ಸನ್‌ರೈಸರ್ಸ್‌ಗೆ ಬ್ರೂಕ್, ಅಗರ್‌ವಾಲ್ ಸೇರ್ಪಡೆ; ಮಿನಿ ಹರಾಜಿನಲ್ಲಿ 13 ಆಟಗಾರರು ಹೈದರಾಬಾದ್ ತೆಕ್ಕೆಗೆ..!

By Naveen KodaseFirst Published Dec 24, 2022, 11:47 AM IST
Highlights

ಮಿನಿ ಹರಾಜಿನಲ್ಲಿ ಅತಿಹೆಚ್ಚು ಆಟಗಾರರನ್ನು ಖರೀದಿಸಿದ ಸನ್‌ರೈಸರ್ಸ್ ಹೈದರಾಬಾದ್
ಆರೆಂಜ್ ಆರ್ಮಿ ತೆಕ್ಕೆಗೆ ಜಾರಿದ ಕನ್ನಡಿಗ ಮಯಾಂಕ್‌ ಅಗರ್‌ವಾಲ್‌
13.25 ಕೋಟಿ ರುಪಾಯಿ ನೀಡಿ ಹ್ಯಾರಿ ಬ್ರೂಕ್ ಕರೆತಂದ ಸನ್‌ರೈಸರ್ಸ್ ಹೈದರಾಬಾದ್

ಕೊಚ್ಚಿ(ಡಿ.24):ಈ ಬಾರಿಯ ಮಿನಿ ಹರಾಜಿನಲ್ಲಿ ಅತಿಹೆಚ್ಚು ಪರ್ಸ್‌ನೊಂದಿಗೆ ಪಾಲ್ಗೊಂಡಿದ್ದ ಸನ್‌ರೈಸರ್ಸ್‌ ಹೈದರಾಬಾದ್ ತಂಡವು ನಿರೀಕ್ಷೆಯಂತೆಯೇ ಅತಿಹೆಚ್ಚು ಆಟಗಾರರನ್ನು ತನ್ನ ತೆಕ್ಕೆಗೆ ಸೇರಿಸಿಕೊಳ್ಳುವಲ್ಲಿ ಯಶಸ್ವಿಯಾಗಿದೆ. ಇಂಗ್ಲೆಂಡ್ ಸ್ಪೋಟಕ ಬ್ಯಾಟರ್ ಹ್ಯಾರಿ ಬ್ರೂಕ್‌, ಕನ್ನಡಿಗ ಮಯಾಂಕ್‌ ಅಗರ್‌ವಾಲ್, ದಕ್ಷಿಣ ಆಫ್ರಿಕಾದ ವಿಕೆಟ್ ಕೀಪರ್ ಬ್ಯಾಟರ್ ಹೆನ್ರಿಚ್ ಕ್ಲಾಸೇನ್ ಸೇರಿದಂತೆ ಈ ಬಾರಿಯ ಮಿನಿ ಹರಾಜಿನಲ್ಲಿ ಸನ್‌ರೈಸರ್ಸ್ ಹೈದರಾಬಾದ್ ಫ್ರಾಂಚೈಸಿಯು ಬರೋಬ್ಬರಿ 13 ಆಟಗಾರರನ್ನು ತನ್ನ ತೆಕ್ಕೆಗೆ ಸೆಳೆದುಕೊಳ್ಳುವಲ್ಲಿ ಯಶಸ್ವಿಯಾಗಿದೆ.

