ಹರಾಜಿಗಿದ್ದಾರೆ ರಾಹುಲ್, ಪಂತ್! ಕಪ್ ಗೆಲ್ಲಿಸಿಕೊಟ್ಟ ಕೆಕೆಆರ್ ನಾಯಕ ಶ್ರೇಯಸ್ ಅಯ್ಯರ್ ತಂಡದಿಂದ ಔಟ್

By Kannadaprabha News  |  First Published Nov 1, 2024, 12:33 PM IST

ಎಲ್ಲಾ 10 ತಂಡಗಳು ಮೆಗಾ ಹರಾಜಿಗೂ ಮುನ್ನ ಸಾಕಷ್ಟು ಅಳೆದುತೂಗಿ ತಮಗೆ ಬೇಕಾದ ಆಟಗಾರರನ್ನು ರೀಟೈನ್ ಮಾಡಿಕೊಂಡಿವೆ. ಈ ಕುರಿತಾದ ರಿಪೋರ್ಟ್ ಇಲ್ಲಿದೆ ನೋಡಿ


ನವದೆಹಲಿ: ಕೋಟ್ಯಂತರ ಅಭಿಮಾನಿಗಳು, ಫ್ರಾಂಚೈಸಿಗಳು, ಆಟಗಾರರ ನಿದ್ದೆಗೆಡಿಸಿದ್ದ ಐಪಿಎಲ್ ರೀಟೆನ್ಶನ್ ಕುತೂಹಲಕ್ಕೆ ಕೊನೆಗೂ ತೆರೆಬಿದ್ದಿದೆ. 18ನೇ ಆವೃತ್ತಿಯ ಐಪಿಎಲ್‌ ಮುನ್ನ ಎಲ್ಲಾ 10 ಫ್ರಾಂಚೈಸಿಗಳು ತಮ್ಮ ತಂಡದಲ್ಲೇ ಉಳಿಸಿಕೊಳ್ಳುವ ಆಟಗಾರರ ಪಟ್ಟಿಯನ್ನು ಗುರುವಾರ ಪ್ರಕಟಿಸಿವೆ. ವಿರಾಟ್ ಕೊಹ್ಲಿ, ಹೈನ್ರಿಚ್ ಕ್ಲಾಸೆನ್ ಬಂಪರ್ ಮೊತ್ತಕ್ಕೆ ರೀಟೈನ್ ಆದರೆ, ಕೆ. ಎಲ್.ರಾಹುಲ್, ಶ್ರೇಯಸ್ ಅಯ್ಯರ್, ರಿಷಭ್ ಪಂತ್, ಮೊಹಮದ್ ಶಮಿ ಸೇರಿದಂತೆ ಪ್ರಮುಖ ಆಟಗಾರರು ತಮ್ಮ ತಂಡಗಳಿಂದ ಹೊರಬಿದ್ದಿದ್ದು, ಹರಾಜಿನಲ್ಲಿ ಪಾಲ್ಗೊಳ್ಳಲಿದ್ದಾರೆ.

ಕಳೆದ ಬಾರಿ ತಂಡದಲ್ಲಿದ್ದ ಆಟಗಾರರ ಪೈಕಿ ಗರಿಷ್ಠ ಆರು ಮಂದಿಯನ್ನು ಮುಂದಿನ ಆವೃತ್ತಿಗೂ ಮುನ್ನ ತಂಡದಲ್ಲೇ ಉಳಿಸಿಕೊಳ್ಳುವ ಅವಕಾಶ ಫ್ರಾಂಚೈಸಿ ಗಳಿಗಿದ್ದವು. ಗರಿಷ್ಠ ಐವರು ಅಂತಾರಾಷ್ಟ್ರೀಯ ಪಂದ್ಯವಾಡಿದ ಮತ್ತು ಗರಿಷ್ಠ ಇಬ್ಬರು ಅನ್ ಕ್ಯಾಪ್ (ಅಂತಾರಾಷ್ಟ್ರೀಯ ಪಂದ್ಯವಾಡದ) ಆಟಗಾರರು ಸೇರಿ ಗರಿಷ್ಠ 6 ಆಟಗಾರರನ್ನು ತಂಡ ರೀಟೈನ್ ಮಾಡಿಕೊಳ್ಳಬಹುದಿತ್ತು. ಈ ಪೈಕಿ ರಾಜಸ್ಥಾನ, ಕೋಲ್ಕತಾ ಗರಿಷ್ಠ 6 ಆಟಗಾರರನ್ನು ರೀಟೈನ್ ಮಾಡಿಕೊಂಡರೆ, ಪಂಜಾಬ್ ಕಿಂಗ್ಸ್ ಕೇವಲ ಇಬ್ಬರನ್ನು ತನ್ನಲ್ಲೇ ಉಳಿಸಿಕೊಂಡಿತು. 

