IPL Auction ಡೆಲ್ಲಿ ಕ್ಯಾಪಿಟಲ್ಸ್ ಲಕ್ ಬದಲಿಸ್ತಾರಾ ಮುಕೇಶ್ ಕುಮಾರ್, ಮನೀಶ್ ಪಾಂಡೆ?

By Naveen KodaseFirst Published Dec 24, 2022, 2:14 PM IST
Highlights

ಐಪಿಎಲ್‌ ಮಿನಿ ಹರಾಜಿನಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ಪಾಲಾದ ಮುಕೇಶ್ ಕುಮಾರ್, ಮನೀಶ್ ಪಾಂಡೆ
ಕಳೆದ ಆವೃತ್ತಿಯ ಐಪಿಎಲ್ ಟೂರ್ನಿಯಲ್ಲಿ5ನೇ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡಿದ್ದ ಡೆಲ್ಲಿ ಕ್ಯಾಪಿಟಲ್ಸ್
ಮಿನಿ ಹರಾಜಿನಲ್ಲಿ 5 ಆಟಗಾರರನ್ನು ಖರೀದಿಸಿದ ಡೆಲ್ಲಿ

ಕೊಚ್ಚಿ(ಡಿ.24): ಚೊಚ್ಚಲ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯಿಂದಲೂ ಕಣಕ್ಕಿಳಿಯುತ್ತಾ ಬಂದಿರುವ ಡೆಲ್ಲಿ ಕ್ಯಾಪಿಟಲ್ಸ್ ತಂಡವು ಕಳೆದ 15 ಆವೃತ್ತಿಗಳಿಂದಲೂ ಕಪ್‌ ಗೆಲ್ಲುವ ಕನಸು ಇನ್ನೂ ಕನಸಾಗಿಯೇ ಉಳಿದಿದೆ. ಕಳೆದ ಆವೃತ್ತಿಯ ಐಪಿಎಲ್ ಟೂರ್ನಿಯಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ತಂಡವು ಐದನೇ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡಿತ್ತು. ಇದೀಗ ಮಿನಿ ಹರಾಜಿನಲ್ಲಿ ದೇಶಿ ಪ್ರತಿಭೆ ಮುಕೇಶ್ ಕುಮಾರ್ ಹಾಗೂ ಮನೀಶ್ ಪಾಂಡೆ ಅವರನ್ನು ತನ್ನ ತೆಕ್ಕೆಗೆ ಸೆಳೆದುಕೊಳ್ಳುವಲ್ಲಿ ಯಶಸ್ವಿಯಾಗಿದೆ. ಮಿನಿ ಹರಾಜಿನಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ಫ್ರಾಂಚೈಸಿಯು ಐವರು ಆಟಗಾರರನ್ನು ಖರೀದಿಸುವಲ್ಲಿ ಯಶಸ್ವಿಯಾಗಿದೆ.

ದೇಶಿ ಮೂಲದ ಪ್ರತಿಭಾನ್ವಿತ ವೇಗಿ ಮುಕೇಶ್ ಕುಮಾರ್ ಅವರನ್ನು ಡೆಲ್ಲಿ ಕ್ಯಾಪಿಟಲ್ಸ್ ಫ್ರಾಂಚೈಸಿಯು 5.50 ಕೋಟಿ ರುಪಾಯಿ ನೀಡಿ ಖರೀದಿಸಿದೆ. ಇದಷ್ಟೇ ಅಲ್ಲದೇ ದಕ್ಷಿಣ ಆಫ್ರಿಕಾದ ಬ್ಯಾಟರ್ ರಿಲೇ ರೂಸೌ 4.60 ಕೋಟಿ ರುಪಾಯಿ ಹಾಗೂ ಕನ್ನಡಿಗ ಮನೀಶ್ ಪಾಂಡೆ ಅವರನ್ನು 2.40 ಕೋಟಿ ರುಪಾಯಿ ನೀಡಿ ಖರೀದಿಸುವಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ತಂಡವು ಯಶಸ್ವಿಯಾಗಿದೆ.
 
