IPL Auction 2024: ಯಾರ ಮೇಲೆ ಕಣ್ಣಿಟ್ಟಿದೆ RCB..? ಈ ಸಲವಾದ್ರೂ ಕನ್ನಡಿಗರು ಆರ್ಸಿಬಿ ಸೇರಿಕೊಳ್ತಾರಾ..?

Published : Dec 19, 2023, 12:48 PM IST
IPL Auction 2024: ಯಾರ ಮೇಲೆ ಕಣ್ಣಿಟ್ಟಿದೆ RCB..? ಈ ಸಲವಾದ್ರೂ ಕನ್ನಡಿಗರು ಆರ್ಸಿಬಿ ಸೇರಿಕೊಳ್ತಾರಾ..?

ಸಾರಾಂಶ

RCB ಫ್ರಾಂಚೈಸಿ ಬಳಿ 23.25 ಕೋಟಿ ಹಣವಿದೆ. ಇದರಲ್ಲಿ 6 ಭಾರತೀಯರು, ಮೂವರು ವಿದೇಶಿಯರು ಸೇರಿ ಒಟ್ಟು 9 ಆಟಗಾರರನ್ನ ಖರೀದಿಸಬೇಕು. ಆದ್ರೆ ಈ 9 ಪ್ಲೇಯರ್ಗಳನ್ನ ಅಳೆದು ತೂಗಿ ಬಿಡ್ ಮಾಡ್ಬೇಕು. ಅದಕ್ಕೆ ಕಾರಣ ಸದ್ಯದಲ್ಲಿರುವ ಆಟಗಾರರು. ಟೀಮ್ನಲ್ಲಿ ಬ್ಯಾಟರ್ಗಳ ದಂಡೇ ಇದೆ. ಹಾಗಾಗಿ ಈಗ ರೆಡ್ ಆರ್ಮಿಗೆ ಬೇಕಿರುವುದು ಬೌಲರ್ಸ್.

ಬೆಂಗಳೂರು(ಡಿ.19): ಇವತ್ತಿನ ಐಪಿಎಲ್‌ನಲ್ಲಿ  ಆರ್‌ಸಿಬಿ ತಂಡ ಆ ಆಟಗಾರನ ಮೇಲೆ ಕಣ್ಣಿಟ್ಟಿದೆ. ಆತನನ್ನ ಖರೀದಿಸಿದ್ರೆ ಈ ಸಲ ಕಪ್ ನಮ್ದೇ ಅನ್ನೋದು ಫ್ರಾಂಚೈಸಿ ಲೆಕ್ಕಾಚಾರ. ಹಾಗಾದ್ರೆ ಆ ಆಟಗಾರ ಯಾರು..? ರೆಡ್ ಆರ್ಮಿ ಪಡೆ ಯಾರನ್ನೆಲ್ಲಾ ಖರೀದಿಸಬಹುದು. ಈ ಎಲ್ಲಾ ಡಿಟೇಲ್ಸ್ ಇಲ್ಲಿದೆ ನೋಡಿ.

RCB 16 ಸೀಸನ್ನಿಂದ IPL ಆಡುತ್ತಿದ್ದರೂ ಒಮ್ಮೆಯೂ ಚಾಂಪಿಯನ್ ಆಗಿಲ್ಲ. ಕಲರ್ ಫುಲ್ ಟೂರ್ನಿಯ ನತದೃಷ್ಟ ತಂಡ ಅಂದ್ರೆ ಅದು ರೆಡ್ ಆರ್ಮಿ ಪಡೆ. 3 ಸಲ ಫೈನಲ್‌ಗೆ ಬಂದ್ರೂ ಕಪ್ ಹಿಡಿಯಲಾಗಲಿಲ್ಲ. ಈ ಸಲ ಕಪ್ ನಮ್ದೇ ಅಂತ ಹೇಳಿದ್ದೇ ಬಂತು. ಕಪ್ ಮಾತ್ರ ನಮ್ಮದಾಗಲಿಲ್ಲ. 2024ರ ಐಪಿಎಲ್‌ನಲ್ಲಿ ಚಾಂಪಿಯನ್ ಆಗೋ ಅವಕಾಶ RCBಗೆ ಇದೆ. ಆದ್ರೆ ಅದಕ್ಕೂ ಮುನ್ನ ಇಂದು ನಡೆಯೋ ಆಟಗಾರರ ಮಿನಿ ಹರಾಜಿನಲ್ಲಿ ಈ ಪ್ಲೇಯರ್ಗಳನ್ನ ಖರೀದಿಸಬೇಕು. ಆಗ ಮಾತ್ರ RCB ಚಾಂಪಿಯನ್ ಆಗಲು ಸಾಧ್ಯ.

