ಮುಂಬೈ ಇಂಡಿಯನ್ಸ್ ಮತ್ತು ಗುಜರಾತ್ ಟೈಟಾನ್ಸ್ ಅಹಮದಾಬಾದ್‌ನಲ್ಲಿ ಸೆಣಸಲಿದ್ದಾರೆ. ಉಭಯ ತಂಡಗಳು ಆರಂಭಿಕ ಪಂದ್ಯಗಳಲ್ಲಿ ಸೋಲು ಕಂಡಿವೆ. ರೋಹಿತ್, ಸೂರ್ಯಕುಮಾರ್ ಮಿಂಚಬೇಕಿದೆ.
ಅಹಮದಾಬಾದ್: ಆರಂಭಿಕ ಪಂದ್ಯಗಳಲ್ಲಿ ಸೋಲುವ ಮೂಲಕ ಈ ಬಾರಿ ಟೂರ್ನಿಗೆ ಕಾಲಿರಿಸಿದ ಮುಂಬೈ ಇಂಡಿಯನ್ಸ್ ಹಾಗೂ ಗುಜರಾತ್ ಟೈಟಾನ್ಸ್ ಶನಿವಾರದ ಪಂದ್ಯದಲ್ಲಿ ಪರಸ್ಪರ ಮುಖಾಮುಖಿಯಾಗಲಿವೆ. ಪಂದ್ಯಕ್ಕೆ ಅಹಮದಾದ್‌ನ ನರೇಂದ್ರ ಮೋದಿ ಕ್ರೀಡಾಂಗಣ ಆತಿಥ್ಯ ವಹಿಸಲಿದೆ.
ಮುಂಬೈ ತಂಡ ಮೊದಲ ಪಂದ್ಯದಲ್ಲಿ ಚೆನ್ನೈ ವಿರುದ್ದ ಸೋತಿತ್ತು. ಮತ್ತೊಂದೆಡೆ ಗುಜರಾತ್ ತಂಡ ಪಂಜಾಬ್ ವಿರುದ್ಧ ಪರಾಭವಗೊಂಡಿತ್ತು. ನಿಧಾನ ಗತಿ ಓವರ್ ಕಾರಣಕ್ಕೆ ಮೊದಲ ಪಂದ್ಯದಿಂದ ನಿಷೇಧ ಕ್ಕೊಳಗಾಗಿದ್ದ ಹಾರ್ದಿಕ್ ಮತ್ತೆ ಮುಂಬೈ ತಂಡವನ್ನು ಮುನ್ನಡೆಸಲಿದ್ದಾರೆ. ತಂಡದ ಬೌಲಿಂಗ್ ವಿಭಾಗದ ಬುಮ್ರಾ ಅನುಪಸ್ಥಿತಿಯಲ್ಲಿ ಸೊರಗಿದಂತೆ ಕಂಡು ಬಂದರೂ, ಟ್ರೆಂಟ್ ಬೌಲ್ಟ್, ಮುಜೀಬ್ ಉರ್ ರೆಹಮಾನ್, ವಿಘ್ನೇಶ್ ಪುತೂರ್ ತಂಡಕ್ಕೆ ಬಲ ತುಂಬಲಿದ್ದಾರೆ. ಬ್ಯಾಟಿಂಗ್‌ನಲ್ಲಿ ರೋಹಿತ್ ಶರ್ಮಾ, ಸೂರ್ಯಕುಮಾರ್ ಯಾದವ್, ತಿಲಕ್ ವರ್ಮಾ ಅಬ್ಬರಿಸಬೇಕಿದೆ.
ಇದನ್ನೂ ಓದಿ: ಒಂದು ವೇಳೆ ವಿಕೆಟ್ ಕೀಪರ್ ಆಗದಿದ್ರೆ ಧೋನಿ ಏನಾಗ್ತಿದ್ರು? ಇಂಟ್ರೆಸ್ಟಿಂಗ್ ಮಾಹಿತಿ ಬಿಚ್ಚಿಟ್ಟ ಕ್ಯಾಪ್ಟನ್ ಕೂಲ್!
