ಇದಕ್ಕೂ ಮುನ್ನ ಏಕದಿನ ಸರಣಿ ಗೆದ್ದ ಬಳಿಕ ಬಾಂಗ್ಲಾದೇಶ ತಂಡದ ಆಟಗಾರ ಮುಶ್ಫೀಕರ್ ರಹೀಂ, ಶ್ರೀಲಂಕಾದ ಅನುಭವಿ ಆಟಗಾರ ಏಂಜೆಲೋ ಮ್ಯಾಥ್ಯೂಸ್ 2023ರ ಏಕದಿನ ವಿಶ್ವಕಪ್‌ನ ಟೈಮ್‌ಔಟ್ ವಿಕೆಟ್‌ಅನ್ನು ಕಿಚಾಯಿಸಿದ್ದರು.
ಢಾಕಾ (ಏ.5): ಶ್ರೀಲಂಕಾ ಹಾಗೂ ಬಾಂಗ್ಲಾದೇಶ ನಡುವಿನ ಕ್ರಿಕೆಟ್ ವೈಮನಸ್ಯ, ಇಂಡಿಯಾ-ಪಾಕಿಸ್ತಾನಕ್ಕಿಂತ ಒಂದು ಪಟ್ಟು ಮೇಲೆ ಹೋದಂತೆ ಕಾಣುತ್ತಿದೆ. ಈ ವಾರದ ಆರಂಭದಲ್ಲಿ ಶ್ರೀಲಂಕಾ ತಂಡ ಚಿತ್ತೂಗ್ರಾಮ್‌ನ ಝಹೂರ್ ಅಹ್ಮದ್ ಚೌಧರಿ ಸ್ಟೇಡಿಯಂನಲ್ಲಿ ನಡದ 2ನೇ ಟೆಸ್ಟ್ ಪಂದ್ಯದಲ್ಲಿ ಬಾಂಗ್ಲಾದೇಶವನ್ನು 192 ರನ್‌ಗಳಿಂದ ಸೋಲಿಸಿತು. ಆ ಬಳಿಕ ಟ್ರೋಫಿ ಸ್ವೀಕಾರ ಸಮಾರಂಭದಲ್ಲಿ ಶ್ರೀಲಂಕಾ ತಂಡ ಅಭ್ಯಾಸದ ಜೆರ್ಸಿಯಲ್ಲಿ ಬಂದಿದ್ದು ಕುತೂಹಲಕ್ಕೆ ಕಾರಣವಾಗಿತ್ತು. ಶ್ರೀಲಂಕಾ ತಂಡದ ಯಾವೊಬ್ಬ ಆಟಗಾರ ಕೂಡ ಟೆಸ್ಟ್ ಜರ್ಸಿಯಲ್ಲಿ ಇದ್ದಿರಲಿಲ್ಲ. ಎಲ್ಲಾ ಆಟಗಾರರು ತಮ್ಮ ಪ್ರ್ಯಾಕ್ಟೀಸ್ ಜೆರ್ಸಿಯಲ್ಲಿ ಬಂದು ಟ್ರೋಫಿ ಸ್ವೀಕರಿಸಿದರು. ಆ ಬಳಿಕ ಅಂಪೈರ್ ರಿಚರ್ಡ್ ಕ್ಯಾಟಲ್‌ಬ್ರೋ ಎಕ್ಸ್‌ನಲ್ಲಿ ಶ್ರೀಲಂಕಾ ತಂಡದ ಹಿಂದಿನ ಉದ್ದೇಶವನ್ನು ಬಹಿರಂಗಪಡಿಸಿದ್ದಾರೆ. 'ಶ್ರೀಲಂಕಾ ತಂಡ ಟೆಸ್ಟ್ ಸರಣಿಯನ್ನು 2-0ಯಿಂದ ಜಯಿಸಿದೆ. ಶ್ರೀಲಂಕಾ ತಂಡದ ಆಟಗಾರರು ಪ್ರ್ಯಾಕ್ಟೀಸ್ ಜೆರ್ಸಿಯಲ್ಲಿ ಬಂದು ಟ್ರೋಫಿಯನ್ನು ಸ್ವೀಕರಿಸಿದರು. ಬಾಂಗ್ಲಾದೇಶ ತಂಡದ ವಿರುದ್ಧ ನಾವು ಎರಡು ಅಭ್ಯಾಸ ಪಂದ್ಯವಾಡಿದ್ದೇವೆ ಎಂದು ಜಗತ್ತಿಗೆ ತಿಳಿಸುವ ನಿಟ್ಟಿನಲ್ಲಿ ಅವರು ಈ ರೀತಿ ಮಾಡಿರುವ ಸಾಧ್ಯತೆ ಇದೆ' ಎಂದು ಹೇಳಿದ್ದಾರೆ.
