Latest Videos

ಇಂದು RCB vs RR ಎಲಿಮಿನೇಟರ್ ಫೈಟ್: ಬೆಂಗಳೂರು ಕಪ್ ಗೆದ್ರೆ ಇಲ್ಲಿ ಇಡೀ ದಿನ ಪಾನಿಪುರಿ ಫ್ರೀ.. ಫ್ರೀ.. ಫ್ರೀ..!

By Naveen KodaseFirst Published May 22, 2024, 1:04 PM IST
Highlights

17ನೇ ಆವೃತ್ತಿಯ ಐಪಿಎಲ್ ಟೂರ್ನಿಯಲ್ಲಿ ನೀರಸ ಆರಂಭ ಪಡೆದಿದ್ದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ತಾನಾಡಿದ ಮೊದಲ 8 ಪಂದ್ಯಗಳ ಪೈಕಿ ಕೇವಲ ಒಂದು ಪಂದ್ಯ ಮಾತ್ರ ಜಯಿಸಿತ್ತು. ಇನ್ನೇನು ಆರ್‌ಸಿಬಿ ತಂಡವು ಪ್ಲೇ ಆಫ್‌ ರೇಸ್‌ನಿಂದ ಹೊರಬಿತ್ತು ಎಂದುಕೊಳ್ಳುವಾಗಲೇ ಪವಾಡ ಸದೃಶ ರೀತಿಯಲ್ಲಿ ಭರ್ಜರಿ ಕಮ್‌ಬ್ಯಾಕ್ ಮಾಡಿದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ನಾಲ್ಕನೇ ತಂಡವಾಗಿ ಪ್ಲೇ ಆಫ್‌ಗೆ ಲಗ್ಗೆಯಿಡುವ ಮೂಲಕ ಚೊಚ್ಚಲ ಐಪಿಎಲ್ ಟ್ರೋಫಿ ಗೆಲ್ಲುವ ಕನಸನ್ನು ಜೀವಂತವಾಗಿರಿಸಿಕೊಂಡಿದೆ.

ಬೆಂಗಳೂರು: 17ನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ ಇದೀಗ ನಿರ್ಣಾಯಕ ಘಟ್ಟದತ್ತ ಸಾಗುತ್ತಿದೆ. ಈಗಾಗಲೇ ಮೊದಲ ಕ್ವಾಲಿಫೈಯರ್ ಪಂದ್ಯದಲ್ಲಿ ಸನ್‌ರೈಸರ್ಸ್ ಹೈದರಾಬಾದ್ ತಂಡವನ್ನು ಮಣಿಸಿ ಕೋಲ್ಕತಾ ನೈಟ್ ರೈಡರ್ಸ್ ತಂಡವು ಫೈನಲ್‌ಗೆ ಲಗ್ಗೆಯಿಟ್ಟಿದೆ. ಇನ್ನೊಂದೆಡೆ ಇಂದು ಎಲಿಮಿನೇಟರ್ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಹಾಗೂ ರಾಜಸ್ಥಾನ ರಾಯಲ್ಸ್ ತಂಡಗಳು ಕಾದಾಡಲಿವೆ. ಈ ಹೈವೋಲ್ಟೇಜ್ ಪಂದ್ಯಕ್ಕೆ ಅಹಮದಾಬಾದ್‌ನ ನರೇಂದ್ರ ಮೋದಿ ಸ್ಟೇಡಿಯಂ ಆತಿಥ್ಯ ವಹಿಸಿದೆ.

