IPL 2022 ಕೋಲ್ಕತಾ ವಿರುದ್ಧ ಟಾಸ್ ಗೆದ್ದ ಲಖನೌ, ಮಹತ್ವದ 3 ಬದಲಾವಣೆ!

Published : May 18, 2022, 07:10 PM ISTUpdated : May 18, 2022, 07:33 PM IST
IPL 2022 ಕೋಲ್ಕತಾ ವಿರುದ್ಧ ಟಾಸ್ ಗೆದ್ದ ಲಖನೌ, ಮಹತ್ವದ 3 ಬದಲಾವಣೆ!

ಸಾರಾಂಶ

ಕೋಲ್ಕತಾ ನೈಟ್ ರೈಡರ್ಸ್ ತಂಡದಲ್ಲಿ 1 ಬದಲಾವಣೆ ಲಖನೌ ತಂಡದಲ್ಲಿ ಪ್ರಮುಖ 3 ಬದಲಾವಣೆ ಮಾಡಲಾಗಿದೆ ಟಾಸ್ ಗೆದ್ದ ಲಖನೌ ಬ್ಯಾಟಿಂಗ್ ಆಯ್ಕೆ

ಮುಂಬೈ(ಮೇ.18): ಪ್ಲೇ ಆಫ್ ಪ್ರೇವಶ ಖಚಿತ ಪಡಿಸಿಕೊಳ್ಳುವ ತವಕದಲ್ಲಿರುವ ಲಖನೌ ಸೂಪರ್ ಜೈಂಟ್ಸ್ ಇಂದು ಕೋಲ್ಕತಾ ನೈಟ್ ರೈಡರ್ಸ್ ವಿರುದ್ಧ ಹೋರಾಟ ನಡೆಸುತ್ತಿದೆ. ಈ ಪಂದ್ಯದಲ್ಲಿ ಟಾಸ್ ಗೆದ್ದಿರುವ ಲಖನೌ ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿದೆ.

ಲಖನೌ ತಂಡದಲ್ಲಿ 3 ಬದಲಾವಣ ಮಾಡಲಾಗಿದೆ. ಕ್ರುನಾಲ್ ಪಾಂಡ್ಯ ಇಂಜುರಿ ಕಾರಣ ಹೊರಗುಳಿದಿದ್ದಾರೆ. ಚಮೀರಾ ಹಾಗೂ ಆಯುಷ್ ಬದೋನಿ ಕೂಡ ತಂಡದಿಂದ ಹೊರಗುಳಿದಿದ್ದಾರೆ. ಇರ ಬದಲು ಮನ್ ವೋಹ್ರಾ, ಲಿವಿಸ್ ಹಾಗೂ ಗೌತಮ್ ತಂಡ ಸೇರಿಕೊಂಡಿದ್ದಾರೆ.

ಸೈಮಂಡ್ಸ್ ನಿಧನಕ್ಕೆ ಲಕ್ಷ್ಮಣ್ ಸಂತಾಪ, ಟ್ವೀಟ್ ಅಳಿಸಲು ವಿವಿಎಸ್‌ಗೆ ಫ್ಯಾನ್ಸ್‌ ಆಗ್ರಹ..!

ಕೋಲ್ಕತಾ ನೈಟ್ ರೈಡರ್ಸ್  ತಂಡದಲ್ಲಿ ಒಂದು ಬದಲಾವಣೆ ಮಾಡಲಾಗಿದೆ. ಅಜಿಂಕ್ಯ ರಹಾನೆ ಬದಲು ಅಭಿಜಿತ್ ತೋಮರ್ ತಂಡ ಸೇರಿಕೊಂಡಿದ್ದಾರೆ. ಅಜಿಂಕ್ಯ ರಹಾನೆ ಗಾಯಗೊಂಡಿರುವ ಕಾರಣ ಪಂದ್ಯಕ್ಕೆ ಅಲಭ್ಯರಾಗಿದ್ದಾರೆ. ರಹಾನೆ ಪ್ರದರ್ಶನ ಕೂಡ ತಂಡಕ್ಕೆ ತಲೆನೋವಾಗಿದೆ. ಸ್ಟಾರ್ ಆಟಗಾರರ ಕಳಪೆ ಪ್ರದರ್ಶನ ತಂಡಕ್ಕೆ ಭಾರಿ ಹಿನ್ನಡೆ ತಂದಿದೆ.

ಕೋಲ್ಕತಾ ನೈಟ್ ರೈಡರ್ಸ್ ಪ್ಲೇಯಿಂಗ್ 11
ವೆಂಕಟೇಶ್ ಅಯ್ಯರ್, ಅಭಿಜಿತ್ ತೋಮರ್, ಶ್ರೇಯಸ್ ಅಯ್ಯರ್(ನಾಯಕ), ನಿತೀಶ್ ರಾಣಾ, ಸ್ಯಾಮ್ ಬಿಲ್ಲಿಗಂ್ಸ್, ರಿಂಕು ಸಿಂಗ್, ಆ್ಯಂಡ್ರೆ ರಸೆಲ್, ಸುನಿಲ್ ನರೈನ್, ಉಮೇಶ್ ಯಾದವ್, ಟಿಮ್ ಸೌಥಿ, ವರುಣ್ ಚಕ್ರವರ್ತಿ

