
ರಾಯ್‌ಪುರ್ (ಮೇ.14) ಐಪಿಎಲ್ ಟೂರ್ನಿಯಲ್ಲಿ ಆರ್‌ಸಿಬಿ ಅದ್ಭುತ ಗೆಲುವಿನೊಂದಿಗೆ ಅಂಕಪಟ್ಟಿಯಲ್ಲಿ ಮೊದಲ ಸ್ಥಾನಕ್ಕೇರಿದೆ. ಜೊತೆಗೆ ಪ್ಲೇ ಆಫ್ ಸ್ಥಾನ ಬಹುತೇಕ ಖಚಿತಪಡಿಸಿಕೊಂಡಿದೆ. ಕೆಕೆಆರ್ ವಿರುದ್ಧದ ಪಂದ್ಯದಲ್ಲಿ ವಿರಾಟ್ ಕೊಹ್ಲಿ ಆಕರ್ಷಕ ಸೆಂಚುರಿ ಸಿಡಿಸಿ ಪಂದ್ಯ ಗೆಲ್ಲಿಸಿಕೊಟ್ಟಿದ್ದರು. ಈ ಪಂದ್ಯದ ನಡುವೆ ಬ್ಯಾಟಿಂಗ್ ಮಾಡುತ್ತಿದ್ದ ವಿರಾಟ್ ಕೊಹ್ಲಿ ಆಡಿದ ಮಾತು ಭಾರಿ ವೈರಲ್ ಆಗಿದೆ. ಕೊಹ್ಲಿ ಮಾತುಗಳು ಸ್ಟಂಪ್ ಮೈಕ್‌ನಲ್ಲಿ ಸೆರೆಯಾಗಿದೆ.
ಬ್ಯಾಟಿಂಗ್ ಮಾಡುತ್ತಿದ್ದ ವಿರಾಟ್ ಕೊಹ್ಲಿ ಪಕ್ಕದಲ್ಲೇ ಫೀಲ್ಡಿಂಗ್ ಮಾಡುತ್ತಿದ್ದ ಕನ್ನಡಿಗ, ಕೆಕೆಆರ್ ತಂಡದ ಆಟಗಾರ ಮನೀಶ್ ಪಾಂಡೆ ಜೊತೆ ಮಾತನಾಡಿದ್ದಾರೆ. ಮನೀಶ್ ಪಾಂಡೆ ಜೊತೆ ತಮಾಷೆ, ಹಾಸ್ಯ ಚಟಾಕಿ ಸಿಡಿಸಿದ ವಿರಾಟ್ ಕೊಹ್ಲಿ ನಾನು ಈಗ ಯಾವ ಶಾಟ್ ಬೇಕಾದರೂ ಹೊಡೆಯಲು ಪ್ರಯತ್ನಿಸುತ್ತೇನೆ. ಸ್ಕೂಪ್ ಶಾಟ್ ಕುರಿತು ಹೇಳುತ್ತಾ ವಿರಾಟ್ ಕೊಹ್ಲಿ ಮಾತನಾಡಿದ್ದಾರೆ. ನನಗೇನು ಈಗ ಟೀಂ ಇಂಡಿಯಾಗೆ ಆಡಬೇಕಿಲ್ಲ. ಹೀಗಾಗಿ ಯಾವ ಶಾಟ್ ಬೇಕಾದರು ಹೊಡೆಯಬಹುದು ಎಂದು ಮನೀಶ್ ಪಾಂಡೆಗೆ ಹೇಳಿದ್ದಾರೆ. ಕೊಹ್ಲಿ ಮಾತುಗಳು ಭಾರಿ ವೈರಲ್ ಆಗಿದೆ.
