
ಬೆಂಗಳೂರು: ಐಪಿಎಲ್ ಸೀಸನ್‌ನಲ್ಲಿ ಚೆನ್ನೈ ಚೆಪಾಕ್‌ನಲ್ಲಿ ನಿನ್ನೆ ನಡೆದ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧದ ಪಂದ್ಯದಲ್ಲಿ ಸಿಎಸ್‌ಕೆ 25 ರನ್‌ಗಳಿಂದ ಸೋತಿದೆ. ಮೊದಲು ಬ್ಯಾಟಿಂಗ್ ಮಾಡಿದ ಡೆಲ್ಲಿ ಟೀಂ 6 ವಿಕೆಟ್ ಕಳೆದುಕೊಂಡು 183 ರನ್ ಗಳಿಸಿತು. ಕೆ.ಎಲ್.ರಾಹುಲ್ 51 ಬಾಲ್‌ನಲ್ಲಿ 77 ರನ್ ಹೊಡೆದರು. ಆಮೇಲೆ ಬ್ಯಾಟಿಂಗ್ ಮಾಡಿದ ಸಿಎಸ್‌ಕೆ 20 ಓವರ್‌ನಲ್ಲಿ 5 ವಿಕೆಟ್ ಕಳೆದುಕೊಂಡು 158 ರನ್ ಮಾತ್ರ ಗಳಿಸಿ ಸೋಲೊಪ್ಪಿಕೊಂಡಿತು.
ಸಿಎಸ್‌ಕೆ ಸೋಲು
ಸಿಎಸ್‌ಕೆ ಆರಂಭಿಕ ಬ್ಯಾಟರ್ ರಚಿನ್ ರವೀಂದ್ರ (3 ರನ್), ಡೆವೊನ್ ಕಾನ್ವೇ (13), ಋತುರಾಜ್ ಗಾಯಕ್ವಾಡ್ (5), ಶಿವಂ ದುಬೆ (18) ಅಲ್ಪಮೊತ್ತಕ್ಕೆ ವಿಕೆಟ್ ಒಪ್ಪಿಸಿದರು. ಕೊನೆವರೆಗೂ ಆಡಿದ ವಿಜಯ್ ಶಂಕರ್ (54 ಬಾಲ್‌ನಲ್ಲಿ 127 ಸ್ಟ್ರೈಕ್ ರೇಟ್‌ನಲ್ಲಿ 69 ರನ್), ಧೋನಿ (26 ಬಾಲ್‌ನಲ್ಲಿ 115 ಸ್ಟ್ರೈಕ್ ರೇಟ್‌ನಲ್ಲಿ 30 ರನ್) ಗೆಲ್ಲೋಕೆ ಟ್ರೈ ಮಾಡದೇ ನಿಧಾನವಾಗಿ ಆಡಿದರು. ಬ್ಯಾಟಿಂಗ್ ವೈಫಲ್ಯ ಅನುಭವಿಸಿದ್ದು, ಸಿಎಸ್‌ಕೆ ಸೋಲಿಗೆ ಪ್ರಮುಖ ಕಾರಣ ಎನಿಸಿಕೊಂಡಿತು.
ಧೋನಿಯಿಂದ ಆಡೋದು ಕಷ್ಟ
11ನೇ ಓವರ್‌ನಿಂದ ಬ್ಯಾಟಿಂಗ್ ಮಾಡಲಿಳಿದ ಧೋನಿಯಿಂದ ಓವರ್‌ಗೆ 10 ರನ್ ಹೊಡೆದು ಟೀಂ ಅನ್ನು ಗೆಲ್ಲಿಸೋಕೆ ಆಗಲ್ವಾ? ಅಂತ ಅಭಿಮಾನಿಗಳು ಅಸಮಾಧಾನ ಹೊರಹಾಕಿದ್ದಾರೆ. ಅವರ ಪ್ರಶ್ನೆ ಸರಿ ಇದ್ರೂ ಧೋನಿಗೆ 43 ವರ್ಷ ವಯಸ್ಸಾಗಿದೆ ಅಂತ ಎಲ್ಲರೂ ಒಪ್ಕೋಬೇಕು. 43 ವರ್ಷ ವಯಸ್ಸಲ್ಲಿ 10 ಓವರ್‌ಗಿಂತ ಜಾಸ್ತಿ ಬ್ಯಾಟಿಂಗ್ ಮಾಡಿ ಜಾಸ್ತಿ ರನ್ ಓಡಿ ಟೀಂ ಅನ್ನು ಗೆಲ್ಲಿಸೋದು ಅಂದ್ರೆ ಏನಾದ್ರೂ ಅದ್ಭುತ ನಡೆದರೆ ಮಾತ್ರ ಸಾಧ್ಯ.
