Latest Videos

IPL 2024 ಈ ಲಕ್ಕಿ ಪ್ಲೇಯರ್‌ನಿಂದ ಸಿಗುತ್ತಾ ಆರ್‌ಸಿಬಿಗೆ 7ನೇ ಗೆಲುವು..?

By Suvarna NewsFirst Published May 22, 2024, 5:06 PM IST
Highlights

ಈ ಬಾರಿಯ IPLನ ಫಸ್ಟ್ ಹಾಫ್‌ನಲ್ಲಿ ಸೋಲಿನ ಸುಳಿಗೆ ಸಿಲುಕಿದ್ದ RCB, ಸೆಕೆಂಡ್ ಹಾಫ್ನಲ್ಲಿ ಸ್ಟ್ರಾಂಗ್‌ ಕಮ್ಬ್ಯಾಕ್ ಮಾಡಿದೆ. ಸತತ ಆರು ಪಂದ್ಯಗಳನ್ನ ಗೆದ್ದು ಪ್ಲೇ ಆಫ್‌ಗೆ ಎಂಟ್ರಿ ನೀಡಿದೆ. ಆದ್ರೆ, ಈ RCBಯ ಸೂಪರ್ ಸಕ್ಸಸ್‌ಗೆ ಪ್ರಮುಖ ಕಾರಣ ಆಲ್ರೌಂಡರ್ ಸ್ವಪ್ನಿಲ್ ಸಿಂಗ್ ಅದೃಷ್ಟ ಅಂದ್ರೆ ತಪ್ಪಿಲ್ಲ.

ಬೆಂಗಳೂರು(ಮೇ.22) ಕೆಲವೊಬ್ಬರ ಕಾಲ್ಗುಣಾನೇ ಹಾಗೇ. ಬರ್ತಾನೆ ಅದೃಷ್ಟ ಹೊತ್ತು ತರ್ತಾರೆ. ಸದ್ಯ RCBಗೆ ಈ ಆಟಗಾರ ಲಕ್ಕಿ ಛಾರ್ಮ್ ಆಗಿದ್ದಾರೆ. ಈತ ಆಡೋಕೆ ಶುರು ಮಾಡಿದಾಗಿನಿಂದ ರೆಡ್ ಆರ್ಮಿ ಒಂದೇ ಪಂದು ಸೋತಿಲ್ಲ. ಯಾರು ಆ ಆಟಗಾರ ಅಂತೀರಾ..? ಈ ಸ್ಟೋರಿ ನೋಡಿ ನಿಮಗೆ ಗೊತ್ತಾ..? 

ಈತ ಆಡಿದ ಆರಕ್ಕೇ 6 ಪಂದ್ಯಗಳಲ್ಲಿ ಜಯ..! 

ಈ ಬಾರಿಯ IPLನ ಫಸ್ಟ್ ಹಾಫ್‌ನಲ್ಲಿ ಸೋಲಿನ ಸುಳಿಗೆ ಸಿಲುಕಿದ್ದ RCB, ಸೆಕೆಂಡ್ ಹಾಫ್ನಲ್ಲಿ ಸ್ಟ್ರಾಂಗ್‌ ಕಮ್ಬ್ಯಾಕ್ ಮಾಡಿದೆ. ಸತತ ಆರು ಪಂದ್ಯಗಳನ್ನ ಗೆದ್ದು ಪ್ಲೇ ಆಫ್‌ಗೆ ಎಂಟ್ರಿ ನೀಡಿದೆ. ಆದ್ರೆ, ಈ RCBಯ ಸೂಪರ್ ಸಕ್ಸಸ್‌ಗೆ ಪ್ರಮುಖ ಕಾರಣ ಆಲ್ರೌಂಡರ್ ಸ್ವಪ್ನಿಲ್ ಸಿಂಗ್ ಅದೃಷ್ಟ ಅಂದ್ರೆ ತಪ್ಪಿಲ್ಲ. 

'ಆರ್‌ಸಿಬಿ ಹಾಗೂ ವಿರಾಟ್ ಕೊಹ್ಲಿಗೆ ಬಿಡ್ ಮಾಡಿದಾಗ...': ತಮ್ಮ ಒಳ ಮನಸ್ಸಿನ ಮಾತು ಬಿಚ್ಚಿಟ್ಟ ವಿಜಯ್ ಮಲ್ಯ

