ನಿಕೋಲಸ್ ಪೂರನ್‌ಗೆ ಜಾಕ್‌ಪಾಟ್, ಲಖನೌ ಸೂಪರ್‌ಜೈಂಟ್ಸ್ ಕೂಡಿಕೊಂಡ 10 ಜನ ಟಿ20 ಸ್ಪೆಷಲಿಸ್ಟ್..!

By Naveen KodaseFirst Published Dec 24, 2022, 1:14 PM IST
Highlights

16 ಕೋಟಿ ರುಪಾಯಿಗೆ ಲಖನೌ ಸೂಪರ್ ಜೈಂಟ್ಸ್ ಪಾಲಾದ ನಿಕೋಲಸ್ ಪೂರನ್‌
ಕಳೆದ ಐಪಿಎಲ್ ಟೂರ್ನಿಯಲ್ಲಿ 4ನೇ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡಿದ್ದ ಕೆ ಎಲ್ ರಾಹುಲ್ ಪಡೆ
ಮಿನಿ ಹರಾಜಿನಲ್ಲಿ 10 ಆಟಗಾರರನ್ನು ಖರೀದಿಸಿದ ಲಖನೌ ಸೂಪರ್ ಜೈಂಟ್ಸ್‌

ಕೊಚ್ಚಿ(ಡಿ.24): ಈಗಾಗಲೇ ಸಾಕಷ್ಟು ಬಲಾಢ್ಯ ಟಿ20 ಸ್ಪೆಷಲಿಸ್ಟ್ ಆಟಗಾರರನ್ನು ಹೊಂದಿರುವ ಲಖನೌ ಸೂಪರ್ ಜೈಂಟ್ಸ್ ತಂಡವು, ಇದೀಗ ಮಿನಿ ಹರಾಜಿನಲ್ಲಿ ಮತ್ತಷ್ಟು ತಜ್ಞ ಟಿ20 ಆಟಗಾರರನ್ನು ಖರೀದಿಸುವಲ್ಲಿ ಯಶಸ್ವಿಯಾಗಿದೆ. ಐಪಿಎಲ್ ಟೂರ್ನಿಯಲ್ಲಿ ಚೊಚ್ಚಲ ಪ್ರಯತ್ನದಲ್ಲೇ ನಾಕೌಟ್ ಹಂತ ಪ್ರವೇಶಿಸಿದ್ದ ಲಖನೌ ಸೂಪರ್ ಜೈಂಟ್ಸ್ ತಂಡವು ಇದೀಗ ಮಿನಿ ಹರಾಜಿನಲ್ಲಿ ಟಿ20 ಸ್ಪೆಷಲಿಸ್ಟ್ ಆಟಗಾರರನ್ನು ಖರೀದಿಸುವ ಮೂಲಕ ಮತ್ತಷ್ಟು ಬಲಾಢ್ಯವಾಗಿ ಹೊರಹೊಮ್ಮಿದೆ. ಈ ಮಿನಿ ಹರಾಜಿನಲ್ಲಿ ಲಖನೌ ತಂಡವು ನಿಕೋಲಸ್ ಪೂರನ್‌, ಡೇನಿಯಲ್ ಸ್ಯಾಮ್ಸ್ ಸೇರಿದಂತೆ ಒಟ್ಟು 10 ಆಟಗಾರರನ್ನು ತನ್ನ ತೆಕ್ಕೆಗೆ ಸೆಳೆದುಕೊಳ್ಳುವಲ್ಲಿ ಯಶಸ್ವಿಯಾಗಿದೆ.

ಕಳೆದ ಆವೃತ್ತಿಯ ಐಪಿಎಲ್ ಟೂರ್ನಿಯಲ್ಲಿ ದಯನೀಯ ಬ್ಯಾಟಿಂಗ್ ವೈಫಲ್ಯ ಅನುಭವಿಸಿದ್ದರೂ ಸಹಾ ಈ ಬಾರಿಯ ಮಿನಿ ಹರಾಜಿನಲ್ಲಿ ನಿಕೋಲಸ್ ಪೂರನ್‌ಗೆ ಮತ್ತೊಮ್ಮೆ ಜಾಕ್‌ಪಾಟ್ ಹೊಡೆದಿದೆ. ಲಖನೌ ಸೂಪರ್ ಜೈಂಟ್ಸ್ ತಂಡವು ಬರೋಬ್ಬರಿ 16 ಕೋಟಿ ರುಪಾಯಿ ನೀಡಿ ನಿಕೋಲಸ್ ಪೂರನ್ ಅವರನ್ನು ತನ್ನ ತೆಕ್ಕೆಗೆ ಸೆಳೆದುಕೊಳ್ಳುವಲ್ಲಿ ಯಶಸ್ವಿಯಾಗಿದೆ. ಇನ್ನುಳಿದಂತೆ ಡೇನಿಯಲ್ ಸ್ಯಾಮ್ಸ್ 75 ಲಕ್ಷ ರುಪಾಯಿ, ಅಮಿತ್ ಮಿಶ್ರಾ, ರೊಮ್ಯಾರಿಯೋ ಶೆಫರ್ಡ್‌, ನವೀನ್ ಉಲ್ ಹಕ್ ಹಾಗೂ ಜಯದೇವ್ ಉನಾದ್ಕತ್ ಅವರನ್ನು 50 ಲಕ್ಷ ರುಪಾಯಿ ನೀಡಿ ಖರೀದಿಸುವಲ್ಲಿ ಲಖನೌ ಸೂಪರ್ ಜೈಂಟ್ಸ್ ತಂಡವು ಯಶಸ್ವಿಯಾಗಿದೆ

