ಮಳೆಯಿಂದ ವಿಳಂಬವಾದ ಪಂದ್ಯದಲ್ಲಿ ಟಾಸ್ ಗೆದ್ದ ಆರ್‌ಸಿಬಿ, ಓವರ್ ಕಡಿತ ಇದೆಯಾ?

Published : May 13, 2026, 08:43 PM ISTUpdated : May 13, 2026, 08:48 PM IST
KKR vs RCB

ಸಾರಾಂಶ

ಕೆಕೆಆರ್ ವಿರುದ್ದದ ಪಂದ್ಯದಲ್ಲಿ ಆರ್‌ಸಿಬಿ ಟಾಸ್ ಗೆದ್ದು ಫೀಲ್ಡಿಂಗ್ ಆಯ್ಕೆ ಮಾಡಿಕೊಂಡಿದೆ. ಮಳೆಯಿಂದ ವಿಳಂಬವಾಗಿ ಪಂದ್ಯ ಆರಂಭಗೊಂಡಿದೆ. ಹೀಗಾಗಿ ಓವರ್ ಕಡಿತ ಇದೆಯಾ, ತಂಡದ ಬದಲಾವಣೆ ಏನು?

ರಾಯ್‌ಪುರ್ (ಮೇ.13) ಕೋಲ್ಕತಾ ನೈಟ್ ರೈಡರ್ಸ್ ವಿರುದ್ದದ ಮಹತ್ವದ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಟಾಸ್ ಗೆದ್ದು ಫೀಲ್ಡಿಂಗ್ ಆಯ್ಕೆ ಮಾಡಿಕೊಂಡಿದೆ. ಮಳೆಯಿಂದ ಪಂದ್ಯ ವಿಳಂಬವಾಗಿ ಆರಂಭಗೊಂಡಿದೆ. ಇದರ ಜೊತೆಗೆ ರಾಯ್‌ಪುರ ಬ್ಯಾಟಿಂಗ್ ಸ್ನೇಹಿ ಪಿಚ್ ಆಗಿದೆ. ಹೀಗಾಗಿ ಆರ್‌ಸಿಬಿಗೆ ಟಾಸ್ ವರವಾಗಿದೆ. ಆರ್‌ಸಿಬಿ ತಂಡದಲ್ಲಿ ಒಂದು ಬದಲಾವಣೆ ಮಾಡಲಾಗಿದೆ. ಒಂದು ಬದಲಾವಣೆ ಮಾಡಲಾಗಿದ್ದು, ರೊಮಾರಿಯೋ ಶೆಫರ್ಡ್ ಬದಲು ವೆಂಕಟೇಶ್ ಅಯ್ಯರ್ ತಂಡ ಸೇರಿಕೊಂಡಿದ್ದಾರೆ.

ಆರ್‌ಸಿಬಿ ಪ್ಲೇಯಿಂಗ್ 11

ಜೇಕಬ್ ಬೆತೆಲ್, ವಿರಾಟ್ ಕೊಹ್ಲಿ, ರಜತ್ ಪಾಟಿದಾರ್ (ನಾಯಕ), ಜಿತೇಶ್ ಶರ್ಮಾ, ಟಿಮ್ ಡೇವಿಡ್, ವೆಂಕಟೇಶ್ ಅಯ್ಯರ್, ಕ್ರುನಾಲ್ ಪಾಂಡ್ಯ,ಭುವನೇಶ್ವರ್ ಕುಮಾರ್, ರಸಿಕ್ ಸಲಾಮ್ ದಾರ್, ಜೇಕಬ್ ಡಫಿ, ಜೋಶ್‌ಹೇಜಲ್‌ವುಡ್

