ಆಪರೇಶನ್ ಸಿಂದೂರ್‌ಗೆ ಐಪಿಎಲ್ ಪಂದ್ಯದಲ್ಲಿ ಟ್ರಿಬ್ಯೂಟ್, ಲೆ.ಕರ್ನಲ್ ಧೋನಿಗೆ ಗೆಲುವಿನ ಗೌರವ

Published : May 07, 2025, 11:51 PM IST
ಆಪರೇಶನ್ ಸಿಂದೂರ್‌ಗೆ ಐಪಿಎಲ್ ಪಂದ್ಯದಲ್ಲಿ ಟ್ರಿಬ್ಯೂಟ್, ಲೆ.ಕರ್ನಲ್ ಧೋನಿಗೆ ಗೆಲುವಿನ ಗೌರವ

ಸಾರಾಂಶ

ಭಾರತೀಯ ಸೇನೆಗೆ ಐಪಿಎಲ್ ಪಂದ್ಯದಲ್ಲಿ ವಿಶೇಷ ಗೌರವ ಸಲ್ಲಿಸಲಾಗಿದೆ. ಪಾಕಿಸ್ತಾನ ಉಗ್ರ ತಾಣಗಳ ಮೇಲೆ ಸೇನೆ ನಡೆಸಿದ ಆಪರೇಶನ್ ಸಿಂದೂರ್‌ಗೆ ಬಿಸಿಸಿಐ ವಿಶೇಷ ರೀತಿಯಲ್ಲಿ ಟ್ರಿಬ್ಯೂಟ್ ಸಲ್ಲಿಸಿದೆ.

ಕೋಲ್ಕತಾ(ಮೇ.07) ಪೆಹಲ್ಗಾಂ ಉಗ್ರ ದಾಳಿಗೆ ಪ್ರತಿಯಾಗಿ ಭಾರತ ಪಾಕಿಸ್ತಾನದ ಉಗ್ರ ನೆಲೆಗಳನ್ನು ಟಾರ್ಗೆಟ್ ಮಾಡಿ ದಾಳಿ ಮಾಡಿದೆ. ಆಪರೇಶನ್ ಸಿಂದೂರ್ ಸ್ಟ್ರೈಕ್‌ಗೆ ಪಾಕಿಸ್ತಾನ ಬೆಚ್ಚಿ ಬಿದ್ದಿದೆ. ಪಾಕಿಸ್ತಾನದ 60ಕ್ಕೂ ಹೆಚ್ಚು ಉಗ್ರರು ಹತರಾಗಿದ್ದಾರೆ. ಭಾರತೀಯ ಸೇನೆಯ ಈ ಆಪರೇಶ್ ಸಿಂದೂರ್‌ಗೆ ಭಾರತೀಯರು ಹೆಮ್ಮೆ ಪಟ್ಟಿದ್ದಾರೆ. ಉಗ್ರರಿಗೆ ತಕ್ಕ ಉತ್ತರ ನೀಡಿದ ಭಾರತೀಯ ಸೇನೆಗೆ ಸಲ್ಯೂಟ್ ಹೊಡೆಯುತ್ತಿದ್ದಾರೆ. ಇದೀಗ ಐಪಿಎಲ್ ಟೂರ್ನಿಯಲ್ಲೂ ಭಾರತೀಯ ಸೇನೆಗೆ ಗೌರವ ನೀಡಲಾಗಿದೆ. ಕೋಲ್ಕತಾದಲ್ಲಿ ನಡೆದ ಕೆಕೆಆರ್ ಹಾಗೂ ಸಿಎಸ್‌ಕೆ ನಡುವಿನ ಪಂದ್ಯದಲ್ಲಿ ಭಾರತೀಯ ಸೇನೆಗೆ ವಿಶೇಷ ಗೌರವ ನಮನ ಸಲ್ಲಿಸಲಾಗಿದೆ.

