆಸ್ಟ್‌ ಸರಣಿ ಸೋತಿದೆ. 2011ರಲ್ಲಿ ಕೊನೆ ಬಾರಿ 1-1ರಲ್ಲಿ ಸರಣಿ ಡ್ರಾ ಮಾಡಿಕೊಂಡಿದ್ದ ಭಾರತ, ಬಳಿಕ 2013, 2018, 2021-22ರಲ್ಲಿ ಸರಣಿ ಸೋಲನುಭವಿಸಿದೆ. ಒಟ್ಟಾರೆ ಈ ವರೆಗೆ ದ.ಆಫ್ರಿಕಾದಲ್ಲಿ ನಡೆದ 8 ಸರಣಿಗಳಲ್ಲಿ ಭಾರತ 7ರಲ್ಲಿ ಪರಾಭವಗೊಂಡಿದೆ.

ಉಭಯ ತಂಡಗಳ ಆಟಗಾರರ ಪಟ್ಟಿ

ಭಾರತ: ರೋಹಿತ್‌ ಶರ್ಮಾ(ನಾಯಕ), ಯಶಸ್ವಿ ಜೈಸ್ವಾಲ್‌, ಶುಭ್‌ಮನ್ ಗಿಲ್‌, ವಿರಾಟ್‌ ಕೊಹ್ಲಿ, ಕೆ ಎಲ್ ರಾಹುಲ್‌, ಶ್ರೇಯಸ್‌ ಅಯ್ಯರ್, ರವೀಂದ್ರ ಜಡೇಜಾ, ಜಸ್ಪ್ರೀತ್ ಬುಮ್ರಾ, ಪ್ರಸಿದ್ಧ್‌ ಕೃಷ್ಣ, ಮುಕೇಶ್‌ ಕುಮಾರ್, ಮೊಹಮ್ಮದ್ ಸಿರಾಜ್‌.

ದ.ಆಫ್ರಿಕಾ: ಡೀನ್ ಎಲ್ಗರ್‌(ನಾಯಕ), ಏಯ್ಡನ್ ಮಾರ್ಕ್‌ರಮ್‌, ಟೋನಿ ಜೊರ್ಜಿ, ಟ್ರಿಸ್ಟನ್ ಸ್ಟಬ್ಸ್‌, ಡೇವಿಡ್ ಬೆಡಿಂಗ್‌ಹ್ಯಾಮ್‌, ಕೈಲ್ ವೆರೈನ್‌(ವಿಕೆಟ್ ಕೀಪರ್), ಮಾರ್ಕೊ ಯಾನ್ಸನ್‌, ಕೇಶವ್ ಮಹಾರಾಜ್, ಕಗಿಸೋ ರಬಾಡ, ನಂದ್ರೆ ಬರ್ಗರ್‌, ಲುಂಗಿ ಎನ್‌ಗಿಡಿ.

ಪಂದ್ಯ ಆರಂಭ: ಮಧ್ಯಾಹ್ನ 1.30ಕ್ಕೆ

ಪಿಚ್‌ ರಿಪೋರ್ಟ್‌: ಕೇಪ್‌ಟೌನ್‌ ಕ್ರೀಡಾಂಗಣದ ಪಿಚ್‌ ಮೊದಲ ಟೆಸ್ಟ್‌ನಂತೆಯೇ ವೇಗಿಗಳಿಗೆ ಹೆಚ್ಚಿನ ನೆರವು ನೀಡುವ ಸಾಧ್ಯತೆ ಹೆಚ್ಚು. ಪಿಚ್‌ನಲ್ಲಿ ಹುಲ್ಲು ಬೆಳೆದಿರುವ ಕಾರಣ ಹೆಚ್ಚಿನ ಬೌನ್ಸರ್‌ ಕೂಡಾ ಇರಲಿದೆ.
 

PREV

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ಅಂಡರ್ 19 ಏಷ್ಯಾಕಪ್‌ ಭಾರತ-ಶ್ರೀಲಂಕಾ ಸೆಮಿಫೈನಲ್ ರದ್ದಾದ್ರೆ ಫೈನಲ್‌ಗೇರೋದು ಯಾರು?
ಸಯ್ಯದ್‌ ಮುಷ್ತಾಕ್‌ ಅಲಿ ಟಿ20: ಜಾರ್ಖಂಡ್‌ಗೆ ಚೊಚ್ಚಲ ಕಿರೀಟ, ಶತಕ ಚಚ್ಚಿ ಅಪರೂಪದ ದಾಖಲೆ ಬರೆದ ಇಶಾನ್ ಕಿಶನ್!