IPL 2024 ಸಿಎಸ್‌ಕೆ ಸಿಕ್ಸರ್ ಆಟಕ್ಕೆ ಗುಜರಾತ್ ಬೌಲರ್ಸ್ ಸುಸ್ತು, 207 ರನ್ ಟಾರ್ಗೆಟ್!

By Suvarna News  |  First Published Mar 26, 2024, 9:22 PM IST

ಚೆನ್ನೈನಲ್ಲಿ ನಡೆಯುತ್ತಿರುವ ಗುಜರಾತ್ ಟೈಟಾನ್ಸ್ ವಿರುದ್ಧದ ಪಂದ್ಯದಲ್ಲಿ ಸಿಎಸ್‌ಕೆ ಸ್ಫೋಟಕ ಬ್ಯಾಟಿಂಗ್ ಪ್ರದರ್ಶನ ನೀಡಿದೆ.  ರಾಚಿನ್ ರವೀದ್ರ, ಶಿವಂ ದುಬೆ ಸೇರಿದಂತೆ ಸಿಎಸ್‌ಕೆ ಬ್ಯಾಟ್ಸ್‌ಮನ್ ಅಬ್ಬರಕ್ಕೆ ಗುಜರಾತ್ ಸುಸ್ತಾಗಿದೆ. ಇದೀಗ ಗುಜರಾತ್ 207 ರನ್ ಟಾರ್ಗೆಟ್ ಪಡೆದುಕೊಂಡಿದೆ.
 


ಚೆನ್ನೈ(ಮಾ.26) ಐಪಿಎಲ್ ಟೂರ್ನಿಯಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಹಾಗೂ ಗುಜರಾತ್ ಟೈಟಾನ್ಸ್ ನಡುವಿನ ರೋಚಕ ಹೋರಾಟ ಅಭಿಮಾನಿಗಳ ಸಂಭ್ರಮ ಡಬಲ್ ಮಾಡಿದೆ. ತವರಿನ ಅಭಿಮಾನಿಗಳಿಗೆ ಸಿಎಸ್‌ಕೆ ಸ್ಫೋಟಕ ಬ್ಯಾಟಿಂಗ್ ಹೆಚ್ಚು ಖುಷಿ ನೀಡಿದೆ. ನಾಯಕ ರುತುರಾಜ್ ಗಾಯಕ್ವಾಡ್, ರಾಚಿನ್ ರವೀಂದ್ರ, ಶಿವಂ ದುಬೆ ಸೇರಿದಂತೆ ಸಿಎಸ್‌ಕೆ ಬ್ಯಾಟ್ಸ್‌ಮನ್ ಅಬ್ಬರದಿಂದ ಗುಜರಾತ್ ಟೈಟಾನ್ಸ್ ಸುಸ್ತಾಗಿದೆ. ಸ್ಫೋಟಕ ಬ್ಯಾಟಿಂಗ್ ಮೂಲಕ ಸಿಎಸ್‌ಕೆ 7 ವಿಕೆಟ್ ನಷ್ಟಕ್ಕೆ 206 ರನ್ ಸಿಡಿಸಿದೆ.

ಚಿಪಾಕ್ ಮೈದಾನದಲ್ಲಿ ಚೆನ್ನೈನ ಪ್ರತಿ ಬ್ಯಾಟ್ಸ್‌ಮನ್ ಅಬ್ಬರಿಸಿದ್ದಾರೆ. ಟಾಸ್ ಸೋತು ಬ್ಯಾಟಿಂಗ್ ಇಳಿದ ಚೆನ್ನೈ ತಂಡಕ್ಕೆ ರುತುರಾಜ್ ಗಾಯಕ್ವಾಡ್ ಹಾಗೂ ರಾಚಿನ್ ರವೀಂದ್ರ ಉತ್ತಮ ಆರಂಭ ನೀಡಿದರು. ಆರಂಭದಿಂದಲೇ ಗುಜರಾತ್ ಬೌಲರ್ಸ್ ದುಬಾರಿಯಾದರು. ರಾಚಿನ್ ರವೀಂದ್ರ ಕೇವಲ 20 ಎಸೆತದಲ್ಲಿ 46 ರನ್ ಸಿಡಿಸಿ ಔಟಾದರು. ಇತ್ತ ರುತುರಾಜ್ ಗಾಯಕ್ವಾಡ್ 46 ರನ್ ಸಿಡಿಸಿದರು.