ಇದನ್ನೂ ಓದಿ: ಆರ್‌ಸಿಬಿಗೆ ಪಾದಾರ್ಪಣೆ ಮಾಡಿದ ಕ್ಷಣ ನೆನೆದು ಭಾವುಕರಾದ ಕೊಹ್ಲಿ!
ಯಾಕಂದ್ರೆ ಒಬ್ಬ ಆಟಗಾರನಿಗೆ 40 ವರ್ಷ ಆದ್ಮೇಲೆ ಬಾಡಿ ಸಪೋರ್ಟ್ ಮಾಡೋದು ತುಂಬಾನೇ ಕಷ್ಟ. ''ಧೋನಿಗೆ ಮೊಣಕಾಲು ಮೊದಲಿನ ತರ ಇಲ್ಲ. ಅವರಿಂದ ಜಾಸ್ತಿ ಹೊತ್ತು ಫೀಲ್ಡಿಂಗ್ ಮಾಡೋಕೆ ಆಗಲ್ಲ'' ಅಂತ ಸಿಎಸ್‌ಕೆ ಕೋಚ್ ಸ್ಟೀಫನ್ ಫ್ಲೆಮಿಂಗ್ ಹೇಳಿದ್ದಾರೆ. ಆಮೇಲೆ ಯಾಕೆ ಧೋನಿ ಸಿಎಸ್‌ಕೆ ಟೀಂನಲ್ಲಿ ಆಡ್ತಿದ್ದಾರೆ? ಅಂತ ನೀವು ಕೇಳೋ ಪ್ರಶ್ನೆ ಅರ್ಥ ಆಗುತ್ತೆ.
ಸಿಎಸ್‌ಕೆ ಮ್ಯಾನೇಜ್‌ಮೆಂಟ್‌ಗೆ ಧೋನಿ ಬೇಕು
ಈ ಜಾಗದಲ್ಲಿ ಸಿಎಸ್‌ಕೆ ಟೀಂಗೆ ಧೋನಿ ಬೇಕಾಗಿಲ್ಲ; ಸಿಎಸ್‌ಕೆ ಮ್ಯಾನೇಜ್‌ಮೆಂಟ್‌ಗೆ ಧೋನಿ ಬೇಕು ಅಂತ ನೀವು ಅರ್ಥ ಮಾಡ್ಕೋಬೇಕು. ಸಿಎಸ್‌ಕೆ ಟೀಂ ಅನ್ನು ಸಪೋರ್ಟ್ ಮಾಡೋರಲ್ಲಿ 99% ಜನ ಧೋನಿ ಅಭಿಮಾನಿಗಳು ಅಂದ್ರೆ ತಪ್ಪಾಗಲ್ಲ. ಧೋನಿ ಆಡಿದರೂ, ಆಡದೇ ಹೋದರೂ ಕಣ್ಮುಚ್ಚಿ ಆರಾಧಿಸುವ ಒಂದು ವರ್ಗವೇ ಧೋನಿಗಿದೆ.
ಧೋನಿ ಆಟಕ್ಕೆ ಇಳಿದಾಗ ದೇವರ ರೀತಿ ಸಂಭ್ರಮಿಸೋದು, ಅವರು ಒಂದೆರಡು ಸಿಕ್ಸರ್ ಹೊಡೆದರೆ ಮ್ಯಾಚ್ ಗೆದ್ದಂಗೆ ಕುಣಿಯೋದು, ಮ್ಯಾಚ್ ಸೋತರೂ 'ತಲಾ ಧೋನಿ 2 ಸಿಕ್ಸರ್ ಹೊಡೆದರು ಅದೇ ಸಾಕು' ಅಂತ ಖುಷಿ ಪಡೋರ ಸಂಖ್ಯೆ ದೊಡ್ಡದೇ ಇದೆ.
