IPL 2020: ಸ್ಫೋಟಕ ಆರಂಭಿಕ ಬ್ಯಾಟ್ಸ್‌ಮನ್‌ನ್ನೇ ಕೈಬಿಟ್ಟ ಮುಂಬೈ ಇಂಡಿಯನ್ಸ್!

By Web Desk  |  First Published Nov 15, 2019, 7:08 PM IST

ಐಪಿಎಲ್ ಟೂರ್ನಿಗೆ ಫ್ರಾಂಚೈಸಿಗಳ ತಯಾರಿ ಚುರುಕುಗೊಂಡಿದೆ. ಹರಾಜಿಗೂ ಮುನ್ನ ಫ್ರಾಂಚೈಸಿಗಳು ಆಟಗಾರರನ್ನು ರಿಲೀಸ್ ಮಾಡಿದೆ. ಇದೀಗ ಮುಂಬೈ ಇಂಡಿಯಾ ಸ್ಫೋಟಕ ಆರಂಭಿಕ ಬ್ಯಾಟ್ಸ್‌ಮನ್ ಸೇರಿದಂತೆ 10 ಮಂದಿಗೆ ಗೇಟ್‌ಪಾಸ್ ನೀಡಿದೆ.
 


ಮುಂಬೈ(ನ.15): ಐಪಿಎಲ್ ಟೂರ್ನಿಯ ಹಾಲಿ ಚಾಂಪಿಯನ್ ಮುಂಬೈ ಇಂಡಿಯನ್ಸ್ 2020ರ ಪ್ರಶಸ್ತಿ ಮೇಲೆ ಕಣ್ಣಟ್ಟಿದೆ. ಡಿಸೆಂಬರ್ 19 ರಂದು ನಡೆಯಲಿರುವ ಆಟಗಾರರ ಹರಾಜಿಗೆ ಸಜ್ಜಾಗಿರುವ ಮುಂಬೈ, ಸ್ಟಾರ್ ಆಟಗಾರರೂ ಸೇರಿದಂತೆ 10 ಮಂದಿಗೆ ಗೇಟ್ ಪಾಸ್ ನೀಡಿದೆ. ಈ ಮೂಲಕ ಹರಾಜಿನಲ್ಲಿ ಹೊಸ ಆಟಗಾರರನ್ನು ಖರೀದಿಸಿ 2020ರ ಐಪಿಎಲ್ ಟೂರ್ನಿಗೆ ಸಜ್ಜಾಗಲು ಮುಂಬೈ ಫ್ರಾಂಚೈಸಿ ನಿರ್ಧರಿಸಿದೆ.

ಇದನ್ನೂ ಓದಿ: IPL 2020 ಟ್ರೆಡಿಂಗ್: ತಂಡ ಬದಲಾಯಿಸಿದ ಆಟಗಾರರ ಫುಲ್ ಲಿಸ್ಟ್!

Tap to resize

Latest Videos

undefined

ಐಪಿಎಲ್ ಆಟಗಾರರ ರಿಲೀಸ್‌ಗೆ ನವೆಂಬರ್ 15 ಕೊನೆಯ ದಿನ. ಹೀಗಾಗಿ ಫ್ರಾಂಚೈಸಿಗಳು ತಂಡದಿಂದ ಕೈಬಿಟ್ಟ ಆಟಗಾರರ ಪಟ್ಟಿ ಪ್ರಕಟಿಸಿದೆ. ಮುಂಬೈ ಇಂಡಿಯನ್ಸ್ ತಂಡ  ಯುವರಾಜ್ ಸಿಂಗ್, ಸ್ಪೋಟಕ ಆರಂಭಿಕ ಬ್ಯಾಟ್ಸ್‌ಮನ್ ಇವಿನ್ ಲಿವಿಸ್ ಸೇರಿದಂತೆ 10 ಕ್ರಿಕೆಟಿಗರನ್ನು ರಿಲೀಸ್ ಮಾಡಿದೆ.

ಇದನ್ನೂ ಓದಿ: IPL 2020: ಕನ್ನಡಿಗರ ತಂಡವಾಗಿ ಬದಲಾದ ಕಿಂಗ್ಸ್ ಇಲೆವನ್ ಪಂಜಾಬ್..!

ಮುಂಬೈ ತಂಡ ರಿಲೀಸ್ ಮಾಡಿದ ಆಟಗಾರರ ಪಟ್ಟಿ
1) ಯುವರಾಜ್ ಸಿಂಗ್
2) ಆ್ಯಡಮ್ ಮಿಲ್ನೆ
3) ಅಲ್ಜಾರಿ ಜೊಸೆಫ್
4) ಬರೀಂದರ್ ಸ್ರಾನ್
5) ಬೆನ್ ಕಟ್ಟಿಂಗ್
6) ಬ್ಯುರೆನ್ ಹೆಂಡ್ರಿಕ್ಸ್
7) ಇವಿನ್ ಲಿವಿಸ್
8) ಜಾಸನ್ ಬೆಹನ್‌ಡ್ರೂಫ್
9) ಪಂಕಜ್ ಜೈಸ್ವಾಲ್
10) ರಸಿಕ್ ದಾರ್

ತಂಡದಲ್ಲಿ ಉಳಿದುಕೊಂಡ ಆಟಗಾರರು
ರೋಹಿತ್ ಶರ್ಮಾ, ಹಾರ್ದಿಕ್ ಪಾಂಡ್ಯ, ಜಸ್ಪ್ರೀತ್ ಬುಮ್ರಾ, ಕ್ರುನಾಲ್ ಪಾಂಡ್ಯ, ಇಶಾಾನ್ ಕಿಶನ್, ಸುರ್ಯ ಕುಮಾರ್ ಯಾದವ್, ರಾಹುಲ್ ಚಹಾರ್, ಅನ್ಮೋಲ್‌ಪ್ರೀತ್ ಸಿಂಗ್, ಜಯಂತ್ ಯಾದವ್, ಆದಿತ್. ತಾರೆ, ಅಂಕುಲ್ ರಾಯ್, ಧವಲ್ ಕುಲಕರ್ಣಿ(ಟ್ರೆಡ್ ಮೂಲಕ), ಕೀರನ್ ಪೊಲಾರ್ಡ್, ಕ್ವಿಂಟನ್ ಡಿಕಾಕ್, ಶೆರ್ಫಾನೆ ರುಥ್‌ಫೋರ್ಡ್, ಲಸಿತ್ ಮಲಿಂಗ, ಮಿಚೆಲ್ ಮೆಕ್ಲೆನಾಘನ್, ಟ್ರೆಂಟ್ ಬೊಲ್ಟ್(ಟ್ರೇಡ್ ಮೂಲಕ)

click me!