ಲಖನೌ ಸೂಪರ್ ಜೈಂಟ್ಸ್ ಪ್ಲೇಯಿಂಗ್ 11
ಕ್ವಿಂಟನ್ ಡಿಕಾಕ್, ಕೆಎಲ್ ರಾಹುಲ್, ಇವಿನ್ ಲಿವಿಸ್, ದೀಪಕ್ ಹೂಡ, ಮನನ್ ವೋಹ್ರಾ, ಮಾರ್ಕಸ್ ಸ್ಟೋಯ್ನಿಸ್, ಜೇಸನ್ ಹೋಲ್ಡರ್, ಕೆ ಗೌತಮ್, ಮೊಹ್ಸಿನ್ ಖಾನ್, ಅವೇಶ್ ಖಾನ್, ರವಿ ಬಿಶ್ನೋಯ್

15ನೇ ಆವೃತ್ತಿ ಐಪಿಎಲ್‌ನಲ್ಲಿ ಪ್ಲೇ-ಆಫ್‌ ಸ್ಥಾನ ಖಚಿತಪಡಿಸಿಕೊಳ್ಳುವ ತವಕದಲ್ಲಿರುವ ಲಖನೌ ಸೂಪರ್‌ ಜೈಂಟ್ಸ್‌,ಕೆಕೆಆರ್ ವಿರುದ್ಧ ಗೆಲುವಿನ ವಿಶ್ವಾಸದಲ್ಲಿದೆ. ಈ ಮೂಲಕ ಸ್ಥಾನ ಭದ್ರಪಡಿಸಿಕೊಳ್ಳಲು ಹವಣಿಸುತ್ತಿದೆ. 

ಕೆ.ಎಲ್‌.ರಾಹುಲ್‌ ನಾಯಕತ್ವದ ಲಖನೌ ಆಡಿದ 13 ಪಂದ್ಯಗಳಲ್ಲಿ 8ರಲ್ಲಿ ಗೆದ್ದಿದ್ದು, 5 ಪಂದ್ಯಗಳನ್ನು ಸೋತಿದೆ. ಈ ಮೂಲಕ  ಅಂಕಪಟ್ಟಿಯಲ್ಲಿ 3ನೇ ಸ್ಥಾನದಲ್ಲಿದೆ. ಇನ್ನೊಂದು ಗೆಲುವು ತಂಡವನ್ನು ಪ್ಲೇ-ಆಫ್‌ಗೆ ತಲುಪಿಸುವ ಜೊತೆಗೆ ಅಂಕ ಪಟ್ಟಿಯಲ್ಲಿ ಅಗ್ರ 2ರಲ್ಲಿ ಸ್ಥಾನ ಖಚಿತವಾಗಲಿದೆ.  

IPL 2022 ಮುಂಬೈ ವಿರುದ್ಧ 3 ರನ್ ರೋಚಕ ಗೆಲುವು ಕಂಡ ಹೈದರಾಬಾದ್!

ಅಜಿಂಕ್ಯಾ ರಹಾನೆ ಐಪಿಎಲ್‌ನಿಂದ ಹೊರಕ್ಕೆ
ಇಂದಿನ ಪಂದ್ಯಕ್ಕೆ ಅಜಿಂಕ್ಯ ರಹಾನ ಅಲಭ್ಯರಾಗಿದ್ದಾರೆ. ಹೈದರಾಬಾದ್‌ ವಿರುದ್ಧದ ಪಂದ್ಯದ ವೇಳೆ ಸ್ನಾಯುಸೆಳೆತಕ್ಕೆ ಒಳಗಾಗಿರುವ ಕೋಲ್ಕತಾ ಬ್ಯಾಟರ್‌ ಅಜಿಂಕ್ಯಾ ರಹಾನೆ 15ನೇ ಆವೃತ್ತಿ ಐಪಿಎಲ್‌ನಿಂದ ಹೊರಬಿದ್ದಿದ್ದಾರೆ. ಅವರು ಶೀಘ್ರದಲ್ಲೇ ಬೆಂಗಳೂರಿನಲ್ಲಿರುವ ರಾಷ್ಟ್ರೀಯ ಕ್ರಿಕೆಟ್‌ ಅಕಾಡೆಮಿ(ಎನ್‌ಸಿಎ)ಗೆ ತೆರಳಲಿದ್ದು, ನಾಲ್ಕು ವಾರಗಳ ಕಾಲ ಆಟದಿಂದ ದೂರ ಇರಲಿದ್ದಾರೆ. ಮುಂದಿನ ಇಂಗ್ಲೆಂಡ್‌ ಟೆಸ್ಟ್‌ ಸರಣಿಗೂ ಅಲಭ್ಯರಾಗಲಿದ್ದಾರೆ ಎಂದು ತಿಳಿದುಬಂದಿದೆ. ಹರಾಜಿನಲ್ಲಿ 1 ಕೋಟಿ ರು.ಗೆ ಕೆಕೆಆರ್‌ ಪಾಲಾಗಿದ್ದ ರಹಾನೆ 7 ಪಂದ್ಯಗಳಲ್ಲಿ 19ರ ಸರಾಸರಿಯಲ್ಲಿ ಕೇವಲ 133 ರನ್‌ ಗಳಿಸಿದ್ದು, ಮುಂದಿನ ಆವೃತ್ತಿಗೆ ಅವರನ್ನು ತಂಡದಿಂದ ಕೈಬಿಡುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ.

PREV

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ಇಂದಿನಿಂದ ಭಾರತ-ದಕ್ಷಿಣ ಆಫ್ರಿಕಾ ಟಿ20 ಕದನ; ಭಾರತಕ್ಕಿದೆ ಬಿಗ್ ಚಾಲೆಂಜ್!
One8 ಸ್ಪೋರ್ಟ್ಸ್ ಬ್ರ್ಯಾಂಡ್ ಮಾರಾಟಕ್ಕೆ ಮುಂದಾದ ಕೊಹ್ಲಿ, 40 ಕೋಟಿ ಹೂಡಿಕೆ ಪ್ಲಾನ್