ಇದನ್ನೂ ಓದಿ: ಚೆನ್ನೈ ಚೆಂಡಾಡಿದ 24 ವರ್ಷದ ಪ್ರಿಯಾನ್ಶ್ ಆರ್ಯಾ! ಹೊಸ ದಾಖಲೆ ನಿರ್ಮಾಣ
ಸಿಎಸ್‌ಕೆ ಮ್ಯಾನೇಜ್‌ಮೆಂಟ್ ವ್ಯಾಪಾರ ತಂತ್ರ
ಅಭಿಮಾನಿಗಳ ಈ ಪ್ರೀತಿಗೆ ಧೋನಿ ಅರ್ಹರು ಅನ್ನೋದ್ರಲ್ಲಿ ಡೌಟೇ ಇಲ್ಲ. ಕ್ರಿಕೆಟ್ ಜಗತ್ತಿನಲ್ಲಿ ಧೋನಿ ಮಾಡಿರೋ ಸಾಧನೆಗಳೇ ಇದಕ್ಕೆ ಸಾಕ್ಷಿ. ಆದ್ರೆ ಎಲ್ಲದಕ್ಕೂ ಒಂದು ಟೈಮ್ ಇರುತ್ತೆ ಅಲ್ವಾ? ಆಟ ಅಷ್ಟೇ ಅಲ್ಲ ಸಿನಿಮಾ, ರಾಜಕೀಯ ಅಂತ ಯಾವುದೇ ಫೀಲ್ಡ್ ಆದ್ರೂ ಫೇಮಸ್ ಆಗಿರೋ ಒಬ್ಬರು ಒಂದು ಟೈಮ್ ಆದ್ಮೇಲೆ ಹೊರಗೆ ಹೋಗೋದು, ಆ ಜಾಗದಲ್ಲಿ ಇನ್ನೊಬ್ಬರನ್ನು ಇಟ್ಟುಕೊಂಡು ಹೊಗಳುವುದು ಕಾಮನ್ ತಾನೇ?
'ಧೋನಿಗೆ ಎಷ್ಟು ವಯಸ್ಸಾದ್ರೆ ಏನು? ಅವರು ಆಡಬೇಕು. ಅವರು ರನ್ ಹೊಡೆಯಬೇಕು' ಅಂತ, ಗೊತ್ತಿಲ್ದೇ ಇರೋ ಅಭಿಮಾನಿಗಳನ್ನು ಇಟ್ಟುಕೊಂಡು ಸಿಎಸ್‌ಕೆ ಮ್ಯಾನೇಜ್‌ಮೆಂಟ್ ದುಡ್ಡು ಮಾಡ್ತಿದೆ ಅಂದ್ರೆ ತಪ್ಪಾಗಲ್ಲ. ಧೋನಿಗೆ 43 ವರ್ಷ ಆಗಿರೋದ್ರಿಂದ ಕಳೆದ ಸೀಸನ್ ಮುಗಿಯುವಷ್ಟರಲ್ಲಿ ಧೋನಿಯನ್ನು ರಿಟೈರ್ ಆಗೋಕೆ ಹೇಳಬಹುದಿತ್ತು. ಇಲ್ಲಾಂದ್ರೆ ನಿಮಗೆ ಬದಲಾಗಿ ಯಂಗ್ ಆಟಗಾರರಿಗೆ ಅವಕಾಶ ಕೊಡೋಣ ಅಂತ ಸಿಎಸ್‌ಕೆ ಮ್ಯಾನೇಜ್‌ಮೆಂಟ್ ಹೇಳಬಹುದಿತ್ತು.
ಅಭಿಮಾನಿಗಳನ್ನು ಖುಷಿಪಡಿಸೋ ನೆಪದಲ್ಲಿ.!
