Media Rights ಬರೋಬ್ಬರಿ 44,075 ಕೋಟಿ ರೂಪಾಯಿಗೆ IPL ಪ್ರಸಾರ ಹಕ್ಕು ಮಾರಾಟ!

By Suvarna NewsFirst Published Jun 13, 2022, 4:56 PM IST
Highlights
  • ಐಪಿಎಲ್ ಪ್ರಸಾರ ಹಕ್ಕು ದಾಖಲೆ ಮೊತ್ತಕ್ಕೆ ಬಿಡ್
  • 2023ರಿಂದ 2027ರ ವರೆಗಿನ 5 ವರ್ಷಗಳ ಐಪಿಎಲ್ ಹಕ್ಕು
  • ಪ್ರತಿ ಪಂದ್ಯಕ್ಕೆ 107.5 ಕೋಟಿ ರೂಪಾಯಿ 

ಮುಂಬೈ(ಜೂ.13): ಐಪಿಎಲ್ ಟೂರ್ನಿ ಪ್ರತಿ ಆವೃತ್ತಿ ಕೂಡ ಹೊಸ ಹೊಸ ದಾಖಲೆಗೆ ಸಾಕ್ಷಿಯಾಗಿದೆ. ಅದರಲ್ಲೂ ಐಪಿಎಲ್ ಮಾಧ್ಯಮ ಪ್ರಸಾರ ಹಕ್ಕು ಹರಾಜು ಇದೀಗ ವಿಶ್ವದಲ್ಲೇ ಹೊಸ ದಾಖಲೆ ಸೃಷ್ಟಿಸಿದೆ. 2023ರಿಂದ 2027ರ ವರೆಗಿನ 5 ವರ್ಷಗಳ ವರೆಗೆ ಐಪಿಎಲ್ ಪಂದ್ಯಗಳ ಪ್ರಸಾರ ಮಾಡುವ ಹಕ್ಕನ್ನು ಬಿಸಿಸಿಐ ಹರಾಜಿನ ಮೂಲಕ ಮಾರಾಟ ಮಾಡಿದೆ. ವಿಶೇಷ ಅಂದರೆ ಟಿವಿ ಹಾಗೂ ಡಿಜಿಟಲ್ ಹಕ್ಕು ಒಟ್ಟು 44,075 ಕೋಟಿ ರೂಪಾಯಿಗೆ ಮಾರಾಟವಾಗಿದೆ. ಟಿವಿ ಹಕ್ಕನ್ನು ಡಿಸ್ನಿ ಸ್ಟಾರ್ ಖರೀದಿಸಿದರೆ, ಡಿಜಿಟಲ್ ಹಕ್ಕನ್ನು ವಯಾಕಾಮ್ 18 ಖರೀದಿಸಿದೆ ಎಂದು ವರದಿಯಾಗಿದೆ.

ಮುಂದಿನ 5 ವರ್ಷಗಳಲ್ಲಿ ಒಟ್ಟು 410 ಐಪಿಎಲ್ ಪಂದ್ಯಗಳು ನಡೆಯಲಿದೆ. ಒಟ್ಟು ಮೊತ್ತ ಲೆಕ್ಕಹಾಕಿದರೆ ಐಪಿಎಲ್ ಪ್ರಸಾರ ಹಕ್ಕು ಪಡೆದ ಸಂಸ್ಥೆಗಳು ಪ್ರತಿ ಪಂದ್ಯಕ್ಕೆ ಬಿಸಿಸಿಐಗೆ 107.5 ಕೋಟಿ ರೂಪಾಯಿ ನೀಡಬೇಕು. ಸೋನಿ ಸಂಸ್ಥೆ ಟಿವಿಯಲ್ಲಿ ಐಪಿಎಲ್ ಪಂದ್ಯ ಪ್ರಸಾರ ಮಾಡಲು ಪ್ರತಿ ಪಂದ್ಯಕ್ಕೆ  57.5 ಕೋಟಿ ರೂಪಾಯಿ ಬಿಸಿಸಿಐಗೆ ನೀಡಬೇಕು. ಇನ್ನು ಡಿಜಿಟಲ್ ಹಕ್ಕು ಖರೀದಿಸಿದ ರಿಲಯನ್ಸ್ ಜಿಯೋ ಪ್ರತಿ ಪಂದ್ಯಕ್ಕೆ 48 ಕೋಟಿ ರೂಪಾಯಿ ನೀಡಬೇಕು.