ಈಡನ್ ಗಾರ್ಡನ್ಸ್ ಕ್ರೀಡಾಂಗಣದಲ್ಲಿ ಕೆಕೆಆರ್ ಹಾಗೂ ಸಿಎಸ್‌ಕೆ ಪಂದ್ಯ ಆರಂಭಕ್ಕೂ ಮೊದಲು ಭಾರತೀಯ ಸೇನೆಗೆ ಗೌರವ ಸೂಚಿಸಲಾಗಿದೆ. ಪಂದ್ಯ ಆರಂಭಕ್ಕೂ ಮೊದಲು ರಾಷ್ಟ್ರೀಗೀತೆ ಹಾಕಲಾಗಿದೆ. ಇದೇ ವೇಳೆ ಡಿಜಿಟಲ್ ಸೈನ್ ಬೋರ್ಡ್‌ಗಳಲ್ಲಿ ಭಾರತೀಯ ಸಶಸ್ತ್ರ ಪಡೆಗೆ ಬಗ್ಗೆ ಹೆಮ್ಮೆ ಇದೆ ಅನ್ನೋ ಬರಹಗಳನ್ನುಹಾಕಲಾಗಿತ್ತು. ಈ ಮೂಲಕ ಐಪಿಎಲ್ ಕ್ರಿಕೆಟಿಗರು ಭಾರತೀಯ ಸೇನೆಗೆ ವಿಶೇಷ ಗೌರವ ನೀಡಲಾಗಿದೆ. 

ಚೆನ್ನೈ ಎದುರು ಸೋತ ಹಾಲಿ ಚಾಂಪಿಯನ್‌ ಕೆಕೆಆರ್ ಪ್ಲೇ ಆಫ್ ಹಾದಿ ಬಹುತೇಕ ಬಂದ್!

ಈಡನ್ ಗಾರ್ಡನ್ಸ್ ಮೈದಾನದಲ್ಲಿ ಅಭಿಮಾನಿಗಳು ಎದ್ದು ನಿಂತು ಭಾರತೀಯ ಸೇನೆಗೆ ಗೌರವ ಸೂಚಿಸಿದ್ದಾರೆ. ಈ ವಿಶೇಷ ಕ್ಷಣಕ್ಕೆ ಐಪಿಎಲ್ ಟೂರ್ನಿಯ ಕೆಕೆಆರ್ ಹಾಗೂ ಸಿಎಸ್‌ಕೆ ನಡುವಿನ ಪಂದ್ಯ ಸಾಕ್ಷಿಯಾಗಿದೆ. ಬಿಸಿಸಿಐ ಭಾರತೀಯ ಸಶಸ್ತ್ರ ಪಡೆಗೆ ಗೌರವ ಸೂಚಿಲು ನಿರ್ಧರಿಸಿತ್ತು. ಇದರಂತೆ ಎರಡೂ ತಂಡ ಕ್ರಿಕೆಟಿಗರು, ಸಿಬ್ಬಂದಿ, ಗ್ರೌಂಡ್ ಸಿಬ್ಬಂದಿ, ಅಭಿಮಾನಿಗಳು, ಬಿಸಿಸಿಐ ಅಧಿಕಾರಿಗಳು ಸೇರಿದಂತೆ ಎಲ್ಲರೂ ಆಪರೇಶನ್ ಸಿಂದೂರ್ ಯಶಸ್ವಿಯಾಗಿ ಮಾಡಿ ಮುಗಿಸಿದ ಭಾರತೀಯ ಸಶಸ್ತ್ರ ಪಡೆಗೆ ಗೌರವ ಸೂಚಿಸಲಾಗಿದೆ.

