ಏಪ್ರಿಲ್ 6ರ ಕೋಲ್ಕತಾ-ಲಖನೌ ಪಂದ್ಯ ಗುವಾಹಟಿಗೆ ಶಿಫ್ಟ್‌! ಕಾರಣ ಏನು?

ಭದ್ರತಾ ಕಾರಣಗಳಿಂದಾಗಿ ಕೋಲ್ಕತಾದಲ್ಲಿ ನಡೆಯಬೇಕಿದ್ದ ಕೆಕೆಆರ್ ಮತ್ತು ಲಖನೌ ನಡುವಿನ ಪಂದ್ಯವನ್ನು ಗುವಾಹಟಿಗೆ ಸ್ಥಳಾಂತರಿಸುವ ಸಾಧ್ಯತೆಯಿದೆ. ರಾಮನವಮಿ ಹಬ್ಬದ ಹಿನ್ನೆಲೆಯಲ್ಲಿ ಭದ್ರತಾ ಸಿಬ್ಬಂದಿಗಳ ಕೊರತೆ ಉಂಟಾಗುವ ಕಾರಣಕ್ಕೆ ಈ ನಿರ್ಧಾರ ಕೈಗೊಳ್ಳುವ ಸಾಧ್ಯತೆ ಇದೆ.

IPL 2025 April 6 match between KKR and LSG to shift from Kolkata to Guwahati kvn

ಕೋಲ್ಕತಾ: ಕೆಕೆಆರ್‌ ತನ್ನ ತವರು ನೆಲದಲ್ಲಿ ಏ.6ರಂದು ಲಖನೌ ವಿರುದ್ಧ ಆಡಬೇಕಿರುವ ಪಂದ್ಯವನ್ನು ಭದ್ರತೆಯ ಕಾರಣದಿಂದ ಗುವಾಹಟಿಗೆ ಸ್ಥಳಾಂತರ ಮಾಡುವ ಸಾಧ್ಯತೆಯಿದೆ ಎಂದು ಬಂಗಾಳದ ಕ್ರಿಕೆಟ್ ಸಂಸ್ಥೆ(ಸಿಎಬಿ) ಮುಖ್ಯಸ್ಥ ಸ್ನೇಹಾಶಿಶ್‌ ಗಂಗೂಲಿ ಹೇಳಿದ್ದಾರೆ.

ಏ.6ರಂದು ರಾಮನವಮಿ ಹಬ್ಬವನ್ನು ಪಶ್ಚಿಮ ಬಂಗಾಳದಾದ್ಯಂತ ಅದ್ಧೂರಿಯಾಗಿ ಆಯೋಜಿಸಲಾಗುತ್ತದೆ. ಹೀಗಾಗಿ ಭದ್ರತೆಗೆ ಹೆಚ್ಚಿನ ಪೊಲೀಸರ ನಿಯೋಜನೆ ಅವಶ್ಯವಿದೆ. ಈ ನಡುವೆ ಪಂದ್ಯ ನಡೆಯುವುದರಿಂದ ಭದ್ರತಾ ಕೊರತೆ ಎದುರಾಗುವ ಸಾಧ್ಯತೆಯಿದೆ. ಹೀಗಾಗಿ ಪಂದ್ಯ ಗುವಾಹಟಿಗೆ ಸ್ಥಳಾಂತರಗೊಳ್ಳುವ ಸಾಧ್ಯತೆ ಹೆಚ್ಚು. ಆದರೆ ಈ ಬಗ್ಗೆ ಐಪಿಎಲ್‌ ಯಾವುದೇ ಅಧಿಕೃತ ಹೇಳಿಕೆ ನೀಡಿಲ್ಲ.

Latest Videos

ಇದನ್ನೂ ಓದಿ: ಐಪಿಎಲ್‌ ರೂಲ್ಸ್‌ನಲ್ಲಿ ಮಹತ್ವದ ಬದಲಾವಣೆ ಮಾಡಿದ ಬಿಸಿಸಿಐ! ಈ ರೂಲ್ಸ್‌ ನಿಮಗೆ ಗೊತ್ತಿರಲಿ