ಆದ್ರೆ ಚಿನ್ನದ ಮೊಟ್ಟೆ ಇಡೋ ಕೋಳಿಯನ್ನು ಯಾರು ತಾನೇ ಬಿಟ್ಟುಕೊಡ್ತಾರೆ. ಅದಕ್ಕೆ ಧೋನಿಯನ್ನು ಇಟ್ಟುಕೊಂಡು ಅಭಿಮಾನಿಗಳಿಗೆ ಆಸೆ ತೋರಿಸಿ ಪ್ರತಿ ಮ್ಯಾಚ್‌ನಲ್ಲೂ ಕೋಟಿ ಕೋಟಿ ದುಡ್ಡು ಮಾಡ್ತಿದೆ ಸಿಎಸ್‌ಕೆ ಮ್ಯಾನೇಜ್‌ಮೆಂಟ್. ಧೋನಿ ಒಬ್ಬರಿಂದ ಮಾತ್ರ ಅಭಿಮಾನಿಗಳು ಮ್ಯಾಚ್ ನೋಡೋಕೆ ಬರ್ತಾರೆ ಅಂತ ತಿಳ್ಕೊಂಡಿರೋ ಸಿಎಸ್‌ಕೆ, ಅವರನ್ನು ಕೊನೆ 2 ಓವರ್‌ನಲ್ಲಿ ಆಡಿಸಿ ಅಭಿಮಾನಿಗಳನ್ನು ಖುಷಿಪಡಿಸೋ ನೆಪದಲ್ಲಿ ದುಡ್ಡು ಮಾಡ್ತಿದೆ.
ಇದನ್ನೂ ಓದಿ: ಟೀಮ್ ಇಂಡಿಯಾ , RCB ಮಾಜಿ ಪ್ಲೇಯರ್, ಚೆನ್ನೈ ತಂಡದಲ್ಲಿ ಧೋನಿ ಫೇವರಿಟ್ ಆಟಗಾರ ಬಿಜೆಪಿಗೆ ಸೇರ್ಪಡೆ!
ಯಾಕಂದ್ರೆ ಸಿಎಸ್‌ಕೆ ಮ್ಯಾಚ್ ಟಿಕೆಟ್ ಬೆಲೆ ಕಡಿಮೆ ಅಂದ್ರೂ ರೂ.2,000 ಇಂದ ಶುರುವಾಗಿ ಜಾಸ್ತಿ ಅಂದ್ರೆ ರೂ.15,000 ವರೆಗೂ ಇರುತ್ತೆ. ಧೋನಿ ಆಡ್ತಾರೆ ಅಂದ್ರೆ 15,000 ರೂಪಾಯಿ ಅಂದ್ರೆ ಏನು, 50,000 ರೂಪಾಯಿ ಅಂದ್ರೆ ಏನು ಕಣ್ಣುಮುಚ್ಚಿ ಟಿಕೆಟ್ ಖರೀದಿಸಿ ಮ್ಯಾಚ್ ನೋಡೋಕೆ ಬಂದುಬಿಡ್ತಾರೆ ಅಭಿಮಾನಿಗಳು. ದೀಪಾವಳಿ, ಹಬ್ಬದ ಟೈಮ್‌ನಲ್ಲಿ ಟ್ರೈನ್‌ಗಳಲ್ಲಿ ಟಿಕೆಟ್ ಸಿಗುತ್ತೆ. ಆದ್ರೆ ಸಿಎಸ್‌ಕೆ ಮ್ಯಾಚ್ ನೋಡೋಕೆ ನಿಮಗೆ ಟಿಕೆಟ್ ಸಿಗಲ್ಲ. ಯಾಕಂದ್ರೆ ಟಿಕೆಟ್ ಸೇಲ್ ಶುರುವಾದ ಕೆಲವೇ ನಿಮಿಷಗಳಲ್ಲಿ ಎಲ್ಲಾ ಟಿಕೆಟ್‌ಗಳು ಖಾಲಿ ಆಗಿಬಿಡುತ್ತೆ.
