IND vs SA ಕಾಲ್ಸೇನ್ ಅಬ್ಬರಕ್ಕೆ ತಲೆಬಾಗಿದ ಭಾರತ, 2ನೇ ಟಿ20ಯಲ್ಲಿ ಸೌತ್ ಆಫ್ರಿಕಾಗೆ ಗೆಲುವು!

By Suvarna NewsFirst Published Jun 12, 2022, 10:25 PM IST
Highlights
  • 2ನೇ ಟಿ20 ಪಂದ್ಯದಲ್ಲೂ ಮುಗ್ಗರಿಸಿದ ಭಾರತ
  • ಹೆನ್ರಿಚ್ ಕಾಲ್ಸೇನ್ ಹೋರಾಟಕ್ಕೆ ಭಾರತ ಕಕ್ಕಾಬಿಕ್ಕಿ
  • ಸೌತ್ ಆಫ್ರಿಕಾಗೆ 5 ವಿಕೆಟ್ ಗೆಲುವು

ಕಟಕ್(ಜೂ.12): ಸೌತ್ ಆಫ್ರಿಕಾ ವಿರುದ್ಧದ ಮೊದಲ ಪಂದ್ಯದ ಸೋಲಿನ ಬಳಿಕ ಎಚ್ಚೆತ್ತುಕೊಳ್ಳಬೇಕಿದ್ದ ಟೀಂ ಇಂಡಿಯಾ ಎರಡನೇ ಟಿ20 ಪಂದ್ಯದಲ್ಲೂ ಮುಗ್ಗರಿಸಿದೆ. ಹೆನ್ರಿಚ್ ಕಾಲ್ಸೇನ್ ಬ್ಯಾಟಿಂಗ್‌ಗೆ ಭಾರತದ ಗೆಲುವಿನ ಕನಸಿಗೆ ತಣ್ಣೀರೆರಚಿತು. ಸೌತ್ ಆಫ್ರಿಕಾ 4 ವಿಕೆಟ್ ಗೆಲುವು ದಾಖಲಿಸಿದೆ. ಇದರೊಂದಿಗೆ 5 ಪಂದ್ಯಗಳ ಸರಣಿಯಲ್ಲಿ 2-0 ಮುನ್ನಡೆ ಸಾಧಿಸಿದೆ.

ಸೌತ್ ಆಫ್ರಿಕಾ ಗೆಲುವಿಗೆ 149 ರನ್ ಟಾರ್ಗೆಟ್ ನೀಡಲಾಗಿತ್ತು. ಮೊದಲ ಟಿ20 ಪಂದ್ಯಕ್ಕೆ ಹೋಲಿಸಿದರೆ ಇದು ಸುಲಭ ಟಾರ್ಗೆಟ್. ಡ್ಯೂ ಫ್ಯಾಕ್ಟರ್ ಕಾರಣ ಚೇಸಿಂಗ್ ಮತ್ತಷ್ಟು ಸುಲಭ. ಆದರೆ ವೇಗಿ ಭುವನೇಶ್ವರ್ ಕುಮಾರ್ ದಾಳಿಗೆ ಸೌತ್ ಆಫ್ರಿಕಾ ಆರಂಭದಲ್ಲೇ ತತ್ತರಿಸಿತು. ಮೊದಲ ಓವರ್‌ನಲ್ಲೇ ರೀಜಾ ಹೆನ್ರಿಕ್ಸ್ ವಿಕೆಟ್ ಕಬಳಿಸಿ ಭುವಿ ಟೀಂ ಇಂಡಿಯಾಗೆ ಭರ್ಜರಿ ಮುನ್ನಡ ತಂದುಕೊಟ್ಟರು.

Latest Videos

ಸಮಂತಾಗೆ 'ಹಾಟಿ' ಎಂದ ಅನುಷ್ಕಾ, ಆದ್ರೆ, ಕೊಹ್ಲಿ ಕಾಲೆಳೆದ ನೆಟ್ಟಿಗರು!

ಡ್ವೇನ್ ಪ್ರೆಟೋರಿಯಸ್ ಹಾಗೂ ರಸಿ ವಂಡರ್ ಡಸೆನ್ ಬಹುಬೇಗನೆ ವಿಕೆಟ್ ಕೈಚೆಲ್ಲಿದರು. ಪ್ರಮುಖ 3 ವಿಕೆಟ್ ಕಬಳಿಸಿದ ಭುವನೇಶ್ವರ್ ಕುಮಾರ್ , ಸೌತ್ ಆಫ್ರಿಕಾ ತಂಡದ ಮೇಲೆ ಒತ್ತಡ ಹೇರಿದರು. ಪರಿಣಾಮ ಭಾರತ ಪಂದ್ಯದ ಮೇಲೆ ಹಿಡಿತ ಸಾಧಿಸಿತು.