Latest Videos

undefined

₹ 37 ಕೋಟಿಗೆ ಕೇವಲ ಮೂವರನ್ನು ಉಳಿಸಿಕೊಂಡ ಆರ್‌ಸಿಬಿ, ವಿರಾಟ್‌ ಕೊಹ್ಲಿಗೆ ಕೊಟ್ಟಿದ್ದೆಷ್ಟು?

ಆರ್‌ಸಿಬಿಗೆ ಕೊಹ್ಲಿ, ರಜತ್, ದಯಾಳ್

ಆರ್‌ಸಿಬಿ ಈ ಬಾರಿ ಕೇವಲ ಮೂವರು ಆಟಗಾರರನ್ನು ತಂಡದಲ್ಲಿ ಉಳಿಸಿಕೊಂಡಿತು. ಕೊಹ್ಲಿ ಜೊತೆ ರಜತ್ ಪಾಟೀದಾರ್‌ ಹಾಗೂ ಯಶ್ ದಯಾಳ್ ಸ್ಥಾನ ಗಿಟ್ಟಿಕೊಂಡರು. ವಿಲ್ ಜ್ಯಾಕ್ಸ್, ಗ್ಲೆನ್ ಮ್ಯಾಕ್ಸ್‌ವೆಲ್, ಮೊಹಮದ್ ಸಿರಾಜ್, ಕ್ಯಾಮರೂನ್ ಗ್ರೀನ್ ತಂಡದಿಂದ ಹೊರಬಿದ್ದರು.

ಬಂಪರ್ ಮೊತ್ತ: ಆರ್‌ಸಿಬಿ ನಿರೀಕ್ಷೆಯಂತೆಯೇ ವಿರಾಟ್ ಕೊಹ್ಲಿಯನ್ನು ₹21 ಕೋಟಿ ರುಪಾಯಿಗೆ ರೀಟೈನ್ ಮಾಡಿಕೊಂಡಿತು. ಅತ್ತ ಸನ್‌ರೈಸರ್ಸ್ ಹೈನ್ರಿಚ್ ಕ್ಲಾಸೆನ್‌ರನ್ನು 23 ಕೋಟಿ ನೀಡಿ ತಂಡದಲ್ಲೇ ಉಳಿಸಿಕೊಂಡಿತು. ರೋಹಿತ್, ಬುಮ್ರಾ, ಸೂರ್ಯಕುಮಾರ್, ಗಿಲ್, ಜಡೇಜಾ ಹೆಡ್ ಸೇರಿ ಪ್ರಮುಖರು ರೀಟೈನ್ ಆದರು.

ಇಂದಿನಿಂದ ಹಾಂಕಾಂಗ್‌ ಸಿಕ್ಸ್ ಕ್ರಿಕೆಟ್‌: 12 ತಂಡಗಳು ಕಣಕ್ಕೆ; ಭಾರತ ತಂಡಕ್ಕೆ ಕನ್ನಡಿಗ ಕ್ಯಾಪ್ಟನ್

5 ತಂಡಗಳ ನಾಯಕರಿಗೆ ಗೇಟ್‌ಪಾಸ್!: 