ಲೆ.ಕರ್ನಲ್ ಧೋನಿಗೆ ಗೆಲುವಿನ ಗೌರವ
ಆಪರೇಶನ್ ಸಿಂದೂರ್ ನಡೆಸಿದ ದಿನವೇ ನಡೆದ ಪಂದ್ಯದಲ್ಲಿ ಬಿಸಿಸಿಐ ಭಾರತೀಯ ಸಶಸ್ತ್ರ ಪಡೆಗೆ ಗೌರವ ಸೂಚಿಸಿದೆ. ವಿಶೇಷ ಅಂದರೆ ಈ ಪಂದ್ಯ ಕೆಕೆಆರ್ ಹಾಗೂ ಸಿಎಸ್‌ಕೆ ಪಂದ್ಯವಾಗಿತ್ತು. ಇದು ವಿಶೇಷ ಏಕಂದರೆ ಭಾರತೀಯ ಸೇನೆಯ ಪ್ಯಾರಾಚ್ಯೂಟ್ ರಿಜಿಮೆಂಟ್‌ನಲ್ಲಿ ಸಿಎಸ್‌ಕೆ ನಾಯಕ ಎಂಎಸ್ ಧೋನಿ ಗೌರವ ಲೆಫ್ಟಿನೆಂಟ್ ಕರ್ನಲ್ ಸ್ಥಾನ ಪಡೆದಿದ್ದಾರೆ. ಇತ್ತ ಸತತ ಸೋಲಗಳಿಗಳಿಂದ ಕಂಗೆಟ್ಟಿದ್ದ ಸಿಎಸ್‌ಕೆ ಸೇನೆಗೆ ಗೌರವ ಸೂಚಿಸಿ ಆಡಿದ ಪಂದ್ಯದಲ್ಲಿ ರೋಚಕ ಗೆಲುವು ಕಂಡಿದೆ. ಸಿಎಸ್‌ಕೆ 2 ವಿಕೆಟ್ ಗೆಲುವು ದಾಖಲಿಸಿದೆ. ಈ ಪಂದ್ಯದಲ್ಲಿ ಲೆಫ್ಟಿನೆಂಟ್ ಕರ್ನಲ್ ಧೋನಿಗೂ ಗೆಲುವಿನ ಗೌರವ ಸಿಕ್ಕಿದೆ. ಸೇನೆಯಲ್ಲಿ ಗೌರವ ರ್ಯಾಂಕ್ ಹೊಂದಿರುವ ಧೋನಿ, ಆಪರೇಶನ್ ಸಿಂದೂರ್ ನಡೆಸಿದ ಭಾರತೀಯ ಸಶಸ್ತ್ರ  ಪಡೆಗೆ ನೀಡಿದ ಗೌರವ ಸೂಚಕ ಪಂದ್ಯದಲ್ಲೇ ಗೆಲುವು ದಾಖಲಿಸಿದ್ದಾರೆ. 

 

 

ದೇಶಾದ್ಯಂತ ಭಾರತೀಯ ಸೇನೆಗೆ ಗೌರವ 
ದೇಶಾದ್ಯಂತ ಭಾರತೀಯ ಸೇನೆಯ ಆಪರೇಶನ್ ಸಿಂದೂರ್‌ಗೆ ಭಾರಿ ಮೆಚ್ಚುಗೆ ವ್ಯಕ್ತವಾಗುತ್ತಿದೆ. ಎಲ್ಲೆಡೆ ಭಾರತೀಯ ಸಶಸ್ತ್ರ ಪಡೆಗೆ ಗೌರವ ಸೂಚಿಸಲಾಗುತ್ತಿದೆ. ಸೋಶಿಯಲ್ ಮೀಡಿಯಾಗಳಲ್ಲಿ ಸೆಲೆಬ್ರೆಟಿಗಳು, ಗಣ್ಯರು ಸೇರಿದಂತೆ ಹಲವರು ಸೇನೆಗೆ ಗೌರವ ಸೂಚಿಸಿದ್ದಾರೆ.

ಆರ್‌ಸಿಬಿ ಕಪ್ ಗೆಲ್ಲೋ ಚಾನ್ಸ್ ಇದೆ, ಮೇ 25ರ ನಂತ್ರ ಪಾಕ್ ಮೇಲೆ ಯುದ್ದ ಮಾಡಿ ಎಂದ ಅಭಿಮಾನಿ!


 

PREV

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ಜೈಸ್ವಾಲ್‌ ಸಖತ್‌ ಸೆಂಚುರಿ, ಟೆಸ್ಟ್‌ ಸರಣಿ ಸೋಲಿಗೆ ಏಕದಿನದಲ್ಲಿ ಸೇಡು ತೀರಿಸಿಕೊಂಡ ಭಾರತ!
ಫೋಟೋ ಹಂಚಿಕೊಂಡು 'ಡಾರ್ಲಿಂಗ್‌..' ಎಂದು ಬರೆದ ಸಾರಾ ತೆಂಡುಲ್ಕರ್‌