ಹೈದರಾಬಾದ್ ಬೌಲಿಂಗ್ ದಾಳಿಗೆ ಸಿಎಸ್‌ಕೆ ಸೈಲೆಂಟ್ ಆಗಿದೆ. ಅಂತಿಮ ಓವರ್‌ನಲ್ಲಿ ಧೋನಿ ಅಖಾಡಕ್ಕಿಳಿದರೂ ಚೆನ್ನೈ ಸ್ಫೋಟಕ ಬ್ಯಾಟಿಂಗ್ ಕಾಣಲಿಲ್ಲ. ಇದರ ಪರಿಣಾಮ ಚೆನ್ನೈ ಸೂಪರ್ ಕಿಂಗ್ಸ್ 165 ರನ್ ಸಿಡಿಸಿದೆ.
ಹೈದರಾಬಾದ್(ಏ.05) ಚೆನ್ನೈ ಸೂಪರ್ ಕಿಂಗ್ಸ್ ಪ್ರತಿ ತಂಡದ ವಿರುದ್ದ ಸ್ಫೋಟಕ ಬ್ಯಾಟಿಂಗ್ ಪ್ರದರ್ಶನ ನೀಡಿದೆ. ಆದರೆ ಸನ್ ರೈಸರ್ಸ್ ಹೈದರಾಬಾದ್ ವಿರುದ್ಧ ಚೆನ್ನೈಗೆ ಅಬ್ಬರಿಸಲು ಸಾಧ್ಯವಾಗಿಲ್ಲ. ಎಂಎಸ್ ಧೋನಿ ಕ್ರೀಸಿಗಿಳಿದರೂ ಚೆನ್ನೈ ಸೂಪರ್ ಕಿಂಗ್ಸ್ ರನ್ ಕೊಳ್ಳೆ ಹೊಡೆಯಲಿಲ್ಲ. ಇತ್ತ ಪಂದ್ಯ ವೀಕ್ಷಿಸಲು ಧೋನಿ ಪತ್ನಿ ಸಾಕ್ಷಿ ಧೋನಿ ಖುದ್ದು ಹಾಜರಾದರೂ ಸಿಎಸ್‌ಕೆ ಮಿಂಚಿನ ಪ್ರದರ್ಶ ಕಾಣಸಲಿಲ್ಲ. ಹೈದರಾಬಾದ್ ಬೌಲಿಂಗ್ ದಾಳಿಗೆ ಮಂಕಾದ ಚೆನ್ನೈ 5 ವಿಕೆಟ್ ನಷ್ಟಕ್ಕೆ 165 ರನ್ ಸಿಡಿಸಿದೆ. ಈ ಮೂಲಕ ಹೈದರಾಬಾದ್ ರನ್ ಟಾರ್ಗೆಟ್ ಪಡೆದುಕೊಂಡಿದೆ
ಟಾಸ್ ಗೆದ್ದ ಹೈದರಾಬಾದ್ ಫೀಲ್ಡಿಂಗ್ ಆಯ್ಕೆ ಮಾಡಿಕೊಂಡಿತು. ಇತ್ತ ಬ್ಯಾಟಿಂಗ್ ಇಳಿದ ಚೆನ್ನೈ ಸೂಪರ್ ಕಿಂಗ್ಸ್ ನಿರೀಕ್ಷಿತ ಆರಂಭ ಪಡೆಯಲಿಲ್ಲ. ರಾಚಿನ್ ರವೀಂದ್ರ ಸ್ಫೋಟಕ ಆರಂಭ ನೀಡುವ ಮೊದಲೇ ವಿಕೆಟ್ ಕೈಚೆಲ್ಲಿದರು. 12 ರನ್ ಸಿಡಿಸಿ ಭುವನೇಶ್ವರ್ ಕುಮಾರ್‌ಗೆ ವಿಕೆಟ್‌ಗೆ ಒಪ್ಪಿಸಿದರು. ನಾಯಕ ರುತುರಾಜ್ ಗಾಯಕ್ವಾಡ್ 26 ರನ್ ಸಿಡಿಸಿದರು. ಆದರೆ ಸ್ಟ್ರೈಕ್ ರೇಟ್ ನಿರೀಕ್ಷಿತ ಮಟ್ಟದಲ್ಲಿ ಇರಲಿಲ್ಲ.
.ಸ್ಪೀಡ್ ಗನ್ ಮಯಾಂಕ್ ಯಾದವ್ ವೆಜಿಟೇರಿಯನ್ನಾ? ಡಯೆಟ್ ಸೀಕ್ರೇಟ್ ಬಿಚ್ಚಿಟ್ಟ ಲಖನೌ ವೇಗಿ ತಾಯಿ
ಅಜಿಂಕ್ಯ ರಹಾನೆ ಕೂಡ ಟಿ20 ಸ್ಟ್ರೈಕ್ ರೇಟ್‌ನಲ್ಲಿ ಅಬ್ಬರಿಸಲು ವಿಫಲರಾದರು. ರಹಾನೆ 30 ರನ್ ಕಾಣಿಕೆ ನೀಡಿದರು. ಆದರೆ 30 ಎಸೆತ ಬಳಸಿಕೊಂಡರು. ಸಿಎಸ್‌ಕೆ ಪರ ಕೊಂಚ ಅಬ್ಬರಿಸಿದ ಶಿವಂ ದುಬೆ ತಂಡಕ್ಕೆ ಚೇತರಿಕೆ ನೀಡಿದರು. ದುಬೆ 24 ಎಸೆತದಲ್ಲಿ 45 ರನ್ ಸಿಡಿಸಿದರು. ದುಬೆ ಹೋರಾಟದಿಂದ ಚೆನ್ನೈ ಸೂಪರ್ ಕಿಂಗ್ಸ್ ಸ್ಪರ್ಧಾತ್ಮಕ ಮೊತ್ತ ಪೇರಿಸಲು ಸಾಧ್ಯವಾಯಿತು.
ರವೀಂದ್ರ ಜಡೇಜಾ ಹೋರಾಟ ಚೆನ್ನೈ ತಂಡದ ಮೊತ್ತವನ್ನು 150ರ ಗಡಿ ದಾಟಿಸಿತು. ಇತ್ತ ಡರಿಲ್ ಮಿಚೆಲ್ ಸಾಥ್ ಉತ್ತಮ ಸಾಥ್ ನೀಡಿದರು. ಆದರೆ ಮಿಚೆಲ್ ಕೂಡ ಅಬ್ಬರಿಸುವಲ್ಲಿ ವಿಫಲರಾದರು. ಮಿಚೆಲ್ 11 ಎಸೆತದಲ್ಲಿ 13 ರನ್ ಸಿಡಿಸಿದರು. ರವೀಂದ್ರ ಜಡೇಜಾ 23 ಎಸೆತದಲ್ಲಿ ಅಜೇಯ 31 ರನ್ ಸಿಡಿಸಿದರು. ಇತ್ತ ಧೋನಿ ಕೊನೆಯ ಹಂತದಲ್ಲಿ ಆಗಮಿಸಿ 2 ಎಸೆದಲ್ಲಿ 1 ರನ್ ಸಿಡಿಸಿದರು. ಚೆನ್ನೈ ಸೂಪರ್ ಕಿಂಗ್ಸ್ 5 ವಿಕೆಟ್ ನಷ್ಟಕ್ಕೆ 165 ರನ್ ಸಿಡಿಸಿತು.
IPL 2024: ಇನ್ಮೇಲೆ RCB ಪ್ಲೇ ಆಫ್ ಹಾದಿ ಮತ್ತಷ್ಟು ಕಠಿಣ..!