ಮತ್ತೊಂದೆಡೆ ಮೊದಲ ಪಂದ್ಯದಲ್ಲಿ ಪಂಜಾಬ್‌ಗೆ ಬೃಹತ್ ರನ್ ಬಿಟ್ಟುಕೊಟ್ಟಿದ್ದ ಗುಜರಾತ್ ಈ ಪಂದ್ಯದಲ್ಲಾದರೂ ಸಂಘಟಿತ ಬೌಲಿಂಗ್ ದಾಳಿ ಪ್ರದರ್ಶಿಸಬೇಕಿದೆ. ಪ್ರಮುಖ ವೇಗಿ ಮೊಹಮ್ಮದ್ ಸಿರಾಜ್ ಆರಂಭಿಕ ಪಂದ್ಯದಲ್ಲಿ ಚಚ್ಚಿಸಿಕೊಂಡಿದ್ದರು. ಅವರಿಂದ ತಂಡ ಉತ್ತಮ ಆಟ ನಿರೀಕ್ಷಿಸುತ್ತಿದೆ. ಬ್ಯಾಟಿಂಗ್ ವಿಭಾಗದಲ್ಲಿ ಜೋಸ್ ಬಟ್ಲರ್, ಶುಭ್‌ಮನ್ ಗಿಲ್, ಸಾಯ್ ಸುದರ್ಶನ್ ಶಾರುಖ್ ಖಾನ್ ತಂಡಕ್ಕೆ ಬಲ ತುಂಬಲಿದ್ದಾರೆ. ರಶೀದ್ ಖಾನ್ ಆಂಡ್ ಆಟ ತಂಡಕ್ಕೆ ನಿರ್ಣಾಯಕವಾಗಿದೆ.
ಸಂಭಾವ್ಯ ಆಟಗಾರರ ಪಟ್ಟಿ:
ಮುಂಬೈ ಇಂಡಿಯನ್ಸ್:
ರೋಹಿತ್ ಶರ್ಮಾ, ರಿಕೆಲ್ಟನ್, ವಿಲ್ ಜ್ಯಾಕ್ಸ್, ಸೂರ್ಯಕುಮಾರ್ ಯಾದವ್, ತಿಲಕ್ ವರ್ಮಾ, ಹಾರ್ದಿಕ್ ಪಾಂಡ್ಯ(ನಾಯಕ), ನಮನ್ ಧೀರ್, ಮಿಚೆಲ್ ಸ್ಯಾಂಟ್ನರ್, ದೀಪಕ್ ಚಹರ್, ಟ್ರೆಂಟ್ ಬೌಲ್ಟ್, ಸತ್ಯನಾರಾಯಣ, ವಿಘ್ನೇಶ್ ಪುತೂರ್.
ಇದನ್ನೂ ಓದಿ: ಇಂಗ್ಲೆಂಡ್ ಎದುರಿನ ಟೆಸ್ಟ್ ಸರಣಿಗೆ ರೋಹಿತ್ ಶರ್ಮಾ ಗೈರು?
ಗುಜರಾತ್ ಟೈಟಾನ್ಸ್:
ಶುಭ್‌ಮನ್ ಗಿಲ್(ನಾಯಕ), ಸಾಯಿ ಸುದರ್ಶನ್, ಜೋಸ್ ಬಟ್ಲರ್, ಶೆರ್ಫಾನೆ ರುದರ್‌ಪೋರ್ಡ್, ಶಾರುಖ್ ಖಾನ್, ರಾಹುಲ್ ತೆವಾಟಿಯಾ, ರಶೀದ್ ಖಾನ್, ಅರ್ಶದ್ ಖಾನ್, ಸಾಯಿ ಕಿಶೋರ್, ಕಗಿಸೋ ರಬಾಡ, ಮೊಹಮದ್ ಸಿರಾಜ್, ಪ್ರಸಿದ್ಧ್ ಕೃಷ್ಣ.
ಪಂದ್ಯ: ಸಂಜೆ 7.30ಕ್ಕೆ
ಪ್ರಸಾರ: ಸ್ಟಾರ್ ಸ್ಪೋರ್ಟ್ಸ್, ಜಿಯೋ ಹಾಟ್‌ಸ್ಟಾರ್
ಪಿಚ್ ರಿಪೋರ್ಟ್
ಅಹಮದಾಬಾದ್ ಕ್ರೀಡಾಂಗಣದ ಪಿಚ್ ಬ್ಯಾಟಿಂಗ್ ಸ್ನೇಹಿಯಾಗಿದ್ದು, ಮತ್ತೆ ದೊಡ್ಡ ಮೊತ್ತ ದಾಖಲಾಗುವ ಸಾಧ್ಯತೆಯಿದೆ. ಇಲ್ಲಿ ಇತ್ತೀಚೆಗೆ ನಡೆದ ಪಂಜಾಬ್-ಗುಜರಾತ್ ಪಂದ್ಯದಲ್ಲಿ ಒಟ್ಟು 475 ರನ್ ಹರಿದುಬಂದಿದ್ದವು.