ಇನ್ನು ಶ್ರೀಲಂಕಾ ತಂಡದ ಆಟಗಾರರು ಪ್ರ್ಯಾಕ್ಟೀಸ್ ಜೆರ್ಸಿಯಲ್ಲಿ ಟ್ರೋಫಿ ಸ್ವೀಕರಿಸಿದ್ದಕ್ಕೆ ಬಾಂಗ್ಲಾದೇಶ ತಂಡದ ಕ್ರಿಕೆಟ್ ಅಭಿಮಾನಿಗಳು ಆಕ್ರೋಶ ವ್ಯಕ್ತಪಡಿಸಿದ್ದು, ಇದಕ್ಕೂ ಸೇಡು ತೀರಿಸಿಕೊಳ್ಳುತ್ತೇವೆ ಎಂದು ಹೇಳಿದ್ದಾರೆ. ಗೆಲುವಿಗೆ ಅಸಾಧ್ಯವಾದ 511 ರನ್‌ಗಳನ್ನು ಬೆನ್ನಟ್ಟಿದ್ದ ಬಾಂಗ್ಲಾದೇಶ ತಂಡ 318 ರನ್‌ಗೆ ಆಲೌಟ್ ಆಯಿತು. ಮಾಮಿನುಲ್ ಹಕ್ 50 ರನ್ ಬಾರಿಸಿದರೆ, ಮಿರಾಜ್ ಅಜೇಯ 81 ರನ್ ಬಾರಿಸಿದರು. ಪಂದ್ಯದ ಅಂತಿಮ ದಿನದ ಬೆಳಗಿನ ಅವಧಿಯಲ್ಲಿಯೇ ಬಾಂಗ್ಲಾದೇಶ ತಂಡ ಸೋಲು ಕಂಡಿತು.
undefined
ಶೈಲೆಟ್‌ನಲ್ಲಿ ನಡೆದ ಮೊದಲ ಟೆಸ್ಟ್ ಪಂದ್ಯದಲ್ಲಿ ಶ್ರೀಲಂಕಾ 328 ರನ್‌ಗಳಿಂದ ಗೆಲುವು ಕಂಡಿತ್ತು. 2ನೇ ಟೆಸ್ಟ್‌ನ ಮೊದಲ ಇನ್ನಿಂಗ್ಸ್‌ನಲ್ಲಿ ತಂಡದ ಅಗ್ರ ಕ್ರಮಾಂಕದ 6 ಬ್ಯಾಟ್ಸ್‌ಮನ್‌ಗಳು ಅರ್ಧಶತಕ ಬಾರಿಸಿದ್ದರಿಂದ 531 ರನ್‌ಗಳ ಬೃಹತ್ ಮೊತ್ತ ದಾಖಲು ಮಾಡಿತ್ತು. ಇದಕ್ಕೆ ಪ್ರತಿಯಾಗಿ ಬಾಂಗ್ಲಾದೇಶ ತಂಡ 178 ರನ್ ಬಾರಿಸಿದರೆ, 2ನೇ ಇನ್ನಿಂಗ್ಸ್‌ನಲ್ಲಿ ಶ್ರೀಲಂಕಾ 7 ವಿಕೆಟ್‌ಗೆ 157 ರನ್ ಸಿಡಿಸಿತ್ತು.
