ರನ್‌ ಮಷೀನ್‌ ಕೊಹ್ಲಿಗೆ ಆ ಆಟಗಾರನ ಸಾಥ್ ಸಿಕ್ರೆ ಪಂಜಾಬ್ ಉಡೀಸ್; ಪ್ಲೇ-ಆಫ್‌ಗೆ RCB

Published : May 17, 2026, 08:00 AM IST
RCB

ಸಾರಾಂಶ

ಪ್ಲೇ-ಆಫ್ ಪ್ರವೇಶದ ಗುರಿಯೊಂದಿಗೆ ಆರ್‌ಸಿಬಿ ತಂಡವು ಧರ್ಮಶಾಲಾದಲ್ಲಿ ಸತತ ಸೋಲುಗಳಿಂದ ಕಂಗೆಟ್ಟಿರುವ ಪಂಜಾಬ್ ಕಿಂಗ್ಸ್ ವಿರುದ್ಧ ಸೆಣಸಲಿದೆ. ಮತ್ತೊಂದು ಮಹತ್ವದ ಪಂದ್ಯದಲ್ಲಿ, ಪ್ಲೇ-ಆಫ್ ರೇಸ್‌ನಲ್ಲಿ ಉಳಿಯಲು ರಾಜಸ್ಥಾನ ರಾಯಲ್ಸ್ ತಂಡವು ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ಮಾಡು ಇಲ್ಲವೇ ಮಡಿ ಹೋರಾಟ ನಡೆಸಲಿದೆ.

ಧರ್ಮಶಾಲಾ: ಸತತ 5 ಸೋಲು ಕಂಡು ಕಂಗೆಟ್ಟಿರುವ ಪಂಜಾಬ್‌ ಕಿಂಗ್ಸ್‌ ವಿರುದ್ಧ ಮೇಲುಗೈ ಸಾಧಿಸಿ, ಪ್ಲೇ-ಆಫ್‌ಗೆ ಪ್ರವೇಶಿಸಲು ಆರ್‌ಸಿಬಿ ಕಾತರಿಸುತ್ತಿದೆ. ಭಾನುವಾರ ಇಲ್ಲಿ ನಡೆಯಲಿರುವ ಪಂದ್ಯದಲ್ಲಿ ಆರ್‌ಸಿಬಿ, ಗೆಲ್ಲುವ ಫೇವರಿಟ್‌ ಎನಿಸಿದ್ದು, ಹಾಲಿ ಚಾಂಪಿಯನ್‌ ತಂಡ ಜಯದ ವಿಶ್ವಾಸದೊಂದಿಗೆ ಕಣಕ್ಕಿಳಿಯಲಿದೆ.

ಕಳೆದ ಪಂದ್ಯದಲ್ಲಿ ಶತಕ ಸಿಡಿಸಿದ್ದ ವಿರಾಟ್‌ ಕೊಹ್ಲಿ ಮತ್ತೊಂದು ದೊಡ್ಡ ಸ್ಕೋರ್‌ನ ನಿರೀಕ್ಷೆಯಲ್ಲಿದ್ದಾರೆ. ಗಾಯದ ಕಾರಣ ತವರಿಗೆ ತೆರಳಿರುವ ಫಿಲ್‌ ಸಾಲ್ಟ್‌, ಇನ್ನೂ ವಾಪಸ್‌ ಬಂದಿಲ್ಲ. ಹೀಗಾಗಿ, ಈ ಪಂದ್ಯದಲ್ಲಿ ಕೊಹ್ಲಿ ಜೊತೆ ಜೇಕಬ್‌ ಬೆಥೆಲ್‌ ಇನ್ನಿಂಗ್ಸ್‌ ಆರಂಭಿಸಲಿದ್ದಾರೆ. ಜೇಕಬ್‌ ಬೆಥೆಲ್‌ ಅವರ ಸಾಥ್ ಕೊಹ್ಲಿಗೆ ಸಿಕ್ಕರೆ ಇಂದಿನ ಪಂದ್ಯದಲ್ಲಿ ರನ್‌ಗಳ ಸುರಿಮಳೆಯಾಗಲಿದೆ.