ಮಿನಿ ಹರಾಜಿನಲ್ಲಿ ಡೆಲ್ಲಿ ಕ್ಯಾಪಿಟಲ್ಸ್‌ ತಂಡವು ಖರೀದಿಸಿದ ಆಟಗಾರರ ವಿವರ ಹೀಗಿದೆ ನೋಡಿ

* ಮುಕೇಶ್ ಕುಮಾರ್ - ಬೌಲರ್ - 5.50 ಕೋಟಿ ರುಪಾಯಿ
* ರಿಲೇ ರೂಸೌ - ಬ್ಯಾಟರ್ - 4.60 ಕೋಟಿ ರುಪಾಯಿ
* ಮನೀಶ್ ಪಾಂಡೆ - ಬ್ಯಾಟರ್ - 2.40 ಕೋಟಿ ರುಪಾಯಿ
* ಫಿಲ್ ಸಾಲ್ಟ್ - ವಿಕೆಟ್ ಕೀಪರ್ - 2 ಕೋಟಿ ರುಪಾಯಿ
* ಇಶಾಂತ್ ಶರ್ಮಾ - ಬೌಲರ್ - 50 ಲಕ್ಷ ರುಪಾಯಿ

ಆಟಗಾರರ ರೀಟೈನ್‌ ಬಳಿಕ, ಮಿನಿ ಹರಾಜಿಗೂ ಮುನ್ನ ಡೆಲ್ಲಿ ಕ್ಯಾಪಿಟಲ್ಸ್ ತಂಡ ಹೀಗಿತ್ತು ನೋಡಿ:

ರಿಷಬ್ ಪಂತ್(ನಾಯಕ), ಡೇವಿಡ್ ವಾರ್ನರ್, ಪೃಥ್ವಿ ಶಾ, ರಿಪಲ್ ಪಟೇಲ್, ರೋವ್ಮನ್ ಪೊವೆಲ್, ಸರ್ಫರಾಜ್ ಖಾನ್, ಯಶ್ ಧುಲ್, ಮಿಚೆಲ್ ಮಾರ್ಶ್, ಲಲಿತ್ ಯಾದವ್, ಅಕ್ಸರ್ ಪಟೇಲ್, ಅನ್ರಿಚ್ ನೋರ್ಜೆ, ಚೇತನ್ ಸಕಾರಿಯಾ, ಕಮಲೇಶ್ ನಾಗರಕೋಟಿ, ಖಲೀಲ್ ಅಹಮ್ಮದ್, ಲುಂಗಿ ಎನ್‌ಗಿಡಿ, ಮುಸ್ತಾಫಿಜುರ್ ರಹಮಾನ್, ಅಮನ್ ಖಾನ್, ಕುಲ್ದೀಪ್ ಯಾದವ್, ಪ್ರವೀಣ್ ದುಬೆ, ವಿಕಿ ಒಸ್ಟ್‌ವಾಲ್

IPL Retention ಐವರ ಬಿಡುಗಡೆ ಮಾಡಿ, ಕನ್ನಡಿಗನ ಉಳಿಸಿಕೊಂಡ ಡೆಲ್ಲಿ ಕ್ಯಾಪಿಟಲ್ಸ್!

ಟ್ರೇಡಿಂಗ್ ಮೂಲಕ ಖರೀದಿಸಿದ ಆಟಗಾರರ ಪಟ್ಟಿ
ಅಮನ್ ಖಾನ್.

ಡೆಲ್ಲಿ ಕ್ಯಾಪಿಟಲ್ಸ್ ತಂಡದಲ್ಲಿ ಡೇವಿಡ್ ವಾರ್ನರ್. ಪೃಥ್ವಿ ಶಾ, ಮಿಚೆಲ್ ಮಾರ್ಶ್ ಅವರಂತಹ ಬಲಾಢ್ಯ ಟಿ20 ಸ್ಪೆಷಲಿಸ್ಟ್ ಆಟಗಾರರಿದ್ದು, ಇದರ ಜತೆಗೆ ಮನೀಶ್ ಪಾಂಡೆ ಸೇರ್ಪಡೆ ತಂಡಕ್ಕೆ ಮತ್ತಷ್ಟು ಬಲ ತಂದುಕೊಡಲಿದೆ. ಈ ಬಾರಿಯಾದರೂ ಡೆಲ್ಲಿ ಕ್ಯಾಪಿಟಲ್ಸ್ ಕಪ್ ಗೆಲ್ಲುತ್ತಾ ಎನ್ನುವುದನ್ನು ಕಾದು ನೋಡಬೇಕಿದೆ.
 

click me!