10 ತಂಡಗಳ ಪೈಕಿ 8ರಲ್ಲಿ ಕರ್ನಾಟಕದ ಆಟಗಾರರು

ಟೂರ್ನಿಯ 10 ತಂಡಗಳ ಪೈಕಿ 8ರಲ್ಲಿ ಕರ್ನಾಟಕದ ಆಟಗಾರರು ಇದ್ದಾರೆ. ಡೆಲ್ಲಿಯಲ್ಲಿ ಕೆ.ಎಲ್‌.ರಾಹುಲ್‌, ಕರುಣ್‌ ನಾಯರ್‌, ಮನ್ವಂತ್‌ ಕುಮಾರ್‌, ಆರ್‌ಸಿಬಿಯಲ್ಲಿ ದೇವದತ್‌ ಪಡಿಕ್ಕಲ್‌, ಮನೋಜ್‌ ಭಾಂಡಗೆ, ಪಂಜಾಬ್‌ನಲ್ಲಿ ವೈಶಾಖ್‌ ವಿಜಯ್‌ಕುಮಾರ್‌, ಲುವ್ನಿತ್‌ ಸಿಸೋಡಿಯಾ, ಗುಜರಾತ್‌ನಲ್ಲಿ ಪ್ರಸಿದ್ಧ್‌ ಕೃಷ್ಣ, ಹೈದ್ರಾಬಾದ್‌ನಲ್ಲಿ ಅಭಿನವ್‌ ಮನೋಹರ್‌, ಮುಂಬೈನಲ್ಲಿ ಕೆ.ಎಲ್‌.ಶ್ರೀಜಿತ್‌, ಚೆನ್ನೈನಲ್ಲಿ ಶ್ರೇಯಸ್‌ ಗೋಪಾಲ್‌ ಆಡಲಿದ್ದಾರೆ. ಲಖನೌ, ರಾಜಸ್ಥಾನದಲ್ಲಿ ಕನ್ನಡಿಗರಿಲ್ಲ.

ಧೋನಿ, ಪ್ಲೆಸಿಸ್‌ ಸೇರಿ ಹಲವರಿಗೆ ಇದು ಕೊನೆಯ ಐಪಿಎಲ್‌?

ಈ ಬಾರಿ ಟೂರ್ನಿ ಹಲವು ದಿಗ್ಗಜರಿಗೆ ಕೊನೆ ಐಪಿಎಲ್‌ ಆಗುವ ಸಾಧ್ಯತೆ ಹೆಚ್ಚು. ಎಂ.ಎಸ್‌.ಧೋನಿ ಯಾವಾಗ ನಿವೃತ್ತಿ ಘೋಷಿಸಲಿದ್ದಾರೆ ಎಂಬುದು ನಿಗೂಢವಾಗಿಯೇ ಉಳಿದಿದ್ದರೂ, ಅವರು ಮುಂದಿನ ಆವೃತ್ತಿಗೆ ಲಭ್ಯವಿರುವ ಸಾಧ್ಯತೆ ಕಡಿಮೆ ಎನ್ನಲಾಗುತ್ತಿದೆ. ಉಳಿದಂತೆ ಗುಜರಾತ್‌ನ ಇಶಾಂತ್‌ ಶರ್ಮಾ, ಡೆಲ್ಲಿ ಕ್ಯಾಪಿಟಲ್ಸ್‌ನ ಫಾಫ್‌ ಡು ಪ್ಲೆಸಿ, ಮುಂಬೈ ಇಂಡಿಯನ್ಸ್‌ನ ಕರ್ಣ್‌ ಶರ್ಮಾ, ಕೆಕೆಆರ್‌ನ ಮೊಯೀನ್‌ ಅಲಿಗೂ ಇದು ಕೊನೆ ಐಪಿಎಲ್‌ ಆಗುವ ಸಾಧ್ಯತೆಯಿದೆ.

ಇದನ್ನೂ ಓದಿ: ಐಪಿಎಲ್‌ನಲ್ಲಿ ಅತಿ ಹೆಚ್ಚು ವಿಕೆಟ್ ಪಡೆದ ಟಾಪ್ 5 ಬೌಲರ್‌ಗಳಿವರು!