ಆರ್‌ಸಿಬಿ ಕಳೆದ ಪಂದ್ಯದಂತೆ ಇಬ್ಬರು ವಿದೇಶಿ ವೇಗಿಗಳನ್ನು ಆಡಿಸಬಹುದು. ಆಗ ಮತ್ತೊಮ್ಮೆ ರೊಮಾರಿಯೋ ಶೆಫರ್ಡ್‌ ಹೊರಗುಳಿಯಲಿದ್ದಾರೆ. ಲಯದ ಸಮಸ್ಯೆ ಎದುರಿಸುತ್ತಿರುವ ಪಂಜಾಬ್‌ ನಾಯಕ ಶ್ರೇಯಸ್‌ ಅಯ್ಯರ್‌ ಎದುರು, ಆರ್‌ಸಿಬಿಯ ತಾರಾ ವೇಗಿಗಳಾದ ಭುವನೇಶ್ವರ್‌ ಕುಮಾರ್‌ ಹಾಗೂ ಜೋಶ್‌ ಹೇಜಲ್‌ವುಡ್‌ ಅತ್ಯುತ್ತಮ ದಾಖಲೆ ಹೊಂದಿದ್ದು, ಮತ್ತೊಮ್ಮೆ ಮೇಲುಗೈ ಸಾಧಿಸಲು ಎದುರು ನೋಡುತ್ತಿದ್ದಾರೆ.

ಮತ್ತೊಂದೆಡೆ ಈ ಆವೃತ್ತಿಯಲ್ಲಿ ಕೇವಲ 90 ರನ್‌ ಗಳಿಸಿರುವ ಜಿತೇಶ್‌ ಶರ್ಮಾ ಮೇಲೆ ಭಾರಿ ಒತ್ತಡವಿದ್ದು, ನಿರ್ಣಾಯಕ ಹಂತದಲ್ಲಿ ಲಯಕ್ಕೆ ಮರಳಿದರೆ, ತಂಡಕ್ಕೆ ಹೆಚ್ಚಿನ ಲಾಭವಾಗಲಿದೆ.

ಪಂಜಾಬ್‌ ಕಳಪೆ ದಾಖಲೆ

ಧರ್ಮಶಾಲಾದಲ್ಲಿ ಆಡಿರುವ ಒಟ್ಟು 7 ಪಂದ್ಯಗಳಲ್ಲಿ ಪಂಜಾಬ್‌ ಕೇವಲ 1ರಲ್ಲಿ ಜಯಿಸಿದೆ. ಹೀಗಾಗಿ, ತಂಡಕ್ಕಿದು ಅದೃಷ್ಟ ತಾಣವೇನಲ್ಲ. ಸದ್ಯ ತಂಡ ದಯನೀಯ ಸ್ಥಿತಿಯಲ್ಲಿದ್ದು, ಇದೆಲ್ಲದರ ಲಾಭವೆತ್ತಿದರೆ ಆರ್‌ಸಿಬಿಗೆ ಪ್ಲೇ-ಆಫ್‌ ಹಾದಿ ಸುಗಮಗೊಳ್ಳಲಿದೆ.

ಟಾಸ್‌ ನಿರ್ಣಾಯಕ: ಇಲ್ಲಿ ಈ ವರೆಗೂ ನಡೆದಿರುವ ಎಲ್ಲಾ ಮಧ್ಯಾಹ್ನದ ಪಂದ್ಯಗಳಲ್ಲಿ ಚೇಸ್‌ ಮಾಡಿದ ತಂಡವೇ ಗೆದ್ದಿದೆ. ಹೀಗಾಗಿ, ಈ ಪಂದ್ಯದಲ್ಲೂ ಟಾಸ್‌ ನಿರ್ಣಾಯಕ ಪಾತ್ರ ವಹಿಸಲಿದೆ. ಪಿಚ್‌ ಬ್ಯಾಟರ್‌ ಸ್ನೇಹಿಯಾಗಿರುವ ನಿರೀಕ್ಷೆ ಇದ್ದು, ದೊಡ್ಡ ಮೊತ್ತ ದಾಖಲಾಗುವ ಸಾಧ್ಯತೆ ಹೆಚ್ಚು.