Latest Videos

undefined

RCB ಗೆಲ್ಲಿಸಿ ಅನುಷ್ಕಾ ಶರ್ಮಾಗೆ ವಿಡಿಯೋ ಕಾಲ್ ಮಾಡಿ ಖುಷಿ ಹಂಚಿಕೊಂಡ ಕೊಹ್ಲಿ..! ಮುದ್ದಾದ ವಿಡಿಯೋ ವೈರಲ್

ಸಿಎಸ್‌ಕೆ ಬ್ಯಾಟ್ಸ್‌ಮನ್ ಪೈಕಿ ಅಜಿಂಕ್ಯ ರಹಾನೆ ನಿರೀಕ್ಷಿತ ಹೋರಾಟ ನೀಡಲು ಸಾಧ್ಯವಾಗಲಿಲ್ಲ. ರಹಾನೆ 12 ರನ್ ಸಿಡಿಸಿ ಔಟಾದರು. ರಹಾನೆ ಬಳಿಕ ಶಿವಂ ದುಬೆ ಅಬ್ಬರ ಆರಂಭಗೊಂಡಿತು. ಸಿಕ್ಸರ್ ಮೂಲಕ ಗುಜರಾತ್ ಬೌಲರ್ಸ್ ಸುಸ್ತು ಮಾಡಿದರು. ಕೇವಲ 23 ಎಸೆದಲ್ಲಿ 51 ರನ್ ಸಿಡಿಸಿದರು. 2 ಬೌಂಡರಿ ಹಾಗೂ 5 ಸಿಕ್ಸರ್ ಮೂಲಕ ದುಬೆ ಅಬ್ಬರಿಸಿದರು. 

ಡರಿಲ್ ಮಿಚೆಲ್ ಹಾಗೂ ಸಮೀರ್ ರಿಜ್ವಿ ಅಂತಿಮ ಹಂತದಲ್ಲಿನ ಬ್ಯಾಟಿಂಗ್ ಚೆನ್ನೈ ತಂಡಕ್ಕೆ ನೆರವಾಯಿತು. ಮಿಚೆಲ್ 20 ಎಸೆತದಲ್ಲಿ 24 ರನ್ ಸಿಡಿಸಿದರೆ, ರಿಜ್ವಿ 6 ಎಸೆತದಲ್ಲಿ 14 ರನ್ ಸಿಡಿಸಿದರು.ರವೀಂದ್ರ ಜಡೇಜಾ ಅಜೇಯ 7 ರನ್ ಸಿಡಿಸಿದರು. ಈ ಮೂಲಕ ಚೆನ್ನೈ ಸೂಪರ್ ಕಿಂಗ್ಸ್ 6 ವಿಕೆಟ್ ನಷ್ಟಕ್ಕೆ 206 ರನ್ ಸಿಡಿಸಿತು. 

RCB ವೇಗಿಯನ್ನು ಕಸಕ್ಕೆ ಹೋಲಿಸಿದ ಮುರಳಿ ಕಾರ್ತಿಕ್..! ಗ್ರಾಚಾರ ಬಿಡಿಸಿದ ನೆಟ್ಟಿಗರು

ಇದೀಗ ಗುಜರಾತ್ ಟೈಟಾನ್ಸ್ 207 ರನ್ ಟಾರ್ಗೆಟ್ ಚೇಸ್ ಮಾಡಲು ಕಣಕ್ಕಿಳಿದಿದೆ. ಗುಜರಾತ್ ಟೈಟಾನ್ಸ್ ತಂಡದ ಪ್ಲೇಯಿಂಗ್ 11 ಇಲ್ಲಿದೆ.
ವೃದ್ಧಿಮಾನ್ ಸಾಹ, ಶುಭಮನ್ ಗಿಲ್(ನಾಯಕ), ಅಜ್ಮುತುಲ್ಹಾ ಒಮರ್ಜಾಯಿ, ಡೇವಿಡ್ ಮಿಲ್ಲರ್, ವಿಜಯ್ ಶಂಕರ್, ರಾಹುಲ್ ತಿವಾಟಿಯಾ,ರಶೀದ್ ಖಾನ್, ರವಿಶ್ರೀನಿವಾಸನ್ ಸಾಯಿ ಕಿಶೋರ್, ಉಮೇಶ್ ಯಾದವ್, ಮೋಹಿತ್ ಶರ್ಮಾ, ಸ್ಪೆನ್ಸರ್ ಜಾನ್ಸನ್ 

click me!