IPL 2026 ವೇಳಾಪಟ್ಟಿ ಪ್ರಕಟ: ಚಿನ್ನಸ್ವಾಮಿಯಲ್ಲಿ ಉದ್ಘಾಟನಾ ಪಂದ್ಯ, ಮಾ.28ಕ್ಕೆ ಹಾಲಿ ಚಾಂಪಿಯನ್‌ ಆರ್‌ಸಿಬಿಗೆ ಇವರೇ ಎದುರಾಳಿ!

Published : Mar 11, 2026, 07:49 PM ISTUpdated : Mar 11, 2026, 08:06 PM IST
ipl 2026 schedule

ಸಾರಾಂಶ

ಬಿಸಿಸಿಐ 2026ರ ಐಪಿಎಲ್‌ನ ಮೊದಲ 20 ದಿನಗಳ ವೇಳಾಪಟ್ಟಿಯನ್ನು ಬಿಡುಗಡೆ ಮಾಡಿದೆ. ಉದ್ಘಾಟನಾ ಪಂದ್ಯವು ಮಾರ್ಚ್ 28 ರಂದು ಬೆಂಗಳೂರಿನಲ್ಲಿ ಹಾಲಿ ಚಾಂಪಿಯನ್ ಆರ್‌ಸಿಬಿ ಮತ್ತು ಎಸ್‌ಆರ್‌ಎಚ್ ನಡುವೆ ನಡೆಯಲಿದ್ದು, ವಿಧಾನಸಭಾ ಚುನಾವಣೆಗಳ ಕಾರಣದಿಂದಾಗಿ ಪೂರ್ಣ ವೇಳಾಪಟ್ಟಿಯನ್ನು ನಂತರ ಪ್ರಕಟಿಸಲಾಗುವುದು.

ನವದೆಹಲಿ (ಮಾ.11): ಕ್ರಿಕೆಟ್ ಪ್ರೇಮಿಗಳ ಕುತೂಹಲಕ್ಕೆ ತೆರೆಬಿದ್ದಿದೆ. 2026ರ ಇಂಡಿಯನ್ ಪ್ರೀಮಿಯರ್ ಲೀಗ್ (IPL) ವೇಳಾಪಟ್ಟಿಯನ್ನು ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (BCCI) ಬಿಡುಗಡೆ ಮಾಡಿದೆ. ಹಾಲಿ ಚಾಂಪಿಯನ್ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ಮಾರ್ಚ್ 28 ರಂದು ಬೆಂಗಳೂರಿನ ಎಂ. ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಸನ್ ರೈಸರ್ಸ್ ಹೈದರಾಬಾದ್ (SRH) ತಂಡವನ್ನು ಎದುರಿಸುವ ಮೂಲಕ ಟೂರ್ನಿಗೆ ಚಾಲನೆ ನೀಡಲಿದೆ. ಅದರೊಂದಿಗೆ ಚಿನ್ನಸ್ವಾಮಿ ಮೈದಾನದಲ್ಲಿ ಪಂದ್ಯ ನಡೆಯುವ ಬಗ್ಗೆ ಇದ್ದ ಗೊಂದಲಗಳಿಗೆ ಅಧಿಕೃತವಾಗಿ ತೆರೆಬಿದ್ದಂತಾಗಿದೆ.

ಮೊದಲ 20 ದಿನಗಳ ವೇಳಾಪಟ್ಟಿ ಮಾತ್ರ ಬಿಡುಗಡೆ

ದೇಶದ ಮೂರು ರಾಜ್ಯಗಳಲ್ಲಿ ವಿಧಾನಸಭಾ ಚುನಾವಣೆ ನಡೆಯಲಿರುವ ಹಿನ್ನೆಲೆಯಲ್ಲಿ, ಬಿಸಿಸಿಐ ಸದ್ಯಕ್ಕೆ ಮೊದಲ 20 ದಿನಗಳ ವೇಳಾಪಟ್ಟಿಯನ್ನು ಮಾತ್ರ ಪ್ರಕಟಿಸಿದೆ. ಚುನಾವಣಾ ದಿನಾಂಕಗಳು ಘೋಷಣೆಯಾದ ನಂತರ ಟೂರ್ನಿಯ ಉಳಿದ ಪಂದ್ಯಗಳ ಪೂರ್ಣ ವೇಳಾಪಟ್ಟಿಯನ್ನು ಬಿಡುಗಡೆ ಮಾಡಲಾಗುವುದು ಎಂದು ಬಿಸಿಸಿಐ ತಿಳಿಸಿದೆ.