ಬ್ಲಾಕ್ ಮಾರ್ಕೆಟ್‌ನಲ್ಲಿ ಟಿಕೆಟ್ ಸೇಲ್
ಇಷ್ಟೇ ಅಲ್ಲ, ಧೋನಿಯನ್ನು ನೋಡಿದ್ರೆ ಈ ಲೈಫ್ ಸಾರ್ಥಕ ಆಗುತ್ತೆ ಅಂತ ಅನ್ಕೊಂಡಿರೋ ಕೆಲವು ಸಿಎಸ್‌ಕೆ ಅಭಿಮಾನಿಗಳು ಬ್ಲಾಕ್ ಮಾರ್ಕೆಟ್‌ನಲ್ಲಿ ರೂ.20,000, ರೂ.40,000 ಅಂತ ಜಾಸ್ತಿ ಬೆಲೆಗೆ ಮಾರಾಟ ಮಾಡೋ ಟಿಕೆಟ್‌ಗಳನ್ನು ತಗೊಂಡು ತಲಾ ದರ್ಶನ ಮಾಡೋಕೆ ಬಂದುಬಿಡ್ತಾರೆ. ಒಂದು ವೇಳೆ ಈ ಜಾಗದಲ್ಲಿ ಧೋನಿ ಇಲ್ಲಾಂದ್ರೆ ಹೀಗೆ ಬ್ಲಾಕ್ ಮಾರ್ಕೆಟ್‌ನಲ್ಲಿ ಟಿಕೆಟ್ ಮಾರುತ್ತಾರಾ? ಇಲ್ಲಾಂದ್ರೆ ಚೆಪಾಕ್ ಸ್ಟೇಡಿಯಂ ತುಂಬಿ ತುಳುಕುತ್ತಾ? ಅದಕ್ಕೆ ಧೋನಿಯೇ ನಾನು ಹೋಗ್ತೀನಿ ಅಂದ್ರೂ, ಸಿಎಸ್‌ಕೆ ಮ್ಯಾನೇಜ್‌ಮೆಂಟ್ ಅವರನ್ನು ಬಿಟ್ಟುಕೊಡದೇ ಇರೋಕೆ ಕಾರಣ.
ಸಿಎಸ್‌ಕೆ ಅಭಿಮಾನಿಗಳು ಅರ್ಥ ಮಾಡ್ಕೋತಾರಾ?
ಆದ್ರೆ ಇಲ್ಲಿ ಸಿಎಸ್‌ಕೆ ಅಂದ್ರೆ ಅದು ಧೋನಿ ಮಾತ್ರ. ಧೋನಿ ಇಲ್ಲಾಂದ್ರೆ ಸಿಎಸ್‌ಕೆ ಇಲ್ಲ ಅನ್ನೋ ಮನಸ್ಥಿತಿ ಇರೋ ಅಭಿಮಾನಿಗಳು ಇದ್ದಾರೆ. ಇದನ್ನು ಅರ್ಥ ಮಾಡ್ಕೊಂಡಿರೋ ಸಿಎಸ್‌ಕೆ ಮ್ಯಾನೇಜ್‌ಮೆಂಟ್ ಧೋನಿಯನ್ನು ದಾಳವಾಗಿ ಇಟ್ಟುಕೊಂಡು ದುಡ್ಡು ಮಾಡ್ತಿದೆ. ನಮ್ಮ ಚಿಕ್ಕ ವಯಸ್ಸಲ್ಲಿ ಅಮ್ಮ ಚಂದ್ರನನ್ನು ತೋರಿಸಿ (ಆದ್ರೆ ಈಗ ಮೊಬೈಲ್ ತೋರಿಸ್ತಾರೆ) ಊಟ ಮಾಡಿಸ್ತಿದ್ರು. ಇದೇ ತರ ಸಿಎಸ್‌ಕೆ ಮ್ಯಾನೇಜ್‌ಮೆಂಟ್ ಪ್ರತಿ ಮ್ಯಾಚ್‌ನಲ್ಲೂ ಧೋನಿಯನ್ನು ಇಟ್ಟುಕೊಂಡು ಆಸೆ ತೋರಿಸಿ ದುಡ್ಡು ಮಾಡ್ತಿದೆ. ಇದನ್ನು ಸಿಎಸ್‌ಕೆ ಅಭಿಮಾನಿಗಳು ಅರ್ಥ ಮಾಡ್ಕೋತಾರಾ?
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.