ಮೊದಲ ಟೆಸ್ಟ್‌ನಲ್ಲಿ ರನ್ ಬರದೇ ಇದ್ದ ಕಾರಣಕ್ಕೆ ಬ್ಯಾಟ್ಸ್‌ಮನ್‌ಗಳು ನಿರಾಶರಾಗಿದ್ದರು. ಆದರೆ, 2ನೇ ಪಂದ್ಯದಲ್ಲಿ ರನ್ ಗಳಿಸುವ ಬಗ್ಗೆ ಬಹಳ ವಿಶ್ವಾಸದಲ್ಲಿದ್ದರು. ಆದರೆ, ಮೈದಾನ ಸಾಕಷ್ಟು ಸ್ಪಿನ್‌ಗೆ ನೆರವು ನೀಡುತ್ತಿತ್ತು. ವಿಕೆಟ್ ಕೀಳಲು ರಿವರ್ಸ್ ಸ್ವಿಂಗ್ ಬಗ್ಗೆ ಯೋಚನೆ ಮಾಡುತ್ತಿದ್ದೆ. ನಮ್ಮ ವೇಗಿಗಳು ಉತ್ತಮವಾಗಿ ದಾಳಿ ಮಾಡಿದರು' ಎಂದು ಶ್ರೀಲಂಕಾ ನಾಯಕ ಧನಂಜಯ ಡಿ ಸಿಲ್ವಾ ಹೇಳಿದ್ದಾರೆ.
ಮತ್ತೆ ಬರಲಿದೆ ಚಾಂಪಿಯನ್ಸ್ ಲೀಗ್ ಟಿ20? ಇಂಗ್ಲೆಂಡ್, ಆಸ್ಟ್ರೇಲಿಯಾ, ಭಾರತದ ಕ್ರಿಕೆಟ್ ಮಂಡಳಿ ಮಾತುಕತೆ!
ಇದಕ್ಕೂ ಮುನ್ನ ಏಕದಿನ ಸರಣಿ ಗೆದ್ದ ಬಳಿಕ ಬಾಂಗ್ಲಾದೇಶ ತಂಡದ ಆಟಗಾರ ಮುಶ್ಫೀಕರ್ ರಹೀಂ, ಶ್ರೀಲಂಕಾದ ಅನುಭವಿ ಆಟಗಾರ ಏಂಜೆಲೋ ಮ್ಯಾಥ್ಯೂಸ್ 2023ರ ಏಕದಿನ ವಿಶ್ವಕಪ್‌ನ ಟೈಮ್‌ಔಟ್ ವಿಕೆಟ್‌ಅನ್ನು ಕಿಚಾಯಿಸಿದ್ದರು.
Watch: ಬೆಂಗಳೂರು ಆಗಿ ಬದಲಾದ ಬ್ಯಾಂಗಲೂರ್, 'ಇದು ಆರ್‌ಸಿಬಿ ಹೊಸ ಅಧ್ಯಾಯ' ಎಂದು ಕನ್ನಡದಲ್ಲೇ ಹೇಳಿದ ಕೊಹ್ಲಿ!
ಸರಣಿಯನ್ನು 2-1 ರಿಂದ ಗೆದ್ದ ನಂತರ, ಬಾಂಗ್ಲಾದೇಶದ ಆಟಗಾರರು ಟ್ರೋಫಿಯೊಂದಿಗೆ ಪೋಸ್ ನೀಡುತ್ತಿದ್ದಾಗ ಮುಶ್ಫಿಕರ್ ತನ್ನ ಹೆಲ್ಮೆಟ್ ತೆಗೆದುಕೊಂಡು ಕಳೆದ ವರ್ಷದ ಶೋಪೀಸ್ ಈವೆಂಟ್‌ನಲ್ಲಿ ಮ್ಯಾಥ್ಯೂಸ್ ಔಟಾಗಿರುವುದನ್ನು ಕಿಚಾಯಿಸಿದ್ದರು. ಈ ಘಟನೆಯು ಎರಡು ತಂಡಗಳ ನಡುವೆ ಬಹಳ ಪೈಪೋಟಿಗೆ ಕಾರಣವಾಗಿತ್ತು.
Sri Lanka🇱🇰 won the Test series 2-0 against Bangladesh🇧🇩
Sri Lankan's came to collect the Trophy in their Practice Kits🎽
They wanted to tell the World🌍 that they have played 2 practice match 🆚 Bangladesh pic.twitter.com/0Jkk7wbqUK