ಹತ್ತು ನಗರಗಳಲ್ಲಿ 20 ಪಂದ್ಯಗಳ ಅಬ್ಬರ

ಟೂರ್ನಿಯ ಮೊದಲ ಹಂತದಲ್ಲಿ ಒಟ್ಟು 20 ಪಂದ್ಯಗಳು ನಡೆಯಲಿದ್ದು, ಬೆಂಗಳೂರು, ಮುಂಬೈ, ಗುವಾಹಟಿ, ನ್ಯೂ ಚಂಡೀಗಢ, ಲಕ್ನೋ, ಕೋಲ್ಕತ್ತಾ, ಚೆನ್ನೈ, ದೆಹಲಿ, ಅಹಮದಾಬಾದ್ ಮತ್ತು ಹೈದರಾಬಾದ್ ಸೇರಿದಂತೆ 10 ವೇದಿಕೆಗಳಲ್ಲಿ ಪಂದ್ಯಗಳು ಜರುಗಲಿವೆ.

ಬೆಂಗಳೂರು ಪಂದ್ಯಗಳಿಗೆ ಮಾರ್ಚ್ 13ರ ಗ್ರೀನ್ ಸಿಗ್ನಲ್ ಅಗತ್ಯ

ಬೆಂಗಳೂರಿನಲ್ಲಿ ಪಂದ್ಯಗಳನ್ನು ನಡೆಸಲು ಕರ್ನಾಟಕ ಸರ್ಕಾರ ರಚಿಸಿರುವ ತಜ್ಞರ ಸಮಿತಿಯ ಅನುಮತಿ ಅತ್ಯಗತ್ಯವಾಗಿದೆ. ಮಾರ್ಚ್ 13 ರಂದು ಸಮಿತಿಯು ಚಿನ್ನಸ್ವಾಮಿ ಕ್ರೀಡಾಂಗಣದ ಪರಿಶೀಲನೆ ನಡೆಸಲಿದೆ. ಆ ಬಳಿಕವೇ ಮ್ಯಾಚ್‌ಗೆ ಅನುಮತಿ ಸಿಗಲಿದೆ. ಅಂದು ಪಂದ್ಯದ ದಿನದ ಸಿದ್ಧತೆಗಳ ಬಗ್ಗೆ ಸಂಪೂರ್ಣ 'ಮಾಕ್ ಡೆಮೊನ್ ಸ್ಟ್ರೇಷನ್' (ಪೂರ್ವಾಭ್ಯಾಸ) ನಡೆಯಲಿದ್ದು, ಕ್ರೀಡಾಂಗಣದ ಸನ್ನದ್ಧತೆಯನ್ನು ಪರಿಶೀಲಿಸಿದ ನಂತರವೇ ಅಂತಿಮ ಅನುಮತಿ ಸಿಗಲಿದೆ.

ಡಬಲ್ ಹೆಡರ್ ಪಂದ್ಯಗಳ ಸಮಯ

ಮೊದಲ 20 ದಿನಗಳಲ್ಲಿ ಒಟ್ಟು ನಾಲ್ಕು 'ಡಬಲ್ ಹೆಡರ್' (ದಿನಕ್ಕೆ ಎರಡು ಪಂದ್ಯ) ಪಂದ್ಯಗಳು ನಡೆಯಲಿವೆ. ಮಧ್ಯಾಹ್ನದ ಪಂದ್ಯ ಎಂದಿನಂತೆ 3.30ಕ್ಕೆ ನಡೆಯಲಿದ್ದರೆ, ಸಂಜೆಯ ಪಂದ್ಯ 7.30ಕ್ಕೆ ನಡೆಯಲಿದೆ. ಸೀಸನ್‌ನ ಮೊದಲ ಡಬಲ್ ಹೆಡರ್ ಏಪ್ರಿಲ್ 4 ರಂದು ನಡೆಯಲಿದ್ದು, ಮಧ್ಯಾಹ್ನ ದೆಹಲಿಯಲ್ಲಿ ಡೆಲ್ಲಿ ಕ್ಯಾಪಿಟಲ್ಸ್ vs ಮುಂಬೈ ಇಂಡಿಯನ್ಸ್ ಹಾಗೂ ಸಂಜೆ ಅಹಮದಾಬಾದ್‌ನಲ್ಲಿ ಗುಜರಾತ್ ಟೈಟಾನ್ಸ್ vs ರಾಜಸ್ಥಾನ್ ರಾಯಲ್ಸ್ ಪಂದ್ಯಗಳು ಜರುಗಲಿವೆ.