ಐಪಿಎಲ್‌ ವೇಳಾಪಟ್ಟಿ

ದಿನಾಂಕ ಪಂದ್ಯ ಸ್ಥಳ ಸಮಯ

ಮಾ.22 ಕೆಕೆಆರ್‌-ಆರ್‌ಸಿಬಿ ಕೋಲ್ಕತಾ ಸಂಜೆ 7.30

ಮಾ.23 ಹೈದ್ರಾಬಾದ್-ರಾಜಸ್ಥಾನ ಹೈದ್ರಾಬಾದ್‌ ಮಧ್ಯಾಹ್ನ 3.30

ಮಾ.23 ಚೆನ್ನೈ-ಮುಂಬೈ ಚೆನ್ನೈ ಸಂಜೆ 7.30

ಮಾ.24 ಡೆಲ್ಲಿ-ಲಖನೌ ವಿಶಾಖಪಟ್ಟಣಂ ಸಂಜೆ 7.30

ಮಾ.25 ಗುಜರಾತ್‌-ಪಂಜಾಬ್‌ ಅಹ್ಮದಾಬಾದ್‌ ಸಂಜೆ 7.30

ಮಾ.26 ರಾಜಸ್ಥಾನ-ಕೆಕೆಆರ್‌ ಗುವಾಹಟಿ ಸಂಜೆ 7.30

ಮಾ.27 ಹೈದ್ರಾಬಾದ್‌-ಲಖನೌ ಹೈದ್ರಾಬಾದ್‌ ಸಂಜೆ 7.30

ಮಾ.28 ಚೆನ್ನೈ-ಆರ್‌ಸಿಬಿ ಚೆನ್ನೈ ಸಂಜೆ 7.30

ಮಾ.29 ಗುಜರಾತ್‌-ಮುಂಬೈ ಅಹ್ಮದಾಬಾದ್‌ ಸಂಜೆ 7.30

ಮಾ.30 ಡೆಲ್ಲಿ-ಹೈದ್ರಾಬಾದ್‌ ವಿಶಾಖಪಟ್ಟಣಂ ಮಧ್ಯಾಹ್ನ 3.30

ಮಾ.30 ರಾಜಸ್ಥಾನ-ಚೆನ್ನೈ ಗುವಾಹಟಿ ಸಂಜೆ 7.30

ಮಾ.31 ಮುಂಬೈ-ಕೆಕೆಆರ್‌ ಮುಂಬೈ ಸಂಜೆ 7.30

ಏ.1 ಲಖನೌ-ಪಂಜಾಬ್‌ ಲಖನೌ ಸಂಜೆ 7.30

ಏ.2 ಆರ್‌ಸಿಬಿ-ಗುಜರಾತ್‌ ಬೆಂಗಳೂರು ಸಂಜೆ 7.30

ಏ.3 ಕೆಕೆಆರ್‌-ಹೈದ್ರಾಬಾದ್‌ ಕೋಲ್ಕತಾ ಸಂಜೆ 7.30

ಏ.4 ಲಖನೌ-ಮುಂಬೈ ಲಖನೌ ಸಂಜೆ 7.30

ಏ.5 ಚೆನ್ನೈ-ಡೆಲ್ಲಿ ಚೆನ್ನೈ ಮಧ್ಯಾಹ್ನ 3.30

ಏ.5 ಪಂಜಾಬ್‌-ರಾಜಸ್ಥಾನ ಚಂಡೀಗಢ ಸಂಜೆ 7.30

ಏ.6 ಕೆಕೆಆರ್‌-ಲಖನೌ ಕೋಲ್ಕತಾ ಮಧ್ಯಾಹ್ನ 3.30

ಏ.6 ಹೈದ್ರಾಬಾದ್‌-ಗುಜರಾತ್‌ ಹೈದ್ರಾಬಾದ್‌ ಸಂಜೆ 7.30

ಏ.7 ಮುಂಬೈ-ಆರ್‌ಸಿಬಿ ಮುಂಬೈ ಸಂಜೆ 7.30

ಏ.8 ಪಂಜಾಬ್‌-ಚೆನ್ನೈ ಚಂಡೀಗಢ ಸಂಜೆ 7.30

ಏ.9 ಗುಜರಾತ್‌-ರಾಜಸ್ಥಾನ ಅಹ್ಮದಾಬಾದ್‌ ಸಂಜೆ 7.30

ಏ.10 ಆರ್‌ಸಿಬಿ-ಡೆಲ್ಲಿ ಬೆಂಗಳೂರು ಸಂಜೆ 7.30