IPL Media Rights: ರೇಸ್‌ನಿಂದ ಹಿಂದೆ ಸರಿದ ಅಮೆಜಾನ್

ಈ ಬಾರಿ ಎರಡು ದಿನ ಐಪಿಎಲ್ ಮಾಧ್ಯಮ ಹಕ್ಕು ಹರಾಜು ನಡೆದಿತ್ತು. ವಯಾಕಾಮ್ 18, ಡಿಸ್ನಿ ಸ್ಟಾರ್, ಸೋನಿ, ಝಿ ಸೇರಿದಂತೆ ಕೆಲ ಸಂಸ್ಥೆಗಳು ಐಪಿಎಲ್ ಮಾಧ್ಯಮ ಹಕ್ಕು ಹರಾಜಿನಲ್ಲಿ ಪಾಲ್ಗೊಂಡಿತ್ತು.2023-2027ರ ಅವಧಿಗೆ ಐಪಿಎಲ್‌ ಮಾಧ್ಯಮ ಪ್ರಸಾರ ಹಕ್ಕು ಹರಾಜಿನ ಮೊದಲ ದಿನವೇ ಪ್ರತಿ ಪಂದ್ಯದ ಮೌಲ್ಯ 100 ಕೋಟಿ ರು. ದಾಟಿತ್ತು. ಅಂತಿಮವಾಗಿ  107.5 ಕೋಟಿಗೆ ಅಂತಿಮವಾಗಿದೆ. 

ಈ ಬಾರಿ ಬಿಸಿಸಿಐ ನಾಲ್ಕು ವಿಭಾಗಗಳಲ್ಲಿ ಹರಾಜು ನಡೆಸಲಿದೆ. ಈ ಪೈಕಿ ಭಾನುವಾರ ನಡೆದ ಟೀವಿ ಹಕ್ಕು ಮತ್ತು ಡಿಜಿಟಲ್‌ ಹಕ್ಕು ಮೌಲ್ಯ ಒಟ್ಟು 42,000 ಕೋಟಿ ರು.ಗೆ ವರೆಗೂ ಮೌಲ್ಯ ಏರಿಕೆಯಾಗಿತ್ತು. ಈ ಎರಡೂ ವಿಭಾಗದ ಹಕ್ಕುಗಳ ಹರಾಜು ಸೋಮವಾರವೂ ನಡೆಯಿತು.  ಭಾನುವಾರದ ಹರಾಜಿನ ಮಾಹಿತಿಯಂತೆ ಟೀವಿಯಲ್ಲಿ ಪ್ರತಿ ಪಂದ್ಯದ ಪ್ರಸಾರಕ್ಕೆ 57 ಕೋಟಿ ರು., ಡಿಜಿಟಲ್‌ ಪ್ರಸಾರಕ್ಕೆ 48 ಕೋಟಿ ರು.(ಮೂಲಬೆಲೆ 33 ಕೋಟಿ ರು.) ಏರಿಕೆಯಾಗಿತ್ತು.

2018-2022ರ ಅವಧಿಗೆ 16,348 ಕೋಟಿ ರು.ಗೆ ಪ್ರಸಾರ ಹಕ್ಕು ಖರೀದಿಸಿದ್ದ ಸ್ಟಾರ್‌ ಇಂಡಿಯಾ, ಪ್ರತಿ ಪಂದ್ಯದ ಪ್ರಸಾರಕ್ಕೆ 54.5 ಕೋಟಿ ರು. ಪಾವತಿಸಿತ್ತು. ಈ ಬಾರಿ 5 ವರ್ಷಗಳ ಅವಧಿಗೆ(ಒಟ್ಟು 370 ಪಂದ್ಯಗಳು) ಬಿಸಿಸಿಐ 32,890 ಕೋಟಿ ರು. ಮೂಲಬೆಲೆ ನಿಗದಿ ಮಾಡಿತ್ತು.  

IPL ಪಂದ್ಯಗಳ ಸಂಖ್ಯೆ ಹೆಚ್ಚಳಕ್ಕೆ ಬಿಸಿಸಿಐ ಚಿಂತನೆ..!

ಸದ್ಯ ವಿಶ್ವದ ಅತಿ ದುಬಾರಿ ಕ್ರೀಡಾ ಲೀಗ್‌ ಎನ್ನುವ ಹಿರಿಮೆ ಅಮೆರಿಕದ ನ್ಯಾಷನಲ್‌ ಫುಟ್ಬಾಲ್‌ ಲೀಗ್‌ (ಎನ್‌ಎಫ್‌ಎಲ್‌)ಗೆ ಇದೆ. ಪ್ರತಿ ಎನ್‌ಎಫ್‌ಎಲ್‌ ಪಂದ್ಯದ ಮೌಲ್ಯ 134 ಕೋಟಿ ರೂಪಾಯಿ ಇದೆ. ಇದೀಗ ಐಪಿಎಲ್ ಎರಡನೇ ಅತೀ ದುಬಾರಿ ಮಾಧ್ಯಮ ಹಕ್ಕು ಹೊಂದಿರುವ ಟೂರ್ನಿ ಅನ್ನೋ ಹೆಗ್ಗಳಿಕೆಗೆ ಪಾತ್ರವಾಗಿದೆ.

click me!