ಕಳೆದ ಬಾರಿಯ 10 ತಂಡಗಳ ನಾಯಕರ ಪೈಕಿ ಐವರು ನಾಯಕರು ಈ ಬಾರಿ ತಂಡದಿಂದ ಹೊರಬಿದ್ದಿದ್ದಾರೆ. ಲಖನೌ ನಾಯಕ ಕೆ.ಎಲ್.ರಾಹುಲ್, ಕೆಕೆಆ‌ರ್‌ನ ಶ್ರೇಯಸ್ ಅಯ್ಯರ್, ಡೆಲ್ಲಿಯ ರಿಷಭ್ ಪಂತ್, ಆರ್‌ಸಿಬಿಯ ಫಾಫ್ ಡು ಪ್ಲೆಸಿಸ್ ರೀಟೈನ್ ಆಗಿಲ್ಲ. ಪಂಜಾಬ್ ಕಿಂಗ್‌ಗೆ ಕಳೆದ ಬಾರಿ ಶಿಖರ್ ಧವನ್ ನಾಯಕರಾಗಿದ್ದರೂ, ಗಾಯದಿಂದ ಹೊರಬಿದ್ದಿದ್ದರು. ಬಳಿಕ ಸ್ಯಾಮ್ ಕರನ್, ಜಿತೇಶ್ ಶರ್ಮಾ ನಾಯಕತ್ವ ವಹಿಸಿದ್ದರು. ಇಬ್ಬರೂ ಈ ಬಾರಿ ಹೊರಬಿದಿದ್ದಾರೆ.

ಪಂಜಾಬ್‌ಗೆ ಅಂ.ರಾ.ಆಟಗಾರರಿಲ್ಲ:ಪಂಜಾಬ್ ಯಾವುದೇ ಅಂತಾರಾಷ್ಟ್ರೀಯ ಆಟಗಾರರನ್ನು ರೀಟೈನ್ ಮಾಡಿಕೊಳ್ಳಲಿಲ್ಲ, ಅನ್‌ಕ್ಯಾಪ್ ಆಟಗಾರರಾದ ಶಶಾಂಕ್ ಸಿಂಗ್ ಹಾಗೂ ಪ್ರಭ್ ಸಿಮ್ರನ್‌ರನ್ನು ತಂಡದಲ್ಲಿ ಉಳಿಸಿಕೊಂಡಿತು.

ಧೋನಿಗೆ ಚೆನ್ನೈ ₹4 ಕೋಟಿ

ಧೋನಿ ಅನ್‌ಕ್ಯಾಪ್ಟ್ ಆಟಗಾರನಾಗಿ *4 ಕೋಟಿಗೆ ಚೆನ್ನೈ ತಂಡದಲ್ಲೇ ಉಳಿದುಕೊಂಡರು. ಬಿಸಿಸಿಐ ನಿಯಮದ ಪ್ರಕಾರ ಯಾವುದೇ ಆಟಗಾರ ಕಳೆದ 5 ವರ್ಷಗಳಿಂದ ಅಂತಾರಾಷ್ಟ್ರೀಯ ಪಂದ್ಯವಾಡದಿದ್ದರೆ ಅವರನ್ನು ಅನ್‌ಕ್ಯಾಪ್ ಆಟಗಾರ ಎಂದು ಪರಿಗಣಿಸಲಾಗುತ್ತದೆ.

ಕೈಬಿಟ್ಟ ಆಟಗಾರರ ಖರೀದಿಗೆ ಇದೆ ಆರ್‌ಟಿಎಮ್!

ರೀಟೆನ್ಶನ್ ವೇಳೆ ತಂಡದಿಂದ ಹೊರಬಿದ್ದ ಆಟಗಾರರನ್ನು ಖರೀದಿಸಲು ಫ್ರಾಂಚೈ ಸಿಗಳಿಗೆ ಇನ್ನೊಂದು ಅವಕಾಶ ಸಿಗಲಿದೆ. ಅದು ರೈಟ್ ಟು ಮ್ಯಾಚ್ (ಆರ್‌ಟಿಎಂ). ಅಂದರೆ, ತಾನು ಬಿಡುಗಡೆಗೊಳಿಸಿದ ಆಟಗಾರನಿಗೆ ಹರಾಜಿನಲ್ಲಿ ಬೇರೆ ಯಾವುದೇ ತಂಡ ಬಿಡ್ ಮಾಡಿದರೆ, ಆಗ ಆರ್‌ಟಿಎಂ ಕಾರ್ಡ್ ಬಳಸಿ ಆ ಆಟಗಾರನನ್ನು ಮತ್ತೆ ತಂಡಕ್ಕೆ ಸೇರಿಸಿಕೊಳ್ಳಬಹುದು.
 

click me!