ಯೆಸ್, ಈ ಎಡಗೈ ಸ್ಪಿನ್ನರ್ ಆರ್‌ಸಿಬಿಗೆ ಲಕ್ಕಿ ಛಾರ್ಮ್ ಆಗಿದ್ದಾರೆ. ಸ್ವಪ್ನಿಲ್ ಸಿಂಗ್ ಆಡೋಕೆ ಶುರು ಮಾಡಿದಾಗಿನಿಂದ RCB ಸೋತೇ ಇಲ್ಲ. ಈವರೆಗೂ ಸ್ವಪ್ನಿಲ್ ಆಡಿರೋ ಅರಕ್ಕೇ ಆರು ಮ್ಯಾಚ್ಗಳನ್ನ RCB ಗೆದ್ದಿದೆ. ಟೂರ್ನಿಯ ಮೊದಲ 8 ಪಂದ್ಯಗಳಲ್ಲಿ ಸ್ವಪ್ನಿಲ್‌ಗೆ ಆಡೋ ಅವಕಾಶ ಸಿಕ್ಕಿರಲಿಲ್ಲ. ಆದ್ರೆ, ಸನ್‌ರೈಸರ್ಸ್ ವಿರುದ್ಧದ ಪಂದ್ಯದಲ್ಲಿ ಮೊದಲ ಬಾರಿ ಪ್ಲೇಯಿಂಗ್ ಇಲೆವೆನ್ನಲ್ಲಿ ಚಾನ್ಸ್ ಸಿಕ್ಕಿತು. ಆಡಿದ ಮೊದಲ ಪಂದ್ಯದ ಮೊದಲ ಓವರ್‌ನಲ್ಲೇ ವಿಕೆಟ್ ಪಡೆದ ಸ್ವಪ್ನಿಲ್, ತಮ್ಮ ಸಾಮರ್ಥ್ಯ ಪ್ರೂವ್ ಮಾಡಿದ್ರು. ಇನ್ನು ಈವರೆಗೂ ಸ್ವಪ್ನಿಲ್ ಸಿಂಗ್ 6 ಪಂದ್ಯಗಳಿಂದ  6 ವಿಕೆಟ್ ಪಡೆದುಕೊಂಡಿದ್ದಾರೆ. 

ವಿರಾಟ್ ಕೊಹ್ಲಿಯ ಹಳೆಯ ದೋಸ್ತ್ ಸ್ವಪ್ನಿಲ್..! 

33 ವರ್ಷದ ಸ್ವಪ್ನಿಲ್ ಸಿಂಗ್, ಹುಟ್ಟಿದ್ದು ಉತ್ತರ ಪ್ರದೇಶದ ರಾಯ್‌ ಬರೇಲಿಯಲ್ಲಿ. ಆದ್ರೆ, ಸದ್ಯ ದೇಶಿಯ ಕ್ರಿಕೆಟ್ನಲ್ಲಿ ಆಡ್ತಿರೋದು ಮಾತ್ರ   ಉತ್ತರಾಖಾಂಡ್ ಪರ. ಇಂಟ್ರೆಸ್ಟಿಂಗ್ ವಿಚಾರ ಅಂದ್ರೆ, ಸ್ವಪ್ನಿಲ್ ಮತ್ತು ವಿರಾಟ್ ಕೊಹ್ಲಿ ಒಂದು ಕಾಲದಲ್ಲಿ ರೂಮ್ಮೇಟ್ ಆಗಿದ್ರು. ಅಂಡರ್ 19 ಕ್ರಿಕೆಟ್ನಲ್ಲಿ ಕೊಹ್ಲಿ ಮತ್ತು ಸ್ವಪ್ನಿಲ್ ಒಟ್ಟಿಗೆ ಆಡಿದ್ರು. ಇದನ್ನ ಖುದ್ದು ಸ್ವಪ್ನಿಲ್ ಹೇಳಿದ್ದಾರೆ.

RCB vs RR ಒನ್ ಸೈಡ್ ಮ್ಯಾಚ್ ಆಗುತ್ತೆ, ಇದೇ ತಂಡ ಗೆಲ್ಲುತ್ತೆ: ಎಲಿಮಿನೇಟರ್ ಪಂದ್ಯದ ಭವಿಷ್ಯ ನುಡಿದ ಸನ್ನಿ