RCB ಫ್ರಾಂಚೈಸಿ ಬಳಿ 23.25 ಕೋಟಿ ಹಣವಿದೆ. ಇದರಲ್ಲಿ 6 ಭಾರತೀಯರು, ಮೂವರು ವಿದೇಶಿಯರು ಸೇರಿ ಒಟ್ಟು 9 ಆಟಗಾರರನ್ನ ಖರೀದಿಸಬೇಕು. ಆದ್ರೆ ಈ 9 ಪ್ಲೇಯರ್ಗಳನ್ನ ಅಳೆದು ತೂಗಿ ಬಿಡ್ ಮಾಡ್ಬೇಕು. ಅದಕ್ಕೆ ಕಾರಣ ಸದ್ಯದಲ್ಲಿರುವ ಆಟಗಾರರು. ಟೀಮ್ನಲ್ಲಿ ಬ್ಯಾಟರ್ಗಳ ದಂಡೇ ಇದೆ. ಹಾಗಾಗಿ ಈಗ ರೆಡ್ ಆರ್ಮಿಗೆ ಬೇಕಿರುವುದು ಬೌಲರ್ಸ್. ಅದರ ಜೊತೆ ಇಂಡಿಯನ್ ಪ್ಲೇಯರ್ಸ್. ಈ ಇಬ್ಬರ ಮೇಲೆ ಇಂದು RCB ಫ್ರಾಂಚೈಸಿ ಫೋಕಸ್ ಮಾಡಲಿದ್ದಾರೆ.

IPL Auction: 10 ಫ್ರಾಂಚೈಸಿಗಳ ಮುಂದಿರುವ ಗುರಿ ಏನು? ಆರ್‌ಸಿಬಿ ಟಾರ್ಗೆಟ್‌ ಏನಿರಬಹುದು?

ಶಾರ್ದೂಲ್ ಠಾಕೂರ್ ಆರ್ಸಿಬಿ ಪಾಲಾಗ್ತಾರಾ..?

ಬೌಲರ್ಸ್ ವಿಷ್ಯ ಹೇಳೋಕು ಮುನ್ನ RCBಗೆ ಮುಖ್ಯವಾಗಿ ಇಂಡಿಯನ್ ಪ್ಲೇಯರ್ಸ್ ಬೇಕಿದೆ. ವಿರಾಟ್ ಕೊಹ್ಲಿ, ಮೊಹಮ್ಮದ್ ಸಿರಾಜ್ ಬಿಟ್ರೆ ರೆಡ್ ಆರ್ಮಿ ಪಡೆಯಲ್ಲಿ ಹೇಳಿಕೊಳ್ಳುವಂತಹ ಭಾರತೀಯ ಆಟಗಾರನಿಲ್ಲ. ಟೀಂ ಇಂಡಿಯಾ ಆಲ್ರೌಂಡರ್ ಶಾರ್ದೂಲ್ ಠಾಕೂರ್ ಬಿಡ್ನಲ್ಲಿದ್ದಾರೆ. ನಮಗೂ ಬೌಲರ್ಸ್ ಬೇಕು. ಆಲ್ರೌಂಡರ್ಸ್ ಸಿಕ್ಕಿದ್ರೆ ಬೋನಸ್. ಹಾಗಾಗಿ ಇಂದು ಠಾಕೂರ್ನನ್ನ ತಮ್ಮತ್ತ ಸೆಳೆಯಲು RCB ಫ್ರಾಂಚೈಸಿ, ಇನ್ನಿಲ್ಲದ ಕಸರತ್ತು ನಡೆಸಲಿದ್ದಾರೆ.

ಈ ಸಲವಾದ್ರೂ ಕನ್ನಡಿಗರು ಆರ್ಸಿಬಿ ಸೇರಿಕೊಳ್ತಾರಾ..?