ಈ ಬಾರಿಯ ಮಿನಿ ಹರಾಜಿನಲ್ಲಿ ಸನ್‌ರೈಸರ್ಸ್ ಹೈದರಾಬಾದ್ ಫ್ರಾಂಚೈಸಿಯು ಇಂಗ್ಲೆಂಡ್ ಸ್ಪೋಟಕ ಬ್ಯಾಟರ್ ಹ್ಯಾರಿ ಬ್ರೂಕ್‌ರನ್ನು ಬರೋಬ್ಬರಿ 13.25 ಕೋಟಿ ರುಪಾಯಿ ನೀಡಿ ಖರೀದಿಸಿದೆ. ಇನ್ನು ಕರ್ನಾಟಕ ಮೂಲದ ಆರಂಭಿಕ ಬ್ಯಾಟರ್ ಮಯಾಂಕ್ ಅಗರ್‌ವಾಲ್ ಅವರನ್ನು 8.25 ಕೋಟಿ ರುಪಾಯಿ ನೀಡಿ ಆರೆಂಜ್ ಆರ್ಮಿ ತನ್ನತ್ತ ಸೆಳೆದುಕೊಂಡಿದೆ. ಇನ್ನು ಹೆನ್ರಿಚ್ ಕ್ಲಾಸೇನ್‌ 5.25 ಕೋಟಿ, ವಿವರಾಂತ್ ಶರ್ಮಾ 2.60 ಕೋಟಿ ಮತ್ತು ಇಂಗ್ಲೆಂಡ್ ಅನುಭವಿ ಸ್ಪಿನ್ನರ್ ಆದಿಲ್ ರಶೀದ್ 2 ಕೋಟಿ ರುಪಾಯಿಗೆ ಸನ್‌ರೈಸರ್ಸ್‌ ಹೈದರಾಬಾದ್ ತಂಡ ಕೂಡಿಕೊಂಡಿದ್ದಾರೆ. ಇದಷ್ಟೇ ಅಲ್ಲದೇ ಇನ್ನೂ 8 ಆಟಗಾರರನ್ನು ಮಿನಿ ಹರಾಜಿನಲ್ಲಿ ಆರೆಂಜ್ ಆರ್ಮಿ ತನ್ನತ್ತ ಸೆಳೆದುಕೊಂಡಿದೆ.  

ಮಿನಿ ಹರಾಜಿನಲ್ಲಿ ಸನ್‌ರೈಸರ್ಸ್ ಹೈದರಾಬಾದ್ ಫ್ರಾಂಚೈಸಿಯು ಖರೀದಿಸಿದ ಆಟಗಾರರ ವಿವರ ಹೀಗಿದೆ: 

* ಹ್ಯಾರಿ ಬ್ರೂಕ್‌ - ಬ್ಯಾಟರ್ - 13.25 ಕೋಟಿ ರುಪಾಯಿ
* ಮಯಾಂಕ್ ಅಗರ್‌ವಾಲ್ - ಬ್ಯಾಟರ್ - 8.25 ಕೋಟಿ ರುಪಾಯಿ
* ಹೆನ್ರಿಚ್ ಕ್ಲಾಸೇನ್ - ವಿಕೆಟ್ ಕೀಪರ್ - 5.25 ಕೋಟಿ ರುಪಾಯಿ
* ವಿವ್ರಾಂತ್ ಶರ್ಮಾ - ಆಲ್ರೌಂಡರ್ - 2.60 ಕೋಟಿ ರುಪಾಯಿ
* ಆದಿಲ್ ರಶೀದ್ - ಬೌಲರ್ - 2 ಕೋಟಿ ರುಪಾಯಿ
* ಮಯಾಂಕ್ ದಾಗರ್ - ಆಲ್ರೌಂಡರ್ - 1.80 ಕೋಟಿ ರುಪಾಯಿ
* ಅಕೆಲ್ ಹೊಸೈನ್ - ಬೌಲರ್ - 1 ಕೋಟಿ ರುಪಾಯಿ
* ಮಯಾಂಕ್ ಮಾರ್ಕಂಡೆ - ಬೌಲರ್ - 50 ಲಕ್ಷ ರುಪಾಯಿ
* ಉಪೇಂದ್ರ ಸಿಂಗ್ ಯಾದವ್ - ವಿಕೆಟ್ ಕೀಪರ್ - 25 ಲಕ್ಷ ರುಪಾಯಿ
* ಸನ್ವೀರ್ ಸಿಂಗ್ - ಆಲ್ರೌಂಡರ್ - 20 ಲಕ್ಷ ರುಪಾಯಿ
* ಅನ್ಮೋಲ್‌ಪ್ರೀತ್ ಸಿಂಗ್ - ಬ್ಯಾಟರ್ - 20 ಲಕ್ಷ ರುಪಾಯಿ
* ಸಮರ್ಥ್‌ ವ್ಯಾಸ್ - ಆಲ್ರೌಂಡರ್ - 20 ಲಕ್ಷ ರುಪಾಯಿ
* ನಿತೀಶ್ ಕುಮಾರ್ ರೆಡ್ಡಿ - ವಿಕೆಟ್ ಕೀಪರ್ - 20 ಲಕ್ಷ ರುಪಾಯಿ