ಸ್ವಪ್ನಿಲ್ 2008ರಲ್ಲೇ ಐಪಿಎಲ್‌ಗೆ ಎಂಟ್ರಿ ನೀಡಿದ್ರು. ಮುಂಬೈ ಇಂಡಿಯನ್ಸ್ ತಂಡದಲ್ಲಿ ಅವಕಾಶ ಸಿಕ್ಕಿತ್ತು. ಆದ್ರೆ, ಮುಂಬೈ ಪರ ಒಂದೇ ಒಂದು ಪಂದ್ಯವಾಡೋ ಅವಕಾಶ ಸಿಗಲಿಲ್ಲ. 2016ರಲ್ಲಿ ಪಂಜಾಬ್ ತಂಡಕ್ಕೆ ಹೋದ್ರು. ಪಂಜಾಬ್ ಪರ IPLಗೆ ಪದಾರ್ಪಣೆ ಮಾಡಿದ್ರು. ಮೊದಲ ಪಂದ್ಯದಲ್ಲೇ ಧೋನಿಯನ್ನ ಔಟ್ ಮಾಡಿದ್ರು. 2017ರ ನಂತರ IPLನಿಂದ ದೂರವಾದ ಸ್ವಪ್ನಿಲ್, 2023ರಲ್ಲಿ ಮತ್ತೆ ಲಕ್ನೋ ಸೂಪರ್ ಜೈಂಟ್ಸ್ ತಂಡ ಸೇರಿಕೊಂಡ್ರು. ಆದ್ರೆ, ಲಕ್ನೋ ತಂಡದಲ್ಲಿದ್ದರೂ ಪ್ಲೇಯಿಂಗ್ ಇಲೆವೆನ್ನಲ್ಲಿ ಚಾನ್ಸ್ ಸಿಗಲಿಲ್ಲ. 

ಕೊನೆಯ ರೌಂಡ್ನಲ್ಲಿ RCB ತಂಡಕ್ಕೆ ಎಂಟ್ರಿ..!

ಯೆಸ್, ಕಳೆದ ವರ್ಷ ನಡೆದ IPL ಮಿನಿ ಆಕ್ಷನ್ನಲ್ಲಿ ಮೊದಲ ರೌಂಡ್ ಗಳಲ್ಲಿ ಯಾವ ಫ್ರಾಂಚೈಸಿಯೂ ಸ್ವಪ್ನಿಲ್ನ ಖರೀದಿಸಲಿಲ್ಲ. ಇದ್ರಿಂದ ಸ್ವಪ್ನಿಲ್ ಎಲ್ಲಾ ಮುಗಿದೇ ಹೋಯ್ತು. ಈ ಸೀಸನ್ ರಣಜಿ ಆಡಬೇಕು, ಅಗತ್ಯ ಇದ್ರೆ ಮುಂದಿನ ಸೀಸನ್ ಆಡ್ಬೇಕು ಅನ್ಕೊಂಡಿದ್ರು. ಆದರೆ, ಕೊನೆಯ ರೌಂಡ್ನಲ್ಲಿ RCB ಸ್ವಪಿಲ್ ಕೈಹಿಡಿತು. 

ಮಿನಿ ಆಕ್ಷನ್ನಲ್ಲಿ ತನ್ನ ಹಳೆ ದೋಸ್ತ್  ವಿರಾಟ್ ಕೊಹ್ಲಿಯ RCB ತಂಡ ಸೇರಿದ್ದರಿಂದ ಸ್ವಪ್ನಿಲ್ ಫುಲ್ ಖುಷ್ ಅಗಿದ್ರು. ಆದ್ರೆ, ಮತ್ತೊಂದೆಡೆ ಮೈದಾನಕ್ಕಿಳಿಯುವ ಅವಕಾಶ ಸಿಗುತ್ತೋ ಇಲ್ವೋ ಅನ್ನೋ ಆತಂಕ ಮಾತ್ರ ಅವರನ್ನ ಕಾಡ್ತಿತ್ತು. ಇದ್ರಿಂದ ಟೂರ್ನಿ ಆರಂಭಕ್ಕೂ ಮುನ್ನ ನಡೆದ ಟ್ರೈನಿಂಗ್ ಕ್ಯಾಂಪ್ನಲ್ಲಿ ಸ್ವಪ್ನಿಲ್ ಕೋಚ್ ಆ್ಯಂಡಿ ಫ್ಲವರ್ಗೆ  ಪ್ಲೀಸ್ ನನಗೆ ಒಂದು ಚಾನ್ಸ್ ಕೊಡಿ ಅಂತ ಬೇಡಿಕೊಂಡಿದ್ರು. ಅದರಂತೆ ಸಿಕ್ಕ ಅವಕಾಶವನ್ನ ಬಳಸಿಕೊಂಡ ಅವ್ರು, RCBಯ ಗೆಲುವಿನಲ್ಲಿ ಮಿಂಚುತ್ತಿದ್ದಾರೆ. ಇಂದು ನಡೆಯೋ RR ವಿರುದ್ಧದ ಪಂದ್ಯದಲ್ಲಿ ಸ್ವಪ್ನಿಲ್ ಅಬ್ಬರಿಸಲಿ. ಆ  ಮೂಲಕ ತಂಡಕ್ಕೆ ಗೆಲುವು ತಂದುಕೊಡಲಿ ಅನ್ನೋದೆ ನಮ್ಮ ಆಶಯ.

ಸ್ಪೋರ್ಟ್ಸ್ ಬ್ಯುರೋ, ಏಷ್ಯಾನೆಟ್ ಸುವರ್ಣ ನ್ಯೂಸ್ 

click me!