ಪಂದ್ಯ ಆರಂಭ: ಮಧ್ಯಾಹ್ನ 3.30ಕ್ಕೆ, ನೇರ ಪ್ರಸಾರ: ಸ್ಟಾರ್‌ ಸ್ಪೋರ್ಟ್ಸ್‌/ಜಿಯೋ ಹಾಟ್‌ಸ್ಟಾರ್‌

 

 

ರಾಯಲ್ಸ್‌ಗೆ ಡು ಆರ್‌ ಡೈ ಪಂದ್ಯ

ನವದೆಹಲಿ: ಪ್ಲೇ-ಆಫ್‌ ರೇಸ್‌ನಲ್ಲಿ ಉಳಿಯುವ ವಿಶ್ವಾಸದೊಂದಿಗೆ ಭಾನುವಾರ ರಾಜಸ್ಥಾನ ರಾಯಲ್ಸ್‌ ತಂಡ ಡೆಲ್ಲಿ ಕ್ಯಾಪಿಟಲ್ಸ್‌ ವಿರುದ್ಧ ಸೆಣಸಲಿದೆ. ಬಾಕಿ ಇರುವ 3 ಪಂದ್ಯಗಳನ್ನು ಗೆದ್ದರಷ್ಟೇ ರಾಜಸ್ಥಾನಕ್ಕೆ ಪ್ಲೇ-ಆಫ್‌ ಪ್ರವೇಶಿಸುವ ಅವಕಾಶ ಇರಲಿದೆ. ಹೀಗಾಗಿ, ತಂಡಕ್ಕೆ ಎಲ್ಲಾ ಪಂದ್ಯಗಳೂ ಮಾಡು ಇಲ್ಲವೇ ಮಡಿ ಪಂದ್ಯ ಎನಿಸಿದೆ. ರಾಜಸ್ಥಾನ ಕಳೆದ 5 ಪಂದ್ಯಗಳಲ್ಲಿ 3ರಲ್ಲಿ ಸೋತಿದ್ದು, ಕಳೆದ 2 ವಾರಗಳಲ್ಲಿ ಕೇವಲ 2 ಪಂದ್ಯ ಆಡಿದೆ. ಹೀಗಾಗಿ, ಸ್ಥಿರತೆ ಉಳಿಸಿಕೊಳ್ಳುವುದು ಬಹಳ ಮುಖ್ಯ. ಮತ್ತೊಂದೆಡೆ ಡೆಲ್ಲಿ ಪ್ಲೇ-ಆಫ್‌ಗೇರುವ ಸಾಧ್ಯತೆ ತೀರಾ ಕಡಿಮೆ. ತಂಡಕ್ಕೆ ಇನ್ನೆರಡು ಪಂದ್ಯ ಬಾಕಿ ಇದ್ದು, ಎರಡನ್ನೂ ಗೆದ್ದರೂ ಪ್ಲೇ-ಆಫ್‌ಗೇರುವುದು ಕಷ್ಟ. ಈ ಪಂದ್ಯ ವೈಭವ್‌ ಸೂರ್ಯವಂಶಿ ಹಾಗೂ ಮಿಚೆಲ್‌ ಸ್ಟಾರ್ಕ್‌ ನಡುವಿನ ಪೈಪೋಟಿಯಿಂದಾಗಿ ಕುತೂಹಲ ಹೆಚ್ಚಿಸಿದೆ.

ಪಂದ್ಯ ಆರಂಭ: ಸಂಜೆ 7.30ಕ್ಕೆ

PREV

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ಐಪಿಎಲ್‌ನಲ್ಲಿ ಟಿಕೆಟ್ ಕಳ್ಳಾಟ, ಡಿಸಿ-ಆರ್‌ಸಿಬಿ ಟಿಕೆಟ್ 80,000 ರೂಗೆ ಮಾರಾಟ, DDCAಗೆ ಪೊಲೀಸ್ ನೋಟಿಸ್
14,000 ಟಿ20 ರನ್ ಗಳಿಸಿದ 5 ವೇಗದ ಬ್ಯಾಟ್ಸ್‌ಮನ್‌ಗಳು: ವಿರಾಟ್ ಕೊಹ್ಲಿ ನಂ.1, 2ನೇ ಸ್ಥಾನದಲ್ಲೂ RCB ಸ್ಟಾರ್!