ತಂಡಗಳ 'ಹೋಮ್ ಗ್ರೌಂಡ್' ಬದಲಾವಣೆ

ಕೆಲವು ತಂಡಗಳು ಈ ಬಾರಿ ತಮ್ಮ ತವರಿನ ಪಂದ್ಯಗಳನ್ನು ಬೇರೆ ನಗರಗಳಲ್ಲಿಯೂ ಆಡಲಿವೆ. ರಾಜಸ್ಥಾನ್ ರಾಯಲ್ಸ್ ತಂಡವು ಗುವಾಹಟಿಯಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಮತ್ತು ಮುಂಬೈ ಇಂಡಿಯನ್ಸ್ ತಂಡಗಳಿಗೆ ಆತಿಥ್ಯ ವಹಿಸಲಿದೆ. ರಾಜಸ್ಥಾನ ರಾಯಲ್ಸ್‌ನ 3 ಪಂದ್ಯ ಗುವಾಹಟಿಯಲ್ಲಿ ನಡೆಯಲಿದ್ದರೆ, 4 ಪಂದ್ಯ ಜೈಪುರದಲ್ಲಿ ನಡೆಯಲಿದೆ. ಇನ್ನು ಆರ್‌ಸಿಬಿಯ ಐದು ಪಂದ್ಯ ಬೆಂಗಳೂರಿನಲ್ಲಿ ನಡೆಯಲಿದ್ದು, ರಾಯ್‌ಪುರದಲ್ಲಿ 2 ಪಂದ್ಯಗಳನ್ನು ಆಡಲಿದೆ. ಪಂಜಾಬ್ ಕಿಂಗ್ಸ್ ತಂಡ ನ್ಯೂ ಚಂಡೀಗಢದಲ್ಲಿ 4 ಪಂದ್ಯ ಮತ್ತು ಧರ್ಮಶಾಲಾದಲ್ಲಿ 3 ಪಂದ್ಯಗಳನ್ನು ಆಡಲಿದೆ.