ಏ.11 ಚೆನ್ನೈ-ಕೆಕೆಆರ್‌ ಚೆನ್ನೈ ಸಂಜೆ 7.30

ಏ.12 ಲಖನೌ-ಗುಜರಾತ್‌ ಲಖನೌ ಮಧ್ಯಾಹ್ನ 3.30

ಏ.12 ಹೈದ್ರಾಬಾದ್‌-ಪಂಜಾಬ್‌ ಹೈದ್ರಾಬಾದ್‌ ಸಂಜೆ 7.30

ಏ.13 ರಾಜಸ್ಥಾನ-ಆರ್‌ಸಿಬಿ ಜೈಪುರ ಮಧ್ಯಾಹ್ನ 3.30

ಏ.13 ಡೆಲ್ಲಿ-ಮುಂಬೈ ನವದೆಹಲಿ ಸಂಜೆ 7.30

ಏ.14 ಲಖನೌ-ಚೆನ್ನೈ ಲಖನೌ ಸಂಜೆ 7.30

ಏ.15 ಪಂಜಾಬ್‌-ಕೆಕೆಆರ್‌ ಚಂಡೀಗಢ ಸಂಜೆ 7.30

ಏ.16 ಡೆಲ್ಲಿ-ರಾಜಸ್ಥಾನ ನವದೆಹಲಿ ಸಂಜೆ 7.30

ಏ.17 ಮುಂಬೈ-ಹೈದ್ರಾಬಾದ್‌ ಮುಂಬೈ ಸಂಜೆ 7.30

ಏ.18 ಆರ್‌ಸಿಬಿ-ಪಂಜಾಬ್‌ ಬೆಂಗಳೂರು ಸಂಜೆ 7.30

ಏ.19 ಗುಜರಾತ್‌-ಡೆಲ್ಲಿ ಅಹ್ಮದಾಬಾದ್‌ ಮಧ್ಯಾಹ್ನ 3.30

ಏ.19 ರಾಜಸ್ಥಾನ-ಲಖನೌ ಜೈಪುರ ಸಂಜೆ 7.30

ಏ.20 ಪಂಜಾಬ್‌-ಆರ್‌ಸಿಬಿ ಚಂಡೀಗಢ ಸಂಜೆ 7.30

ಏ.20 ಮುಂಬೈ-ಚೆನ್ನೈ ಮುಂಬೈ ಸಂಜೆ 7.30

ಏ.21 ಕೆಕೆಆರ್‌-ಗುಜರಾತ್‌ ಕೋಲ್ಕತಾ ಸಂಜೆ 7.30

ಏ.22 ಲಖನೌ-ಡೆಲ್ಲಿ ಲಖನೌ ಸಂಜೆ 7.30

ಏ.23 ಹೈದ್ರಾಬಾದ್‌-ಮುಂಬೈ ಹೈದ್ರಾಬಾದ್‌ ಸಂಜೆ 7.30

ಏ.24 ಆರ್‌ಸಿಬಿ-ರಾಜಸ್ಥಾನ ಬೆಂಗಳೂರು ಸಂಜೆ 7.30

ಏ.25 ಚೆನ್ನೈ-ಹೈದ್ರಾಬಾದ್‌ ಚೆನ್ನೈ ಸಂಜೆ 7.30

ಏ.26 ಕೆಕೆಆರ್-ಪಂಜಾಬ್‌ ಕೋಲ್ಕತಾ ಸಂಜೆ 7.30

ಏ.27 ಮುಂಬೈ-ಲಖನೌ ಮುಂಬೈ ಮಧ್ಯಾಹ್ನ 3.30

ಏ.27 ಡೆಲ್ಲಿ-ಆರ್‌ಸಿಬಿ ನವದೆಹಲಿ ಸಂಜೆ 7.30

ಏ.28 ರಾಜಸ್ಥಾನ-ಗುಜರಾತ್‌ ಜೈಪುರ ಸಂಜೆ 7.30

ಏ.29 ಡೆಲ್ಲಿ-ಕೆಕೆಆರ್‌ ನವದೆಹಲಿ ಸಂಜೆ 7.30

ಏ.30 ಚೆನ್ನೈ-ಪಂಜಾಬ್‌ ಚೆನ್ನೈ ಸಂಜೆ 7.30

ಮೇ 1 ರಾಜಸ್ಥಾನ-ಮುಂಬೈ ಜೈಪುರ ಸಂಜೆ 7.30