17ನೇ ಆವೃತ್ತಿಯ ಐಪಿಎಲ್ ಟೂರ್ನಿಯಲ್ಲಿ ನೀರಸ ಆರಂಭ ಪಡೆದಿದ್ದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ತಾನಾಡಿದ ಮೊದಲ 8 ಪಂದ್ಯಗಳ ಪೈಕಿ ಕೇವಲ ಒಂದು ಪಂದ್ಯ ಮಾತ್ರ ಜಯಿಸಿತ್ತು. ಇನ್ನೇನು ಆರ್‌ಸಿಬಿ ತಂಡವು ಪ್ಲೇ ಆಫ್‌ ರೇಸ್‌ನಿಂದ ಹೊರಬಿತ್ತು ಎಂದುಕೊಳ್ಳುವಾಗಲೇ ಪವಾಡ ಸದೃಶ ರೀತಿಯಲ್ಲಿ ಭರ್ಜರಿ ಕಮ್‌ಬ್ಯಾಕ್ ಮಾಡಿದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ನಾಲ್ಕನೇ ತಂಡವಾಗಿ ಪ್ಲೇ ಆಫ್‌ಗೆ ಲಗ್ಗೆಯಿಡುವ ಮೂಲಕ ಚೊಚ್ಚಲ ಐಪಿಎಲ್ ಟ್ರೋಫಿ ಗೆಲ್ಲುವ ಕನಸನ್ನು ಜೀವಂತವಾಗಿರಿಸಿಕೊಂಡಿದೆ.

RCB ಗೆಲುವಿಗಾಗಿ ವಿಜಯ್ ಮಲ್ಯ ವಿಶ್: ಸ್ಟೇಡಿಯಂಗೆ ಬಂದು ಮ್ಯಾಚ್ ನೋಡಬೇಕು ಅನಿಸುತ್ತಿಲ್ವಾ ಕೇಳಿದ ನೆಟ್ಟಿಗರು!

ಇನ್ನು ಆರ್‌ಸಿಬಿ ತಂಡದ ಮೇಲೆ ಅವರ ಅಭಿಮಾನಿಗಳು ಇಟ್ಟಿರುವ ಪ್ರೀತಿಯನ್ನು, ನಂಬಿಕೆಯನ್ನು ಯಾವ ಮೀಟರ್‌ನಿಂದಲೂ ಅಳೆಯಲು ಸಾಧ್ಯವಿಲ್ಲ. ಆರ್‌ಸಿಬಿ ಸೋಲಲಿ ಅಥವಾ ಗೆಲ್ಲಲಿ ಎಂದಿಗೂ ತಂಡವನ್ನು ನಂಬಿಗಸ್ಥ ಅಭಿಮಾನಿಗಳು ಎಲ್ಲಿಯೂ ಬಿಟ್ಟುಕೊಟ್ಟಿಲ್ಲ. ಆರ್‌ಸಿಬಿ ಪಂದ್ಯವಿದೆ ಎಂದರೆ ಎಷ್ಟೋ ಅಭಿಮಾನಿಗಳು ದೇವಸ್ಥಾನಕ್ಕೆ ಹೋಗಿ ಆರ್‌ಸಿಬಿ ಗೆಲ್ಲಲಿ ಎಂದು ಹರಕೆ ಮಾಡಿಕೊಳ್ಳುವ ಎಷ್ಟೋ ಅಭಿಮಾನಿಗಳನ್ನು ನಾವೆಲ್ಲ ನೋಡಿದ್ದೇವೆ. ಆರ್‌ಸಿಬಿ ಎಂದರೆ ಅದೊಂಥರ ಅಭಿಮಾನಿಗಳಿಗೆ ಎಲ್ಲಿಲ್ಲದ ಪ್ರೀತಿ.

ಇದೀಗ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಅಪ್ಪಟ ಅಭಿಮಾನಿ ಅನಿಲ್ ಚಾಟ್ಸ್ ಸೆಂಟರ್ ಮಾಲೀಕರು, ಆರ್‌ಸಿಬಿ ಐಪಿಎಲ್ ಕಪ್ ಗೆದ್ರೆ ಇಡೀ ದಿನ ಉಚಿತವಾಗಿ ಆರ್‌ಸಿಬಿ ಫ್ಯಾನ್ಸ್‌ಗೆ ಪಾನಿಪೂರಿ ಸರ್ವಿಸ್ ನೀಡಲು ಮುಂದಾಗಿದ್ದಾರೆ. ಈಗಾಗಲೇ ತಮ್ಮ ಅಂಗಡಿ ಮುಂದೆ ಈ ಬಗ್ಗೆ ಅನಿಲ್ ಚಾಟ್ಸ್ ಸೆಂಟರ್ ಮಾಲೀಕರು ಬ್ಯಾನರ್ ಅಳವಡಿಸಿ ಗಮನ ಸೆಳೆದಿದ್ದಾರೆ.