ಪಂದ್ಯದಿನಾಂಕದಿನಸಮಯಸ್ಥಳ
ಆರ್‌ಸಿಬಿ-ಸನ್‌ರೈಸರ್ಸ್‌ಮಾ.28ಶನಿವಾರಸಂಜೆ 7.30ಬೆಂಗಳೂರು
ಮುಂಬೈ-ಕೆಕೆಆರ್‌ಮಾ.29ಭಾನುವಾರಸಂಜೆ 7.30ಮುಂಬೈ
ರಾಜಸ್ಥಾನ-ಸಿಎಸ್‌ಕೆಮಾ.30ಸೋಮವಾರಸಂಜೆ 7.30ಗುವಾಹಟಿ
ಪಂಜಾಬ್‌ ಕಿಂಗ್ಸ್‌-ಗುಜರಾತ್‌ಮಾ.31ಮಂಗಳವಾರಸಂಜೆ 7.30ಮಲ್ಲನ್‌ಪುರ
ಲಕ್ನೋ-ಡೆಲ್ಲಿಏ.1ಬುಧವಾರಸಂಜೆ 7.30ಲಕ್ನೋ
ಕೆಕೆಆರ್‌-ಸನ್‌ರೈಸರ್ಸ್‌ಏ.2ಗುರುವಾರಸಂಜೆ 7.30ಕೋಲ್ಕತ್ತಾ
ಸಿಎಸ್‌ಕೆ-ಪಂಜಾಬ್‌ ಕಿಂಗ್ಸ್‌ಏ.3ಶುಕ್ರವಾರಸಂಜೆ 7.39ಚೆನ್ನೈ
ಡೆಲ್ಲಿ-ಮುಂಬೈ ಇಂಡಿಯನ್ಸ್‌ಏ.4ಶನಿವಾರಮಧ್ಯಾಹ್ನ 3.30ದೆಹಲಿ
ಗುಜರಾತ್‌-ರಾಜಸ್ಥಾನ ರಾಯಲ್ಸ್‌ಏ.4ಶನಿವಾರಸಂಜೆ 7.30ಅಹಮದಾಬಾದ್
ಸನ್‌ರೈಸರ್ಸ್‌-ಲಕ್ನೋಏ.5ಭಾನುವಾರಮಧ್ಯಾಹ್ನ 3.30ಹೈದರಾಬಾದ್‌
ಆರ್‌ಸಿಬಿ-ಸಿಎಸ್‌ಕೆಏ.5ಭಾನುವಾರಸಂಜೆ. 7.30ಬೆಂಗಳೂರು
ಕೆಕೆಆರ್‌-ಪಂಜಾಬ್‌ ಕಿಂಗ್ಸ್‌ಏ.6ಸೋಮವಾರಸಂಜೆ 7.30ಕೋಲ್ಕತ್ತಾ
ರಾಜಸ್ಥಾನ ರಾಯಲ್ಸ್‌-ಮುಂಬೈ ಇಂಡಿಯನ್ಸ್‌ಏ.7ಮಂಗಳವಾರಸಂಜೆ 7.30ಗುವಾಹಟಿ
ಡೆಲ್ಲಿ-ಗುಜರಾತ್‌ಏ.8ಬುಧವಾರಸಂಜೆ 7.30ದೆಹಲಿ
ಕೆಕೆಆರ್‌-ಲಕ್ನೋಏ.9ಗುರುವಾರಸಂಜೆ 7.30ಕೋಲ್ಕತ್ತಾ
ರಾಜಸ್ಥಾನ ರಾಯಲ್ಸ್‌-ಆರ್‌ಸಿಬಿಏ.10ಶುಕ್ರವಾರಸಂಜೆ 7.30ಗುವಾಹಟಿ
ಪಂಜಾಬ್‌ ಕಿಂಗ್ಸ್‌-ಸನ್‌ರೈಸರ್ಸ್‌ಏ.11ಶನಿವಾರಮಧ್ಯಾಹ್ನ 3.30ಮಲ್ಲನ್‌ಪುರ
ಸಿಎಸ್‌ಕೆ-ಡೆಲ್ಲಿ ಏ.11ಶನಿವಾರಸಂಜೆ. 7.30ಚೆನ್ನೈ
ಲಕ್ನೋ-ಗುಜರಾತ್‌ಏ.12ಭಾನುವಾರಮಧ್ಯಾಹ್ನ 3.30ಲಕ್ನೋ
ಮುಂಬೈ ಇಂಡಿಯನ್ಸ್‌-ಆರ್‌ಸಿಬಿಏ.12ಭಾನುವಾರಸಂಜೆ 7.30ಮುಂಬೈ

 

PREV

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ಟಿ20 ವಿಶ್ವಕಪ್‌ ಗೆದ್ದ ಪ್ಲೇಯರ್‌ಗೆ ಸಿಗದ ವಿಮಾನ ಟಿಕೆಟ್‌, ರೈಲಿನಲ್ಲಿ ರಹಸ್ಯವಾಗಿ ಪ್ರಯಾಣ ಬೆಳೆಸಿದ ಸ್ಟಾರ್‌ ಆಟಗಾರ!
ಐಸಿಸಿ ಟಿ20 ರ‍್ಯಾಂಕಿಂಗ್: ಅಭಿಷೇಕ್ ಶರ್ಮಾ ನಂ.1, ಜಿಗಿತ ಕಂಡ ಸಂಜು ಸ್ಯಾಮ್ಸನ್; ಟಾಪ್ 10ನಲ್ಲಿ ಭಾರತೀಯರೇ ಬೆಸ್ಟ್!