ಕೆಕೆಆರ್ ಪ್ಲೇಯಿಂಗ್ 11

ಅಜಿಂಕ್ಯ ರಹಾನೆ (ನಾಯಕ), ಫಿನ್ ಅಲೆನ್, ಕ್ಯಾಮರೂನ್ ಗ್ರೀನ್, ಅಂಗ್ಕ್ರಿಶ್ ರಘುವಂಶಿ, ರೊವ್ಮನ್ ಪೊವೆಲ್, ಮನೀಶ್ ಪಾಂಡೆ, ರಿಂಕು ಸಿಂಗ್, ಸುನಿಲ್ ನರೈನ್, ಅಂಕುಲ್ ರಾಯ್, ವೈಭವ್ ಅರೋರ, ಕಾರ್ತಿಕ್ ತ್ಯಾಗಿ

ಕೆಕೆಆರ್ ತಂಡದಲ್ಲೂ ಒಂದು ಬದಲಾವಣೆ ಮಾಡಲಾಗಿದೆ. ವರುಣ್ ಚಕ್ರವರ್ತಿ ಇಂಜುರಿಯಿಂದ ತಂಡದಿಂದ ಹೊರಗುಳಿದಿದ್ದಾರೆ. ಚಕ್ರವರ್ತಿ ಬದಲು ಸೌರಬ್ ದುಬೆ ತಂಡ ಸೇರಿಕೊಂಡಿದ್ದಾರೆ. ಕೆಕೆಆರ್ ಕೂಡ ಮೊದಲು ಬೌಲಿಂಗ್ ಮಾಡಲು ಬಯಸಿತ್ತು. ಆದರೆ ಆರ್‌ಸಿಬಿ ಟಾಸ್ ಗೆದ್ದ ಕಾರಣ ಕೆಕೆಆರ್ ಕನಸು ನುಚ್ಚು ನೂರಾಗಿದೆ. ಇದೀಗ ಕೆಕೆಆರ್ ಇನ್ನುಳಿದ ಎಲ್ಲಾ ಪಂದ್ಯದಲ್ಲಿ ಗೆದ್ದು ಪ್ಲೇ ಆಫ್ ಅದೃಷ್ಠ ಪರೀಕ್ಷೆ ನಡೆಸಲು ಮುಂದಾಗಿದೆ.

ಪಂದ್ಯದ ಓವರ್ ಕಡಿತೆ ಇದೆಯಾ

ಮಳೆಯಿಂದ ಟಾಸ್ ಪ್ರಕ್ರಿಯೆ ವಿಳಂವಾಗಿದೆ. ಹೀಗಾಗಿ ಪಂದ್ಯ ಆರಂಭಗೊಂಡ ಸುಮಾರು ಒಂದು ಗಂಟೆಗೂ ಹೆಚ್ಚು ಕಾಲ ವಿಳಂಬವಾಗಿದೆ. ಆದರೆ ಪಂದ್ಯದ ಓವರ್ ಕಡಿತ ಮಾಡಿಲ್ಲ. ಹೀಗಾಗಿ ಅಭಿಮಾನಿಗಳಿಗೆ ಫುಲ್ ಪಂದ್ಯ ಲಭ್ಯವಿದೆ. ಇಷ್ಟೇ ಅಲ್ಲ ಪ್ಲೇಆಫ್ ಲೆಕ್ಕಾಚಾರದಿಂದ ಈ ಪಂದ್ಯ ಪ್ರಮುಖವಾಗಿದೆ.

 

PREV

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

RCB vs KKR ಪ್ಲೇ ಆಫ್ ಲೆಕ್ಕಾಚಾರದ ಮಹತ್ವದ ಪಂದ್ಯಕ್ಕೆ ಮಳೆ ಅಡ್ಡಿ, ಟಾಸ್ ವಿಳಂಬ
ಟಿ20 ಕ್ರಿಕೆಟ್ ಇತಿಹಾಸದಲ್ಲೇ ಯಾರು ಮಾಡದ ದಾಖಲೆ ಬರೆದ ವೈಭವ್, ದಿಗ್ಗಜರ ರೆಕಾರ್ಡ್ ಪುಡಿಪುಡಿ