ಮೇ 2 ಗುಜರಾತ್‌-ಹೈದ್ರಾಬಾದ್‌ ಅಹ್ಮದಾಬಾದ್ ಸಂಜೆ 7.30

ಮೇ 3 ಆರ್‌ಸಿಬಿ-ಚೆನ್ನೈ ಬೆಂಗಳೂರು ಸಂಜೆ 7.30

ಮೇ 4 ಕೆಕೆಆರ್‌-ರಾಜಸ್ಥಾನ ಕೋಲ್ಕತಾ ಮಧ್ಯಾಹ್ನ 3.30

ಮೇ 4 ಪಂಜಾಬ್‌-ಲಖನೌ ಧರ್ಮಶಾಲಾ ಸಂಜೆ 7.30

ಮೇ 5 ಹೈದ್ರಾಬಾದ್‌-ಡೆಲ್ಲಿ ಹೈದ್ರಾಬಾದ್‌ ಸಂಜೆ 7.30

ಮೇ 6 ಮುಂಬೈ-ಗುಜರಾತ್‌ ಮುಂಬೈ ಸಂಜೆ 7.30

ಮೇ 7 ಕೆಕೆಆರ್‌-ಚೆನ್ನೈ ಕೋಲ್ಕತಾ ಸಂಜೆ 7.30

ಮೇ 8 ಪಂಜಾಬ್‌-ಡೆಲ್ಲಿ ಧರ್ಮಶಾಲಾ ಸಂಜೆ 7.30

ಮೇ 9 ಲಖನೌ-ಆರ್‌ಸಿಬಿ ಲಖನೌ ಸಂಜೆ 7.30

ಮೇ 10 ಹೈದ್ರಾಬಾದ್‌-ಕೆಕೆಆರ್‌ ಹೈದ್ರಾಬಾದ್‌ ಸಂಜೆ 7.30

ಮೇ 11 ಪಂಜಾಬ್‌-ಮುಂಬೈ ಧರ್ಮಶಾಲಾ ಮಧ್ಯಾಹ್ನ 3.30

ಮೇ 11 ಡೆಲ್ಲಿ-ಗುಜರಾತ್‌ ನವದೆಹಲಿ ಸಂಜೆ 7.30

ಮೇ 12 ಚೆನ್ನೈ-ರಾಜಸ್ಥಾನ ಚೆನ್ನೈ ಸಂಜೆ 7.30

ಮೇ 13 ಆರ್‌ಸಿಬಿ-ಹೈದ್ರಾಬಾದ್‌ ಬೆಂಗಳೂರು ಸಂಜೆ 7.30

ಮೇ 14 ಗುಜರಾತ್‌-ಲಖನೌ ಅಹ್ಮದಾಬಾದ್‌ ಸಂಜೆ 7.30

ಮೇ 15 ಮುಂಬೈ-ಡೆಲ್ಲಿ ಮುಂಬೈ ಸಂಜೆ 7.30

ಮೇ 16 ರಾಜಸ್ಥಾನ-ಪಂಜಾಬ್‌ ಜೈಪುರ ಸಂಜೆ 7.30

ಮೇ 17 ಆರ್‌ಸಿಬಿ-ಕೆಕೆಆರ್‌ ಬೆಂಗಳೂರು ಸಂಜೆ 7.30

ಮೇ 18 ಗುಜರಾತ್‌-ಚೆನ್ನೈ ಅಹ್ಮದಾಬಾದ್‌ ಸಂಜೆ 7.30

ಮೇ 19 ಲಖನೌ-ಹೈದ್ರಾಬಾದ್‌ ಲಖನೌ ಸಂಜೆ 7.30

ಮೇ 20 ಕ್ವಾಲಿಫೈರ್‌-1 ಹೈದ್ರಾಬಾದ್‌ ಸಂಜೆ 7.30

ಮೇ 21 ಎಲಿಮಿನೇಟರ್ ಹೈದ್ರಾಬಾದ್‌ ಸಂಜೆ 7.30

ಮೇ 23 ಕ್ವಾಲಿಫೈರ್‌-2 ಕೋಲ್ಕತಾ ಸಂಜೆ 7.30

ಮೇ 25 ಫೈನಲ್‌ ಕೋಲ್ಕತಾ ಸಂಜೆ 7.30

vuukle one pixel image
click me!