ಆಟಗಾರರ ರೀಟೈನ್ ಬಳಿಕ ಮಿನಿ ಹರಾಜಿಗೂ ಮುನ್ನ ಸನ್‌ರೈಸರ್ಸ್‌ ಹೈದರಾಬಾದ್ ತಂಡವು ಹೀಗಿತ್ತು:

ಅಬ್ದುಲ್ ಸಮದ್, ಏಯ್ಡನ್ ಮಾರ್ಕ್ರಾಮ್, ರಾಹುಲ್ ತ್ರಿಪಾಠಿ, ಗ್ಲೆನ್ ಫಿಲಿಪ್ಸ್, ಅಭಿಷೇಕ್ ಶರ್ಮಾ, ಮಾರ್ಕೊ ಯಾನ್ಸೆನ್, ವಾಷಿಂಗ್ಟನ್ ಸುಂದರ್, ಫಜಲ್ಹಕ್ ಫಾರೂಕಿ, ಕಾರ್ತಿಕ್ ತ್ಯಾಗಿ, ಭುವನೇಶ್ವರ್ ಕುಮಾರ್, ಟಿ ನಟರಾಜನ್, ಉಮ್ರಾನ್ ಮಲಿಕ್ 

IPL Retention: ಕ್ಯಾಪ್ಟನ್‌ ಕೇನ್‌, ಮೂವರು ಕನ್ನಡಿಗರಿಗೆ ಸನ್‌ರೈಸರ್ಸ್‌ ಗೇಟ್‌ಪಾಸ್‌

2016ರಲ್ಲಿ ಐಪಿಎಲ್ ಚಾಂಪಿಯನ್ ಪಟ್ಟ ಅಲಂಕರಿಸಿದ್ದ ಸನ್‌ರೈಸರ್ಸ್ ಹೈದರಾಬಾದ್ ತಂಡವು ಇದಾದ ಬಳಿಕ ಕಪ್‌ ಗೆಲ್ಲಲು ಪದೇ ಪದೇ ವಿಫಲವಾಗುತ್ತಲೇ ಇದೆ. ಇದೀಗ ಕನ್ನಡಿಗ ಮಯಾಂಕ್‌ ಅಗರ್‌ವಾಲ್ ಹಾಗೂ ಇಂಗ್ಲೆಂಡ್ ಸ್ಪೋಟಕ ಬ್ಯಾಟರ್ ಹ್ಯಾರಿ ಬ್ರೂಕ್ ಸೇರ್ಪಡೆ ಆರೆಂಜ್‌ ಆರ್ಮಿಗೆ ಬ್ಯಾಟಿಂಗ್‌ನಲ್ಲಿ ಮತ್ತಷ್ಟು ಬಲ ಬರುವಂತೆ ಮಾಡಿದೆ. ಮತ್ತೊಮ್ಮೆ ಸನ್‌ರೈಸರ್ಸ್ ಹೈದರಾಬಾದ್ ತಂಡವು ಈ ಬಾರಿ ಐಪಿಎಲ್ ಚಾಂಪಿಯನ್ ಪಟ್ಟ ಅಲಂಕರಿಸುತ್ತಾ ಎನ್ನುವುದನ್ನು ಕಾದು ನೋಡಬೇಕಿದೆ.

click me!