ವೇಗಿ ಹರ್ಷಲ್ ಪಟೇಲ್ರನ್ನ 10,75 ಕೋಟಿ ಕೊಟ್ಟು ಆರ್ಸಿಬಿ ಖರೀದಿಸಿತ್ತು. ಈ ಮೊತ್ತ ಯಾಕೋ ಜಾಸ್ತಿ ಆಯ್ತು ಅಂತ ಕಾಣುತ್ತದೆ. ಹಾಗಾಗಿ ಉತ್ತಮ ಪ್ರದರ್ಶನ ನೀಡಿದ್ರೂ ಹರ್ಷಲ್‌ನನ್ನ ಬಿಡ್‌ಗೆ ಬಿಟ್ಟಿದೆ. ಇದನ್ನ ನೋಡುತ್ತಿದ್ದರೆ, ಕಡಿಮೆ ಮೊತ್ತಕ್ಕೆ ಇಂದು ಮತ್ತೆ ಖರೀದಿಸುವ ಸಾಧ್ಯತೆ ಇದೆ. ಭಾರತೀಯ ಯುವ ಬೌಲರ್ಗಳಾದ ಚೇತನ್ ಸಕಾರಿಯಾ, ಶಿವಂ ಮಾವಿ, ಜೈದೇವ್ ಉನಾಡ್ಕತ್ ಬಿಡ್ನಲ್ಲಿದ್ದು ಇವರಲ್ಲಿ ಒಬ್ಬರನ್ನ ಖರೀದಿಸುವ ಪ್ಲಾನ್ ಸಹ ಆರ್ಸಿಬಿ ಮಾಡಿದೆ.

ಇಂದು ಐಪಿಎಲ್ ಆಟಗಾರರ ಹರಾಜು: ನೀವು ತಿಳಿದಿರಲೇಬೇಕಾದ ಅಗತ್ಯ ಮಾಹಿತಿಗಳಿವು

ಕನ್ನಡಿಗ ಮನೀಶ್ ಪಾಂಡೆ ಸಹ ಇಂದು ಹರಾಜಿನಲ್ಲಿದ್ದಾರೆ. ಮೀಸಲು ಬ್ಯಾಟರ್ ಸ್ಥಾನಕ್ಕೆ ಅವರನ್ನ ಖರೀದಿಸಿದ್ರೂ ಆಶ್ಚರ್ಯವಿಲ್ಲ. ಸ್ಪಿನ್ನರ್ ಶ್ರೇಯಸ್ ಗೋಪಾಲ್ ಮೇಲೆ ರೆಡ್ ಆರ್ಮಿ ಕಣ್ಣಿಟ್ಟಿದೆ.

ಮಿಚೆಲ್ ಸ್ಟಾರ್ಕ್ ಮೇಲೆ ಕಣ್ಣಿಟ್ಟಿದ್ಯಾ ಆರ್ಸಿಬಿ..?

ಆಸ್ಟ್ರೇಲಿಯಾದ ವೇಗಿ ಮಿಚೆಲ್ ಸ್ಟಾರ್ಕ್, ಈ ಸಲ ಐಪಿಎಲ್ ಬಿಡ್ನಲ್ಲಿದ್ದಾರೆ. ಈ ಮುಂಚೆ RCB ಟೀಮ್ನಲ್ಲೇ ಇದ್ದರೂ ಹೆಚ್ಚು ಪಂದ್ಯಗಳನ್ನಾಡಿಲ್ಲ. ಇಂಜುರಿಯಿಂದ ಐಪಿಎಲ್ ಆಡಿದಕ್ಕಿಂತ ಹೊರಗುಳಿದಿದ್ದೇ ಜಾಸ್ತಿ. ಈ ಸಲ ಅವರನ್ನ ಖರೀದಿಸಿದ್ರೆ ಬೌಲಿಂಗ್ ಸ್ಟ್ರಾಂಗ್ ಆಗುತ್ತೆ ಅನ್ನೋ ಲೆಕ್ಕಾಚಾರ ಹಾಕಿದೆ RCB. ಒಟ್ನಲ್ಲಿ ಇಂದು RCB ಯಾರನ್ನೆಲ್ಲಾ ಖರೀದಿಸುತ್ತೆ ಅನ್ನೋದ್ರ ಮೇಲೆ ಅದರ ಸ್ಟ್ರೆಂಥ್ ಅಂಡ್ ವೀಕ್ನೆಸ್ ಗೊತ್ತಾಗಲಿದೆ.

ಸ್ಪೋರ್ಟ್ಸ್ ಬ್ಯೂರೋ, ಏಷ್ಯಾನೆಟ್ ಸುವರ್ಣ ನ್ಯೂಸ್
 

PREV

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ಸಂಜು ಸ್ಯಾಮ್ಸನ್ ನನ್ನ ಅಣ್ಣನಿದ್ದಂತೆ; ಇಬ್ಬರ ಪೈಪೋಟಿ ಬಗ್ಗೆ ಮನಬಿಚ್ಚಿ ಮಾತಾಡಿದ ಜಿತೇಶ್ ಶರ್ಮಾ
ದಕ್ಷಿಣ ಆಫ್ರಿಕಾ ಎದುರು ಗೆದ್ದರೂ ನಿಂತಿಲ್ಲ ಚಿಂತೆ: 2ನೇ ಟಿ20ಗೆ ಭಾರತ ತಂಡದಲ್ಲಿ ಬದಲಾವಣೆ?