ನಾಯಕ ತೆಂಬಾ ಬವುಮಾ ಹಾಗೂ ಹೆನ್ರಿಚ್ ಕಾಲ್ಸೇನ್ ಜೊತೆಯಾಟದಿಂದ ಸೌತ್ ಆಫ್ರಿಕಾ ಚೇತರಿಸಿಕೊಂಡಿತು. ಆದರೆ ಇವರಿಬ್ಬರ ಜೊತೆಯಾಟಕ್ಕೆ ಯಜುವೇಂದ್ರ ಚಹಾಲ್ ಬ್ರೇಕ್ ಹಾಕಿದರು. ತೆಂಬಾ ಬವುಮಾ 35 ರನ್ ಸಿಡಿಸಿ ಔಟಾದರು. 

ಹೆನ್ರಿಚ್ ಕಾಲ್ಸೆನ್ ಬ್ಯಾಟಿಂಗ್‌ನಿಂದ ಸೌತ್ ಆಫ್ರಿಕಾ ದಿಟ್ಟ ಹೋರಾಟ ನೀಡಿತು. ಕಾಲ್ಸೆನ್ ಹಾಫ್ ಸೆಂಚುರಿ ಸಿಡಿಸಿ ಮಿಂಚಿದರು. ಕಾಲ್ಸೇನ್ ಹೋರಾಟ ಟೀಂ ಇಂಡಿಯಾ ತಲೆನೋವು ಹೆಚ್ಚಿಸಿತು. ವಿಕೆಟ್ ಕಬಳಿಸಲು ಸಾಧ್ಯವಾಗದೆ, ರನ್ ನಿಯಂತ್ರಿಸಲು ಸಾಧ್ಯವಾಗದೆ ಭಾರತ ಪರದಾಡಿತು.

ಕಾಲ್ಸೇನ್‌ಗೆ ಡೇವಿಡ್ ಮಿಲ್ಲರ್ ಕೂಡ ಉತ್ತಮ ಸಾಥ್ ನೀಡಿದರು. ಇತ್ತ ಸ್ಫೋಟಕ ಬ್ಯಾಟಿಂಗ್ ಪ್ರದರ್ಶನ ನೀಡಿದ ಕಾಲ್ಸೇನ್ 81 ರನ್ ಸಿಡಿಸಿ ಔಟಾದರು. ಇದರ ಬೆನ್ನಲ್ಲೇ ವೇಯ್ನ ಪಾರ್ನೆಲ್ ವಿಕೆಟ್ ಕಳೆದುಕೊಂಡಿತು. ಆದರೆ ಸೌತ್ ಆಫ್ರಿಕಾ ಗೆಲುವಿಗೆ ಅಂತಿಮ 12 ಎಸೆತದಲ್ಲಿ ಕೇವಲ 2 ರನ್ ಅವಶ್ಯಕತೆ ಇತ್ತು. ಹೀಗಾಗಿ ವಿಕೆಟ್ ಕಳೆದುಕೊಂಡರು ಸೌತ್ ಆಫ್ರಿಕಾ ತಂಡದ ಮೇಲೆ ಯಾವ ಪರಿಣಾಮವೂ ಬೀರಲಿಲ್ಲ. ಡೇವಿಡ್ ಮಿಲ್ಲರ್ ಅಜೇಯ 20 ರನ್ ಸಿಡಿಸಿದರು. ಈ ಮೂಲಕ ಸೌತ್ ಆಫ್ರಿಕಾ 18.2 ಓವರ್‌ಗಳಲ್ಲಿ 6 ವಿಕೆಟ್ ನಷ್ಟಕ್ಕೆ ಗುರಿ ತಲುಪಿತು.

ಇಂಗ್ಲೆಂಡ್ ಮಾಜಿ ನಾಯಕ ಜೋ ರೂಟ್ ಬಳಿ ಮ್ಯಾಜಿಕ್ ಬ್ಯಾಟ್..! ವಿಡಿಯೋ ವೈರಲ್‌

ಭಾರತ ಇನ್ನಿಂಗ್ಸ್
ಮೊದಲು ಬ್ಯಾಟಿಂಗ್ ಮಾಡಿದ ಟೀಂ ಇಂಡಿಯಾ 148ರನ್ ಸಿಡಿಸಿತು. ಇಶಾನ್ ಕಿಶನ್ 34 ರನ್ ಸಿಡಿಸಿದರೆ, ಶ್ರೇಯಸ್ ಅಯ್ಯರ್ 40 ರನ್ ಕಾಣಿಕೆ ನೀಡಿದ್ದರು. ಇನ್ನು ಅಂತಿಮ ಹಂತದಲ್ಲಿ ದಿನೇಶ್ ಕಾರ್ತಿಕ್ ಅಜೇಯ 30 ರನ್ ಸಿಡಿಸಿದರೆ, ಹರ್ಷಲ್ ಪಟೇಲ್ ಅಜೇಯ 12 ರನ್ ಸಿಡಿಸಿದರು. ಆದರೆ ರುತುರಾಜ್ ಗಾಯಕ್ವಾಡ್, ನಾಯಕ ರಿಷಬ್ ಪಂತ್, ಹಾರ್ದಿಕ್ ಪಾಂಡ್ಯ, ಆಕ್ಸರ್ ಪಟೇಲ್ ಅಬ್ಬರಿಸಲಿಲ್ಲ.

click me!