ಇಂದು ಆರ್‌ಸಿಬಿ vs ರಾಯಲ್ಸ್‌ ಐಪಿಎಲ್‌ ಎಲಿಮಿನೇಟರ್‌ ಕದನ

ಹೌದು, ಬೆಂಗಳೂರಿನ ಮಹಾಲಕ್ಷ್ಮಿ ಲೇಔಟ್‌ನಲ್ಲಿರುವ ಅನಿಲ್ ಚಾಟ್ಸ್‌ ಸೆಂಟರ್ ಮಾಲೀಕರಾದ ಅನಿಲ್ ಕುಮಾರ್ ಅವರು ಈ ಆಫರ್ ಘೋಷಿಸಿದ್ದಾರೆ. 17ನೇ ಆವೃತ್ತಿಯ ಐಪಿಎಲ್ ಟೂರ್ನಿಯ ಫೈನಲ್ ಪಂದ್ಯವು ಮೇ 26ರಂದು ಚೆನ್ನೈನಲ್ಲಿ ನಿಗದಿಯಾಗಿದೆ. ಒಂದು ವೇಳೆ ಆರ್‌ಸಿಬಿ ಫೈನಲ್ ಪ್ರವೇಶಿಸಿ ಕೋಲ್ಕತಾ ನೈಟ್ ರೈಡರ್ಸ್ ತಂಡವನ್ನು ಮಣಿಸಿ ಚೊಚ್ಚಲ ಐಪಿಎಲ್ ಟ್ರೋಫಿ ಜಯಿಸಿದರೆ, ಮರುದಿನ ಅಂದರೆ ಮೇ 27ರಂದು ಸಂಜೆ 5.30ರಿಂದ ಇಡೀ ದಿನ ಉಚಿತವಾಗಿ ಪಾನಿಪೂರಿ ಸರ್ವಿಸ್ ನೀಡುವುದಾಗಿ ಚಾಟ್ಸ್ ಸೆಂಟರ್ ಮಾಲೀಕರಾದ ಅನಿಲ್ ಕುಮಾರ್ ಘೋಷಿಸಿದ್ದಾರೆ.

16 ವರ್ಷದಿಂದ ಕಪ್ ಗೆದ್ದಿಲ್ಲ ಆರ್‌ಸಿಬಿ: ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ಕಳೆದ 16 ವರ್ಷಗಳಿಂದ ಐಪಿಎಲ್ ಆಡುತ್ತಾ ಬಂದಿದೆಯಾದರೂ ಇದುವರೆಗೂ ಐಪಿಎಲ್ ಕಪ್ ಗೆಲ್ಲಲು ಆರ್‌ಸಿಬಿಗೆ ಸಾಧ್ಯವಾಗಿಲ್ಲ. ಮೂರು ಬಾರಿ ಫೈನಲ್‌ಗೇರಿ ರನ್ನರ್ ಅಪ್‌ಗೆ ತೃಪ್ತಿಪಟ್ಟಿದ್ದೇ ಇಲ್ಲಿಯವರೆಗಿನ ಗರಿಷ್ಠ ಸಾಧನೆ ಎನಿಸಿಕೊಂಡಿದೆ. ಇದೇ ವರ್ಷ ಆರ್‌ಸಿಬಿ ಮಹಿಳಾ ತಂಡವು ವುಮೆನ್ಸ್ ಪ್ರೀಮಿಯರ್ ಲೀಗ್ ಚಾಂಪಿಯನ್ ಆಗಿ ಹೊರಹೊಮ್ಮಿದೆ. ಇದೀಗ ಪುರುಷರ ತಂಡವು ಪ್ರಶಸ್ತಿಯತ್ತ ದಾಪುಗಾಲಿಟ್ಟಿದೆ. ಇನ್ನು ಕೇವಲ ಮೂರು ಪಂದ್ಯ ಗೆದ್ರೆ ಖಂಡಿತ ಈ ಸಲ ಕಪ್ ನಮ್ದೇ.
 

click me!