ಐಪಿಎಲ್ ಟೂರ್ನಿಯ ಹಲವು ಕ್ರಿಕೆಟಿಗರಿಗೆ ಟೀಂ ಇಂಡಿಯಾದ ಟಿ20 ಸೇರಿದಂತೆ ಇತರ ಮಾದರಿ ತಂಡ ಸೇರಲು ಇರವ ಮುಖ್ಯ ದಾರಿ. ಆದರೆ ವಿರಾಟ್ ಕೊಹ್ಲಿ ಟಿ20 ಮಾದರಿಗೆ ವಿದಾಯ ಹೇಳಿದ್ದಾರೆ. ಹೀಗಾಗಿ ವಿರಾಟ್ ಕೊಹ್ಲಿ ಧೈರ್ಯವಾಗಿ ಯಾವುದೇ ಕ್ರಿಕೆಟ್ ಶಾಟ್ ಪ್ರಯತ್ನಿಸಬಹುದು ಎಂದಿದ್ದಾರೆ. ಕಾರಣ ಅಪಾಯಾಕಾರಿ ಅಥವಾ ಔಟ್ ಸಾಧ್ಯತೆ ಶಾಟ್ ಪ್ರಯತ್ನಸಿದಾಗ ವಿಕೆಟ್ ಕೈಚೆಲ್ಲಿದರೂ ಟೀಂ ಇಂಡಿಯಾಗೆ ಆಯ್ಕೆಯಾಗಲ್ಲ ಅನ್ನೋ ಆತಂಕ, ಒತ್ತಡವಿಲ್ಲ ಅನ್ನೋ ಅರ್ಥದಲ್ಲಿ ವಿರಾಟ್ ಕೊಹ್ಲಿ ಮಾತನಾಡಿದ್ದಾರೆ.
ಇನ್ನು ಟೀಂ ಇಂಡಿಯಾದ ಪರ ಆಡುವಾಗ ಈ ರೀತಿಯ ಶಾಟ್ಸ್ ಪ್ರಯತ್ನಿಸಲು ಸಾಧ್ಯವಿಲ್ಲ. ಜವಾಬ್ದಾರಿಯುತ ಆಟ ಆಡಬೇಕು. ತಂಡವನ್ನು ಗೆಲುವಿನ ದಡ ಸೇರಿಸುವ ಜವಾಬ್ದಾರಿ ಇರುತ್ತದೆ. ಇದೀಗ ಟೀಂ ಇಂಡಿಯಾದ ಟಿ20 ಹಾಗೂ ಟೆಸ್ಟಚ್ ಮಾದರಿಯಿಂದ ವಿದಾಯ ಹೇಳಿರವು ವಿರಾಟ್ ಕೊಹ್ಲಿಗೆ ಈ ರೀತಿಯ ಯಾವುದೇ ಒತ್ತಡವಿಲ್ಲ ಎಂಬುದನ್ನು ಮನೀಶ್ ಪಾಂಡೆಗೆ ತಮ್ಮ ಮಾತಿನ ಮೂಲಕ ಹೇಳಿದ್ದಾರೆ.
ಕೆಕೆಆರ್ ವಿರುದ್ಧ ಪಂದ್ಯದಲ್ಲಿ ಕೊಹ್ಲಿ ಅಜೇಯ 105 ರನ್ ಸಿಡಿಸಿದರು. ಈ ಮೂಲಕ 19.1 ಓವರ್‌ಗಳಲ್ಲಿ ಪಂದ್ಯ ಗೆಲ್ಲಿಸಿಕೊಟ್ಟಿದ್ದರು. ಕೊಹ್ಲಿ ಅಬ್ಬರದಿಂದ ಆರ್‌ಸಿಬಿ ಯಾವುದೇ ಆತಂಕವಿಲ್ಲದ ಪಂದ್ಯ ಗೆದ್ದಿಕೊಂಡಿತ್ತು. ಕೊಹ್ಲಿಯ ಏಕಾಂಗಿ ಹೋರಾಟದಿಂದ ಇದೀಗ ಅಂಕಪಟ್ಟಿಯಲ್ಲಿ ಆರ್‌ಸಿಬಿ ಮೊದಲ ಸ್ಥಾನಕ್ಕೇರಿದೆ
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.