ಮಿನಿ ಹರಾಜಿನಲ್ಲಿ ಲಖನೌ ಸೂಪರ್ ಜೈಂಟ್ಸ್ ಖರೀದಿಸಿದ ಆಟಗಾರರ ವಿವರ ಹೀಗಿದೆ ನೋಡಿ

* ನಿಕೋಲಸ್ ಪೂರನ್ - ವಿಕೆಟ್ ಕೀಪರ್ - 16 ಕೋಟಿ ರುಪಾಯಿ
* ಡೇನಿಯಲ್ ಸ್ಯಾಮ್ಸ್‌ - ಆಲ್ರೌಂಡರ್ - 75 ಲಕ್ಷ ರುಪಾಯಿ
* ಅಮಿತ್ ಮಿಶ್ರಾ - ಬೌಲರ್ - 50 ಲಕ್ಷ ರುಪಾಯಿ
* ರೊಮ್ಯಾರಿಯೋ ಶೆಫರ್ಡ್‌ - ಆಲ್ರೌಂಡರ್ - 50 ಲಕ್ಷ ರುಪಾಯಿ
* ನವೀನ್ ಉಲ್ ಹಕ್ - ಬೌಲರ್ - 50 ಲಕ್ಷ ರುಪಾಯಿ
* ಜಯದೇವ್ ಉನಾದ್ಕತ್ - ಬೌಲರ್ - 50 ಲಕ್ಷ ರುಪಾಯಿ
* ಯಶ್ ಠಾಕೂರ್ - ಬೌಲರ್ - 45 ಲಕ್ಷ ರುಪಾಯಿ
* ಸ್ವಪ್ನಿಲ್ ಸಿಂಗ್ - ಆಲ್ರೌಂಡರ್ - 20 ಲಕ್ಷ ರುಪಾಯಿ
* ಯದ್ವೀರ್ ಚರಕ್ - ಆಲ್ರೌಂಡರ್ - 20 ಲಕ್ಷ ರುಪಾಯಿ
* ಪ್ರೇರಕ್ ಮಂಕಡ್ - ಆಲ್ರೌಂಡರ್ - 20 ಲಕ್ಷ ರುಪಾಯಿ

ಆಟಗಾರರ ರೀಟೈನ್ ಬಳಿಕ ಮಿನಿ ಹರಾಜಿಗೂ ಮುನ್ನ ಲಖನೌ ಸೂಪರ್ ಜೈಂಟ್ಸ್ ತಂಡವು ಹೀಗಿತ್ತು: 

ಕೆಎಲ್ ರಾಹುಲ್(ನಾಯಕ), ಆಯುಷ್ ಬದೊನಿ, ಕರಣ್ ಶರ್ಮಾ, ಮನನ್ ವೋಹ್ರಾ, ಕ್ವಿಂಟನ್ ಡಿಕಾಕ್, ಮಾರ್ಕಸ್ ಸ್ಟೊಯ್ನಿಸ್, ಕೃಷ್ಣಪ್ಪ ಗೌತಮ್, ದೀಪಕ್ ಹೂಡ, ಕೈಲ್ ಮೇಯರ್ಸ್, ಕ್ರುನಾಲ್ ಪಾಂಡ್ಯ, ಅವೇಶ್ ಖಾನ್, ಮೊಹ್ಸಿನ್ ಖಾನ್, ಮಾರ್ಕ್ ವುಡ್, ಮಯಾಂಕ್ ಯಾದವ್, ರವಿ ಬಿಶ್ನೋಯ್

IPL Retention ಕನ್ನಡಿಗ ಮನೀಶ್ ಪಾಂಡೆ ಸೇರಿ 7 ಕ್ರಿಕೆಟಿಗರಿಗೆ ಕೊಕ್, ಲಖನೌ ತಂಡದ ಸಂಪೂರ್ಣ ಲಿಸ್ಟ್!

ಚೊಚ್ಚಲ ಪ್ರಯತ್ನದಲ್ಲೇ ನಾಕೌಟ್ ಹಂತ ಪ್ರವೇಶಿಸಿದ್ದ ಲಖನೌ ಸೂಪರ್ ಜೈಂಟ್ಸ್ ತಂಡವು, ಎಲಿಮಿನೇಟರ್ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ವಿರುದ್ದ ಮುಗ್ಗರಿಸುವ ಮೂಲಕ 4ನೇ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡಿತ್ತು. ಇದೀಗ ದುಬಾರಿ ಮೊತ್ತಕ್ಕೆ ನಿಕೋಲಸ್ ಪೂರನ್ ಖರೀದಿಸಿರುವ ಲಖನೌ ತಂಡವು ತನ್ನ ಮಧ್ಯಮ ಕ್ರಮಾಂಕದ ಬ್ಯಾಟಿಂಗ್ ಶಕ್ತಿಯನ್ನು ಮತ್ತಷ್ಟು ವೃದ್ದಿಸಿಕೊಂಡಿದ್ದು, ಎರಡನೇ ಪ್ರಯತ್ನದಲ್ಲಿ ಕೆ ಎಲ್ ರಾಹುಲ್ ಪಡೆ ಕಪ್ ಗೆಲ್ಲುತ್ತಾ ಎನ್ನುವುದನ್ನು ಕಾದು ನೋಡಬೇಕಿದೆ.

click me!